ಮೆಲ್ಲನೆ ನನ್ನ ಹತ್ತಿರ ಬಂದು.. ; ಸಿನಿಮಾ ಆಡಿಷನ್‌ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ ನಿರ್ದೇಶಕ, ಖ್ಯಾತ ನಟಿ ಭಾವುಕ

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ.

ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ..ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ-ಸಂದರ್ಭ ಬಂದಾಗ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಈ ಸಾಲಿಗೀಗ ಶಿಖಾ ಸಿಂಗ್ ಸೇರಿಕೊಂಡಿದ್ಧಾರೆ.

He Slowly Approached Me Kumkum Bhagya Star Shikha Singh Recalls Chilling Casting Couch Horror

ಹೌದು, ಶಿಖಾ ಸಿಂಗ್.. ಹಿಂದಿ ಕಿರುತೆರೆ ಚೆಲುವೆ. 2007ರಲ್ಲಿ ''ಲೆಫ್ಟ್ ರೈಟ್ ಲೆಫ್ಟ್'' ಧಾರಾವಾಹಿ ಮೂಲಕ ಈ ಪ್ರಪಂಚಕ್ಕೆ ಬಂದ ಶಿಖಾ ಸಿಂಗ್‌ಗೆ ''ಕುಂಕುಮ್ ಭಾಗ್ಯ'' ಅಪಾರವಾದ ಕೀರ್ತಿ ತಂದು ಕೊಡ್ತು. ಹಲವರು ಇವತ್ತು ಕೂಡ ಇವರನ್ನು ''ಕುಂಕುಮ್ ಭಾಗ್ಯ'' ಧಾರಾವಾಹಿಯ ಆಲಿಯಾ ಮೆಹ್ರಾ ಪಾತ್ರದಿಂದಲೇ ಗುರುತಿಸುತ್ತಾರೆ.

''ನಾ ಆನಾ ಇಸ್ ದೇಸ್ ಲಾಡೋ''.. ''ಮಹಾಭಾರತ್''..''ನಾಗಿನ್ 6''.. ''ಫುಲ್ವಾ''.. ''ಸಸುರಾಲ್ ಸಿಮರ್ ಕಾ''..''ಅದಾಲತ್'' ಇವರ ಕೆಲ ಖ್ಯಾತ ಧಾರಾವಾಹಿಗಳು. ಇದಲ್ಲದೇ ''ಕಾಮಿಡಿ ಸರ್ಕಸ್'' ಮತ್ತು ''ಕಾಮಿಡಿ ನೈಟ್ಸ್ ಬಚಾವೋ''..''ಗೋಲ್ಡ್ ಸೇಫ್''.. ಸೇರಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥಾ ಶಿಖಾ ಸಿಂಗ್ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಬೆಳ್ಳಿತೆರೆಯತ್ತ ನಾನು ಬಾರದಿರಲು ಅದೇ ಪ್ರಮುಖ ಕಾರಣ ಎಂದಿದ್ಧಾರೆ.

ಈ ಕುರಿತು ''ಟೆಲಿ ಮಸಾಲಾ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶಿಖಾ ಸಿಂಗ್, ನಾನು ನನ್ನ ಜೀವನದಲ್ಲಿ ಆಡಿಷನ್‌ಗೆ ಹೋಗಿದ್ದು ಕೇವಲ ಒಂದೇ ಬಾರಿ, ಅದೇ ಮೊದಲು ಮತ್ತು ಅದೇ ಕೊನೆ ಎಂದು ಹೇಳಿದ್ಧಾರೆ.

ಅದೊಂದು ದಿನ ನಾನು ಸಿನಿಮಾವೊಂದರ ಆಡಿಷನ್‌ಗೆ ಹೋಗಿದ್ದೆ, ಅಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಸೋಫಾದ ಮೇಲೆ ಕುಳಿತುಕೊಂಡಿದ್ದರು ಎಂದು ಆ ದಿನವನ್ನು ನೆನಪು ಮಾಡಿಕೊಂಡಿರುವ ಶಿಖಾ ಸಿಂಗ್, ಮಾತುಕಥೆ ನಡೆಯುವಾಗ ಮೆಲ್ಲನೆ ನನ್ನ ಹತ್ರ ಬಂದರು, ನನ್ನ ಮೇಲೆ ಕೈ ಹಾಕಿದರು, ನಾನು ಕೂಡಲೇ ಎದ್ದು ನಿಂತೆ ಎಂದು ಹೇಳಿದ್ಧಾರೆ.

