ಒಂದೇ ವೇದಿಕೆಯಲ್ಲಿ ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಕಮಾಲ್
ಇಬ್ಬರು ಸ್ಟಾರ್ ನಟರು, ಇಬ್ಬರು ಸ್ಟಾರ್ ನಿರ್ದೇಶಕರು, ಇಬ್ಬರು ಸ್ಟಾರ್ ಹೀರೋಯಿನ್ ಗಳು ಒಟ್ಟಿಗೆ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಅದೇ ರೀತಿ ಇಬ್ಬರು ಸ್ಟಾರ್ ಸಂಗೀತ ನಿರ್ದೇಶಕರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗದರೇ ಅದು ವಿಶೇಷವೇ.
ಈಗ ಅಂತಹದ್ದೇ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ. ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲೇ, ಅಗ್ರ ಸ್ಥಾನದಲ್ಲಿರುವ ಏಕೈಕ ಸಂಗೀತ ಕಾರ್ಯಕ್ರಮ ಸರಿಗಮಪ.
ಕಂಚಿನ ಕಂಠ ವಿಜಯ ಪ್ರಕಾಶ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಹಾಗೂ ನಾದಬ್ರಹ್ಮ ಡಾ. ಹಂಸಲೇಖ, ತೀಪುಘರಾರಾಗಿರುವ ಈ ಕಾರ್ಯಕ್ರಮದ 15ನೇ ಆವೃತ್ತಿಯು ಈಗ ಕ್ವಾರ್ಟರ್ ಫಿನಾಲೆಯ ಹಂತಕ್ಕೆ ಬಂದು ತಲುಪಿದೆ. ಈ ಶೋನಲ್ಲಿ ಅರ್ಜುನ್ ಜನ್ಯ ಮತ್ತು ಹರಿಕೃಷ್ಣ ಒಂದಾಗಿದ್ದಾರೆ. ಮುಂದೆ ಓದಿ....

ಸರಿಗಮಪ ವೇದಿಕೆಗೆ ಬಂದ ಹರಿಕೃಷ್ಣ
ಸರಿಗಮಪ ಸೀಸನ್ 15ರ ಕ್ವಾರ್ಟರ್ ಫೈನಲ್ ಗೆ ಕನ್ನಡದ ಸುಪ್ರಸಿದ್ದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಮೂಲಕ, ಕನ್ನಡದ ಸದ್ಯದ ಸೆನ್ಸೇಷನಲ್ ಸಂಗೀತ ನಿರ್ದೇಶಕರುಗಳಾದ ವಿ. ಹರಿಕೃಷ್ಣ ಮತ್ತು ಅರ್ಜುನ್ ಜನ್ಯ, ಇದೇ ಮೊದಲ ಬಾರಿಗೆ ಸರಿಗಮಪ ವೇದಿಕೆಯಲ್ಲಿ ಜೊತೆಯಾಗುತ್ತಿದ್ದಾರೆ.

ಸಿಗ್ನೇಚರ್ ಸ್ಟೆಪ್ ಹಾಕಿದ ಮ್ಯೂಸಿಕ್ ಮಾಂತ್ರಿಕರು
ಹರಿಕೃಷ್ಣ ಅತಿಥಿಯಾಗಿ ಆಗಮನಿಸಿ, ವೇದಿಕೆಯಲ್ಲಿ ಅರ್ಜುನ್ ಜನ್ಯ ಜೊತೆ ಸೇರಿ ಅವರ ಸಿಗ್ನೇಚರ್ ಸ್ಟೆಪ್ ಹಾಕಿದ್ದೂ ಈ ಸಂಚಿಕೆಯ ವಿಶೇಷ. ಈ ರೀತಿಯಾಗಿ ಕನ್ನಡದ ಪ್ರತಿಭಾನ್ವಿತ ಸಂಗೀತ ನಿರ್ದೇಶಕರೊಡನೆ, ಈ ಬಾರಿಯ ಸರಿಗಮಪ ಸೀಸನ್ 15 ರ ಕ್ವಾರ್ಟರ್ ಫೈನಲ್ ಇನ್ನಷ್ಟು ರಂಗೇರುವುದಂತೂ ಸತ್ಯ.

ಭಟ್ಟರು ಇರ್ತಾರೆ
ಹರಿಕೃಷ್ಣ ಅವರ ಜೊತೆ ನಿರ್ದೇಶಕ ಯೋಗರಾಜ್ ಭಟ್ ಕೂಡ ವಿಶೇಷ ಅತಿಥಿಯಾಗಿ ಸರಿಗಮಪ ವೇದಿಕೆಗೆ ಬಂದಿದ್ದಾರೆ. ಈ ಮೂಲಕ ಹರಿಕೃಷ್ಣ ಮತ್ತು ಭಟ್ಟರ ಜುಗಲ್ ಬಂದಿ ಇಲ್ಲಿಯೂ ಮುಂದುವರಿದಿದೆ.

ಶನಿವಾರ ಮತ್ತು ಭಾನುವಾರ
ಈಗಾಗಲೇ ಈ ಸೀಸನ್ ನಲ್ಲಿ ಹಲವಾರು ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮದಲ್ಲಿ, ಒಟ್ಟು 12 ಸ್ಪರ್ಧಿಗಳು ಸಂಗೀತದ ಜಟಾಪಟಿ ನಡೆಸಲಿದೆ. ಈ ಕ್ವಾರ್ಟರ್ ಫೈನಲ್ ನ ಜಟಾಪಟಿಯಲ್ಲಿ ಯಾವ ಸ್ಪರ್ಧಿ ಸೆಮಿ ಫೈನಲ್ಸ್ ಗೆ ತಲುಪುತ್ತಾರೆ ಎಂಬುದನ್ನು, ಈ ಶನಿವಾರ ಹಾಗೂ ಭಾನುವಾರ ಸಂಜೆ 8 ಗಂಟೆಗೆ ತಿಳಿಯುತ್ತದೆ.


Click it and Unblock the Notifications











