ಕಿರುತೆರೆಯ ಹಿರಿಯ ನಟ ನಿರ್ದೇಶಕ ನೀಡಿದ ಕ್ಲಾಸಿಕ್ ಧಾರಾವಾಹಿಗಳ್ಯಾವುವು ಗೊತ್ತೇ? ನಿಮ್ಮ ಫೇವರಿಟ್ ಯಾವುದು?

By ಅನಿತಾ ಬನಾರಿ

ನಟ, ನಿರ್ದೇಶಕ ರಂಗಕರ್ಮಿ ಎಸ್ ಎನ್ ಸೇತುರಾಮ್ ಅವರು ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹಳೆ ಪರಿಚಯ. ಟಿ ಎನ್ ಸೀತಾರಾಮ ಅವರ 'ಮಾಯಾಮೃಗ' ಧಾರಾವಾಹಿಯಲ್ಲಿ ಒಬ್ಬ ಬೇಜವಾಬ್ದಾರಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಿರಿಯ ಕಲಾವಿದ ಸೇತುರಾಮ್.

ಅದಾದ ನಂತರ 'ಅನಾವರಣ', 'ದಿಬ್ಬಣ', 'ಮಂಥನ' ಹೀಗೆ ವಿಭಿನ್ನ ಧಾರಾವಾಹಿಗಳನ್ನು ನಿರ್ದೇಶಿಸಿರುವ ಸೇತುರಾಮ ಅವರು, ಸಾಮಾಜಿಕ ಸಮಸ್ಯೆಗಳನ್ನು ಮತ್ತು ದೈನಂದಿನ ಆಗುಹೋಗುಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿ ಕಣ್ಣಿಗೆ ಕಟ್ಟುವ ಮನಸ್ಸಿಗೆ ಮುಟ್ಟುವಂತಹ ದೃಶ್ಯಗಳ ಹಾಗೂ ತೀಕ್ಷ್ಣ ಡೈಲಾಗಳ ಮೂಲಕ ಪ್ರೇಕ್ಷಕರ ಮುಂದೆ ತಂದಿಡುತ್ತಾರೆ.

Here is the list of senior director and actor SN Sethuram classic serials

ಇತ್ತೀಚೆಗಷ್ಟೇ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇವರ 'ಯುಗಾಂತರ' ಧಾರಾವಾಹಿ ಕೂಡ ಸಾಮಾಜಿಕ ರಾಜಕೀಯ ಹಾಗೂ ಮಾನವ ಸಂಬಂಧಗಳ ತೊಳಲಾಟದ ಬಗ್ಗೆ ಬಹಳ ವಿಭಿನ್ನ ಕಥಹಂದರ ಹೊಂದಿದ್ದ ಧಾರಾವಾಹಿಯಾಗಿತ್ತು.

ಕನ್ನಡ ಕಿರುತೆರೆ ಕಂಡ ಅದ್ಭುತ ಕಲಾವಿದರಾದ ಶೃತಿ ನಾಯ್ಡು, ನಂದಿನಿ ಗೌಡ, ಅಚ್ಯುತ್ ಕುಮಾರ್, ದಿವ್ಯ ಕಾರಂತ್, ವೀಣಾ ಸುಂದರ್, ದೀಪಾ ಭಾಸ್ಕರ್, ಸುಧಾ ಬೆಳವಾಡಿ, ನಂದಿನಿ ಪಟ್ವರ್ಧನ್, ಚಿತ್ರ ಶ್ರೀ, ಹಿರಿಯ ಕಲಾವಿದ ಲಕ್ಷ್ಮಿ ಚಂದ್ರಶೇಖರ್, ಮುಂತಾದವರು ಸೇತುರಾಮ್ ಧಾರಾವಾಹಿಗಳಲ್ಲಿ ಬಹಳ ಪ್ರಮುಖ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೇತುರಾಮ್ ಅವರ ಹಲವಾರು ನಾಟಕಗಳಲ್ಲಿಯೂ ಈ ಕಲಾವಿದರನ್ನು ವಿಭಿನ್ನ ಪಾತ್ರಗಳಲ್ಲಿ ನೋಡಬಹುದು.

