For Quick Alerts
  ALLOW NOTIFICATIONS  
  For Daily Alerts

  ಹೇಮಶ್ರೀ ಅಕ್ಕ ರೂಪಶ್ರೀ ಮನದಾಳದ ಮಾತುಗಳು

  By Rajendra
  |
  <ul id="pagination-digg"><li class="next"><a href="/tv/dont-spread-rumours-about-our-family-roopashree-068855.html">Next »</a></li></ul>
  ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕಿರುತೆರೆ ತಾರೆ ಹೇಮಶ್ರೀ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಹೇಮಶ್ರೀ ಅವರ ಅಕ್ಕ ವೃತ್ತಿಯಲ್ಲಿ ವೈದ್ಯರೂ ಆಗಿರುವ ಡಾ.ರೂಪಶ್ರೀ ಅವರು ಶನಿವಾರ (ಅ.13) ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

  ಹೇಮಶ್ರೀ ಸಾವಿಗೆ ಸಂಬಂಧಿಸಿದಂತೆ ಇನ್ನೂ ತನಿಖೆ ನಡೆಯುತ್ತಿದೆ. ಆದರೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳು ದಿಕ್ಕುತಪ್ಪಿಸುತ್ತಿವೆ. ಹಾಗಾಗಿ ತಾವು ಪತ್ರಿಕಾಗೋಷ್ಠಿಯನ್ನು ಕರೆದಿದ್ದೇವೆ. ಸಂಪೂರ್ಣ ತನಿಖೆ ನಡೆಯುವವರೆಗೂ ಮಾಧ್ಯಮಗಳು ತಾಳ್ಮೆ ವಹಿಸಬೇಕು. ಸತ್ಯಾಸತ್ಯತೆಗಳು ಏನು ಎಂದು ಗೊತ್ತಾದ ಬಳಿಕವಷ್ಟೇ ವರದಿ ಮಾಡಬೇಕು ಎಂದರು.

  ಹೇಮಶ್ರೀ ಅವರ ಅಕಾಲಿಕ ಸಾವು ನಮ್ಮ ಕುಟುಂಬಕ್ಕೆ ಶಾಕ್ ನೀಡಿದೆ. ಗುರು ಹಿರಿಯರ ಒಪ್ಪಿಗೆ ಮೇರೆಗೆ ಸುರೇಂದ್ರ ಬಾಬು ಜೊತೆ ಹೇಮಶ್ರೀ ಮದುವೆಯಾಗಿತ್ತು. ಅವರಿಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಸುರೇಂದ್ರ ಬಾಬು ಕೂಡ ಅಷ್ಟೇ ಒಳ್ಳೆಯವರು. ಹೇಮಶ್ರೀಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.

  ಮಾಧ್ಯಮಗಳಲ್ಲಿ ಬಂದಂತೆ ಹೇಮಶ್ರೀಗೆ ಬಾಯ್ ಫ್ರೆಂಡ್ ಇದ್ದಾನೆ ಎಂಬುದು ಸುಳ್ಳು. ಆಕೆಯ ಮದುವೆಯಾಗಿ ಯಾರೂ ಬಲವಂತ ಮಾಡಲಿಲ್ಲ. ಆಕೆಯ ಮದುವೆಯಿಂದ ನಮ್ಮ ಕುಟುಂಬಕ್ಕೆ ಯಾವುದೇ ಲಾಭವಾಗಿಲ್ಲ. ನಮ್ಮ ಕುಟುಂಬಕ್ಕೆ ಯಾವುದೇ ಹಣಕಾಸಿನ ತೊಂದರೆಯೂ ಇರಲಿಲ್ಲ ಎಂದು ಅವರು ಸಮಾಧಾನಚಿತ್ತದಿಂದ ಹೇಳಿದರು.

  ಈಗ ನಮ್ಮ ಪೋಷಕರು ಹೇಮಶ್ರೀ ಅಂತಿಮ ಸಂಸ್ಕಾರಕ್ಕಾಗಿ ವಾರಣಾಸಿಗೆ ಹೋಗಿದ್ದಾರೆ. ಈಗ ಅವರು ಮಾಧ್ಯಮಗಳ ಮುಂದೆ ಬಂದು ಉತ್ತರಿಸುವ ಸ್ಥಿತಿಯಲ್ಲಿಲ್ಲ. ಹೇಮಶ್ರೀ ಸಾವಿನ ಶಾಕ್ ನಿಂದ ಅವರು ಇನ್ನೂ ಹೊರಬಂದಿಲ್ಲ. ಈ ನೋವಿನಿಂದ ಅವರು ಹೊರಬಂದ ಬಳಿಕ ಮಾಧ್ಯಮಗಳ ಮುಂದೆ ಬರುತ್ತಾರೆ ಎಂದು ತಿಳಿಸಿದರು. ಮುಂದೆ ಓದಿ ನಮ್ಮ ಕುಟುಂಬದ ನೆಮ್ಮದಿ ಹಾಳುಮಾಡಿದ್ದೇ ಅವನು

  <ul id="pagination-digg"><li class="next"><a href="/tv/dont-spread-rumours-about-our-family-roopashree-068855.html">Next »</a></li></ul>
  English summary
  Small screen popular actress Hemashree elder sister Dr.Roopashree Press Meet held at Bangalore press club on 13th October. Dr Roopashree requests media persons please wait still investigation is complete. People have spreading rumours about our family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X