»   » ಕಿರುತೆರೆಯಲ್ಲಿ 'ಹೆಬ್ಬುಲಿ' ಘರ್ಜನೆ ನೋಡಲು ಮರೆಯದಿರಿ.!

ಕಿರುತೆರೆಯಲ್ಲಿ 'ಹೆಬ್ಬುಲಿ' ಘರ್ಜನೆ ನೋಡಲು ಮರೆಯದಿರಿ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಹೆಬ್ಬುಲಿ' ಈಗ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. 'ಜೀ ಕನ್ನಡ' ವಾಹಿನಿಯಲ್ಲಿ 'ಹೆಬ್ಬುಲಿ' ಚಿತ್ರ ನಾಳೆ (ಸಪ್ಟೆಂಬರ್ 16) ಪ್ರಸಾರವಾಗಲಿದೆ.

ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

ಬಾಕ್ಸ್ ಆಫೀಸ್ ನಲ್ಲಿ 'ಭರ್ಜರಿ' ಕಲೆಕ್ಷನ್ ಮಾಡಿದ್ದ 'ಹೆಬ್ಬುಲಿ' ಚಿತ್ರ ಫೆಬ್ರವರಿ 23 ರಂದು ದೇಶದಾದ್ಯಂತ ತೆರೆಕಂಡಿತ್ತು. 'ಮಾಣಿಕ್ಯ' ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್-ಸುದೀಪ್ ಕಾಂಬಿನೇಷನ್ ನಲ್ಲಿ ಈ ಚಿತ್ರ ಬಂದಿತ್ತು. ಸುದೀಪ್ ಅಣ್ಣನಾಗಿ ರವಿಮಾಮ ಮಿಂಚಿದ್ದು, 'ಗಜಕೇಸರಿ' ಕೃಷ್ಣ ನಿರ್ದೇಶನ ಮಾಡಿದ್ರು.

'Hebbuli' will telecast september 16 in Zee Kannada.

ಕಾಲಿವುಡ್ ನಟಿ ಅಮಲಾ ಪೌಲ್ ನಾಯಕಿಯಾಗಿದ್ದು, ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. ಒಟ್ನಲ್ಲಿ, 'ಹೆಬ್ಬುಲಿ' ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾ ನಾಳೆ (ಸಪ್ಟೆಂಬರ್ 16) 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Kiccha Sudeep staring Kannada Movie 'Hebbuli' will telecast tomorrow (september 16) at 7.30 in Zee Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada