ವರಮಹಾಲಕ್ಷ್ಮಿ ಹಬ್ಬದ ವಿಶೇಷ: 'ಸರಯೂ' ಮನೆಯಲ್ಲಿ ಹರ್ಷಿಕಾ

By Harshitha

ವಿಭಿನ್ನ ಕಥಾಹಂದರ, ಪ್ರಸಿದ್ಧ ಕಲಾವಿದರ ಅಭಿನಯದಿಂದಾಗಿ ಜನಮನ ಸೆಳೆಯುವ ಧಾರಾವಾಹಿಗಳು ಕನ್ನಡದ ಪ್ರತಿಷ್ಟಿತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ. ಅವುಗಳ ಸಾಲಲ್ಲಿ ಶ್ರೀ ದುರ್ಗಾ ಕ್ರಿಯೇಶನ್ಸ್ ನಿರ್ಮಾಣದ 'ಸರಯೂ' ಕೂಡಾ ಒಂದು.

ವರಮಹಾಲಕ್ಷ್ಮಿ ಹಬ್ಬದ ವಿಶೇಷ 'ಸರಯೂ' ಸಂಚಿಕೆಯಲ್ಲಿ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಳ್ಳುತ್ತಿರುವುದು ಈ ಹೊತ್ತಿನ ವಿಶೇಷ.

'ಸರಯೂ' ಕನ್ನಡ ಕಿರುತೆರೆಯಲ್ಲೇ ವಿಭಿನ್ನ ಪ್ರಯತ್ನದ ಧಾರಾವಾಹಿ. ಬ್ಯಾಂಕಾಕ್‍ನಲ್ಲಿ ಕೆಲವು ಸಂಚಿಕೆಗಳನ್ನು ಚಿತ್ರೀಕರಣ ಮಾಡಿದ್ದು ಈ ಧಾರಾವಾಹಿಯ ಹೆಗ್ಗಳಿಕೆ. ಮುಂದೆ ಓದಿರಿ...

250 ಕಂತುಗಳು ಸಂಪೂರ್ಣ

250 ಕಂತುಗಳು ಸಂಪೂರ್ಣ

ಒಬ್ಬ ಅಗರ್ಭ ಶ್ರೀಮಂತ ಕುಟುಂಬದ ಮಗನಿಗೆ ಹೆಂಡತಿಯಾಗಿ ಬರುವ ಸರಯೂ ಎಂಬ ಮುಗ್ಧೆ, ಆತನ ದರ್ಪ, ಕೆಟ್ಟ ಚಾಳಿಗಳನ್ನು ಹೋಗಲಾಡಿಸಿ, ಒಳ್ಳೆ ಮಾರ್ಗದಲ್ಲಿ ನಡೆಯುವಂತೆ ಮಾಡುವುದು 'ಸರಯೂ' ಧಾರಾವಾಹಿಯ ಕಥೆ. ಈ ಜರ್ನಿ ಇದೀಗ 250 ಕಂತುಗಳ ಸನೀಹಕ್ಕೆ ಬಂದು ನಿಂತಿದೆ.

'ಸರಯೂ' ಧಾರಾವಾಹಿಯ ಕಥೆ...

'ಸರಯೂ' ಧಾರಾವಾಹಿಯ ಕಥೆ...

ತನಗೆ ಅವಮಾನ ಮಾಡಿದ್ದಾಳೆ ಅಂತ ನಾಯಕಿ ಸರಯೂ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗೇ ಮದುವೆಯಾಗುವ ನಾಯಕ ಅಭಿ. ಅವಳ ಒಳ್ಳೆತನ ಅವನನ್ನು ಅಷ್ಟಷ್ಟೇ ಬದಲಾಯಿಸುತ್ತಾ ಹೋಗುತ್ತದೆ. 'ಸರಯೂ' ಬಗ್ಗೆ ಸೇಡಿನ ಭಾವನೆ ದೂರಾಗಿ ಅವಳನ್ನು ಪ್ರೀತಿಸತೊಡಗುತ್ತಾನೆ. ಅದನ್ನು ಹೇಳ್ಕೋಬೇಕು ಅಂದ್ಕೋತಿರುವಾಗಲೇ ಮನೆಮಂದಿಯ ಮೋಸದಿಂದ ಸರಯೂ ಸತ್ತು ಹೋಗುತ್ತಾಳೆ. ಆದರೆ ಅವಳ ಸಾವಿನ ವಿಷಯವನ್ನು ಮನೆಯವರಿಂದ ಮುಚ್ಚಿಡುವ ನಾಯಕನಿಗೆ ಸರಯೂಳನ್ನೇ ಹೋಲುವ ಮೈಥಿಲಿ ಸಿಗುತ್ತಾಳೆ.