he-slowly-approached-me-kumkum-bhagya-star-shikha-singh-recalls-chilling-casting-couch-horror

ಮುಂದುವರೆದು ನಾನು ಎದ್ದು ನಿಂತಿದ್ದಕ್ಕೆ, ಏನಾಯ್ತು ಎಂದು ಅವರು ನನಗೆ ಕೇಳಿದರು, ಆಗ ನಾನು ಇಲ್ಲ ಸರ್ ನಾನು ನಿಂತೆ ಮಾತನಾಡುತ್ತೇನೆ ಎಂದು ಹೇಳಿದೆ ಎಂದು ಹೇಳಿರುವ ಶಿಖಾ ಸಿಂಗ್, ನನ್ನ ಈ ಮಾತಿಗೆ ಇಲ್ಲ ಕುಳಿತುಕೋ, ಇದೆಲ್ಲಾ ಇಲ್ಲಿ ಸಾಮಾನ್ಯ ಎಂದು ಅವರು ಹೇಳಿದರು ಎಂದು ತಮಗಾದ ಆಘಾತಕಾರಿ ಅನುಭವ ಹಂಚಿಕೊಂಡಿದ್ಧಾರೆ.

ಆ ನಂತರ ನನ್ನ ಸೌಂದರ್ಯವನ್ನು ಏಕಾಏಕಿ ಹೊಗಳಲು ಅವರು ಶುರು ಮಾಡಿದರು ಎಂದು ಹೇಳಿರುವ ಶಿಖಾ ಸಿಂಗ್, ನೀನು ಪಕ್ಕಾ ಹೀರೋಯಿನ್ ಮೆಟೀರಿಯಲ್, ದೊಡ್ಡ ಸಿನೆಮಾಗಳಿಗೆ ನೀನೇ ಸೂಕ್ತ ಎಂದೆಲ್ಲಾ ಹೊಗಳಲು ಶುರು ಮಾಡಿದರು ಎಂದಿದ್ದಾರೆ. ಹೊಗಳುತ್ತಲೇ ಹತ್ತಿರ ಬರುವ ಪ್ರಯತ್ನ ಮಾಡಿದರು, ಆಗ ಸರ್, ಇದೆಲ್ಲಾ ಸಾಮಾನ್ಯವಾದರೆ, ಅದು ನನ್ನ ವಿಷಯದಲ್ಲಿ ಆಗುವುದಿಲ್ಲ' ಎಂದು ಖಡಕ್ಕಾಗಿ ಉತ್ತರಿಸಿ ಅಲ್ಲಿಂದ ಹೊರ ಬಂದೆ ಎಂದು ಹೇಳಿದ್ಧಾರೆ. ಇದಾದ ನಂತರ ನಾನು ಯಾವತ್ತು ಸಿನಿಮಾ ಆಡಿಷನ್‌ಗೆ ಹೋಗಲೇ ಇಲ್ಲ ಎಂದು ಭಾವುಕರಾಗಿದ್ಧಾರೆ.

ಸದ್ಯ ಶಿಖಾ ಸಿಂಗ್ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಯಾವುದೇ ತಪ್ಪು ದಾರಿಯನ್ನು ಹಿಡಿಯದೆ, ತಮಗೆ ಸೂಕ್ತ ಗೌರವ ಸಿಗುವ ಜಾಗದಲ್ಲೇ ಶಿಖಾ ಬೆಳೆದು ನಿಂತಿದ್ದಾರೆ ಎಂಬ ಅಭಿಪ್ರಾಯವನ್ನು ಇವರ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ಧಾರೆ. ಮಂಡಿಯೂರುವುದಕ್ಕಿಂತ ಸ್ವಾಭಿಮಾನ ದೊಡ್ಡದು ಎಂದು ಹೊರ ಬಂದ ಶಿಖಾ ಅವರ ಧೈರ್ಯವನ್ನು ಮೆಚ್ಚುತ್ತಿದ್ಧಾರೆ.

English summary
Kumkum Bhagya star Shikha Singh exposes the dark side of Bollywood, recalling a chilling casting couch experience during her very first film audition. Read now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X