ಮದುವೆ ಆಗಿ ಮನೆಯಲ್ಲಿರುವ ನಟಿ ಮಾನ್ಯಗೆ ಶ್ರೀಮುರಳಿ ಕಳುಹಿಸಿದ ಮೆಸೇಜ್ ಇದೇನಾ?

By Harshitha

Recommended Video

ಮದುವೆ ಆಗಿರೋ ನಟಿ ಮನ್ಯಾಗೆ ಇದೆಂಥ ಮೆಸೇಜ್ ಕಳಿಸಿದ್ದಾರೆ ಶ್ರೀಮುರಳಿ | Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರಳಿ... ಹೀಗೆ ಒಂದೇ ವರ್ಷದ ಅಂತರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಮಾನ್ಯ ನಿಮಗೆ ನೆನಪಿದ್ದಾರೆ ತಾನೇ.?

2005 ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್ ಅಭಿನಯದ 'ವರ್ಷ', ದರ್ಶನ್ ಅಭಿನಯದ 'ಶಾಸ್ತ್ರಿ', ಶ್ರೀಮುರಳಿ ಅಭಿನಯದ 'ಶಂಭು' ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದವರು ನಟಿ ಮಾನ್ಯ.

ಸ್ಯಾಂಡಲ್ ವುಡ್ ಜೊತೆಗೆ ಮಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲೂ ಬೇಡಿಕೆ ಕಂಡುಕೊಂಡಿದ್ದ ಮಾನ್ಯ ಮದುವೆ ಆಗಿ, ಮಗುವಿನ ತಾಯಿಯಾಗಿ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹೀಗಿರುವಾಗಲೇ ನಟಿ ಮಾನ್ಯಗೆ ನಟ ಶ್ರೀಮುರಳಿ ಒಂದು ಮೆಸೇಜ್ ಕಳುಹಿಸಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ.. ಧೈರ್ಯನಾ..) ನಲ್ಲಿ 'ಧೈರ್ಯ'ವನ್ನ ಶ್ರೀಮುರಳಿ ಆಯ್ಕೆ ಮಾಡಿಕೊಂಡರು.

ಶಿವಣ್ಣ ಕೊಟ್ಟ ಡೇರ್ ಏನು.?

ಶಿವಣ್ಣ ಕೊಟ್ಟ ಡೇರ್ ಏನು.?

''ನಿಮ್ಮ ಜೊತೆ ಅಕ್ಟ್ ಮಾಡಿರುವ ಹೀರೋಯಿನ್ ಗಳ ಪೈಕಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ನಂಬರ್ ಗೆ ''ಐ ಲವ್ ಯುವರ್ ಐಸ್'' ಅಂತ ಮೆಸೇಜ್ ಕಳುಹಿಸಬೇಕು. ಇಲ್ಲ ಅಂದ್ರೆ, ''ಶ್ರೀಮುರಳಿಗೆ ನಿಮ್ಮ ಕಣ್ಣು ಅಂದ್ರೆ ಇಷ್ಟ ಅಂತ ನಾನು ಮೆಸೇಜ್ ಕಳುಹಿಸ್ತೀನಿ'' ಅಂತ ಶಿವಣ್ಣ ಹೇಳಿದರು.

ಶ್ರೀಮುರಳಿಗೆ ಯಾರ ಕಣ್ಣು ಇಷ್ಟ?

ಶ್ರೀಮುರಳಿಗೆ ಯಾರ ಕಣ್ಣು ಇಷ್ಟ?

ನಟಿ ಮಾನ್ಯ ಅವರ ಕಣ್ಣು ಅಂದ್ರೆ ಶ್ರೀಮುರಳಿಗೆ ಇಷ್ಟವಂತೆ. ನಟಿ ಮಾನ್ಯ ಜೊತೆಗೆ 'ಶಂಭು' ಚಿತ್ರದಲ್ಲಿ ಶ್ರೀಮುರಳಿ ತೆರೆಹಂಚಿಕೊಂಡಿದ್ದರು.

ಶಿವಣ್ಣ ಹೇಳಿದಂತೆ ಮೆಸೇಜ್ ಕಳುಹಿಸಿದ ಶ್ರೀಮುರಳಿ

ಶಿವಣ್ಣ ಹೇಳಿದಂತೆ ಮೆಸೇಜ್ ಕಳುಹಿಸಿದ ಶ್ರೀಮುರಳಿ

ಶಿವಣ್ಣ ಕೊಟ್ಟ 'ಡೇರ್' ಅನುಗುಣವಾಗಿ ''ಐ ಲವ್ ಯುವರ್ ಐಸ್'' (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ಮಾನ್ಯ ಫೋನ್ ನಂಬರ್ ಗೆ ನಟ ಶ್ರೀಮುರಳಿ ಮೆಸೇಜ್ ಕಳುಹಿಸಿ, ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದರು.

ಕ್ಲೋಸ್ ಫ್ರೆಂಡ್ಸ್

ಕ್ಲೋಸ್ ಫ್ರೆಂಡ್ಸ್

ಶ್ರೀಮುರಳಿ ಹಾಗೂ ಮಾನ್ಯ ಒಳ್ಳೆಯ ಸ್ನೇಹಿತರು. ಶ್ರೀಮುರಳಿ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಕ್ಲೋಸ್ ಫ್ರೆಂಡ್ಸ್. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ನ್ಯೂಯಾರ್ಕ್ ಗೆ ಹೋಗಿದ್ದಾಗ, ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

More from Filmibeat

English summary
Read the article to know the text message sent by Kannada Actor Srimurali to Kannada Actress Manya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X