ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಹವಾ ; ಅರ್ಧ ಗಡ್ಡ ಮೀಸೆಗೆ ಬಿತ್ತು ಕತ್ತರಿ - ಸವಾಲು ಹಾಕಿ ನುಡಿದಂತೆ ನಡೆದ ಅಬ್ದುಲ್ ರಜಾಕ್

''ಬಿಗ್ ಬಾಸ್'' ಈ ಬಾರಿ ಕೇವಲ ಕಾರ್ಯಕ್ರಮ ಆಗಿರಲಿಲ್ಲ. ಬದಲಿಗೆ ಹಲವರ ಪಾಲಿಗೆ ಭಾವನಾತ್ಮಕವಾದ ವಿಚಾರ ಆಗಿತ್ತು, ಇದಕ್ಕೆ ಕೈಗನ್ನಡಿ ಎಂಬಂತೆ ಕಾರ್ಯಕ್ರಮ ಶುರುವಾದ ಮೊದಲ ದಿನದಿಂದಲೇ ಗಿಲ್ಲಿ ಹೆಸರು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಕೂಡ ಸದ್ದು ಮಾಡಲು ಶುರು ಮಾಡಿತ್ತು. ಮಂಡ್ಯದ ಮಣ್ಣಿನ ಮಗ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಇಡೀ ರಾಜ್ಯವೇ ಕೇಕೆ ಹಾಕಿತು.

ಇನ್ನೂ.. ಬೆಂಬಲ ಕೊಡುವವರು ಇರುವಲ್ಲಿ ಕಾಲೆಳೆಯುವರು ಕೂಡ ಇರುತ್ತಾರೆ. ಗಿಲ್ಲಿ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಗಿಲ್ಲಿಯ ಮುಗ್ದತೆ.. ಹಾಸ್ಯ ಪ್ರಜ್ಞೆ.. ಹಲವರ ಹೃದಯವನ್ನೂ ಗೆಲ್ಲುತ್ತಿದ್ದ ಸಮಯದಲ್ಲಿ ಕೆಲವರು ಗಿಲ್ಲಿ ಕುರಿತು ಕೊಂಕು ಮಾತನಾಡಿದ್ದರು. ಗಿಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ವಾದವನ್ನು ಮಾಡುತ್ತಿದ್ದರು. ಬಹಿರಂಗವಾಗಿ ಸವಾಲು ಹಾಕಿದ್ದರು. ಆ ಪೈಕಿ ಒಬ್ಬರಾಗಿದ್ದವರು ಅಬ್ದುಲ್ ರಜಾಕ್.

he-actually-did-it-man-shaves-half-his-face-after-losing-viral-gilli-nata-bigg-boss-bet

ಹೌದು, ಈ ಬಾರಿಯ ''ಬಿಗ್ ಬಾಸ್'' ಗಿಲ್ಲಿ ಆಗಲು ಸಾಧ್ಯವೇ ಇಲ್ಲ ಎನ್ನುವುದು ಅಬ್ದುಲ್ ರಜಾಕ್ ಅವರ ವಾದವಾಗಿತ್ತು. ಈ ಕುರಿತು ಹಲವಾರು ವಿಡಿಯೋಗಳನ್ನು ಮಾಡಿರುವ ಅಬ್ದುಲ್ ರಜಾಕ್ ತಮ್ಮ ಬೆಂಬಲವನ್ನು ರಕ್ಷಿತಾಗೆ ನೀಡಿದ್ದರು. ಅಶ್ವಿನಿ ಗೌಡ ಅವರ ಪರವಾಗಿ ಕೂಡ ಮಾತನಾಡಿದ್ದರು.

ದೇವಸ್ಥಾನ ಇರಲಿ.. ರಸ್ತೆಯಲ್ಲಿರಲಿ.. ಗಿಲ್ಲಿ ಅಭಿಮಾನಿಗಳು ಎಲ್ಲಿಯೇ ಸಿಕ್ಕಿದರೂ ನಿಮ್ಮ ಗಿಲ್ಲಿ ಗೆಲ್ತಾನಾ..? ಎಂದು ಪ್ರಶ್ನೆಯನ್ನು ಮಾಡಿದ್ದರು. ಅವನೇನು ಆಟ ಆಡಿದಾನೆ ಎಂದು ಕುಹುಕದ ಮಾತುಗಳನ್ನಾಡಿದ್ದರು. ಇನ್ನೂ ಗಿಲ್ಲಿ ಮನೆಯಲ್ಲಿ ತಮ್ಮ ಆಸೆಯಂತೆ ದೊಡ್ಡ ತಟ್ಟೆ ತುಂಬಾ ನಲ್ಲಿ ಮೂಳೆ ತರಿಸಿಕೊಂಡು ತಿಂದಾಗಲೂ ಕೂಡ ಅಬ್ದುಲ್ ರಜಾಕ್ ವ್ಯಂಗ್ಯವಾಡಿದ್ದರು.

