ಅವನು ಎಲ್ಲಾ ಹುಡುಗಿಯರ ಜೊತೆ ಮಲಗುತ್ತಾನೆ ; ಖ್ಯಾತ ನಟಿಯ ಗಂಭೀರ ಆರೋಪಕ್ಕೆ ಮೌನ ಮುರಿದ ಜನಪ್ರಿಯ ನಟ !

ಸಾಮಾಜಿಕ ಜಾಲತಾಣದಲ್ಲಿ ದಿನ ಬೆಳಗಾದರೆ ಆ ಸೆಲೆಬ್ರೆಟಿ ಹಂಗೆ, ಈ ಸೆಲೆಬ್ರೆಟಿ ಹಿಂಗೇ ಎನ್ನುವತಂಹ ಪೋಸ್ಟ್‌ಗಳು, ಸ್ಟಾರ್‌ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರುವುದು ಕಾಮನ್ನು. ಸೆಲೆಬ್ರೆಟಿಗಳು ಅಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ ? ಎನ್ನುವುದು ಬಹುತೇಕರ ಆಲೋಚನೆ. ಆದರೆ .. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಈ ಸ್ಟಾರ್‌ಗಳಿಗೆ ಸ್ಟಾರ್‌ಗಳೇ ಶತ್ರು.

ಯಾವತ್ತು ಇಲ್ಲಿ ಯಾರ ಬಂಡವಾಳವನ್ನು ಯಾರು ಬಯಲು ಮಾಡುತ್ತಾರೆ ಎಂದು ಹೇಳುವುದು ತುಂಬಾನೇ ಕಷ್ಟ. ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಇಲ್ಲಿ ಬದುಕದ ಅನೇಕರು ಕತ್ತಿ ಮಸೆಯುತ್ತಲೇ ಇರುತ್ತಾರೆ. ಸಮಯ - ಸಂದರ್ಭ ಬಂದಾಗ ದ್ವೇಷ ಕಾರುವ ಮೂಲಕ ಮಾನಹರಣವನ್ನು ಮಾಡುತ್ತಾರೆ. ಇದಕ್ಕೆ ಪ್ರೀತಿಕಾ ರಾವ್ ಮತ್ತು ಹರ್ಷದ್ ಅರೋರಾ ಅವರ ಬದುಕು ಸದ್ಯದ ಉದಾಹರಣೆ.

Harshad Arora Breaks Silence on Preetika Rao s Womanizer Remark Says What s the Point

ಹೌದು, ಪ್ರೀತಿಕಾ ರಾವ್ .. ಬಾಲಿವುಡ್‌ನ ಖ್ಯಾತ ಚೆಲುವೆ ಅಮೃತಾ ರಾವ್ ಅವರ ಸಹೋದರಿ. ತಮಿಳಿನ 'ಚಿಕ್ಕು ಬುಕ್ಕು' ಹಾಗೂ ತೆಲುಗಿನ 'ಪ್ರಿಯುಡು' ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಪ್ರೀತಿಕಾ ರಾವ್ ಕನ್ನಡದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಬಂದ 'ರೆಬೆಲ್' ಚಿತ್ರದಲ್ಲಿ ಆದಿತ್ಯ ಜೊತೆ ಹೆಜ್ಜೆ ಹಾಕಿದ್ದರು.

ಆದರೆ ಅಮೃತಾ ರಾವ್‌ಗೆ ಒಲಿದ ಅದೃಷ್ಟ ಇವರಿಗೆ ಒಲಿಯಲಿಲ್ಲ. ಹೀಗಾಗಿಯೇ ಕಿರುತೆರೆಯತ್ತ ಮುಖ ಮಾಡಿದ್ದ ಪ್ರೀತಿಕಾ 2014ರಲ್ಲಿ 'ಬೇಇತೆಂಹಾ' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಹರ್ಷದ್ ಅರೋರಾ ಈ ಧಾರಾವಾಹಿಯಲ್ಲಿ ಇವರಿಗೆ ಜೋಡಿಯಾಗಿದ್ದರು. ಇಬ್ಬರು ಪ್ರೇಕ್ಷಕರ ಮೇಲೆ ಮೋಡಿಯನ್ನು ಮಾಡಿದ್ದರು. ಅನೇಕರು ಇವರು ಇಬ್ಬರು ನಿಜ ಜೀವನದಲ್ಲಿ ಕೂಡ ಒಂದಾಗಬೇಕೆಂದು ಬಯಸಿದ್ದರು.

ಇದಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಇವತ್ತು ಕೂಡ ಈ ಧಾರಾವಾಹಿಯ ಕೆಲ ಕ್ಲಿಪಿಂಗ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಅನೇಕ ಜನ ಪ್ರೀತಿಕಾ ಮತ್ತು ಹರ್ಷದ ಅಭಿನಯದ ದೃಶ್ಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ, ಅದ್ಯಾಕೋ ಈ ವಿಡಿಯೋಗಳನ್ನು ನೋಡಿದಾಗ ಪ್ರೀತಿಕಾ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಗುತ್ತಿದೆ.

