ಶಿವಣ್ಣ, ಪುನೀತ್ ಗೆ ಸುದೀಪ್ ಕೊಟ್ಟಿರುವ ಸಲಹೆ ಏನ್ಗೊತ್ತಾ.?

By Harshitha

Recommended Video

ಪುನೀತ್ , ಶಿವಣ್ಣ ಹೇಗಿರಬೇಕು ಅಂತ ಸುದೀಪ್ ಹೇಳ್ತಾರೆ ಕೇಳಿ | Filmibeat Kannada

ಸ್ಯಾಂಡಲ್ ವುಡ್ ನ ದಿ ಬಿಸಿಯೆಸ್ಟ್ ಹೀರೋ ಯಾರು ಅಂತ ಕೇಳಿದರೆ, ಬಹುತೇಕರಿಂದ ಬರುವ ಉತ್ತರ 'ಶಿವರಾಜ್ ಕುಮಾರ್'!

ವಯಸ್ಸಿನಲ್ಲಿ ಹಾಫ್ ಸೆಂಚುರಿ ಬಾರಿಸಿದರೂ, ಶಿವಣ್ಣನ ಎನರ್ಜಿ ಕೊಂಚ ಕೂಡ ಕಮ್ಮಿ ಆಗಿಲ್ಲ. ವರ್ಷಪೂರ್ತಿ ಸಿನಿಮಾಗಳಲ್ಲಿ ಬಿಜಿಯಾಗಿರುವ ಶಿವಣ್ಣನ ಕಾಲ್ ಶೀಟ್ ಪಡೆಯಲು ಈಗಲೂ ನಿರ್ಮಾಪಕರು ಕ್ಯೂನಲ್ಲಿದ್ದಾರೆ.

ಇಂತಿಪ್ಪ ಶಿವಣ್ಣನಿಗೆ ಕಿಚ್ಚ ಸುದೀಪ್ ಒಂದು ಸಲಹೆ ಕೊಟ್ಟಿದ್ದಾರೆ. ಶಿವಣ್ಣನಿಗೆ ಮಾತ್ರ ಅಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಕ್ಷಿತ್ ಶೆಟ್ಟಿಗೂ ಒಂದು ಅಡ್ವೈಸ್ ಕೊಟ್ಟಿದ್ದಾರೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಅತಿಥಿಯಾಗಿ ಬಂದಿದ್ದ ಸುದೀಪ್

ಅತಿಥಿಯಾಗಿ ಬಂದಿದ್ದ ಸುದೀಪ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಸುದೀಪ್ ಗೆ ಒಂದು ಪ್ರಶ್ನೆ ಎದುರಾಯ್ತು. ಅದರ ಅನುಸಾರ ಹೀರೋಗಳಿಗೆ ನಿರ್ದೇಶಕರಾಗಿ ಸುದೀಪ್ ಸಲಹೆಗಳನ್ನು ನೀಡಿದರು.

ಸುದೀಪ್ ಎದುರಾದ ಪ್ರಶ್ನೆ ಏನು.?

ಸುದೀಪ್ ಎದುರಾದ ಪ್ರಶ್ನೆ ಏನು.?

''ಈ ಹೀರೋಗಳಿಗೆ ನೀವು ಡೈರೆಕ್ಟರ್ ಆಗಿ ಒಂದು ಸಲಹೆ ಕೊಡಿ'' ಎಂದು ''ರಕ್ಷಿತ್ ಶೆಟ್ಟಿ, ದಿಗಂತ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಯೋಗಿ, ಗಣೇಶ್, ಶಿವಣ್ಣ ಹಾಗೂ ದರ್ಶನ್'' ಹೆಸರುಗಳನ್ನ ಶಿವರಾಜ್ ಕುಮಾರ್ ಮುಂದಿಟ್ಟರು.

ರಕ್ಷಿತ್ ಶೆಟ್ಟಿಗೆ ಸುದೀಪ್ ಕೊಟ್ಟಿರುವ ಸಲಹೆ

ರಕ್ಷಿತ್ ಶೆಟ್ಟಿಗೆ ಸುದೀಪ್ ಕೊಟ್ಟಿರುವ ಸಲಹೆ

''ರಕ್ಷಿತ್ ಶೆಟ್ಟಿ ತುಂಬಾ ಫ್ರೆಂಡ್ಲಿ. ''ನೀವೇನು ಹೇಳಲು ಹೊರಟಿದ್ದೀರೋ, ಅದನ್ನ ಸ್ವಲ್ಪ ಕಮರ್ಶಿಯಲ್ ಆಗಿ ಹೇಳಿ. ಇದು ನಾನು ಕಲಿತಿರುವ ಪಾಠ'' ಅಂತ ರಕ್ಷಿತ್ ಗೆ ನಾನು ಸುಮಾರು ಬಾರಿ ಹೇಳಿದ್ದೇನೆ. ನನ್ನ ಮಾತನ್ನ ಅವರು ಎಲ್ಲೋ ಒಂದು ಚೂರು ಕೇಳಿಸಿಕೊಂಡರು. ಅದೇ ಖುಷಿ ನನಗೆ'' ಎಂದರು ನಟ ಸುದೀಪ್

