ಕನ್ನಡ ಕಿರುತೆರೆಯ ಜನ ಮೆಚ್ಚಿದ ಜೋಡಿಗಳು ಯಾರು ಯಾರು ಗೊತ್ತಾ?

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜನ ಮೆಚ್ಚಿದ ಜೋಡಿಗಳಿದ್ದಾರೆ. ಚಂದು-ಗೊಂಬೆ, ಸನ್ನಿಧಿ-ಸಿದ್ಧಾರ್ಥ್, ರಾಮು-ಜಾನಕಿ, ರಮಣ್-ಆರಾಧನಾ ಹೀಗೆ ಹಲವು ಜೋಡಿಗಳಿದ್ದಾರೆ. ಆದರೆ, ಇವರೆಲ್ಲಾ ಹಲೆಯ ಜೋಡಿಗಳಾಗಿದ್ದು, ಈಗ ಹೊಸ ಜೋಡಿಗಳು ಕೂಡ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರಲ್ಲಿ ಕೆಲವರು ಈಗಲೂ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಸದ್ಯ ವೀಕ್ಷಕರು ಈ ಜೋಡಿಗ ಸೀನ್ ಪದೇ ಪದೇ ಬರಲಿ ಎಂದು ಬಯಸುತ್ತಿರುತ್ತಾರೆ.

'ಅಗ್ನಿಸಾಕ್ಷಿ', 'ಲಕ್ಷ್ಮೀಬಾರಮ್ಮ', 'ರಾಧಾ ಕಲ್ಯಾಣ', 'ರಾಧಾ ಕಲ್ಯಾಣ', 'ಅಶ್ವಿನಿ ನಕ್ಷತ್ರ', 'ಜೊತೆ ಜೊತೆಯಲಿ', 'ಜೋಡಿಹಕ್ಕಿ' ಹೀಗೆ ಹಲವು ಧಾರಾವಾಹಿಗಳು ಹಿಟ್ ಆಗಿದ್ದವು.

Here is Kannada Tv best onscreen couples list

ಈಗ ಈ ಸಾಲಿಗೆ ಹೊಸ ಧಾರಾವಾಹಿಗಳು ಕೂಡ ಸೇರಿಕೊಂಡಿವೆ. 'ಕನ್ನಡತಿ', 'ಅಮೃತಧಾರೆ', 'ಸೀತಾರಾಮ', 'ರಾಮಾಚಾರಿ' ಹೀಗೆ ಹಲವು ಧಾರಾವಾಹಿಗಳು ಇದ್ದಾವೆ. ಜನ ಮೆಚ್ಚಿದ ಕನ್ನಡ ಕಿರುತೆರೆಯ ಜೋಡಿಗಳು

ಹರ್ಷ-ಭುವಿ ಜೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡತಿ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಆಗ ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಹರ್ಷ ಮತ್ತು ಭುವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ಅಭಿಮಾನಿಗಳು ಬಹಳ ಹಚ್ಚಿಕೊಂಡಿದ್ದರು. ನಟಿ ರಂಜನಿ ರಾಘವನ್ ಮತ್ತು ನಟ ಕಿರಣ್ ರಾಜ್ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದರು. ಹರ್ಷ-ಭುವಿ ಹೆಸರಿನಲ್ಲಿ ಫ್ಯಾನ್ ಪೇಜ್ ಅನ್ನು ಕೂಡ ತೆರೆಯಲಾಗಿತ್ತು. ಕನ್ನಡತಿ ಧಾರಾವಾಹಿ ಮುಗಿದು ಎರಡು ವರ್ಷಕ್ಕೂ ಅಧಿಕ ಸಮಯವಾಗಿದ್ದರೂ ಕೂಡ ಇಂದಿಗೂ ಜನರು ಹರ್ಷ-ಭುವಿ ಜೋಡಿ ಮತ್ತೆ ತೆರಮೇಲೆ ಒಟ್ಟಿಗೆ ಬರಬೇಕು ಎಂದು ಬಯಸುತ್ತಿದ್ದಾರೆ. ಆದರೆ, ಹರ್ಷ ಕರ್ಣನಾಗಿ ಬರಲು ಸಿದ್ಧನಾಗಿದ್ದು, ರಂಜನಿ ಅವರು ನಟನೆಗೆ ಬ್ರೇಕ್ ಕೊಟ್ಟು ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

