For Quick Alerts
  ALLOW NOTIFICATIONS  
  For Daily Alerts

  ಹರಹರ ಮಹಾದೇವ ವಿಶೇಷ: ಕಾರ್ತಿಕೇಯನ ಜನ್ಮ ವೃತ್ತಾಂತ

  By Harshitha
  |

  ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಹರಹರ ಮಹಾದೇವ' ಯಶಸ್ವಿ 100 ಕಂತುಗಳನ್ನು ಪೂರೈಸಿದೆ.

  ಸತಿ-ಶಿವನ ಪ್ರೇಮಕಥೆಯಿಂದ ಪ್ರಾರಂಭವಾದ ಈ ಧಾರಾವಾಹಿಯಲ್ಲಿ ಸತಿ ಸ್ವಯಂವರ, ಸತಿ-ಮಹಾದೇವ ವಿವಾಹ, ಸತಿ ದಹನ, ವೀರಭದ್ರನ ಅವತಾರ, ದಕ್ಷನ ಸಂಹಾರ, ಪಾರ್ವತಿ-ಮಹಾದೇವ ಪ್ರೇಮ ಕಥೆಯನ್ನ ಇದುವರೆಗೂ ನೀವು ಕಣ್ತುಂಬಿಕೊಂಡಿದ್ದೀರಿ. ಇದೀಗ ಪಾರ್ವತಿ ಮಹಾದೇವರ ವಿವಾಹದ ನಂತರ ಸುಬ್ರಮಣ್ಯನ ಜನ್ಮ ವೃತ್ತಾಂತವನ್ನ ನೀವು ನೋಡುವ ಸಮಯ ಬಂದಿದೆ.[ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ]

  ಶಿವನ ಜೀವನ ಚರಿತ್ರೆಯನ್ನು ಎಳೆ-ಎಳೆಯಾಗಿ ಬಿತ್ತರಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ನೋಡುಗರಿಗೆ ಇದೇ ಶನಿವಾರ ಕಾರ್ತಿಕೇಯನ ಜನ್ಮ ವೃತ್ತಾಂತ ಕುರಿತ ಒಂದು ಘಂಟೆ ವಿಶೇಷ ಸಂಚಿಕೆ ಪ್ರಸಾರ ಮಾಡಲಿದೆ.[ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ]

  ಈ ವಿಶೇಷ ಸಂಚಿಕೆಯು ಇದೇ ಡಿಸೆಂಬರ್ 17 ರಂದು ರಾತ್ರಿ 7.30 ರಿಂದ 8.30 ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Episode of Karthikeya's birth will be aired in Star Suvarna Channel's 'Hara Hara Mahadeva' from on 17th December at 7.30 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X