ದಿಗಂತ್ ಗೆ ಸಿಕ್ಕಿರುವ ಸಲಹೆ ಇದು

ದಿಗಂತ್ ಗೆ ಸಿಕ್ಕಿರುವ ಸಲಹೆ ಇದು

''ಲೈಫ್ ನಲ್ಲಿ ಸ್ವಲ್ಪ ಕಮರ್ಶಿಯಲ್ ಆಗಬೇಕು. ತುಂಬಾ ಒಳ್ಳೆಯ ಹುಡುಗ ದಿಗಂತ್'' - ಸುದೀಪ್

ಪುನೀತ್ ಗೆ ಸುದೀಪ್ ಕೊಟ್ಟ ಸಲಹೆ ಏನು.?

ಪುನೀತ್ ಗೆ ಸುದೀಪ್ ಕೊಟ್ಟ ಸಲಹೆ ಏನು.?

''ಪುನೀತ್ ಅವರು ತಮ್ಮ ಕೆಪಾಸಿಟಿಗೆ ತಕ್ಕ ಸ್ಕ್ರಿಪ್ಟ್ ಗಳನ್ನು ಅಯ್ಕೆ ಮಾಡಿಕೊಳ್ಳಬೇಕು'' ಅಂತಾರೆ ಸುದೀಪ್.

ಉಪೇಂದ್ರಗೆ ಈ ಸಲಹೆ

ಉಪೇಂದ್ರಗೆ ಈ ಸಲಹೆ

''ಉಪೇಂದ್ರ ಅವರು ಹೇಳಿದ್ದನ್ನ, ಸಲಹೆ ಕೊಡುವುದನ್ನ ಫಾಲೋ ಮಾಡುವುದು ಕಲಿಯಬೇಕು'' ಅಂತ ಹೇಳ್ತಾರೆ ನಟ ಸುದೀಪ್.

ಯೋಗಿ ಸೀರಿಯಸ್ ಆಗಬೇಕು

ಯೋಗಿ ಸೀರಿಯಸ್ ಆಗಬೇಕು

''ಕೆರಿಯರ್ ನಲ್ಲಿ ಯೋಗಿ ಸ್ವಲ್ಪ ಸೀರಿಯಸ್ ಆಗಬೇಕು. ಇನ್ನೂ ಗಣೇಶ್ ನನಗೆ ಇಷ್ಟವಾದ ಕಲಾವಿದರಲ್ಲಿ ಒಬ್ಬರು. ಅವರು ಇನ್ನೂ ಸ್ವಲ್ಪ ಪ್ರಯೋಗ ಮಾಡಬೇಕು'' - ಸುದೀಪ್

ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್

ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್

''ದರ್ಶನ್ ಅವರ ಕಾಮಿಡಿ ಟೈಮಿಂಗ್ ತುಂಬಾ ಚೆನ್ನಾಗಿದೆ. ದರ್ಶನ್ ಸಿನಿಮಾಗಳಲ್ಲಿ ತುಂಬಾ ಹೀರೋಯಿಸಂ ಇರುತ್ತದೆ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ, ದರ್ಶನ್ ರವರ ಹಿಟ್ ಸಿನಿಮಾಗಳನ್ನ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಕಾಮಿಡಿ ಇರುವ ಚಿತ್ರಗಳೇ ಹಿಟ್ ಆಗಿದೆ. ಹೀಗಾಗಿ ಅದರ ಬಗ್ಗೆ ಅವರು ಹೆಚ್ಚು ಗಮನ ಹರಿಸಬೇಕು'' ಎಂಬುದು ಸುದೀಪ್ ರವರ ಸಲಹೆ

ಶಿವಣ್ಣ ನೀವ್ ಹೀಗ್ ಮಾಡಿ...

ಶಿವಣ್ಣ ನೀವ್ ಹೀಗ್ ಮಾಡಿ...

''ಟೈಟಲ್ ಕೇಳುತ್ತಿದ್ದ ಹಾಗೆ, ಡೇಟ್ ಕೊಡುವುದನ್ನ ನಿಲ್ಲಸಬೇಕು'' ಅಂತ ಶಿವಣ್ಣನಿಗೆ ನೇರವಾಗಿ ಹೇಳಿದರು ಸುದೀಪ್.

More from Filmibeat

English summary
Here is what Kiccha Sudeep advised Shiva Rajkumar, Puneeth Rajkumar, Darshan, Rakshit Shetty, Ganesh, Diganth and Yogesh in 'No.1 Yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X