Here is Kannada Tv best onscreen couples list

ಭೂಮಿಕಾ-ಗೌತಮ್ ಜೋಡಿ

ಜೀ ಕನ್ನಡ ವಾಹಿನಿಯಲ್ಲಿ 'ಅಮೃತಧಾರೆ' ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಲೀಡ್ ರೋಲ್‌ಗಳಲ್ಲಿ ನಟಿ ಛಾಯಾ ಸಿಂಗ್ ಮತ್ತು ನಟ ರಾಜೇಶ್ ನಟರಂಗ ನಟಿಸುತ್ತಿದ್ದಾರೆ. ಇವರ ಜೋಡಿ ಸೂಪರ್ ಆಗಿದ್ದು, ಬಹಳ ಪ್ರಬುದ್ದತೆಯಿಂದ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಂದು ಸಂದರ್ಭವನ್ನು ಬಹ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಪ್ರೀತಿ-ಸಂಬಂಧ ಎಂದು ಬಂದಾಗ ಎಲ್ಲರಿಗೂ ಇಷ್ಟವಾಗುವಂತೆ ನಡೆದುಕೊಳ್ಳುತ್ತಾರೆ. ಈ ಜೋಡಿಗಳ ಸೀನ್ ಬರಲಿ ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ಎಂತಹದ್ದೇ ಸಂದರ್ಭ ಬರಲಿ ಅದನ್ನು ಹೇಗೆ ನಿಭಾಯಿಸಬೇಕು. ಸಂಬಂಧಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹೇಗೆಲ್ಲಾ ನಡೆದುಕೊಳ್ಳಬೇಕು. ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದನ್ನು ಎಲ್ಲರಿಗೂ ಮನದಟ್ಟಾಗುವಂತೆ ತೋರಿಸಿಕೊಟ್ಟಿದ್ದಾರೆ. ಈಗ ಈ ಜೋಡಿಗಳು ಹಿಟ್ ಆಗಿದ್ದಾರೆ.

ಚಾರಿ-ಚಾರು ಜೋಡಿ

ಇನ್ನು ಕಲರ್ಸ್ ಕನ್ನಡದಲ್ಲಿ 'ರಾಮಾಚಾರಿ' ಧಾರಾವಾಹಿ ಮೂಡಿ ಬರುತ್ತಿದ್ದು, ಇದಂತೂ ಬಹಳ ಫೇಮಸ್ ಆಗಿದೆ. ಚಾರು-ಚಾರಿ ಜೋಡಿ ಸೂಪರೋ ಸೂಪರ್. ಇವರಿಬ್ಬರು ಶುರುವಿನಲ್ಲಿ ಶತ್ರುಗಳಂತಿದ್ದರು. ಚಾರುಲತಾಳಿಗೆ ಕೋಪ, ಅಹಂಕಾರ ತುಂಬಿ ತುಳುಕುತ್ತಿತ್ತು. ಬಳಿಕ ರಾಮಾಚಾರಿ ಮತ್ತು ಚಾರುಲತಾ ಮದುವೆಯಾಗಿ ಪ್ರೀತಿ ಮಾಡುತ್ತಾ ಈಗ ಒಂದಾಗಿದ್ದಾರೆ. ಇವರಿಬ್ಬರ ಜೋಡಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಷ್ಟಕ್ಕೂ ಚಾರು ಪಾತ್ರದಲ್ಲಿ ನಟಿ ಮೌನ ಗುಡ್ಡೆಮನೆ ನಟಿಸಿದ್ದರೆ, ನಾಯಕ ರಾಮಾಚಾರಿ ಪಾತ್ರದಲ್ಲಿ ನಟ ರಿತ್ವಿಕ್ ಕೃಪಾಕರ್ ಅಭಿನಯಿಸುತ್ತಿದ್ದಾರೆ. ಇವರ ಜೋಡಿಯನ್ನು ಕೂಡ ಜನ ಮೆಚ್ಚಿಕೊಂಡಿದ್ದಾರೆ. ಇವರನ್ನು ಹೊರತು ಪಡಿಸಿದರೆ, 'ಗಟ್ಟಿಮೇಳ' ಧಾರಾವಾಹಿಯ ವೇದಾಂತ್-ಅಮೂಲ್ಯ ಜೋಡಿ ಹಾಗೂ 'ಸೀತಾರಾಮ' ಧಾರಾವಾಹಿಯ ಸೀತಾ ಮತ್ತು ಶ್ರೀರಾಮ್ ಎಂದರೆ ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಹೊಸ ಧಾರಾವಾಹಿಯ ಕೆಲ ಜೋಡಿಗಳು ವೀಕ್ಷಕರ ಮನಗೆದ್ದಿದ್ದಾರೆ.

More from Filmibeat

English summary
Kannada small screen serials favourite couples;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X