For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ರವರ 'ಈ' ಮಾತನ್ನ 'ದಾಸ' ದರ್ಶನ್ ಕೇಳ್ತಾರಾ.?

  By Harshitha
  |
  ಕಿಚ್ಚನ ಮಾತಿಗೆ D -Boss ಏನು ಹೇಳಬಹುದು | Oneindia Kannada

  ಒಂದೇ ದೇಹ ಎರಡು ಆತ್ಮಗಳಂತೆ ಇದ್ದ ದರ್ಶನ್ ಹಾಗೂ ಸುದೀಪ್ ಸ್ನೇಹದ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಒಟ್ನಲ್ಲಿ, ಇಂದು ಸುದೀಪ್ ಮತ್ತು ದರ್ಶನ್ ನಡುವೆ ಆತ್ಮೀಯತೆ ಇಲ್ಲ.

  'ನಾವಿಬ್ಬರು ಫ್ರೆಂಡ್ಸ್ ಅಲ್ಲ' ಅಂತ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಟ್ವಿಟ್ಟರ್ ನಲ್ಲಿ ಘೋಷಿಸಿದ್ದರು. ಅದಾದ್ಮೇಲೆ, ಸುದೀಪ್ ಬಗ್ಗೆ ದರ್ಶನ್ ಎಲ್ಲೂ ಮಾತನಾಡಿಲ್ಲ. ಆದ್ರೆ, ಸುದೀಪ್ ಮಾತ್ರ ದರ್ಶನ್ ರವರನ್ನ ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ.

  ಮೊನ್ನೆಮೊನ್ನೆಯಷ್ಟೇ ಪ್ರಸಾರ ಆದ ಸ್ಟಾರ್ ಸುವರ್ಣ ವಾಹಿನಿಯ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲೂ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಕಾಮೆಂಟ್ ಮಾಡಿದರು. ಅದರ ಸಂಪೂರ್ಣ ವಿವರ ಇಲ್ಲಿದೆ, ನೋಡಿರಿ...

  ಅತಿಥಿಯಾಗಿ ಬಂದಿದ್ದ ಸುದೀಪ್

  ಅತಿಥಿಯಾಗಿ ಬಂದಿದ್ದ ಸುದೀಪ್

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಸುದೀಪ್ ಗೆ ಒಂದು ಪ್ರಶ್ನೆ ಎದುರಾಯ್ತು. ಅದರ ಅನುಸಾರ ಹೀರೋಗಳಿಗೆ ನಿರ್ದೇಶಕರಾಗಿ ಸುದೀಪ್ ಸಲಹೆಗಳನ್ನು ನೀಡಿದರು.

  ಸುದೀಪ್ ಆಡಿದ ಮಾತಿಗೆ ಚಪ್ಪಾಳೆ ಹೊಡೆದ ಶಿವಣ್ಣ.! ಏನಂಥ ಮಾತು.?ಸುದೀಪ್ ಆಡಿದ ಮಾತಿಗೆ ಚಪ್ಪಾಳೆ ಹೊಡೆದ ಶಿವಣ್ಣ.! ಏನಂಥ ಮಾತು.?

  ಸುದೀಪ್ ಎದುರಾದ ಪ್ರಶ್ನೆ ಏನು.?

  ಸುದೀಪ್ ಎದುರಾದ ಪ್ರಶ್ನೆ ಏನು.?

  ''ಈ ಹೀರೋಗಳಿಗೆ ನೀವು ಡೈರೆಕ್ಟರ್ ಆಗಿ ಒಂದು ಸಲಹೆ ಕೊಡಿ'' ಎಂದು ''ರಕ್ಷಿತ್ ಶೆಟ್ಟಿ, ದಿಗಂತ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಯೋಗಿ, ಗಣೇಶ್, ಶಿವಣ್ಣ ಹಾಗೂ ದರ್ಶನ್'' ಹೆಸರುಗಳನ್ನ ಶಿವರಾಜ್ ಕುಮಾರ್ ಮುಂದಿಟ್ಟರು.

  ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?

  ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್

  ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್

  ''ದರ್ಶನ್ ಅವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ. ದರ್ಶನ್ ಸಿನಿಮಾಗಳಲ್ಲಿ ತುಂಬಾ ಹೀರೋಯಿಸಂ ಇರುತ್ತದೆ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ, ದರ್ಶನ್ ರವರ ಹಿಟ್ ಸಿನಿಮಾಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಕಾಮಿಡಿ ಇರುವ ಚಿತ್ರಗಳೇ ಹಿಟ್ ಆಗಿದೆ. ಹೀಗಾಗಿ ಅದರ ಬಗ್ಗೆ ಅವರು ಹೆಚ್ಚು ಗಮನ ಹರಿಸಬೇಕು'' ಎಂಬುದು ಸುದೀಪ್ ರವರ ಸಲಹೆ

  ಸುದೀಪ್ ಮಾತನ್ನ ದರ್ಶನ್ ಕೇಳ್ತಾರಾ.?

  ಸುದೀಪ್ ಮಾತನ್ನ ದರ್ಶನ್ ಕೇಳ್ತಾರಾ.?

  ಒಬ್ಬ ನಿರ್ದೇಶಕರಾಗಿ ದರ್ಶನ್ ಗೆ ಸುದೀಪ್ ಕೊಟ್ಟಿರುವ ಸಲಹೆ ಇದು. ಈ ಸಲಹೆಯನ್ನ ದರ್ಶನ್ ಸ್ವೀಕರಿಸುತ್ತಾರಾ.? ನಮಗಂತೂ ಗೊತ್ತಿಲ್ಲ. ಅವರೇ ಹೇಳಬೇಕು.

  English summary
  Here is what Kiccha Sudeep advised Challenging Star Darshan in 'No.1 Yari with Shivanna' program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X