ಅಗ್ನಿಸಾಕ್ಷಿ ಸಿದ್ದಾರ್ಥ್ ಹೆಗಲಿಗೆ ಹೊಸ ಜವಾಬ್ದಾರಿ
ಉತ್ತಮ ಕಥೆ, ಚಿತ್ರ ಕಥೆ ಹಾಗೂ ಅಭಿನಯದ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಅಗ್ನಿಸಾಕ್ಷಿ ಧಾರಾವಾಹಿ ಪ್ರತಿನಿತ್ಯ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ರಾಧಿಕಾ ಯಾರು? ಆಯುಶಿ ಯಾರು? ಸನ್ನಿಧಿ ಕುಟುಂಬಕ್ಕೆ ತೊಂದರೆ ನೀಡುತ್ತಿರುವವರು ಯಾರು? ತೇಜಸ್ ಯಾರು? ಹೀಗೆ ಮತ್ತಷ್ಟು ಗೊಂದಲಗಳ ಗೂಡಾಗಿರುವ ಧಾರಾವಾಹಿಯಲ್ಲಿ ಸಾಕಷ್ಟು ದಿನಗಳ ನಂತರ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಉತ್ತರ ಸಿಗುವುದರ ಜೊತೆಯಲ್ಲಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. ಹೌದು ಸನ್ನಿಧಿ ಬಳಿ ಇರುವ ಆಯುಶಿ ರೀತಿಯಲ್ಲಿಯೇ ಇನ್ನೊಬ್ಬಳು ಇದ್ದಾಳೆ ಎನ್ನುವ ವಿಚಾರ ಸಿದ್ಧಾರ್ಥ್ ಗೆ ಗೊತ್ತಾಗಿದೆ.

ಆಯುಶಿ ಮತ್ತು ಖುಷಿ ಇಬ್ಬರು ಅವಳಿ-ಜವಳಿ ಇದ್ದಾರೆ. ಎನ್ನುವ ಸತ್ಯ ಸಿದ್ದಾರ್ಥ್ ಗೆ ಗೊತ್ತಾಗಿದೆ. ಈ ವಿಚಾರ ಹೊರ ಬಂದಿರುವುದು ಧಾರಾವಾಹಿಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.

ಇನ್ನು ವಿಚಿತ್ರ ಎಂದರೆ ರಾಧಿಕಾ, ಆಯುಶ್, ತೇಜಯ್ ಇರೆಲ್ಲರೂ ಯಾರು ಎಂದು ಪತ್ತೆ ಹಚ್ಚಬೇಕಿರುವ ಸಿದ್ದಾರ್ಥ್ ಗೆ ಇಂದಿನಿಂದ ಮತ್ತೊಂದು ಸಂಕಷ್ಟ ಎದುರಾಗಿದ್ದು ಆಯುಶಿ ಯಾರು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿದೆ.


Click it and Unblock the Notifications











