IPL ಬಗ್ಗೆ ಕೇಳಿದ ಪ್ರಶ್ನೆಯಿಂದ ಹರ್ಷಿತ್ ಗೆ ಮಿಸ್ ಆಯ್ತು 6 ಲಕ್ಷ: ಯಾವುದು ಆ ಪ್ರಶ್ನೆ.?
ಕನ್ನಡದ ಕೋಟ್ಯಧಿಪತಿ ದಿನೇ ದಿನೇ ರೋಚಕವಾಗುತ್ತಿದೆ. ಮೊದಲ ಸ್ಪರ್ಧಿ ಯಾವುದೇ ಹಣ ಗೆದ್ದಿಲ್ಲ. ಎರಡನೇ ಸ್ಪರ್ಧಿ ಮಂಜುನಾಥ್ 3 ಲಕ್ಷದ 20 ಸಾವಿರ ರೂಪಾಯಿ ಗೆದ್ದರು. ನಂತರ ಮೂರನೇ ಸ್ಪರ್ಧಿ ಹರ್ಷಿತ್ 5000 ಸಾವಿರ ಗೆದ್ದು ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದರು.
ನಿನ್ನೆ ಆಟ ಮುಂದುವರೆಸಿದ ಹರ್ಷಿತ್ 3 ಲಕ್ಷ 20 ಸಾವಿರ ರೂಪಾಯಿ ಗೆದ್ದರು. ಆದ್ರೆ, 6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆಗೆ ಉತ್ತರ ಕೊಡುವಲ್ಲಿ ವಿಫಲರಾದರು. ವಿಶೇಷ ಅಂದ್ರೆ, ಇದೊಂದು ಕ್ರಿಕೆಟ್ ಗೆ ಸಂಬಂಧಪಟ್ಟಂತ ಪ್ರಶ್ನೆಯಾಗಿತ್ತು.
ಹಾಗಿದ್ರೆ, ಹರ್ಷಿತ್ ಗೆ ಎದುರಾದ 6 ಲಕ್ಷದ 40 ಸಾವಿರ ರೂಪಾಯಿ ಪ್ರಶ್ನೆ ಯಾವುದು.? ಹರ್ಷಿತ್ ನಂತರ ಆಯ್ಕೆಯಾದ ಸ್ಪರ್ಧಿ ಎಷ್ಟು ಗೆದ್ದರು ಎಂಬುದನ್ನ ತಿಳಿಯಲು ಮುಂದೆ ಓದಿ.....

6.40 ಲಕ್ಷದ ಪ್ರಶ್ನೆ ಇದಾಗಿತ್ತು
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (IPL) ಆಡಿದ ಮೊದಲ ನೇಪಾಳದ ಕ್ರಿಕೆಟಿಗ ಯಾರು.?
A ಶಿವಂ ಮಾವಿ
B ಆದಿತ್ಯ ತರೆ
C ಸಂದೀಪ್ ಲಮಿಚ್ಛಾನೆ
D ಚೈತನ್ಯ ಬಿಷ್ಣೋಯಿ

ಸರಿಯಾದ ಉತ್ತರ ಇದಾಗಿತ್ತು
ಹರ್ಷಿತ್ ಗೆ ಉತ್ತರ ಗೊತ್ತಿರಲಿಲ್ಲ. ಆದ್ರೆ, ಒಂದು ಊಹೆಯ ಮೆರೆಗೆ C ಸಂದೀಪ್ ಲಮಿಚ್ಛಾನೆ ಎಂದು ಉತ್ತರಿಸಿದರು. ಆದ್ರೆ, ಅದನ್ನ ಲಾಕ್ ಮಾಡುವಷ್ಟರಲ್ಲಿ ಅವರ ತಂದೆ ಬಳಿಯಿದ್ದ ವಿಶೇಷ ಅಧಿಕಾರದಿಂದ ಸೂಚನೆ ಸಿಕ್ತು. ನಂತರ ಆಯ್ಕೆ ಬದಲಾಯಿಸಿ ಹರ್ಷಿತ್ ಆಯ್ಕೆ A-ಶಿವಂ ಮಾವಿ ಎಂದು ಉತ್ತರಿಸಿದರು. ಆದ್ರೆ, ತಪ್ಪಾಗಿತ್ತು.
ಸರಿಯಾದ ಉತ್ತರ: C ಸಂದೀಪ್ ಲಮಿಚ್ಛಾನೆ