ಧಾರಾವಾಹಿಗಳಷ್ಟೇ ಅಲ್ಲದೆ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿರುವ ನಟ ನಿರ್ದೇಶಕ ಸೇತುರಾಮ ಅವರು ಉಚ್ಚಿಷ್ಟ, ಗತಿ, ಅತೀತ ಹೀಗೆ ಹತ್ತಾರು ನಾಟಕಗಳಿಗೆ ಹೆಸರುವಾಸಿ. ತಮ್ಮದೇ ಯೂಟ್ಯೂಬ್ ಚಾನಲ್ ಒಂದನ್ನು ಹೊಂದಿರುವ ಇವರು ಉತ್ತಮ ಮಾತುಗಾರರೂ ಹೌದು. ತಾವೇ ಬರೆದ ಹಲವಾರು ಸಣ್ಣ ಕಥೆಗಳನ್ನು ಓದಿ ಹೇಳುವ ವಿಭಿನ್ನ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಮೂಲತಃ ಭಾರತ ಸರ್ಕಾರದ ತೆರಿಗೆ ಇಲಾಖೆಯಲ್ಲಿ ಡಿಪ್ಯೂಟಿ ಕಮಿಷನರ್ ಆಗಿದ್ದ ಸೇತುರಾಮ್ ಅವರು ನಿವೃತ್ತಿಯ ನಂತರ ಕಲಾಕ್ಷೇತ್ರದಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡಿದ್ದಾರೆ. ನಟನೆ, ನಿರ್ದೇಶನವಷ್ಟೇ ಅಲ್ಲದೇ ಬರಹಗಾರರು ಆಗಿರುವ ಸೇತುರಾಮ್ ಅವರು ಹಲವು ಸಣ್ಣ ಕಥಾ ಸಂಕಲನಗಳಾದ ದಹನ, ನಾವಲ್ಲ, ನಿಮಿತ್ತ ಗತಿ, ಇತ್ಯಾದಿಗಳ ಕರ್ತೃ. ಸ್ಟೆಬಿಲಿಟಿ ಎಂಬ ಸಿನಿಮಾದಲ್ಲಿಯೂ ಒಂದು ಪಾತ್ರ ನಿಭಾಯಿಸಿದ್ದಾರೆ ನಟ ಸೇತುರಾಮ್.

"ಬದುಕಲ್ಲಿ ಕಹಿ ಇದೆ ಕಹಿಯಲ್ಲೇ ಕಥೆ ಇದೆ" ಎನ್ನುವ ಎಸ್ಎನ್ ಸೇತುರಾಮ್ ಅವರು ತಮ್ಮ ಕಥೆಗಳಲ್ಲಿ ನಾಟಕ ಹಾಗೂ ಧಾರಾವಾಹಿಗಳಲ್ಲೂ ಇದೇ ವಿಚಾರವನ್ನು ಬಹಳ ನವೀನವಾಗಿ ತೋರಿಸುವ ಮೂಲಕ ಬೇರೆಲ್ಲಾ ಧಾರವಾಹಿಗಳಿಗಿಂತಲೂ ವಿಭಿನ್ನವಾಗಿ ಪ್ರಸ್ತುತಪಡಿಸುತ್ತಾರೆ. ಈ ಮೂಲಕ ಎಸ್ ಎನ್ ಸೇತುರಾಮ್ ಅವರ ಧಾರಾವಾಹಿಗಳು ಕನ್ನಡ ಕಿರುತೆರೆ ಕಂಡ ಕ್ಲಾಸಿಕ್ ಧಾರಾವಾಹಿಗಳಲ್ಲಿ ಒಂದು ಎಂದರೆ ಖಂಡಿತ ಉತ್ಪೇಕ್ಷೆ ಅಲ್ಲ.

More from Filmibeat

English summary
Here is the list of senior director and actor SN Sethuram classic serials;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X