Don't Miss!
- News
ಮುಂಬರುವ 5 ದಿನಗಳ ಕಾಲ ದೆಹಲಿಯ ಜನರಿಗೆ ಬಿಸಿಲಿನ ತಾಪದಿಂದ ಮುಕ್ತಿ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಗಸ್ತ್ಯ ರಾಥೋಡ್ ಜೊತೆ ಹೊಸ ವರ್ಷ ಸಂಭ್ರಮಿಸಿದ ಹರಿಪ್ರಿಯಾ, ಯಾರು ಈ ಅಗಸ್ತ್ಯ?
2020ನೇ ವರ್ಷ ಗುಡ್ ಬೈ ಹೇಳಿ 2021ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹಲವು ಸೆಲೆಬ್ರಿಟಿಗಳು ತಮ್ಮ ಫ್ಯಾಮಿಲಿ, ಸ್ನೇಹಿತರ ಜೊತೆ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಅನೇಕರು ತಮ್ಮ ನೆಚ್ಚಿನ ಸ್ಥಳಗಳಿಗೆ ಹೋಗಿ ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ. ಸ್ಟಾರ್‌ಗಳ ನ್ಯೂ ಇಯರ್ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
'ಪೆಟ್ರೋಮ್ಯಾಕ್ಸ್'
ಕೊನೆಯ
ಹಂತದ
ಚಿತ್ರೀಕರಣ
ಆರಂಭಿಸಿದ
ಸತೀಶ್
ನೀನಾಸಂ
ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ತಮ್ಮ ಸ್ನೇಹಿತರ ಜೊತೆ ಹೊಸ ವರ್ಷವನ್ನು ಆಚರಿಸಿದ್ದಾರೆ. ನ್ಯೂ ಇಯರ್ ಪಾರ್ಟಿಯ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಕಿರುತೆರೆಯ ಖ್ಯಾತಿಯ ಅಗಸ್ತ್ಯ ರಾಥೋಡ್ ಸಹ ಇದ್ದು, ಹರಿಪ್ರಿಯಾಗೆ ಇವರು ಏನಾಗ್ಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಮುಂದೆ ಓದಿ....
ಹೈದರಾಬಾದ್ನಲ್ಲಿ
ಒಂದು
ವಾರ
ಶೂಟಿಂಗ್
ಮುಗಿಸಿದ
ದಿಗಂತ್-ಹರಿಪ್ರಿಯಾ

ಸ್ನೇಹಿತರು, ಕುಟುಂಬದ ಜೊತೆ ಹರಿಪ್ರಿಯಾ ಪಾರ್ಟಿ
ಹೊಸ ವರ್ಷಕ್ಕೆ ತಡವಾಗಿ ಶುಭಕೋರಿರುವ ನಟಿ ಹರಿಪ್ರಿಯಾ ತನ್ನ ಸ್ನೇಹಿತರು ಮತ್ತು ಕುಟುಂಬದ ಜೊತೆ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು ''ಇದು ನನ್ನ ಮೊದಲ ಪೋಸ್ಟ್, ನಾನು ತಡವಾಗಿ ಶುಭಾಶಯ ತಿಳಿಸುತ್ತಿದ್ದೇನೆ. ಆದರೆ ನೀವೆಲ್ಲ ನನ್ನ ಹೃದಯಲ್ಲಿದ್ದೀರಾ. ಈ ವರ್ಷ ಖಂಡಿತ ನಮ್ಮ ಪರವಾಗಿರಲಿದೆ. ಈ ವರ್ಷ ಎಲ್ಲರಿಗೂ ಆರೋಗ್ಯ, ಸಂತೋಷ ಸಿಗಲಿ ಎಂದು ಬಯಸುತ್ತೇನೆ'' ಎಂದು ವಿಶ್ ಮಾಡಿದ್ದಾರೆ.

ಕಿರುತೆರೆ ನಟ ಯಾರು?
ಹರಿಪ್ರಿಯಾ ಹಂಚಿಕೊಂಡಿರುವ ಫೋಟೋಗಳಲ್ಲಿ ಕಿರುತೆರೆ ನಟ ಅಭಿನವ್ ವಿಶ್ವನಾಥನ್ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇದುವರೆಗೂ ಹರಿಪ್ರಿಯಾ ಅವರ ಜೊತೆ ಈ ನಟನನ್ನು ಸಾರ್ವಜನಿಕವಾಗಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಅಗಸ್ತ್ಯ ನಿಮಗೆ ಏನಾಗ್ಬೇಕು?
ಅಗಸ್ತ್ಯ ರಾಥೋಡ್ ಅವರ ಬಗ್ಗೆ ಪರಿಚಯ ಹೊಂದಿಲ್ಲದ ಅನೇಕರು ಯಾರು ಈ ಹುಡುಗ ಎಂದು ಪ್ರಶ್ನಿಸುತ್ತಿದ್ದಾರೆ. ಹರಿಪ್ರಿಯಾ ಅವರ ಪೋಸ್ಟ್‌ಗೆ ''ನಿಮಗೆ ಅಗಸ್ತ್ಯ ರಾಥೋಡ್ ಏನಾಗಬೇಕು...?'' ಎಂದು ಪ್ರಶ್ನಿಸುತ್ತಿದ್ದಾರೆ.

'ನನ್ನ ಅರಸಿ ರಾಧೆ' ಧಾರಾವಾಹಿ ನಟ
ಅಂದ್ಹಾಗೆ, ಅಗಸ್ತ್ಯ ರಾಥೋಡ್ ಮೂಲ ಹೆಸರು ಅಭಿನವ್ ವಿಶ್ವನಾಥನ್. ಅಭಿನವ್ ಕನ್ನಡ ಕಿರುತೆರೆ ಇಂಡಸ್ಟ್ರಿಯಲ್ಲಿ ಪರಿಚಿತ ವ್ಯಕ್ತಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನನ್ನ ಅರಸಿ ರಾಧೆ' ಧಾರಾವಾಹಿಯಲ್ಲಿ ಅಗಸ್ತ್ಯ ರಾಥೋಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಿರುತೆರೆ ನಟನಿಗೂ ಹರಿಪ್ರಿಯಾಗೂ ಹೇಗೆ ಪರಿಚಯ ಎನ್ನುವುದು ನೆಟ್ಟಿಗರಲ್ಲಿ ಕುತೂಹಲ ಸೃಷ್ಟಿಸಿದೆ.

ಹರಿಪ್ರಿಯಾ ಚಿತ್ರಗಳು
ಹರಿಪ್ರಿಯಾ ಸತತವಾಗಿ ಸಿನಿಮಾಗಳನ್ನು ಮಾಡ್ತಿದ್ದಾರೆ. ಸತೀಶ್ ನೀನಾಸಂ ಜೊತೆ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮುಗಿಸಿದ್ದಾರೆ. ದಿಗಂತ್ ಜೊತೆ ಒಂದು ಸಿನಿಮಾ ಪೂರ್ಣಗೊಳಿಸಿದ್ದಾರೆ. ಬೆಲ್‌ಬಾಟಂ 2, ಹ್ಯಾಪಿ ಎಂಡಿಂಗ್, ಲಗಾಂ, ಅಮೃತಮತಿ ಚಿತ್ರಗಳಲ್ಲಿಯೂ ಹರಿಪ್ರಿಯಾ ನಟಿಸುತ್ತಿದ್ದಾರೆ.