ಹೇಮಶ್ರೀ ಅಕ್ಕ ರೂಪಶ್ರೀ ಮನದಾಳದ ಮಾತುಗಳು

ಹೇಮಶ್ರೀ ಸಾವಿಗೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳು ದಿಕ್ಕುತಪ್ಪಿಸುತ್ತಿವೆ. ಹಾಗಾಗಿ ತಾವು ಪತ್ರಿಕಾಗೋಷ್ಠಿಯನ್ನು ಕರೆದಿದ್ದೇವೆ. ಸಂಪೂರ್ಣ ತನಿಖೆ ನಡೆಯುವವರೆಗೂ ಮಾಧ್ಯಮಗಳು ತಾಳ್ಮೆ ವಹಿಸಬೇಕು. ಸತ್ಯಾಸತ್ಯತೆಗಳು ಏನು ಎಂದು ಗೊತ್ತಾದ ಬಳಿಕವಷ್ಟೇ ವರದಿ ಮಾಡಬೇಕು ಎಂದರು.
ಹೇಮಶ್ರೀ ಅವರ ಅಕಾಲಿಕ ಸಾವು ನಮ್ಮ ಕುಟುಂಬಕ್ಕೆ ಶಾಕ್ ನೀಡಿದೆ. ಗುರು ಹಿರಿಯರ ಒಪ್ಪಿಗೆ ಮೇರೆಗೆ ಸುರೇಂದ್ರ ಬಾಬು ಜೊತೆ ಹೇಮಶ್ರೀ ಮದುವೆಯಾಗಿತ್ತು. ಅವರಿಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಸುರೇಂದ್ರ ಬಾಬು ಕೂಡ ಅಷ್ಟೇ ಒಳ್ಳೆಯವರು. ಹೇಮಶ್ರೀಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಮಾಧ್ಯಮಗಳಲ್ಲಿ ಬಂದಂತೆ ಹೇಮಶ್ರೀಗೆ ಬಾಯ್ ಫ್ರೆಂಡ್ ಇದ್ದಾನೆ ಎಂಬುದು ಸುಳ್ಳು. ಆಕೆಯ ಮದುವೆಯಾಗಿ ಯಾರೂ ಬಲವಂತ ಮಾಡಲಿಲ್ಲ. ಆಕೆಯ ಮದುವೆಯಿಂದ ನಮ್ಮ ಕುಟುಂಬಕ್ಕೆ ಯಾವುದೇ ಲಾಭವಾಗಿಲ್ಲ. ನಮ್ಮ ಕುಟುಂಬಕ್ಕೆ ಯಾವುದೇ ಹಣಕಾಸಿನ ತೊಂದರೆಯೂ ಇರಲಿಲ್ಲ ಎಂದು ಅವರು ಸಮಾಧಾನಚಿತ್ತದಿಂದ ಹೇಳಿದರು.
ಈಗ ನಮ್ಮ ಪೋಷಕರು ಹೇಮಶ್ರೀ ಅಂತಿಮ ಸಂಸ್ಕಾರಕ್ಕಾಗಿ ವಾರಣಾಸಿಗೆ ಹೋಗಿದ್ದಾರೆ. ಈಗ ಅವರು ಮಾಧ್ಯಮಗಳ ಮುಂದೆ ಬಂದು ಉತ್ತರಿಸುವ ಸ್ಥಿತಿಯಲ್ಲಿಲ್ಲ. ಹೇಮಶ್ರೀ ಸಾವಿನ ಶಾಕ್ ನಿಂದ ಅವರು ಇನ್ನೂ ಹೊರಬಂದಿಲ್ಲ. ಈ ನೋವಿನಿಂದ ಅವರು ಹೊರಬಂದ ಬಳಿಕ ಮಾಧ್ಯಮಗಳ ಮುಂದೆ ಬರುತ್ತಾರೆ ಎಂದು ತಿಳಿಸಿದರು. ಮುಂದೆ ಓದಿ ನಮ್ಮ ಕುಟುಂಬದ ನೆಮ್ಮದಿ ಹಾಳುಮಾಡಿದ್ದೇ ಅವನು


Click it and Unblock the Notifications











