ಬಿಗ್ ಬಾಸ್‌ನಲ್ಲಿ ಅರಳಿತ್ತು ಪ್ರೀತಿ ; ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ - ಮಂಗಳಮುಖಿ ಸ್ಫರ್ಧಿ ಕಣ್ಣೀರು
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ..
ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಆದರೆ ಕೆಲ ಒಮ್ಮೆ ಕೆಲವರಿಗೆ ಈ ಪ್ರೀತಿ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗುವುದೇ ಇಲ್ಲ. ಉದಾಹರಣೆಗೆ ಪ್ರಿಯಾಂಕ ಸಿಂಗ್ ಅವರ ವ್ಯೆಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಹೌದು, ಪ್ರಿಯಾಂಕ ಸಿಂಗ್ ಅಲಿಯಾಸ್ ಸಾಯಿ ತೇಜಾ. ಪಕ್ಕದ ಮನೆ ಪ್ರಖ್ಯಾತ ಕಾರ್ಯಕ್ರಮ ''ಜಬರ್‌ದಸ್ತ್'' ಮೂಲಕ ಬೆಳಕಿಗೆ ಬಂದ ಪ್ರತಿಭೆ. ಸಮಾಜ ಒಡ್ಡಿರುವ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಗೆದ್ದ ಹಲವು ಮಂಗಳಮುಖಿಯರಲ್ಲಿ ಇವರು ಕೂಡ ಒಬ್ಬರು.
''ಬಾಲಕೃಷ್ಣುಡು''.. ''ಪಿಂಕಿ''.. ಸೇರಿ ಕೆಲ ತೆಲುಗು ಚಿತ್ರಗಳನ್ನು ಮಾಡಿರುವ ಪ್ರಿಯಾಂಕ ಸಿಂಗ್ ತೆಲುಗಿನ ''ಬಿಗ್ ಬಾಸ್ 5''ನೇ ಸೀಸನ್‌ನ ಸ್ಫರ್ಧಿ ಕೂಡ ಹೌದು. ಹೆಚ್ಚು ಕಡಿಮೆ 95 ದಿನ ಪ್ರಿಯಾಂಕ ''ಬಿಗ್ ಬಾಸ್'' ಮನೆಯಲ್ಲಿದ್ದರು.
ಆದರೆ ಇದೇ ಸಮಯದಲ್ಲಿ ''ಬಿಗ್ ಬಾಸ್''ಮನೆಯಲ್ಲಿದ್ದ ಮತ್ತೊಬ್ಬ ಸ್ಫರ್ಧಿ ಮಾನಸ್‌ಗೆ ಪ್ರಿಯಾಂಕ ಮನ ಸೋತಿದ್ದರು. ಪ್ರೀತಿಯಲ್ಲಿ ಕೂಡ ಬಿದ್ದಿದ್ದರು. ಆದರೆ.. ಈ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಇದಕ್ಕೆ ಕಾರಣವನ್ನು ಪ್ರಿಯಾಂಕ ಸಿಂಗ್ ಸದ್ಯ ಬಹಿರಂಗ ಪಡಿಸಿದ್ದಾರೆ. ತಮ್ಮ ಮಾಜಿ ಪ್ರಿಯಕರ ಮಾನಸ್ ವಿರುದ್ಧ ಕೆಂಡ ಕಾರಿದ್ದಾರೆ.
ಈ ಕುರಿತು ಖ್ಯಾತ ನಿರೂಪಕಿ ವರ್ಷಾ ಅವರಿಗೆ ನೀಡಿದ ಸಂದರ್ಶನದಲ್ಲಿ (ಕಿಸಿಕ್ ಟಾಕ್ ಶೋ) ಮಾತನಾಡಿರುವ ಪ್ರಿಯಾಂಕ ಸಿಂಗ್, ಮಾನಸ್ ನನ್ನ ಜೊತೆ ಸಂಪರ್ಕದಲ್ಲಿರುವುದಾಗಿ ಎಲ್ಲೆಡೆ ಹೇಳಿಕೊಂಡು ಬರುತ್ತಾರೆ. ಆದರೆ ವಾಸ್ತವದಲ್ಲಿ ಮಾನಸ್ ಮಾತುಗಳೆಲ್ಲವೂ ನಿಜಾ ಅಲ್ಲ ಬದಲಿಗೆ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

''ಬಿಗ್ ಬಾಸ್''ನಲ್ಲಿ ಮಾನಸ್ ನನಗೆ ಆತ್ಮೀಯರಾಗಿದ್ದರು, ನಾನು ಆ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದ ನನ್ನೆಲ್ಲ ಭಾವನೆಗಳು ನೂರಕ್ಕೆ ನೂರು ಸತ್ಯವಾದವು ಎಂದು ಹೇಳಿರುವ ಪ್ರಿಯಾಂಕ ಸಿಂಗ್ ಆ ಕಾರ್ಯಕ್ರಮದಲ್ಲಿ ನನ್ನೆಲ್ಲ ಮಾತುಗಳು ನನ್ನ ಮನಸಿಂದ ಬಂದಿದ್ದವು, ಯಾರು ನನಗೆ ಹೀಗೆ ಮಾತನಾಡಿ ಎಂದು ಹೇಳಿ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಪ್ರೀತಿಸಿದರೆ ಹೃದಯದಿಂದ ಪ್ರೀತಿಸುತ್ತೇನೆ, ನನಗೆ ದ್ವೇಷ ಮಾಡುವುದು ಗೊತ್ತಿಲ್ಲ ಎಂದು ಹೇಳಿರುವ ಪ್ರಿಯಾಂಕ ಸಿಂಗ್, ಆದರೆ ಅವನು ನನ್ನನ್ನು ದ್ವೇಷ ಮಾಡಿದ ಎಂದು ಭಾವುಕರಾಗಿದ್ದಾರೆ. ಅವನಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟೆ, ಮದುವೆಯಾಗುವುದಾಗಿ ನಂಬಿಸಿದ ಕೊನೆಗೆ ಮೋಸ ಮಾಡಿ ಬೇರೆ ಹುಡುಗಿಯನ್ನು ಮದುವೆಯಾದ ಎಂದು ಕಣ್ಣೀರು ಹಾಕಿದ್ದಾರೆ.
ಮುಂದುವರೆದು ''ಬಿಗ್ ಬಾಸ್'' ಕಾರ್ಯಕ್ರಮದ ನಂತರ ಕೂಡ ನಿನ್ನೊಂದಿಗೆ ನಾನು ಇರಬೇಕು ಎಂದು ಮಾತನಾಡುತ್ತಿದ್ದ ಎಂದು ಹೇಳಿರುವ ಪ್ರಿಯಾಂಕ ಸಿಂಗ್ ನಾನು ಅವನಿಗೋಸ್ಕರ ರಸ್ತೆಗಳಲ್ಲಿ ಹುಚ್ಚು ನಾಯಿಯಂತೆ ಅಲೆದೆ.. ಅನೇಕ ತ್ಯಾಗ ಮಾಡಿದೆ.. ಎಂದು ಹೇಳಿದ್ದಾರೆ. ನಾನು ಮಂಗಳಮುಖಿ. ನಾಲ್ಕು ಗೋಡೆಗಳ ಮಧ್ಯೆ ನಮ್ಮ ಸಂಬಂಧ ಚೆನ್ನಾಗಿತ್ತು. ಆದರೆ ಹೊರಗಡೆ ನನ್ನ ಜೊತೆ ಮಾತನಾಡಲು ಅವನು ಹೆದರುತ್ತಿದ್ದ ಎಂದು ಹೇಳಿರುವ ಪ್ರಿಯಾಂಕ ಸಿಂಗ್ ನನ್ನ ಜೊತೆ ಇದ್ದರೆ ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಭಯ ಅವನಲ್ಲಿತ್ತು ಎಂದು ಹೇಳಿದ್ದಾರೆ. ನಮ್ಮಂತಹ ಮಂಗಳಮುಖಿಯರನ್ನು ಹಲವು ಕೇವಲ ಲೈಂ*ಗಿಕ ವಸ್ತುಗಳಂತೆ ನೋಡುತ್ತಾರೆ ಆದರೆ ಹೊರಗಡೆ ತಿರುಗಾಡಲು ಭಯ ಪಡುತ್ತಾರೆ ಎಂದು ಪ್ರಿಯಾಂಕ ಸಿಂಗ್ ಭಾವುಕರಾಗಿದ್ದಾರೆ.


Click it and Unblock the Notifications











