ಬಿಗ್ ಬಾಸ್‌ ಮನೆಯಲ್ಲಿರುವ ಮೋಕ್ಷಿತಾ ಪೈ ಜೊತೆ ತ್ರಿವಿಕ್ರಮ್ ಮದುವೆ ಯಾವಾಗ ಆಯ್ತು ?

ಆಧುನಿಕ ದಿನಗಳಲ್ಲಿ ತಂತ್ರಜ್ಞಾನವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಈಗೀಗ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಳ್ಳುವರ ಸಂಖ್ಯೆಯೇ ಹೆಚ್ಚಾಗಿದೆ. ವಿಜ್ಞಾನದಲ್ಲಿ ನೆರಳು ಬೆಳಕಿನ ಆಟ ಎಂಬ ಮಾತಿನಂತೆ ಈಗ ತಂತ್ರಜ್ಞಾನದಲ್ಲಿ ನಕಲಿ ಮತ್ತು ಅಸಲಿ ಆಟ ಶುರುವಾಗಿದೆ.

ಅಸಲಿಯನ್ನು ನಕಲಿಯಾಗಿಸುವ, ನಕಲಿಯನ್ನು ಅಸಲಿಯಾಗಿಸುವಷ್ಟರ ಮಟ್ಟಿಗೆ ಇಂದು ಟೆಕ್ನಾಲಜಿ ಬೆಳೆದು ನಿಂತಿದೆ. ಒಂದೇ ನಾಣ್ಯದ ಎರಡು ಮುಖದಂತೆ ಎಐ ತಂತ್ರಜ್ಞಾನದ ಕಥೆ ಆಗಿದೆ. ಪಾಸಿಟಿವ್‌ಗಿಂತ ನೆಗೆಟಿವ್ ವಿಚಾರಕ್ಕೆ ಈ ಎಐ ತಂತ್ರಜ್ಞಾನ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಇದಕ್ಕೆ ವೈರಲ್ ಆದ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಅವರ ಮದ್ವೆಯ ಫೋಟೊ ಅತ್ಯುತ್ತಮ ಸಾಕ್ಷಿ.

Here s the Real Story Behind BBK 11 s Mokshitha Pai and Trivikram s Viral Marriage

ಹೌದು. ಆ ಕಡೆ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಬಿಗ್ ಬಾಸ್‌ನ ವಜ್ರಖಚಿತ ಸಿಂಹಾಸನದ ಮೇಲೆ ಕೂರಲು ಕಸರತ್ತು ಮಾಡುತ್ತಿದ್ದಾರೆ. ಟಾಸ್ಕ್‌ಗಳಲ್ಲಿ ಬಿದ್ದು ಎದ್ದು ಫೈನಲ್ ತಲುಪಲು ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ. ಮತ್ತೊಂದು ಕಡೆ ಎಐ ತಂತ್ರಜ್ಞಾನದ ಸಹಾಯದಿಂದ ಕೆಲ ಕಿಡಿಗೇಡಿಗಳು ತ್ರಿವಿಕ್ರಮ್ ಮತ್ತು ಮೋಕ್ಷಿತಾ ಅವರ ಮದ್ವೆಯನ್ನು ಮಾಡಿಸಿದ್ದಾರೆ. ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ.

