ಬಿಗ್ ಬಾಸ್ ಮನೆಯಿಂದ ಕಣ್ಣೀರಿಡುತ್ತಾ ಹೊರ ಬಂದ ಆರ್‌ಜೆ

ಪ್ರತಿ ವರ್ಷದಂತೆ ಈ ವರ್ಷ ಕೂಡ ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಕಲರವ ಆರಂಭವಾಗಿದೆ. ಮರಾಠಿ ಮತ್ತು ತಮಿಳು ಹೊರತು ಪಡಿಸಿದರೆ ಈಗಾಗಲೇ ಕನ್ನಡ.. ಹಿಂದಿ.. ತೆಲುಗಿನಲ್ಲಿ ''ಬಿಗ್ ಬಾಸ್'' ಕೆಲಸಗಳು ಆರಂಭ ಆಗಿವೆ. ಹಿಂದಿಯಲ್ಲಿ ಇದೇ ಆಗಸ್ಟ್ 24ಕ್ಕೆ ಸಲ್ಮಾನ್ ಖಾನ್ ಸಾರಥ್ಯದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ತೆಲುಗಿನಲ್ಲಿ ಸೆಪ್ಟೆಂಬರ್ 7ಕ್ಕೆ ನಾಗಾರ್ಜುನ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಶುರು ಮಾಡಲಿದ್ದಾರೆ.

ಇನ್ನೂ ಕನ್ನಡದಲ್ಲಿ ಸುದೀಪ್ ನೇತೃತ್ವದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಲಿದ್ದು ಈಗಾಗಲೇ ಈ ಬಾರಿಯ ಲೋಗೋವನ್ನು ಅನಾವರಣ ಮಾಡಲಾಗಿದೆ. ಮತ್ತೊಂದು ಕಡೆ ಮೋಹನ್ ಲಾಲ್ ನಾಯಕತ್ವದಲ್ಲಿ ಈಗಾಗಲೇ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭವಾಗಿದ್ದು ನಿನ್ನೆ ಭಾನುವಾರ (ಆಗಸ್ಟ್ 17) ರಂದು ಎರಡನೇ ಸ್ಫರ್ಧಿ ಮನೆಯಿಂದ ಹೊರ ಬಂದಿದ್ದಾರೆ.

Heartbreaking Exit RJ Bincy Breaks Down After Eviction From Mohanlal s Bigg Boss Malayalam 7

ಹೌದು, ಎಂದಿನಂತೆ ಈ ಬಾರಿ ಕೂಡ ''ಬಿಗ್ ಬಾಸ್‌'' ಮನೆಗೆ ಮನರಂಜನೆಯ ಕ್ಷೇತ್ರದಲ್ಲಿದ್ದವರನ್ನೇ ಕಳುಹಿಸಲಾಗಿತ್ತು. ಇಷ್ಟೇ ಅಲ್ಲದೇ ಜನಸಾಮಾನ್ಯರನ್ನು ಕೂಡ ಆಯ್ಕೆ ಮಾಡಲಾಗಿತ್ತು. ಆ ಪೈಕಿ ರೇಡಿಯೋ ಜಾಕಿ ಆಗಿ ಹೆಸರು ಮಾಡಿರುವ ಆರ್‌.ಜೆ.ಬಿನ್ಸಿ ಸದ್ಯ ಮನೆಯಿಂದ ಹೊರಗಡೆ ಬಂದಿದ್ದಾರೆ.

ಇನ್ನು ಆರ್.ಜೆ.ಬಿನ್ಸಿಯ ಎಲಿಮಿನೇಷನ್ ಹಲವರಿಗೆ ಆಶ್ಚರ್ಯವನ್ನುಂಟು ಮಾಡಿದ್ದು ಸುಳ್ಳಲ್ಲ. ಯಾಕೆಂದರೆ.. ಈ ಬಾರಿಯ ಪ್ರಬಲ ಸ್ಫರ್ಧಿಯೆಂದೇ ಬಿಂಬಿತರಾಗಿದ್ದವರು ಆರ್.ಜೆ.ಬಿನ್ಸಿ. ಅದ್ಯಾಗೂ ಅವರಿಗೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ಸಿಕ್ಕಿಲ್ಲ.

ಹೀಗಾಗಿಯೇ ಕಣ್ಣೀರಿಡುತ್ತಾ ಮನೆಯಿಂದ ಹೊರಗೆ ಬಂದ ಆರ್.ಜೆ.ಬಿನ್ಸಿ ನಾನು ಅನೇಕ ಕನಸುಗಳನ್ನೊತ್ತು, ಆಸೆಗಳೊಂದಿಗೆ ಮನೆಯೊಳಗೆ ಹೋಗಿದ್ದೇ, ಕೊನೆಯವರೆಗೆ ಇರುತ್ತೇನೆ ಎಂದು ಅಂದುಕೊಂಡಿದ್ದೇ ಆದರೆ ಇಷ್ಟು ಬೇಗ ಮನೆಯಾಚೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಮೋಹನ್ ಲಾಲ್ ಎದುರು ಭಾವುಕರಾದರು.