ಇನ್ನು ಗೆಲ್ಲುವ ಮುಂಚೆ ಗಿಲ್ಲಿ ಬಿಗ್ ಬಾಸ್‌ನಲ್ಲಿ ನನ್ನ ಜೀವನದಲ್ಲಿ ಗೆಲುವು ಅನ್ನೋದು ಇಲ್ಲ ಎಂದು ಅಂದುಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ಕುರಿತು ಕೂಡ ನಿನ್ನೆ (ಜನವರಿ 18 ) ಫಿನಾಲೆ ಆರಂಭಕ್ಕೂ ಮುನ್ನ ಮಾತನಾಡಿದ್ದ ಅಬ್ದುಲ್ ರಜಾಕ್, ಗಿಲ್ಲಿ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದರು. ಮೂರು ನಾಲ್ಕು ರಿಯಾಲಿಟಿ ಶೋಗಳನ್ನು ಮಾಡಿದ್ದರೂ.. ಹದಿನೈದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದರೂ.. ಅದಕ್ಕೆ ನ್ಯಾಯವನ್ನು ಗಿಲ್ಲಿ ಸಲ್ಲಿಸಿಲ್ಲ. ಬದಲಿಗೆ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದಿದ್ದರು. ಇನ್ನೊಬ್ಬರಿಗೆ ಹೀಯಾಳಿಸಿ ಟಾಂಗ್ ಕೊಟ್ಟಿದ್ದು ಬಿಟ್ಟರೆ ಯಾವ ಟಾಸ್ಕ್‌ನ್ನು ಕೂಡ ಗೆದ್ದಿಲ್ಲ, ಗೆದ್ದರು ಕೂಡ ಅದು ಅಶ್ವಿನಿ ಗೌಡ ಅವರ ಬೆಂಬಲದಿಂದ ಮಾತ್ರ ಎಂದು ಹೇಳಿದ್ದರು.

ಇಂಥಾ ಅಬ್ದುಲ್ ರಜಾಕ್ ಈ ಹಿಂದೆ ಚಾಲೆಂಜ್ ಮಾಡಿದ್ದರು. ಅಪ್ಪಿ ತಪ್ಪಿ ''ಬಿಗ್ ಬಾಸ್‌'' ಆಗಿ ಗಿಲ್ಲಿ ಹೊರ ಹೊಮ್ಮಿದರೆ, ಗೆದ್ದರೆ, ಅರ್ಧ ಗಡ್ಡ ಮತ್ತು ಮೀಸೆ ಬೋಳಿಸುವುದಾಗಿ ಹೇಳಿದ್ದರು. ಅಬ್ದುಲ್ ರಜಾಕ್ ದುರಾದೃಷ್ಟ.. ಗಿಲ್ಲಿಯ ಅದೃಷ್ಟ.. ''ಬಿಗ್ ಬಾಸ್‌'' ಗಿಲ್ಲಿಯ ಕೈ ಹಿಡಿಯಿತು. ಈ ಹಿನ್ನೆಲೆ ಇದೀಗ
ನುಡಿದಂತೆ ಅಬ್ದುಲ್ ರಜಾಕ್ ತಮ್ಮ ಅರ್ಧ ಗಡ್ಡ ಮತ್ತು ಮೀಸೆಯನ್ನು ಬೋಳಿಸಿದ್ದಾರೆ. ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅಬ್ದುಲ್ ರಜಾಕ್ ಗಿಲ್ಲಿ ನಟ ಗೆದ್ದರೆ ಅರ್ಧ ಮೀಸೆ ಮತ್ತು ಗಡ್ಡ ತೆಗೆಯುತ್ತೇನೆ ಎಂದು ಹೇಳಿದ್ದೆ, ಕೊನೆಗೆ ಅವರೇ ಗೆದ್ದಿದ್ದಾರೆ, ಅವರ ಫ್ಯಾನ್ಸ್ ಗೆಲ್ಲಿಸಿದಾರೆ ಎಂದಿದ್ದಾರೆ. ಮಾತನಾಡುತ್ತಾ ತಮ್ಮ ಅರ್ಧ ಗಡ್ಡ ಮತ್ತು ಮೀಸೆಗೆ ಗ್ರ್ಯಾಂಡ್ ಫಿನಾಲೆ ನೋಡುತ್ತಲೇ ಕತ್ತರಿಯನ್ನು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

More from Filmibeat

English summary
Watch the shocking moment a man shaves half his face following Gilli Nata’s Bigg Boss Season 12 victory. He challenged the win and kept his word. Full story here!
Read more about: gilli nata bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X