ಎಲ್ಲರೂ ಹಾಗೇ ಮಾಡೋದು ; ಆ ವ್ಯಕ್ತಿ ನಾನು ಎಲ್ಲದಕ್ಕೂ ರೆಡಿ ಅಂದ್ಕೊಂಡಿದ್ದ -'ನಾ ನಿನ್ನ ಬಿಡಲಾರೆ'ಯ ಮಾಯಾ ರುಹಾನಿ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೆಲವರು ಇಲ್ಲಿ ನೇರವಾಗಿಯೇ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ. ಚೂರು ಯಾಮಾರಿದರೂ ಕೂಡ ಸ್ಥಳ ಯಾವುದೇ ಇರಲಿ, ಅಲ್ಲಿಯೇ ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

he-thought-i-was-ready-for-anything-ruhani-shetty-exposes-the-dark-reality-of-the-casting-couch

ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ರುಹಾನಿ ಶೆಟ್ಟಿ

ಹೌದು. ರುಹಾನಿ ಶೆಟ್ಟಿ ಮೂಲತಃ ತುಳುನಾಡಿನವರು. ಶಿಲ್ಪಾ ಶೆಟ್ಟಿ ಎಂದು ಇದ್ದ ತಮ್ಮ ಹೆಸರನ್ನು ರುಹಾನಿ ಶೆಟ್ಟಿಯನ್ನಾಗಿ ಬದಲಿಸಿಕೊಂಡ ಇವರು ಡಾರ್ಲಿಂಗ್ ಕೃಷ್ಣ ಅಭಿನಯದ ''ಶುಗರ್ ಫ್ಯಾಕ್ಟರಿ'' ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದರು.

ಆ ನಂತರ ''ಮರಳಿ ಮನಸಾಗಿದೆ'' ಧಾರಾವಾಹಿಯಲ್ಲಿ ಕಾಣಿಸಿಕೊಂಡ ರುಹಾನಿಗೆ ಜೀ ಕನ್ನಡದ ''ನಾ ನಿನ್ನ ಬಿಡಲಾರೆ'' ಧಾರಾವಾಹಿಯ ಅಪಾರವಾದ ಜನಪ್ರಿಯತೆ ತಂದು ಕೊಡ್ತು. ಈ ಧಾರಾವಾಹಿಯಲ್ಲಿ ರುಹಾನಿ ಅವರದ್ದು ಖಳನಾಯಕಿಯ ಪಾತ್ರವಾದರು ಕೂಡ ಜನ ಇವರನ್ನು ಇಷ್ಟ ಪಟ್ಟಿದ್ದರು. ಆದರೆ ಆ ನಂತರ ಏಕಾಏಕಿ ರುಹಾನಿ ಈ ಧಾರಾವಾಹಿಯಿಂದ ಹೊರ ಬಂದರು. ಸದ್ಯ ರುಹಾನಿ ಕಲರ್ಸ್ ಕನ್ನಡದ ''ಪವಿತ್ರ ಬಂಧನ'' ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ.

ಇಂಥಾ ರುಹಾನಿ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ನಾನೆಲ್ಲದಕ್ಕೂ ರೆಡಿ ಅಂದುಕೊಂಡಿದ್ದ ಎಂದು ಹೇಳಿದ್ದಾರೆ. ಈ ಕುರಿತು ''ವಿಶ್ವವಾಣಿ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರುಹಾನಿ ತೀರಾ ಇತ್ತೀಚೆಗೆ ನನ್ನನ್ನು ಒಬ್ಬ ವ್ಯಕ್ತಿ ಸಂಪರ್ಕ ಮಾಡಿದ್ದ ಎಂದಿದ್ದಾರೆ. ಆ ವ್ಯಕ್ತಿ ಯಾರೆಂದು ನಾನು ಈಗ ಹೇಳಬಹುದು ಆದರೆ ಸುಖಾಸುಮ್ಮನೆ ವಿವಾದ ಆಗುತ್ತೆ, ನನಗೆ ಈಗ ವಿವಾದವಾಗುವುದು ಇಷ್ಟ ಇಲ್ಲ, ಹೀಗಾಗಿ ಹೆಸರೇಳಲ್ಲ ಎಂದಿದ್ದಾರೆ.

he-thought-i-was-ready-for-anything-ruhani-shetty-exposes-the-dark-reality-of-the-casting-couch