ಮೋಹನ್ ಲಾಲ್ ಅವರ ''ಚಿತ್ರಂ'' ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ ನನ್ನನ್ನು ಮತ್ತೆ ಮನೆಗೆ ಮರಳಿ ಕಳುಹಿಸಲು ಯಾವುದಾದರೂ ಬೇರೆ ದಾರಿ ಇದೆಯಾ ಎಂದು ಕೇಳಿದರು. ಮನೆಯಿಂದ ಹೊರ ಬರುವ ಮುನ್ನ ಮನೆಯಲ್ಲಿದ್ದ ತಮ್ಮ ಆಪ್ತ ಸ್ನೇಹಿತ ಅಪ್ಪಾನಿ ಶರತ್ ಅವರನ್ನು ತಬ್ಬಿಕೊಂಡು ''ಕಪ್ ಗೆದ್ದು ಬಾ'' ಎಂದು ಹೇಳಿದರು. ವಿಶೇಷ ಅಂದರೆ ಈ ಹಿಂದೆ ಸ್ಫರ್ಧಿಗಳಾದ ಒನಾಲ್ ಮತ್ತು ಸಾರಿಕಾ ಅವರನ್ನು ''ಬಿಗ್ ಬಾಸ್'' ಮನೆಗೆ ಆಟೋದಲ್ಲಿ ಕರೆ ತರಲಾಗಿತ್ತು. ಅದೇ ಆಟೋದಲ್ಲಿ ಆರ್‌.ಜೆ.ಬಿನ್ಸಿ ಅವರನ್ನು ಅವರ ಮನೆಗೆ ಕಳುಹಿಸಲಾಯ್ತು.

ಇನ್ನು ಆರ್‌.ಜೆ.ಬಿನ್ಸಿ ಮನೆಯಾಚೆ ಬಂದ ನಂತರ ಅನೇಕರು ತಮ್ಮ ಅಸಮಾಧಾನವನ್ನು ಸೋಶೀಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದು ಇದು ನ್ಯಾಯ ಅಲ್ಲ ಎಂದು ಹೇಳಿದ್ದಾರೆ. ಆರ್.ಜೆ.ಬಿನ್ಸಿ ಅವರ ಬದಲು ಸದಾ ಕಾಲ ''ಬಿಗ್ ಬಾಸ್'' ಮನೆಯ ಕ್ಯಾಮರಾ ಮುಂದೆ ಬಂದು ಕುಳಿತುಕೊಳ್ಳುವ ರೇಣು ಸುಧಿ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ಆರ್‌.ಜೆ.ಬಿನ್ಸಿ ಜೊತೆ ಅನುಮೋಲ್.. ಶೈತ್ಯ ಸಂತೋಷ್.. ಗಿಜೆಲೆ ಥಕ್ರಾಲ್.. ಆರ್ಯನ್ ಕಥುರಿಯಾ.. ಶಾನವಾಸ್.. ಅಧಿಲಾ.. ನೂರಾ.. ಬಿನ್ನಿ ಸೆಬಾಸ್ಟಿಯನ್.. ನೆವಿನ್.. ಅಕ್ಬರ್.. ಶರತ್.. ಅವರನ್ನು ಕೂಡ ''ಡೇಂಜರ್ ಝೋನ್" ನಲ್ಲಿ ಕರೆತಂದು ನಿಲ್ಲಿಸಲಾಗಿತ್ತು. ಆದರೆ.. ಆರ್‌ಜೆ ಬಿನ್ಸಿಗೆ ಮನೆಯಲ್ಲಿ ಇನ್ನೂ ಹೆಚ್ಚು ದಿನ ಉಳಿಯುವ ಅದೃಷ್ಟ ಇರಲಿಲ್ಲ

ಸದ್ಯ ಮನೆಯಲ್ಲಿ ಸಲಿಂಗಿ ಜೋಡಿ ಅಧಿಲಾ ಮತ್ತು ನೂರಾ ಜೊತೆ ರೇಣು ಸುಧಿ.. ಅನುಮೋಲ್.. ಶೈತ್ಯ ಸಂತೋಷ್.. ಗಿಜೆಲೆ ಥಕ್ರಾಲ್.. ಆರ್ಯನ್ ಕಥುರಿಯಾ..ಸಾರಿಕಾ.. ನೆವಿನ್..ಕಾಮನ್ ಮ್ಯಾನ್ ಆಗಿ ಮನೆ ಪ್ರವೇಶಿಸಿರುವ ಅನೀಶ್ ಟಿಎ.. ಅಪ್ಪಾನಿ ಶರತ್..ಕಲಾಭವನ್ ಸರಿಗ..ಅಭಿಶ್ರೀ..ಒನಲ್ ಸಾಬು..ಬಿನ್ನಿ ಸೆಬಾಸ್ಟಿಯನ್..ಶಾನವಾಸ್ ಶಾನು..19ರ ಹರೆಯದ ರೀನಾ ಫಾತಿಮಾ..ಅಕ್ಬರ್ ಖಾನ್.. ಇದ್ದಾರೆ.

More from Filmibeat

English summary
In a shocking twist, RJ Bincy's journey on Bigg Boss Malayalam 7 comes to a heartbreaking end. Witness the emotional moment she breaks down after her eviction from Mohanlal's show.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X