For Quick Alerts
  ALLOW NOTIFICATIONS  
  For Daily Alerts

  Exclusive: 'ಜೊತೆ ಜೊತೆಯಲಿ' ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು, ಕಥೆಯಲ್ಲಿ ಮೆಗಾ ಟ್ವಿಸ್ಟ್!

  By Bhagya.s
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಧಾರಿಯ ಅನಿರುದ್ಧ್ ಮತ್ತು ಸೀರಿಯಲ್‌ ತಂಡದ ನಡುವೆ ಕಿರಿಕ್ ಉಂಟಾಗಿದೆ. ಇದರಿಂದ ಅನಿರುದ್ಧ ಅವರು ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಆರ್ಯವರ್ಧನ್ ಆಗಿ ಅನಿರುದ್ಧ ನಟಿಸಿದ ಬ್ಯಾಂಕಿಂಗ್ ಸಂಚಿಕೆಗಳು ಮಾತ್ರವೇ ಪ್ರಸಾರ ಆಗುತ್ತಿವೆ.

  ಇನ್ನು ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬದಲು ಬೇರೆ ನಟನನ್ನು ತರುವ ನಿರ್ಧಾರವನ್ನು ತಂಡ ಮಾಡಿದೆ. ಹೀಗಾಗಿ ಕೆಲವರನ್ನು ಶಾರ್ಟ್‌ ಲಿಸ್ಟ್‌ ಕೂಡ ಮಾಡಲಾಗಿದೆ. ಅದರಂತೆ ಆರ್ಯವರ್ಧನ್ ಪಾತ್ರಧಾರಿಯಾಗಿ ಯಾರು ಬರುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿತ್ತು.

  ನಿರ್ದೇಶಕ ಅನೂಪ್ ಭಂಡಾರಿ, ಹರೀಶ್ ರಾಜ್ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿವೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಫಿಲ್ಮಿಬೀಟ್‌ಗೆ ತೊರಕಿದೆ. ಧಾರಾವಾಹಿಗೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟಾಗಿದೆ. ಯಾವ ಪಾತ್ರಕ್ಕೆ? ಟ್ವಿಸ್ಟ್ ಏನು ಎನಿರಲಿದೆ ಎನ್ನುವುದನ್ನು ಮುಂದೆ ಓದಿ...

  ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು!

  ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು!

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸದ್ಯಕ್ಕೆ ಆರ್ಯವರ್ಧನ್ ಮೇಲೆ ಇರುವ ಮುನಿಸನ್ನು ಮರೆತು ಅನು ಒಂದಾಗಲು ಮುಂದಾಗಿದ್ದಾಳೆ. ಅದೇ ಸಮಯಕ್ಕೆ ಇದೀಗ ಈ ಧಾರಾವಾಹಿಗೆ ನಟ ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು. ಈ ಹಿಂದೆ ಹರೀಶ್ ರಾಜ್ ಆರ್ಯವರ್ಧನ್ ಪಾತ್ರವನ್ನು ಮಾಡುತ್ತಾರೆ ಎನ್ನುವ ಸುದ್ದಿಯನ್ನು ಫಿಲ್ಮಿಬೀಟ್‌ನಲ್ಲಿ ವರದಿ ಮಾಡಲಾಗಿತ್ತು. ಇದೀಗ ಈ ಸುದ್ದಿ ಖಚಿತವಾಗಿದ್ದು, ಹರೀಶ್ ರಾಯ್ ಎಂಟ್ರಿಕೊಟ್ಟಾಗಿದೆ. ಸೂಟು ಬೂಟು ಧರಿಸಿ ಆಗರ್ಭ ಶ್ರೀಮಂತನಂತೆಯೇ ಹರೀಶ್ ರಾಜ್ ಕೂಡ ಎಂಟ್ರಿಕೊಟ್ಟಿದ್ದಾರೆ.

  ಹರೀಶ್ ಜೊತೆಗೆ, ಪದ್ಮಜಾ ರಾವ್!

  ಹರೀಶ್ ಜೊತೆಗೆ, ಪದ್ಮಜಾ ರಾವ್!

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರವನ್ನು ಬದಲಿಸುವ ಸಲುವಾಗಿ ಹಲವು ವಸ್ತುಗಳನ್ನು ತರಲಾಗುತ್ತಿದೆ. ಹಾಗಾಗಿ ಹರೀಶ್ ರಾಜ್ ಮಾತ್ರವಲ್ಲದೆ ಹರೀಶ್ ರಾಜ್ ಜೊತೆಗೆ ಮತ್ತೊಂದು ಪಾತ್ರ ಕೂಡ ಎಂಟ್ರಿಯಾಗಿದೆ. ನಟಿ ಪದ್ಮಜಾ ರಾವ್ ಕೂಡ ವಿಶೇಷ ಪಾತ್ರದಲ್ಲಿ, 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರೀಶ್ ರಾಜ್ ಮತ್ತು ಪದ್ಮಜಾ ರಾವ್ ಇರುವ ಹೊಸ ಪ್ರೋಮೊ ಪ್ರಕಾರ, ಹರೀಶ್ ರಾಜ್ ಆರ್ಯವರ್ಧನ್ ಸಹೋದರನಾಗಿ ಮತ್ತು ಪದ್ಮಜಾರಾವ್ ಆರ್ಯವರ್ಧನ್ ತಾಯಿಯಾಗಿ ಎಂಟ್ರಿ ಕೊಡಲಿದ್ದಾರೆ.