ಮುಂದುವರೆದು ಆತ ಒಬ್ಬ ಕಾಸ್ಟಿಂಗ್ ಏಜೆಂಟ್ ಎಂದು ಹೇಳಿರುವ ರುಹಾನಿ ಆತ ನಾವು ಎಲ್ಲದಕ್ಕೂ ರೆಡಿಯಾಗಿರುತ್ತೇವೆ ಎಂದುಕೊಂಡಿದ್ದಾನೆ ಎಂದು ಹೇಳಿದ್ದಾರೆ. ಅವನಿಗೆ ನಾನು ಎಲ್ಲ ರೀತಿಯಿಂದಲೂ ಬೈದು ಆಗಿದೆ. ಅವನ ನಂಬರ್ ಕೂಡ ಬ್ಲಾಕ್ ಮಾಡಿ ಆಗಿದೆ. ಆದರೂ ಕೂಡ ಮತ್ಯಾರದ್ದೋ ನಂಬರ್‌ದಿಂದ ಸಂಪರ್ಕ ಮಾಡ್ತಾನೆ ಎಂದು ಹೇಳಿರುವ ರುಹಾನಿ ಅದರಲ್ಲೇನು ದೊಡ್ಡ ವಿಷಯ, ಎಲ್ಲರೂ ಹಾಗೇ ಮಾಡ್ತಾರೆ ಎಂದು ಹೇಳಿ ಯಾರ ಯಾರದ್ದೋ ಹೆಸರನ್ನು ಹೇಳುತ್ತಾನೆ ಎಂದಿದ್ದಾರೆ.

ಬೇರೆಯವರ ಹೆಸರನ್ನೇಳಿ ಅವರ ಮರ್ಯಾದೆ ತೆಗೆಯುವ ಕೆಲಸ ಆ ವ್ಯಕ್ತಿ ಮಾಡ್ತಿದ್ದಾನೆ ಎಂದು ಹೇಳಿರುವ ರುಹಾನಿ, ಪಾಪ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರಬಹುದು ಅಥವಾ ಅವರಿಗೆ ಅವಶ್ಯಕತೆ ಇರಬಹುದು, ಅವರಿಗೂ ಒಂದು ಬದುಕು ಇದೆ, ಅವರ ವ್ಯೆಯಕ್ತಿಕ ಜೀವನದ ಬಗ್ಗೆ ಗೊತ್ತಿಲ್ಲದಿದ್ದಾಗ ಅವನ್ಯಾಕೆ ಮಾತನಾಡಬೇಕು, ನಾವ್ಯಾಕೇ ಮಾತನಾಡಬೇಕು ಎಂದು ರುಹಾನಿ ಪ್ರಶ್ನೆ ಮಾಡಿದ್ದಾರೆ.

ಈ ತರ ಚಾನೆಲ್‌ನಲ್ಲಿ ನೀವು ಕೆಲಸ ಮಾಡಿದ್ದೀರಾ, ಅಲ್ಲಿ ಈ ತರ ಮಾಡಿಯೇ ಬಂದಿರ್ತಾರೆ ಎಂದು ಕೂಡ ಆ ವ್ಯಕ್ತಿ ನನಗೆ ಹೇಳಿದ್ದ ಎಂದಿರುವ ರುಹಾನಿ ನನ್ನನ್ನೂ ಜಡ್ಜ್ ಮಾಡಲು ಅವನ್ಯಾರು..? ನನ್ನ ಕೆಲಸ ನಾನು ಏನ್ಮಾಡ್ತದ್ದೀನಿ ಎನ್ನುವುದು ನನಗೆ ಗೊತ್ತು. ನನಗೆ ಇನ್ನೊಬ್ಬರ ಕಡೆಯಿಂದ ಕ್ಯಾರೆಕ್ಟರ್ ಸರ್ಟಿಫಿಕೆಟ್ ಬೇಡ ಎಂದು ಹೇಳಿದ್ದಾರೆ. ಕಲ್ಪನೆ ಮಾಡಿಕೊಳ್ಳೋರು ಮಾಡಿಕೊಳ್ತಾನೇ ಇರ್ತಾರೆ.. ಬಾಯಿಗೆ ಬಂದಂತೆ ಮಾತನಾಡುವರು ಮಾತನಾಡ್ತಾನೇ ಇರ್ತಾರೆ ಎಂದು ಕೂಡ ರುಹಾನಿ ಹೇಳಿದ್ದಾರೆ.

More from Filmibeat

English summary
He thought I was ready for anything." Ruhani Shetty reveals the chilling moment a casting agent crossed the line. Read the full story of how the Na Ninna Bidalare actress fought back against the casting couch to protect her career
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X