ನಾಯಿ ಜೊತೆ ವಾಕಿಂಗ್ ಹೋಗಿ ದೊಪ್ಪನೆ ಬಿದ್ದ ಬಿಗ್ ಬಾಸ್ ಸ್ಫರ್ಧಿ ; ಮುಖಕ್ಕೆ ಗಾಯ-ಕಣ್ಣೀರು ಹಾಕಿದ ಚೆಲುವೆ

ಸಾಕಷ್ಟು ಜನ ಮುದ್ದು ಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಇನ್ನೂ ಹಣವಂತರ ಮತ್ತು ಚಿತ್ರರಂಗದವರ ಕಥೆ ಕೇಳಬೇಕಾ..? ತುಸು ಹೆಚ್ಚೇ ತಮ್ಮ ನಾಯಿಯ ಮೇಲೆ ಪ್ರೀತಿಯನ್ನು ಧಾರೆ ಎರೆಯುತ್ತಿರುತ್ತಾರೆ. ತಾವು ಹೋದಲೆಲ್ಲ ಕರೆದೊಯ್ಯುತ್ತಾರೆ. ವಾಕಿಂಗ್ ಕೂಡ ಮಾಡುತ್ತಾರೆ.

ಆದರೆ .. ಹೀಗೆ ವಾಕಿಂಗ್ ಹೋದಾಗ ಅವಘಡ ನಡೆದರೆ..? ಯಡವಟ್ಟಾದರೆ..? ಆಕಾಶವೇ ಕಳಚಿ ಬಿದ್ದಂತಾಗುತ್ತೆ. ಎಲ್ಲರೆದುರು ಮುಜುಗರಕ್ಕೂ ಇಡಾಗಬೇಕಾಗುತ್ತೆ. ಅಶ್ವಿನಿ ಶ್ರೀ ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ. ಹೌದು, ಅಶ್ವಿನಿ ಶ್ರೀ.. ತೆಲುಗು ಪಿಲ್ಲಾ. ''ಸಿರಿ ಸಿರಿ ಮುವ್ವಲು'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಅಶ್ವಿನಿ ಶ್ರೀ ''ಅಮೀರಪೇಟೆ ಲೋ'' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು.

Heartbreaking Bigg Boss Star Ashwini Sree s Morning Walk Turns Into a Nightmare

ಪವನ್ ಕಲ್ಯಾಣ್ ಅಭಿನಯದ ''ಸರ್ದಾರ್ ಗಬ್ಬರ್ ಸಿಂಗ್''.. ರವಿತೇಜಾ ಅಭಿನಯದ ''ರಾಜಾ ದಿ ಗ್ರೇಟ್''..ಮತ್ತು ಬಿ.ಟೆಕ್ ಬಾಬುಲು.. ಚಿತ್ರಗಳಲ್ಲಿ ಕೂಡ ಅಶ್ವಿನಿ ಶ್ರೀ ಕಾಣಿಸಿಕೊಂಡಿದ್ದಾರೆ. ''ವಿನಾರೋ ಭಾಗ್ಯಮು ವಿಷ್ಣುಕಥಾ'' ಇವರ ಇತ್ತೀಚಿನ ಚಿತ್ರ. ''ಬಿಗ್ ಬಾಸ್'' ತೆಲುಗು ಸೀಸನ್ 7ರಲ್ಲಿ ವೈಲ್ಡ್ ಕಾರ್ಡ್ ಸ್ಫರ್ಧಿಯಾಗಿ ಮನೆಯನ್ನು ಕೂಡ ಪ್ರವೇಶ ಮಾಡಿದ್ದ ಅಶ್ವಿನಿ ಶ್ರೀ 5 ವಾರ ಮನೆಯಲ್ಲಿದ್ದರು.

ಇಂಥಾ ಅಶ್ವಿನಿ ಶ್ರೀ ದಿನ ಬೆಳಗಾದರೆ ತಮ್ಮ ನಾಯಿಯ ಜೊತೆ ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ.. ಮೊನ್ನೆ ಮಾತ್ರ ಇವರ ಈ ಅಭ್ಯಾಸಕ್ಕೆ ಭಾರೀ ಬೆಲೆಯನ್ನು ಇವರು ತೆತ್ತಿದ್ದಾರೆ. ನಾಯಿಯ ಜೊತೆ ವಾಕ್ ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸ ಎಷ್ಟಿತ್ತು ಅಂದರೆ ಇವರ ಮುಖಕ್ಕೆ ತೀವೃವಾದ ಪೆಟ್ಟು ಬಿದ್ದಿದೆ.

