»   » ರಿಯಾಲಿಟಿ ಶೋ ನಿರೂಪಕಿಯಾಗಿ ಕೊಡಗಿನ ಬೆಡಗಿ ಹರ್ಷಿಕಾ?

ರಿಯಾಲಿಟಿ ಶೋ ನಿರೂಪಕಿಯಾಗಿ ಕೊಡಗಿನ ಬೆಡಗಿ ಹರ್ಷಿಕಾ?

Posted By:
Subscribe to Filmibeat Kannada

ಪಟ ಪಟ ಅಂತ ಮಾತನಾಡುತ್ತಾ, ಸದಾ ಆಕ್ಟೀವ್ ಆಗಿರುವ ಚಿನಕುರುಳಿ ಪಟಾಕಿ ನಟಿ ಹರ್ಷಿಕಾ ಪೂಣಚ್ಚ. ಚಿತ್ರರಂಗಕ್ಕೆ ಬಂದ ಆರೇ ವರ್ಷಗಳಲ್ಲಿ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಬಹು ಬೇಡಿಕೆ ಗಿಟ್ಟಿಸಿಕೊಂಡಿರುವ ಹರ್ಷಿಕಾಗೆ ಬೆಳ್ಳಿತೆರೆ ಮೇಲೆ ಮಾತ್ರ ಅಲ್ಲ, ಕಿರುತೆರೆಯಲ್ಲೂ ಡಿಮಾಂಡ್ ಇದೆ.

ಎಲ್ಲರೂ ನೋಡಿರುವ ಹಾಗೆ, ಕೆಲ ವರ್ಷಗಳ ಹಿಂದೆ ಹರ್ಷಿಕಾ ಪೂಣಚ್ಚ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿದ್ದರು. ಅಲ್ಲಿಂದ ಬೆಳ್ಳಿತೆರೆಗೆ ಪ್ರಮೋಟ್ ಆದ್ಮೇಲೆ ಹರ್ಷಿಕಾ ಸಿನಿಮಾಗಳಲ್ಲೇ ಬಿಜಿಯಾದರು.

ಆರು ವರ್ಷಗಳಲ್ಲಿ ಇಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಹರ್ಷಿಕಾ ಇದೀಗ ಮರಳಿ ಕಿರುತೆರೆಗೆ ಕಾಲಿಡುವ ಆಲೋಚನೆಯಲ್ಲಿದ್ದಾರೆ. ಕನ್ನಡದ ಜನಪ್ರಿಯ ಖಾಸಗಿ ವಾಹಿನಿಯೊಂದು ಶುರುಮಾಡುತ್ತಿರುವ 'ಅತಿ ದೊಡ್ಡ ರಿಯಾಲಿಟಿ ಶೋ'ವೊಂದರ ನಿರೂಪಕಿಯಾಗಲು ಹರ್ಷಿಕಾಗೆ ಕರೆ ಬಂದಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Harshika Poonacha to host a Reality Show in Small Screen?

ಚಾನೆಲ್ ಮತ್ತು ಶೋ ಕಾನ್ಸೆಪ್ಟ್ ಕೇಳಿ ಇಂಪ್ರೆಸ್ ಆದರೂ, ನಿರೂಪಕಿಯಾಗಲು ಹರ್ಷಿಕಾ ಇನ್ನೂ ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ. ಟಾಲಿವುಡ್ ನಲ್ಲೂ ಹರ್ಷಿಕಾ ಬಿಜಿಯಿರುವ ಕಾರಣ ಡೇಟ್ಸ್ ಸಮಸ್ಯೆ ಎದುರಾಗುವುದರಿಂದ ಈ ಆಫರ್ ನ ಒಪ್ಪಿಕೊಳ್ಳುವುದಕ್ಕೆ ಹಿಂದುಮುಂದು ನೋಡ್ತಿದ್ದಾರಂತೆ.

ಹೇಗಿದ್ದರೂ, ಕಾರ್ಯಕ್ರಮಕ್ಕೆ ಚಾಲನೆ ಸಿಗುವುದು ಮುಂದಿನ ವರ್ಷ. ಅಷ್ಟರೊಳಗೆ ಡೇಟ್ಸ್ ಹೊಂದಾಣಿಕೆ ಆದರೆ ಒಮ್ಮೆ ಟ್ರೈ ಮಾಡಬಹುದು ಅನ್ನುವುದು ಹರ್ಷಿಕಾ ಪ್ಲಾನ್. ಸದ್ಯಕ್ಕೆ ಯಾವುದೂ ಪಕ್ಕಾ ಆಗದ ಕಾರಣ, ಹರ್ಷಿಕಾಗೆ ಬುಲಾವ್ ನೀಡಿರುವ ಖಾಸಗಿ ವಾಹಿನಿ ಮತ್ತು ರಿಯಾಲಿಟಿ ಶೋ ವಿವರಗಳು ಗುಟ್ಟಾಗಿದೆ. ['ಬಿತ್ರಿ' ಹರ್ಷಿಕಾ ಪೋಸ್ಟರ್ ನೊಳಗ ಅಂತದ್ದೇನಿತ್ರಿ?]

ಈಗಾಗಲೇ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಟಿ ಆಶಿತಾ, ಲೂಸ್ ಮಾದ ಯೋಗಿ ಕಿರುತೆರೆಯಲ್ಲಿ ಒಂದು ಕೈ ನೋಡಿದ್ದಾಯ್ತು. ಇದೀಗ ಹರ್ಷಿಕಾ ಸರದಿ ಅಷ್ಟೆ. (ಫಿಲ್ಮಿಬೀಟ್ ಕನ್ನಡ)

English summary
Harshika Poonacha to make Small Screen Appearance. The Actress has got an offer from a Leading Kannada Entertainment Channel to Host a Reality Show. Will Harshika agree to this offer is a question mark as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada