For Quick Alerts
  ALLOW NOTIFICATIONS  
  For Daily Alerts

  ಸುಧಾಮೂರ್ತಿ 15 ಸಾವಿರ ಶೌಚಾಲಯ ಕಟ್ಟಿಸಲು ಕಾರಣವಾಗಿತ್ತು ಈ ಘಟನೆ

  |
  Weekend With Ramesh Season 4: ಹಳ್ಳಿ-ಹಳ್ಳಿಗಳಿಗೆ ಶೌಚಾಲಯ ಕಟ್ಟಿಸಿದ ಸುಧಾ ಮೂರ್ತಿ | FILMIBEAT KANNADA

  ಸ್ವಚ್ಛ ಭಾರತ ಯೋಜನೆಯ ರೀತಿಯಲ್ಲಿ ಸರ್ಕಾರ ಬೇರೆ ಬೇರೆ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಜನರಿಗೆ ಶೌಚಾಲಯ ಉಪಯೋಗಿಸಿ ಎಂದು ತಿಳಿ ಹೇಳುತ್ತಿದೆ. ಆದರೂ, ಸ್ವಾತಂತ್ರ್ಯ ಬಂದು ಇಷ್ಟ ವರ್ಷಗಳಾದರೂ ಇನ್ನೂ ಭಾರತದ ಕೆಲವು ಹಳ್ಳಿಗಳಲ್ಲಿ ಶೌಚಾಲಯ ಇಲ್ಲ.

  2019 ರಲ್ಲಿಯೇ ಹೀಗಿರುವಾಗ 1968ರಲ್ಲಿ ಯಾವ ರೀತಿಯ ಪರಿಸ್ಥಿತಿ ಇತ್ತು ಎಂದು ಊಹಿಸಿ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಸುಧಾಮೂರ್ತಿ ಮುಂದೆ ಶೌಚಾಲಯವನ್ನು ಕಟ್ಟಿಸುವ ನಿರ್ಧಾರ ಮಾಡಿದರು. ಅದೇ ರೀತಿ ತಮ್ಮ ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ 15 ಸಾವಿರಕ್ಕೂ ಹೆಚ್ಚು ಶೌಚಾಲಯ ಕಟ್ಟಿಸಿದ್ದಾರೆ.

  ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ ಚಪ್ಪಲಿ ಎಸೆದರೂ ದೇವದಾಸಿಯರ ಬದುಕು ಬದಲಿಸಿದ ಸುಧಾಮೂರ್ತಿ

  ಅಂದಹಾಗೆ, ಸುಧಾಮೂರ್ತಿ ಶೌಚಾಲಯ ಕಟ್ಟಿಸಬೇಕು ಎಂದು ಒಂದು ದಿಟ್ಟ ನಿರ್ಧಾರ ಮಾಡಲು ಈ ಫಟನೆ ಕಾರಣವಾಗಿತ್ತು. ಮುಂದೆ ಓದಿ...

  ಶೌಚಾಲಯ ಇಲ್ಲದ ಕಾಲೇಜು

  ಶೌಚಾಲಯ ಇಲ್ಲದ ಕಾಲೇಜು

  ಪಿಯುಸಿ ಬಳಿಕ ಸುಧಾಮೂರ್ತಿ ಇಂಜಿನಿಯರಿಂಗ್ ಸೇರುವ ನಿರ್ಧಾರ ಮಾಡಿದ್ದರು. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆಶ್ಚರ್ಯ ಎಂದರೆ, ಆ ಕಾಲೇಜಿನಲ್ಲಿ ಇದ್ದ ಏಕೈಕ ಮಹಿಳಾ ವಿದ್ಯಾರ್ಥಿನಿ ಇವರಾಗಿದ್ದರು. ಹೀಗಾಗಿ, ಒಬ್ಬಳೆ ಮಹಿಳಾ ವಿದ್ಯಾರ್ಥಿನಿಗಾಗಿ ಒಂದು ಶೌಚಾಲಯ ಕಟ್ಟಲು ಸಾಧ್ಯ ಇಲ್ಲ ಎಂದು ಕಾಲೇಜು ಸಂಸ್ಥೆ ಸುಮ್ಮನಾಗಿತ್ತು.

  ಪ್ರೇರಣೆ ನೀಡಿತ್ತು ಈ ಒಂದು ಘಟನೆ

  ಪ್ರೇರಣೆ ನೀಡಿತ್ತು ಈ ಒಂದು ಘಟನೆ

  ಸುಧಾಮೂರ್ತಿ ಇಂಜಿನಿಯರಿಂಗ್ ಮುಗಿಯುವವರೆಗೆ ಆ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣ ಆಗಲಿಲ್ಲ. ಹೀಗಾಗಿ ಒಬ್ಬ ಮಹಿಳೆಯಾಗಿ ಶೌಚಾಲಯ ಇಲ್ಲದೆ ಬದುಕುವುದು ಎಷ್ಟು ಕಷ್ಟ ಎನ್ನುವುದು ನನಗೆ ತಿಳಿಸಿದೆ ಎಂದ ಸುಧಾಮೂರ್ತಿ ತಮ್ಮ ಬಳಿ ಹಣ ಬಂದಾಗ ಹಳ್ಳಿ ಹಳ್ಳಿಗಳಲ್ಲಿ 15 ಸಾವಿರಕ್ಕೂ ಹೆಚ್ಚು ಶೌಚಾಲಯ ಕಟ್ಟಿಸಿದ್ದಾರೆ.

  ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

  120 ಹುಡುಗರ ಕಾಲೇಜಿನಲ್ಲಿ ಒಬ್ಬಳೆ ಹುಡುಗಿ

  120 ಹುಡುಗರ ಕಾಲೇಜಿನಲ್ಲಿ ಒಬ್ಬಳೆ ಹುಡುಗಿ

  51 ವರ್ಷದ ಹಿಂದೆ ಹುಬ್ಬಳ್ಳಿಯಂತಹ ಊರಿನಲ್ಲಿ ಯಾವ ಹುಡುಗಿ ಕೂಡ ಇಂಜಿನಿಯರಿಂಗ್ ಓದುವ ಆಸೆ ಇಟ್ಟುಕೊಂಡಿರಲಿಲ್ಲ. ಆದರೆ. ಸುಧಾಮೂರ್ತಿ ಓದಿ ಸಾಧನೆ ಮಾಡುವ ಹಠ ಹೊಂದಿದ್ದರು. 120 ಹುಡುಗರ ಕಾಲೇಜಿನಲ್ಲಿ ಇದ್ದದ್ದು ಆಕೆ ಒಬ್ಬಳೆ ಹುಡುಗಿ. ಹೀಗಿದ್ದರೂ, ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಓದಿ ಮುಂದೆ ಬಂದರು.

  ಓದಿದರೆ ಮದುವೆಯಾಗಲ್ಲ ಎಂದಿದ್ದರು

  ಓದಿದರೆ ಮದುವೆಯಾಗಲ್ಲ ಎಂದಿದ್ದರು

  ಸುಧಾಮೂರ್ತಿ ಹುಟ್ಟಿದ್ದು, ಸಣ್ಣ ಬ್ರಾಹ್ಮಣ ಕುಟುಂಬದಲ್ಲಿ. ಅವರದ್ದು, ಸಂಪ್ರದಾಯಸ್ತ ಕುಟುಂಬ ಆಗಿದ್ದ ಕಾರಣ ಹುಡುಗಿಯರನ್ನು ಕಾಲೇಜಿಗೆ ಕಳುಹಿಸುತ್ತಿರಲಿಲ್ಲ. ಹೀಗಿರುವಾಗ, ಇಂಜಿನಿಯರಿಂಗ್ ಓದುವ ನಿರ್ಧಾರವನ್ನು ಮನೆಯವರ ಮುಂದೆ ಇಡುತ್ತಾರೆ. ಸಂಬಂಧಿಗಳು ನೀನು ಓದಿದರೆ ಮದುವೆಯಾಗಲು ಯಾವ ಹುಡುಗನು ಸಿಗುವುದಿಲ್ಲ ಎಂದರಂತೆ. ಬಳಿಕ ತಂದೆ ಸಹಕಾರ ನೀಡಿದ್ದಾರೆ.

  ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ

  ಇಂಜಿನಿಯರಿಂಗ್ ಮುಗಿಯುವವರೆಗೆ ಬಿಳಿ ಬಟ್ಟೆ ಉಟ್ಟಿದ್ದರು

  ಇಂಜಿನಿಯರಿಂಗ್ ಮುಗಿಯುವವರೆಗೆ ಬಿಳಿ ಬಟ್ಟೆ ಉಟ್ಟಿದ್ದರು

  ಸುಧಾಮೂರ್ತಿ ಕುಟುಂಬದಲ್ಲಿ ಟೀಚರ್ ಗಳು ಹೆಚ್ಚಿದ್ದರು. ಓದುತ್ತೇನೆ ಎಂದಾಗ ಎಂ ಎಸ್ ಸಿ ಮಾಡಿ ಟೀಚರ್ ಆಗು ಎಂಬ ಒತ್ತಡ ಬಂತು. ಆಗ ನಾನು ಇಂಜಿನಿಯರಿಂಗ್ ಮಾಡೆ ಮಾಡುತ್ತೇನೆ, ಇಂಜಿನಿಯರಿಂಗ್ ಮುಗಿಸಿ ನಿಮಗೆ ತೋರಿಸುವ ತನಕ ಬಿಳಿ ಬಟ್ಟೆ ಹಾಗೂ ಚಾಪೆಯಲ್ಲಿ ಮಲಗುತ್ತೇನೆ ಎಂದಿದ್ದರು. ಅದೇ ರೀತಿ ಇಡೀ ರಾಜ್ಯಕ್ಕೆ ಟಾಪರ್ ಆಗಿ ಸಾಧನೆ ಮಾಡಿ ತೋರಿಸಿದರು ಸುಧಾಮೂರ್ತಿ.

  English summary
  There is an interesting story behind Sudha Murthy constructing toilets all over Karnataka through Infosys Foundation. She has explained the painful story in Weekend With Ramesh reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X