ಇನ್ನೂ ನಿಮಗೆ ಗೊತ್ತು. ಸೆಲೆಬ್ರಿಟಿಗಳಿಗೆ ಅವರ ಮುಖವೇ ಅವರ ಗುರುತು, ಅವರ ಆತ್ಮವಿಶ್ವಾಸ. ಹೀಗಾಗಿ ಹಲವರು ತಮ್ಮ ಮುಖದ ಕುರಿತು ತುಂಬಾನೇ ಜಾಗರೂಕರಾಗಿರುತ್ತಾರೆ. ತಮ್ಮ ಮುಖಕ್ಕೆ ಚೂರು ಏನಾದರೂ ಆದರೂ ಕೂಡ ಮಾನಸಿಕವಾಗಿ ಇವರು ಜರ್ಜರಿತರಾಗುತ್ತಾರೆ.

ಸದ್ಯ ಅಶ್ವಿನಿ ಶ್ರೀ ಅವರ ವಿಚಾರದಲ್ಲಿಯೂ ಇದೇ ಆಗಿದ್ದುಇನ್‌ಸ್ಟಾಗ್ರಾಮ್‌ನಲ್ಲಿ ಬಿಗ್ ಬಾಸ್‌ನ ಈ ಚೆಲುವೆ ವಿಡಿಯೋ ಹಂಚಿಕೊಂಡಿದ್ದಾರೆ. ಕಣ್ಣೀರನ್ನು ಹಾಕಿದ್ಧಾರೆ.

Heartbreaking Bigg Boss Star Ashwini Sree s Morning Walk Turns Into a Nightmare

ಈ ಕುರಿತು ಮಾತನಾಡಿರುವ ಅಶ್ವಿನಿ ಶ್ರೀ ಬೆಳಿಗ್ಗೆ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದೆ ಇದರಿಂದ ನನ್ನ ಮುಖಕ್ಕೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ನಿಮ್ಮೆಲ್ಲರ ಮುಂದೆ ನಾನು ಈ ರೀತಿ ಬರುತ್ತೇನೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಹೇಳಿರುವ ಅಶ್ವಿನಿ ಶ್ರೀ ಮುಖಕ್ಕೆ ಪೆಟ್ಟು ಬಿದ್ದ ನಂತರ ನನಗೆ ತುಂಬಾನೇ ನೋವಾಗಿದೆ ಎಂದು ಹೇಳಿದ್ದಾರೆ. ನನಗಾಗಿ ನೀವೆಲ್ಲಾ ಪ್ರಾರ್ಥನೆ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಭಾವುಕರಾಗಿದ್ದಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಹಲವರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ಧಾರೆ. ''ಬಿಗ್ ಬಾಸ್''ನ ಸದಸ್ಯರು ಕೂಡ ಅಶ್ವಿನಿ ಶ್ರೀ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ಧಾರೆ.

ಸದ್ಯ ಅಶ್ವಿನಿ ಶ್ರೀ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಹಕ್ಕೆ ಆದ ಗಾಯ ಕಾಲಾ ನಂತರದಲ್ಲಿ ವಾಸಿಯಾಗಬಹುದು. ಆದರೆ ಇಂತಹ ದುಃಸ್ವಪ್ನಗಳಿಂದ ಆಗುವ ಮಾನಸಿಕ ಆಘಾತದಿಂದ ಹೊರಬರಲು ತುಸು ಹೆಚ್ಚಿನ ಸಮಯ ಬೇಕಾಗುತ್ತೆ.

More from Filmibeat

English summary
Ashwini Sree suffers a serious face injury during a morning walk with her dog. Watch the viral video as the Bigg Boss star opens up about the traumatic incident and her recovery.
Read more about: ಟಿವಿ biggboss dog
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X