ಹೀಗಾಗಿ ಒಂದು ದಶಕದ ಹಿಂದಿನ ಧಾರಾವಾಹಿಯ ತಮ್ಮದೇ ದೃಶ್ಯಗಳನ್ನು ಕಂಡು ಉರಿದು ಬೀಳುತ್ತಿರುವ ಪ್ರೀತಿಕಾ ಕೆಲ ದಿನಗಳ ಹಿಂದೆ ಹರ್ಷದ್ ಅರೋರಾ ಅವರನ್ನು 'ಸ್ತ್ರೀ ಪೀಡಕ' ಎಂದು ಕರೆದಿದ್ದರು.

ವ್ಯಕ್ತಿಯೊಬ್ಬ ಹಂಚಿಕೊಂಡಿದ್ದ ವಿಡಿಯೋಗೆ ಪ್ರತಿಕ್ರಿಯಿಸಿದ್ದ ಪ್ರೀತಿಕಾ ನಾನು ಪದೇ ಪದೇ ಮನವಿಯನ್ನು ಮಾಡಿಕೊಂಡರು ಕೂಡ ನನ್ನ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಲೇ ಇರುವ ನಿಮಗೆಲ್ಲ ನಾಚಿಕೆಯಾಗಬೇಕು ಎಂದು ಹೇಳಿದ್ದರು. ಭೇಟಿಯಾಗುವ ಪ್ರತಿಯೊಬ್ಬ ಹುಡುಗಿಯ ಜೊತೆ ಮಲಗುವ.. ಹಾಸಿಗೆ ಹಂಚಿಕೊಳ್ಳುವ ವ್ಯಕ್ತಿಯ ಜೊತೆ ನಾನು ಇರುವ ವಿಡಿಯೋಗಳನ್ನು ಪೋಸ್ಟ್ ಮಾಡಬೇಡಿ ಎಂದು ಪ್ರೀತಿಕಾ ರಾವ್ ಹೇಳಿದ್ದರು. ಇವರ ಈ ಮಾತುಗಳಿಗೆ ಈಗ ಹರ್ಷದ್ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಹರ್ಷದ್ ಅರೋರಾ, "ಇವೆಲ್ಲವೂ ಬಾಲಿಶ ಕೆಲಸಗಳು. ಖ್ಯಾತಿಗಾಗಿ ಅವರು ಇದನ್ನೆಲ್ಲ ಮಾಡಿದ್ದರೆ, ಅದು ತುಂಬಾ ತಪ್ಪು" ಎಂದು ಹೇಳಿದ್ದಾರೆ. ನಾನು ಅವಳಷ್ಟು ಕೀಳು ಮಟ್ಟಕ್ಕೆ ಇಳಿದು ಸೇಡು ತೀರಿಸಿಕೊಳ್ಳಲು ಬಯಸುವುದಿಲ್ಲ, ನಾನು ಆಕೆಯ ಹೇಳಿಕೆಯನ್ನೆಲ್ಲ ಮರೆತಿದ್ದೇನೆ ಎಂದಿರುವ ಹರ್ಷದ್ ಅರೋರಾ ನಾನು ಅವಳ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಬಹುದಿತ್ತು, ಆದರೆ ನಾನು ಆ ಕೆಲಸವನ್ನು ಕೂಡ ಮಾಡಲಿಲ್ಲ ಎಂದಿದ್ದಾರೆ.

ಆಕೆಯ ಆರೋಪಗಳು ನಿಜವಾಗಿದ್ದೇ ಆದರೆ, ಬೇರೆ ಯಾರು ಯಾಕೆ ಮುಂದೆ ಬಂದು ಇನ್ನು ಮಾತನಾಡಲಿಲ್ಲ ಎಂದು ಪ್ರಶ್ನೆ ಕೇಳಿರುವ ಹರ್ಷದ್ ಅರೋರಾ ಇಲ್ಲಿಯವರೆಗೆ ನನ್ನ ವೃತ್ತಿ ಬದುಕಿನಲ್ಲಿ ನಾನು ಹಲವಾರು ಜನರ ಜೊತೆ ಕೆಲಸ ಮಾಡಿದ್ದೇನೆ, ಇಷ್ಟು ದಿನಗಳ ಕಾಲ ಸುಮ್ಮನೆ ಇದ್ದು ಈಗ ಏಕಾಏಕಿ ಮಾತನಾಡಲು ಕಾರಣವೇನು ಎಂದಿರುವ ಹರ್ಷದ್ ಅರೋರಾ ನಾನು ಏನು ಎಂದು ನನ್ನನ್ನು ತಿಳಿದಿರುವ ಜನರಿಗೆ ಗೊತ್ತು, ಅಷ್ಟೇ ಸಾಕು ನಾನು ಎಲ್ಲರಿಗೆ ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಹತ್ತು-ಹನ್ನೆರಡು ವರ್ಷದ ನಂತರ ಇದ್ದಕ್ಕಿದ್ದಂತೆ ಆರೋಪ ಮಾಡುತ್ತಿರುವುದು ವಿಚಿತ್ರವೆನಿಸುತ್ತಿದೆ ಎಂದು ಕೂಡ ಹೇಳಿದ್ದಾರೆ.

More from Filmibeat

English summary
TV actor Harshad Arora has spoken out about Preetika Rao’s recent comment labeling him a “womanizer.” He dismissed the accusation, questioning its purpose and expressing that he sees no point in engaging with such remarks.
Read more about: ಟಿವಿ serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X