3.20 ಲಕ್ಷದ ಪ್ರಶ್ನೆ ಇದೇ
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದ ಜೊತೆಯಲ್ಲಿ ಸ್ಪರ್ಧಿಸಿದ್ದ ಇನ್ನೊಂದು ಕ್ಷೇತ್ರ ಯಾವುದು.?
A ಮಂಡ್ಯ
B ಚೆನ್ನಪಟ್ಟಣ
C ಹೊಳೇನರಸಿಪುರ
D ಹಾಸನ

ಹರ್ಷಿತ್ ಗೆ ಸಹಾಯ ಮಾಡಿದ್ದು 'ಫೋನ್ ಎ ಫ್ರೆಂಡ್'
ಈ ಪ್ರಶ್ನೆಗೆ ಉತ್ತರ ಕೊಡಲು ಹರ್ಷಿತ್ ಸ್ವಲ್ಪ ಕಷ್ಟಪಟ್ಟರು. ಯಾಕಂದ್ರೆ, ಅವರಿಗೆ ಉತ್ತರ ಗೊತ್ತಿರಲಿಲ್ಲ. ನಂತರ ಫೋನ್ ಎ ಫ್ರೆಂಡ್ ಲೈಫ್ ಲೈನ್ ಬಳಸಿಕೊಂಡರು. ಸ್ವರ ಸ್ನೇಹಿತ ಸರಿಯಾದ ಉತ್ತರ ನೀಡಿದರು.
ಸರಿಯಾದ ಉತ್ತರ: B ಚೆನ್ನಪಟ್ಟಣ

'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆ
ಮೊದಲಿನಿಂದ ಆರಂಭಿಸಿ ಭಾರತದ ಇತಿಹಾಸದ ಈ ಪ್ರಮುಖ ಘಟ್ಟಗಳನ್ನ ಕಾಲಾನುಕ್ರಮವಾಗಿ ಜೋಡಿಸಿ.?
A ದಂಡಿಯಾತ್ರೆ
B ಕ್ವಿಟ್ ಇಂಡಿಯಾ ಚಳುವಳಿ
C ಗಾಂಧಿಜೀಯವರು ಜನನ
D ಭಾರತದ ಮೊದಲ ಸಾರ್ವತಿಕ ಚುನಾವಣೆ

ಕರೆಕ್ಟ್ ಉತ್ತರ ಕೊಟ್ಟಿದ್ದು ಇವರೇ
'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಗೆ ಸರಿಯಾಗಿ ಮತ್ತು ವೇಗವಾಗಿ ಉತ್ತರ ಕೊಟ್ಟಿದ್ದು, ಸುದರ್ಶನ್.
C ಗಾಂಧಿಜೀಯವರು ಜನನ
A ದಂಡಿಯಾತ್ರೆ
B ಕ್ವಿಟ್ ಇಂಡಿಯಾ ಚಳುವಳಿ
D ಭಾರತದ ಮೊದಲ ಸಾರ್ವತಿಕ ಚುನಾವಣೆ
ಆದ್ರೆ, ಕೇವಲ ಎರಡು ಪ್ರಶ್ನೆಗೆ ಉತ್ತರ ಕೊಟ್ಟ ಸುದರ್ಶನ್ ಮೂರನೇ ಪ್ರಶ್ನೆಗೆ ಉತ್ತರ ಕೊಡದೇ ಆಟದಿಂದ ವಾಪಸ್ ಆದರು.

ಮುಂದಿನ ಸ್ಪರ್ಧಿ
ಇದಾದ ನಂತರ ಮತ್ತೊಂದು ಸಲ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆ ಕೇಳಲಾಯಿತು. ಈ ಚಲನಚಿತ್ರಗಳನ್ನ ಅವುಗಳ ಶೀರ್ಷಿಕೆಯಲ್ಲಿರುವ ಸಂಖ್ಯೆಗಳ ಅನುಸಾರವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ.?
A ಸಾವಿರ ಮೆಟ್ಟಿಲು
B ಎರಡು ಕನಸು
C ತ್ರಿಮೂರ್ತಿ
D ನೂರೊಂದು ನೆನಪು
ಸರಿಯಾದ ಉತ್ತರ BCDA, ಕೊಟ್ಟವರು ಅರುಣಾ.


Click it and Unblock the Notifications











