ಅಗ್ನಿಸಾಕ್ಷಿ ಚಂದ್ರಿಕಾಳ ಅಸಲಿ ಆಟಕ್ಕೆ ಮನೆಯವರ ಪರಡಾಟ

By Pavithra

Recommended Video

ಕೊನೆಯಾಗಲಿದ್ಯಾ ಅಗ್ನಿಸಾಕ್ಷಿ ಧಾರವಾಹಿ | Filmibeat Kannada

ಈ ಧಾರಾವಾಹಿಯನ್ನ ನಿಲ್ಲಿಸಿ. ಸಾಕಾಗಿದೆ ನೋಡಿ ನೋಡಿ. ಹೊಸ ಹೊಸ ತಿರುವು ಅಂತ ವರ್ಷಗಟ್ಟಲೆ ಧಾರಾವಾಹಿಯನ್ನ ಎಳೆಯುತ್ತಲೇ ಇರುತ್ತೀರ. ಅಂತ ಫೇಸ್ ಬುಕ್ ನಲ್ಲಿ ಕಮೆಂಟ್ ಬರುತ್ತಲೇ ಇರುತ್ತದೆ. ಆದರೆ ಜನರು ಸೀರಿಯಲ್ ನೋಡುವುದನ್ನ ಬಿಟ್ಟಿಲ್ಲ. ಧಾರಾವಾಹಿಗಳ ಟಿ ಆರ್ ಪಿ ಕೂಡ ಕೊಂಚವು ಕಡಿಮೆ ಆಗಿಲ್ಲ.

ಸದ್ಯ ನಾವು ನಿಮಗೆ ಹೇಳಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಅಗ್ನಿಸಾಕ್ಷಿಯ ಬಗ್ಗೆ. ಅಗ್ನಿಸಾಕ್ಷಿ ಧಾರಾವಾಹಿಯ ಮೇಲೆ ವೀಕ್ಷಕರಿಗೆ ಹೆಚ್ಚು ಪ್ರೀತಿ. ಒಂದು ದಿನ ಮಿಸ್ ಆದ್ರೆ, ಅಂದೇ ರಾತ್ರಿ ಮರುಪ್ರಸಾರ ಆಗುವ ಸಂಚಿಕೆಯನ್ನ ನೋಡುತ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ ಮೋಡಿ ಮಾಡಿದೆ.

ಕಿಶೋರ್ ಸತ್ತಾಯ್ತು, ಚಂದ್ರಿಕಾ ಬಂಡವಾಳ ಹೊರಗೆ ಬರುತ್ತೆ ಇನ್ನೇನಿದ್ದರು ಎಲ್ಲವೂ ಹ್ಯಾಪಿ ಎಂಡಿಂಗ್ ಅಂತ ಗೆಸ್ ಮಾಡಿದ್ದ ವೀಕ್ಷಕರಿಗೆ ಧಾರಾವಾಹಿ ತಂಡ ಸರ್ಪ್ರೈಸ್ ನೀಡಿದೆ. ಮತ್ತೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹೊಸ ಕಥೆ ಆರಂಭವಾಗಿದೆ. ಏನದು ಅಂತೀರಾ ಇಲ್ಲಿದೆ ಮಾಹಿತಿ ಮುಂದೆ ಓದಿ

ಅಸಲಿ ಆಟ ಶುರು ಮಾಡಿದ ಚಂದ್ರಿಕಾ

ಅಸಲಿ ಆಟ ಶುರು ಮಾಡಿದ ಚಂದ್ರಿಕಾ

ಅಗ್ನಿಸಾಕ್ಷಿ ಧಾರಾವಾಹಿ ಇನ್ನೇನು ಮುಗಿದು ಹೋಗುತ್ತೆ ಎನ್ನುವಾಗಲೇ ಹೊಸ ಕಥೆ ಶುರುವಾಗಿದೆ. ತಮ್ಮ ಪ್ರಿಯಕರನನ್ನ ಕಳೆದುಕೊಂಡು ಸುಮ್ಮನ್ನಿದ್ದ ಚಂದ್ರಿಕಾ ಈಗ ಅವಳ ವರಸೆ ಆರಂಭಿಸಿದ್ದಾಳೆ .

ಅಂಜಲಿ ಮದುವೆ ಪೀಠಿಕೆ ಹಾಕಿದ ಚಂದ್ರಿಕಾ

ಅಂಜಲಿ ಮದುವೆ ಪೀಠಿಕೆ ಹಾಕಿದ ಚಂದ್ರಿಕಾ

ಚಂದ್ರಿಕಾ ಹಾಗೂ ಕೌಶಿಕ್ ಇಬ್ಬರು ಸೇರಿ ಹೊಸ ನಾಟಕ ಶುರು ಮಾಡಿದ್ದಾರೆ. ವಾಸುದೇವ ಕುಟುಂಬಕ್ಕೆ ಕೌಶಿಕ್ ನನ್ನು ಮನೆ ಅಳಿಯ ಮಾಡಲು ಚಂದ್ರಿಕಾ ಸಿದ್ದತೆ ಮಾಡಿಕೊಂಡು ಮನೆಯಲ್ಲಿ ಇದೇ ವಿಚಾರ ಪ್ರಸ್ತಾಪ ಆಗುವಂತೆ ಪ್ಲಾನ್ ಮಾಡಿದ್ದಾಳೆ.

ಮತ್ತೆ ಶುರುವಾಯ್ತು ರಾಧಿಕಾ ಹುಡುಕಾಟ

ಮತ್ತೆ ಶುರುವಾಯ್ತು ರಾಧಿಕಾ ಹುಡುಕಾಟ

ಮನೆಯಲ್ಲಿ ಅಂಜಲಿ ಮದುವೆ ಬಗ್ಗೆ ಚಂದ್ರಿಕಾ ಪ್ರಸ್ತಾಪ ಮಾಡಿದ್ರೆ ಇತ್ತ ಸಿದ್ಧಾರ್ಥ್ ಮತ್ತು ಅಖಿಲ್ ತಮ್ಮ ಆಸ್ತಿಯಲ್ಲಿ ಸ್ವಲ್ಪ ಪಾಲನ್ನು ಆಶ್ರಮಕ್ಕೆ ನೀಡಲು ಮನಸ್ಸು ಮಾಡಿದ್ದಾರೆ. ಆದರೆ ಆಸ್ತಿ ದಾನ ಮಾಡಲು ರಾಧಿಕಾ ಒಪ್ಪಿಗೆ ಮತ್ತು ಸಹಿ ಬೇಕಾಗಿದೆ.

ಎಲ್ಲಾ ಪ್ರಶ್ನೆಗಳಿಗೂ ಮನೆಯಲ್ಲೇ ಉತ್ತರ

ಎಲ್ಲಾ ಪ್ರಶ್ನೆಗಳಿಗೂ ಮನೆಯಲ್ಲೇ ಉತ್ತರ

ಕೌಶಿಕ್ ಎಲ್ಲಿದ್ದಾನೆ. ರಾಧಿಕಾ ಏನು ಮಾಡುತ್ತಿದ್ದಾಳೆ? ರಾಧಿಕಾಳನ್ನ ಪತ್ತೆ ಹಚ್ಚುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಸಿದ್ಧಾರ್ಥ್ ಮನೆಯಲ್ಲೇ ಉತ್ತರವಿದೆ. ಮನೆಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದಿಲ್ಲ ಧಾರಾವಾಹಿ ಮುಗಿಯುವುದಿಲ್ಲ.

More from Filmibeat

English summary
New story has start in Colors Kannada Channel's popular serial 'Agnisakshi'. Here is the complete report on April 18th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X