For Quick Alerts
  ALLOW NOTIFICATIONS  
  For Daily Alerts

  ಆಫರ್ ತಿರಸ್ಕರಿಸಿದ್ದರೂ 'ಬಿಗ್ ಬಾಸ್' ಮನೆಗೆ ಬಂದ ನಟ

  |
  Bigg Boss Kannada 7 Harish Raj enters Bigg Boss

  'ಬಿಗ್ ಬಾಸ್'ಗೆ ಹೋಗಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ, ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಈ ರೀತಿ ಬಿಗ್ ಬಾಸ್ ನಿಂದ ಬಂದ ಅವಕಾಶವನ್ನು ತಿರಸ್ಕಾರ ಮಾಡಿದ್ದ, ಒಬ್ಬ ನಟ ಈಗ ಕಾರ್ಯಕ್ರಮದಲ್ಲಿ ಇದ್ದಾರೆ.

  ನಟ ಹರೀಶ್ ರಾಜ್ ಈ ಮೊದಲೇ ಬಿಗ್ ಬಾಸ್ ನಿಂದ ಅವಕಾಶ ಪಡೆದಿದ್ದರು. ಹುಡುಕಿಕೊಂಡು ಬಂದ ಅವಕಾಶವನ್ನು ಹರೀಶ್ ರಾಜ್ ಬೇಡ ಎಂದು ಬಿಟ್ಟಿದ್ದರು. ಆಗ ಬಿಗ್ ಬಾಸ್ ಬಗ್ಗೆ ಹರೀಶ್ ರಾಜ್ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಆದರೆ, ಎರಡನೇ ಬಾರಿ ಮಾತ್ರ ಬಿಟ್ಟುಕೊಡಲಿಲ್ಲ.

  'ಬಿಗ್ ಬಾಸ್' ವೀಕ್ಷಕರಿಗೆ ಅಚ್ಚರಿ ನೀಡಿದ ಈ 5 ಜನರ 'ದೊಡ್ಮನೆ' ಎಂಟ್ರಿ!

  ಎರಡನೇ ಬಾರಿಯೂ ತಮ್ಮ ಬಳಿ ಬಂದ ಬಿಗ್ ಬಾಸ್ ಕರೆಯನ್ನು ಹರೀಶ್ ರಾಜ್ ಖುಷಿಯಿಂದ ಸ್ವೀಕರಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಥಾನ ಪಡೆದಿದ್ದಾರೆ. ಕಾರ್ಯಕ್ರಮದ 18 ಹಾಗೂ ಕೊನೆಯ ಸ್ಪರ್ಧಿ ಇವರಾಗಿದ್ದಾರೆ.

  'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮದ 18 ಸ್ಪರ್ಧಿಗಳ ವಿವರ

  'ಬಿಗ್ ಬಾಸ್' ಸಂಭಾವ್ಯ ಪಟ್ಟಿಯಲ್ಲಿ ಹೆಸರೇ ಇಲ್ಲದೆ ಇದ್ದ ನಟ ಹರೀಶ್ ರಾಜ್ ಅಚ್ಚರಿ ಎಂಬಂತೆ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ಹರೀಶ್ ರಾಜ್ ಗುರುತಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಒಂದೇ ಸಿನಿಮಾದಲ್ಲಿ 16 ಪಾತ್ರವನ್ನು ನಟಿಸುವ ಮೂಲಕ ಲಿಮ್ಕಾ ದಾಖಲೆಯಲ್ಲಿ ಇವರು ಹೆಸರು ನಮೂದಿಸಿಕೊಂಡಿದ್ದಾರೆ.

  English summary
  Bigg Boss Kannada Season 7 : Actor Harish Raj was rejected Bigg Boss offer in last season.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X