  ಆರ್ಯವರ್ಧನ್ ಅಲ್ಲ ಹರೀಶ್ ರಾಜ್!

  ಆರ್ಯವರ್ಧನ್ ಅಲ್ಲ ಹರೀಶ್ ರಾಜ್!

  ಅಷ್ಟಕ್ಕೂ ಆರ್ಯವರ್ಧನ್ ಪಾತ್ರವನ್ನು ಅನಿರುದ್ಧ ಬದಲು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಹರೀಶ್ ರಾಜ್ ಧಾರವಾಹಿಗೆ ಎಂಟ್ರಿಕೊಟ್ಟಿದ್ದಾರೆ ನಿಜ, ಆದರೆ ಅದು ಆರ್ಯವರ್ಧನ್ ಆಗಿ ಅಲ್ಲ ಬದಲಿಗೆ ಆರ್ಯವರ್ಧನ್ ಸೋದರನ ಪಾತ್ರದಲ್ಲಿ ಹರೀಶ್ ರಾಜ್ ಬಂದಿದ್ದಾರೆ. ಹೊಸ ಪ್ರೋಮೊದಲ್ಲಿ ಹರೀಶ್ ರಾಜ್ ತನಗೆ ಆಗಿರುವ 700 ಕೋಟಿ ನಷ್ಟದ ಬಗ್ಗೆ ಅವರ ತಾಯಿ ಪದ್ಮಜಾ ರಾವ್ ಬಳಿ ಹೇಳಿಕೊಳ್ಳುತ್ತಾರೆ. ನಿನ್ನನ್ನು ಉಳಿಸುವವನು ಒಬ್ಬನೇ ಇದ್ದಾನೆ ಎಂದು ಹೇಳುವಾಗ ಆರ್ಯವರ್ಧನ್ ದೃಶ್ಯಗಳು ಬಂದು ಹೋಗುತ್ತವೆ. ಇದೇ ಪ್ರೋಮೊದಲ್ಲಿ ಪದ್ಮಜಾ ರಾವ್ ಮಗ ಆರ್ಯವರ್ಧನ್ ಎನ್ನುವುದು ಕೂಡ ರಿವೀಲ್ ಆಗಿದೆ.

  ಸೋದರನಿಗಾಗಿ ಆರ್ಯವರ್ಧನ್ ತ್ಯಾಗ!

  ಸೋದರನಿಗಾಗಿ ಆರ್ಯವರ್ಧನ್ ತ್ಯಾಗ!

  ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ನಿರ್ದೇಶಕ ಮಧು ಉತ್ತಮ್, ಸೋದರನಿಗಾಗಿ ತನ್ನ ಎಲ್ಲಾ ಆಸ್ತಿಯನ್ನು ಬರೆದಿಟ್ಟು ಕೋಟನ್ನು ಬಿಚ್ಚಿಟ್ಟು ಹೋಗುತ್ತಾನೆ ಎಂದು ನಿರ್ದೇಶಕರು ಹೇಳಿದ್ದರು. ಆಸ್ತಿಯನ್ನೆಲ್ಲಾ ಹರ್ಷವರ್ಧನ್‌ಗೆ ಬಿಟ್ಟು ಹೋಗುತ್ತಾರೆ ಆರ್ಯವರ್ಧನ್ ಎಂದು ಊಹಿಸಲಾಗಿತ್ತು. ಆದರೆ ಇದೀಗ ಆರ್ಯವರ್ಧನ್ ಸೋದರನ ಎಂಟ್ರಿಯಾಗಿದ್ದು, ಸೋದರಿನಿಗಾಗಿ ತನ್ನೆಲ್ಲ ಆಸ್ತಿಯನ್ನು ತ್ಯಾಗ ಮಾಡಿ ಹೊರಟು ಹೋಗುತ್ತಾನೆ ಆರ್ಯವರ್ಧನ್ ಎನ್ನುವ ಸೂಚನೆ ಸಿಕ್ಕಿದೆ. ಆದರೆ ಧಾರಾವಾಹಿಯಲ್ಲಿ ಇಟ್ಟಿರುವ ಟೆಸ್ಟ್ ಏನು ಎನ್ನುವುದು ಧಾರಾವಾಹಿಯಲ್ಲೇ ನೋಡಬೇಕು.

  ಆರ್ಯವರ್ಧನ್ ಯಾರಾಗ್ತಾರೆ?

  ಆರ್ಯವರ್ಧನ್ ಯಾರಾಗ್ತಾರೆ?

  ಆರ್ಯವರ್ಧನ್ ಪಾತ್ರಕ್ಕೆ ಯಾರು ಎಂಟ್ರಿ ಕೊಡುತ್ತಾರೆ ಎನ್ನುವುದು ಇನ್ನೂ ಕೂಡ ಪ್ರಶ್ನೆಯಾಗಿ ಉಳಿದುಕೊಂಡಿದೆ. ಹರೀಶ್ ರಾಜ್ ಆರ್ಯವರ್ಧನ್ ಪಾತ್ರಕ್ಕಾಗಿ ಅಲ್ಲ ಎನ್ನುವುದು ಖಚಿತವಾಗಿದೆ. ಹಾಗಾಗಿ ಮನೆ ಬಿಟ್ಟುಹೋಗುವ ಆರ್ಯವರ್ಧನ್ ಜಾಗಕ್ಕೆ ಬೇರೆ ಯಾವ ನಟ ಬರ್ತಾನೆ ಎನ್ನುವ, ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

  English summary
  Harish Raj Entered In Jothe Jotheyali serial but not as Aryavardhan, know more.
  Tuesday, August 30, 2022, 14:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X