ನ್ಯಾಯದ ಪರವಾಗಿ ಹೋರಾಡಲು ಮುಂದಾದ ನಟಿ ಹರಿಪ್ರಿಯ; ಸಿನಿಮಾದಿಂದ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ!
ನಟನೆ ಎಂದಾಗ ಮೊದಲು ಕಿರುತೆರೆಗೆ ಕಾಲಿಟ್ಟು ಒಂದೆರಡು ಧಾರವಾಹಿಗಳಲ್ಲಿ ನಟಿಸಿ ನಂತರ ನಿಧಾನವಾಗಿ ಹಿರಿತೆರೆ ಏಣಿ ಹತ್ತುವ ಹಲವಾರು ನಟ ನಟಿಯರ ಉದಾಹರಣೆ ಇಂದು ನಮ್ಮ ಕಣ್ಣೆದುರುಗಿದೆ. ಅಂತದ್ದರಲ್ಲಿ, ಈಗ ಕೆಲ ನಟಿಯರು ಹಿರಿತೆರೆಯಲ್ಲಿ ಮಿಂಚುತ್ತಿರುವವರು ನಿಧಾನವಾಗಿ ಕಿರುತೆರೆಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಟ್ರೆಂಡ್ ಅನ್ನು ನಾವು ನೋಡಿದ್ದೇವೆ.
ಉದಾಹರಣೆಗೆ, ಹಿರಿಯ ಕಲಾವಿದರಂದೆನಿಸಿಕೊಂಡ ನಟಿ ಉಮಾಶ್ರೀ, ನಟಿ ಸುಧಾರಾಣಿ, ಕಲಾವಿದೆ ವಿನಯ ಪ್ರಸಾದ್ ಇತ್ಯಾದಿ ನಟಿಯರು ಕಿರುತೆರೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ಹೀಗಿರುವಾಗ ಬಹಳ ಸಣ್ಣ ವಯಸ್ಸಿನಲ್ಲೇ ನಟಿ ಹರಿಪ್ರಿಯಾ ಕೂಡ ಈ ಕಡೆ ಬರುತ್ತಿರುವುದು ಬಹಳಷ್ಟು ಜನರಿಗೆ ಆಶ್ಚರ್ಯವಾಗಿದೆ.

ಹೌದು, ನಟಿ ಹರಿಪ್ರಿಯ ಸ್ಯಾಂಡಲ್ ವುಡ್ ನ ಜನಪ್ರಿಯ ನಟಿಯರಲ್ಲೊಬ್ಬರು. 'ರಿಕ್ಕಿ', 'ನೀರ್ ದೋಸೆ', 'ಬೆಲ್ ಬಾಟಮ್', 'ಪೆಟ್ರೋಮ್ಯಾಕ್ಸ್', 'ರನ್ನ', 'ಭರ್ಜರಿ', 'ಜೈ ಸಿಂಹ' ಮುಂತಾದ ಸೂಪರ್ ಡೂಪರ್ ಸಿನಿಮಾಗಳನ್ನು ನೀಡಿರುವ ಈಕೆ ಇದೀಗ ಧಾರಾವಾಹಿ ಕಡೆಗೆ ಮುಖ ಮಾಡುತ್ತಿದ್ದಾರೆ ಎಂದರೆ ಆಶ್ಚರ್ಯವೇ ಸರಿ.
ಆದರೆ ಇದು ಸತ್ಯ. ನಟಿ ಹರಿಪ್ರಿಯಾ ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರಿ ಪಾತ್ರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಧಾರಾವಾಹಿಯ ಪ್ರೋಮೊ ಬಿಡುಗಡೆಯಾಗಿದ್ದು ನೆಟ್ಟಿಗರು, ಫಾಲೋವರ್ಸ್ ಹಾಗೂ ಕಿರುತೆರೆ ವೀಕ್ಷಕರು ಖುಷಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಟ ವಸಿಷ್ಠ ಸಿಂಹ ಅವರನ್ನು ಮದುವೆಯಾಗಿರುವ ನಟಿ ಹರಿಪ್ರಿಯಾ ಅವರು ಇದೀಗ ಹಿರಿತರೆಯಿಂದ ಕಿರುತೆರೆಗೆ ಕಾಲಿಟ್ಟಿರುವುದು ಆಶ್ಚರ್ಯವೇ ಆದರೂ, ಆಕೆಯ ನಟನೆಗೆ ಬಹಳ ದೊಡ್ಡ ಫ್ಯಾನ್ ಫಾಲೋಯಿಂಗ್ ಇರುವುದು ಸುಳ್ಳಲ್ಲ. ಹೀಗಾಗಿ ಜನರು ಹಾಗೂ ಪ್ರೇಕ್ಷಕರು ಹರಿಪ್ರಿಯಾ ಕಾಣಿಸಿಕೊಳ್ಳಲಿರುವ ಸಂಚಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಹಲವಾರು ವೀಕ್ಷಕರು "ಧಾರಾವಾಹಿ ಟೈಟಲ್ ಚೇಂಜ್ ಮಾಡಿ" ಎಂಬ ಬೇಡಿಕೆ ಇಟ್ಟರೆ, ಇನ್ನು ಕೆಲವರು "ಹರಿಪ್ರಿಯಾ ಮೇಡಂ ಸೀರಿಯಲ್‌ಗಾ?" ಎಂದು ತಮ್ಮ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾವ ರೀತಿ ಕಥೆಯನ್ನು ಇಟ್ಟುಕೊಂಡು ಮುಂಬರಲಿದೆ ಹಾಗೂ ನಟಿ ಹರಿಪ್ರಿಯ ಅವರ ಎಂಟ್ರಿ ಯಾವ ರೀತಿ ತಿರುವುಗಳನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಇಂಟ್ರೆಸ್ಟಿಂಗ್ ವಿಷಯ.
ಸದ್ಯ ವಿವಾಹದ ಬಳಿಕ ರಿಲ್ಯಾಕ್ಸ್ ಮೂಡಿನಲ್ಲಿದ್ದ ನಟಿ ಹರಿಪ್ರಿಯ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಯಾವುದಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದು ಅವರ ಅಭಿಮಾನಿಗಳಿಗೆ ಅಚ್ಚರಿಯಾಗಿದ್ದರೂ, ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡುತ್ತಿದ್ದಾರೆ.


Click it and Unblock the Notifications