ಬಂದ ಹರ್ಷಿಕಾ ಪೂಣಚ್ಚ

ಬಂದ ಹರ್ಷಿಕಾ ಪೂಣಚ್ಚ

ಮೈಥಿಲಿಯನ್ನ ಮನೆಗೆ ಕರೆದುಕೊಂಡು ಬಂದು ಮನೆಯವರನ್ನು ಇವಳೇ ಸರಯೂ ಅಂತ ನಂಬಿಸಿ, ಸರಯೂಳ ಸಾವಿಗೆ ಕಾರಣ ಆದವವನನ್ನು ಹುಡುಕ್ತಾ ಇರ್ತಾನೆ. ಅವನ ಬದುಕಲ್ಲಿ ಹಾಗೇ ದಿನಗಳು ಸಾಗುತ್ತಿವೆ. ವರಮಹಾಲಕ್ಷ್ಮಿ ಹಬ್ಬ ಬಂದಿದೆ.. ಅತಿಥಿಯಾಗಿ ಬರ್ತಿರೋರು ಚಿತ್ರನಟಿ ಹರ್ಷಿಕಾ ಪೂಣಚ್ಚ.!

ಹರ್ಷಿಕಾಗೂ 'ಸರಯೂ'ಗೂ ಏನು ಸಂಬಂಧ.?

ಹರ್ಷಿಕಾಗೂ 'ಸರಯೂ'ಗೂ ಏನು ಸಂಬಂಧ.?

ಹರ್ಷಿಕಾಗೂ ಸರಯೂಗೂ ಏನು ಸಂಬಂಧ? ಇವರ ಆಗಮನ ಕಥೆಗೆ ನೀಡುವ ತಿರುವಾದ್ರೂ ಏನು ಎಂಬುದನ್ನು ಧಾರಾವಾಹಿಯಲ್ಲೇ ನೋಡಬೇಕು.

ಕೊಡಗಿನ ಕುವರಿ ಹರ್ಷಿಕಾ

ಕೊಡಗಿನ ಕುವರಿ ಹರ್ಷಿಕಾ

ಹರ್ಷಿಕಾ ಪೂಣಚ್ಚ ಚಂದನವನದಲ್ಲಿ ತುಂಬಾ ಹೆಸರು ಮಾಡಿದವರು. 'ಮುರುಳಿ ಮೀಟ್ಸ್ ಮೀರಾ', 'ಬಿ3', 'ಕ್ರೇಜಿಲೋಕ', 'ಪಿಯುಸಿ', 'ಸುಗ್ರೀವ', 'ಜಾಕಿ', 'ಪರಿ' ಮುಂತಾದ ಚಿತ್ರಗಳಷ್ಟೇ ಅಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿ ಕರ್ನಾಟಕದ ಜನರ ಮನೆಮನಗಳಲ್ಲಿ ನೆಲೆಸಿದವರು.

ಕಾರ್ಯಕ್ರಮ ಪ್ರಸಾರ ಯಾವಾಗ.?

ಕಾರ್ಯಕ್ರಮ ಪ್ರಸಾರ ಯಾವಾಗ.?

ಹರ್ಷಿಕಾ ಪೂಣಚ್ಚ ಆಗಮನ 'ಸರಯೂ' ಧಾರಾವಾಹಿಗೆ ಇನ್ನೂ ಹೆಚ್ಚಿನ ವೀಕ್ಷಕರನ್ನು ಗಳಿಸಿಕೊಡುವುದು ನಿಸ್ಸಂದೇಹ ಎಂಬುದು ವಾಹಿನಿಯವರ ಅಭಿಪ್ರಾಯ. 'ಸರಯೂ'ದಲ್ಲಿ "ಹರ್ಷಿಕಾ ಪೂಣಚ್ಚ" ಇದೇ ಶುಕ್ರವಾರ (04.08.2017) ಉದಯ ವಾಹಿನಿಯಲ್ಲಿ ರಾತ್ರಿ 7.00ಕ್ಕೆ ಪ್ರಸಾರವಾಗಲಿದೆ.

More from Filmibeat

English summary
Varamahalakshmi Festival Special: Kannada Actress Harshika Poonacha in 'Sarayu' set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X