ಚೈತ್ರಾ ಕೋಟೂರ್ ಪ್ರಕಾರ 'ಈ ಸ್ಪರ್ಧಿ' ಬಿಗ್ ಬಾಸ್ ಗೆಲ್ಲಬಹುದಂತೆ!
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರ್ ನಾಲ್ಕನೇ ವಾರ ಬಿಗ್ ಮನೆಯಿಂದ ಹೊರಬಂದಿದ್ದಾರೆ. ದೊಡ್ಮನೆ ಆಟದಿಂದ ಔಟ್ ಆದ ಚೈತ್ರಾ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಚೈತ್ರಾ ಕೋಟೂರ್ ಈ ಆವೃತ್ತಿಯಲ್ಲಿ ಬಿಗ್ ಬಾಸ್ ಇವರು ಗೆಲ್ಲಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚೈತ್ರಾ ಕೋಟೂರ್ ಹೇಳುವ ಪ್ರಕಾರ ಹರೀಶ್ ರಾಜ್ ಬಿಗ್ ಬಾಸ್ ಗೆಲ್ಲಬಹುದಂತೆ. ಅಂದ್ಹಾಗೆ, ಈ ಸೀಸನ್ ನಲ್ಲಿ ದುನಿಯಾ ರಶ್ಮಿ ಮತ್ತು ರಾಜು ತಾಳಿಕೋಟೆ ಅಂದ್ರೆ ಇಷ್ಟ ಆಗಿದ್ದರು ಎಂದು ಚೈತ್ರಾ ಹೇಳಿಕೊಂಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ನಿಮಗೆ ಯಾರು ಇಷ್ಟ ಇಲ್ಲ ಎಂದು ಕೇಳಿದ್ದಕ್ಕೆ ದೀಪಿಕಾ ದಾಸ್ ಎಂದರು. ''ದೀಪಿಕಾ ದಾಸ್ ಅವರು ತಮ್ಮದೇ ಬೌಂಡರಿ ಹಾಕಿಕೊಂಡಿದ್ದಾರೆ. ಅದರಲ್ಲೂ ನನ್ನಿಂದ ದೂರವೇ ಇರುತ್ತಿದ್ದರು. ಬಹುಶಃ ಅವರು ನನಗೆ ಇಷ್ಟ ಆಗಿಲ್ಲ'' ಎಂದು ಹೇಳಿದ್ದಾರೆ.
ಇನ್ನು ''ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಯೋಚನೆ ಇದೆ. ಸ್ಕ್ರಿಪ್ಟ್ ಮೇಲೆ ಗಮನ ಕೊಡುತ್ತೇನೆ'' ಎಂದು ಚೈತ್ರಾ ಕೋಟೂರ್ ತಿಳಿಸಿದ್ದಾರೆ. ಈ ಹಿಂದೆ ಹರಿಪ್ರಿಯಾ ನಟಿಸಿದ್ದ ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಅಭಿನಯಿಸಿದ್ದರು.


Click it and Unblock the Notifications