ಸದ್ಯಕ್ಕೆ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನು, ಮತ್ತೊಂದು ಬದಿಯಲ್ಲಿ ತ್ರಿವಿಕ್ರಮ್ ಹೆಸರಿನಲ್ಲಿ ರಾಮ ಎನ್ನುವ ಹೆಸರಿದೆ, ಮೋಕ್ಷಿತಾ ಹೆಸರಿನಲ್ಲಿ ಸೀತಾ ಇದೆ ಎನ್ನುವುದನ್ನು ಕೂಡ ಕಂಡು ಹಿಡಿದಿರುವ ಅನೇಕರು ಬಿಗ್ ಬಾಸ್‌ ಮನೆಯಲ್ಲಿರುವ ಈ ರಾಮ ಸೀತಾ ನಿಜಜೀವನದಲ್ಲಿ ಕೂಡ ಒಂದಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಮಾಡುತ್ತಿದ್ದಾರೆ. ಇಬ್ಬರು ಬಿಗ್ ಬಾಸ್‌ದಿಂದ ಹೊರ ಬಂದು ಮದ್ವೆಯಾಗಲಿ ಎನ್ನುತ್ತಿದ್ದಾರೆ. ಇನ್ನೂ ಹಲವರು ವೈರಲ್ ಆದ ಫೋಟೊವನ್ನೇ ನಿಜ ಎಂದುಕೊಂಡು ಆಗಲೇ ಶುಭಾಶಯವನ್ನು ಕೋರುತ್ತಿದ್ದಾರೆ. ಮತ್ತು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಇನ್ನುಳಿದಂತೆ ಬಿಗ್ ಬಾಸ್ ಕನ್ನಡ ಹನ್ನೊಂದನೇ ಸೀಸನ್ ಈಗಾಗಲೇ 105ದಿನಗಳನ್ನು ಪೂರೈಸಿದೆ. ಇನ್ನೆರಡು ವಾರಗಳಲ್ಲಿ ಫಿನಾಲೆ ಬರಲಿದೆ. ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲಿ ಒಬ್ಬರು ಈ ವಾರ ದೊಡ್ಮನೆಯಿಂದ ಹೊರಗೆ ಬರುತ್ತಿದ್ದಾರೆ. ಸದ್ಯ ಟಿಕೆಟ್ ಟು ಫಿನಾಲೆ ನಡೀತಿದೆ. ಈಗಾಗಲೇ ಹನುಮಂತ ಫಿನಾಲೆಗೆ ಹೋಗುವುದು ಪಕ್ಕಾ ಆಗಿದೆ. ಇನ್ನು ಫಿನಾಲೆಗೆ ಎರಡು ವಾರ ಮಾತ್ರ ಬಾಕಿ ಇರುವ ಹಿನ್ನೆಲೆ ವಿನ್ನರ್ ಯಾರಾಗಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಆ ಪ್ರಕಾರ ಕೆಲವರು ಹನುಮಂತ ಬಿಗ್ ಬಾಸ್ ಗೆಲ್ಲುವುದು ಖಚಿತ ಎನ್ನುವ ಭವಿಷ್ಯವನ್ನು ಹೇಳುತ್ತಿದ್ದರೆ ಇನ್ನೂ ಕೆಲವರು ವಿನ್ನರ್ ಕಥೆ ಗೊತ್ತಿಲ್ಲ ಆದರೆ ಎರಡನೇ ಸ್ಥಾನ ಮಾತ್ರ ತ್ರಿವಿಕ್ರಮ್ ಅವರದ್ದೇ ಎಂದು ಹೇಳುತ್ತಿದ್ದಾರೆ. ಮೋಕ್ಷಿತಾ ಪೈ ಅವರ ಕಥೆ ಏನೋ ಗೊತ್ತಿಲ್ಲ.

ಇನ್ನು ಹಿಂದೂತ್ವವನ್ನು ಕಣಕಣದಲ್ಲಿ ತುಂಬಿಕೊಂಡಿರುವ ಚೈತ್ರಾ ಕುಂದಾಪುರ ಅವರ ಪರ ಕೂಡ ಕೆಲ ಜನರಿಗೆ ಒಲವು ಇದೆ. ಚೈತ್ರಾ ಗೆಲ್ಲಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೂ ಕೆಲವರು ಪಾಸಿಟಿವ್ ಗೌತಮಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಗೌತಮಿಯ ನೆರಳಿನಂತೆ ಇರುವ ಉಗ್ರಂ ಮಂಜು ಯಾವುದೇ ಕಾರಣಕ್ಕೂ ಟ್ರೋಫಿ ಗೆಲ್ಲಲ್ಲ ಎನ್ನುತ್ತಿದ್ದಾರೆ. ಒಟ್ನಲ್ಲಿ ಸದ್ಯ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಬಿಗ್ ಬಾಸ್ ಮನೆಯಲ್ಲಿದ್ದು ಅವರ ನಕಲಿ ಮದ್ವೆ ಫೋಟೊಗಳು ವೈರಲ್ ಆಗಿವೆ. ಹೊರ ಬಂದ ಮೇಲೆ ಈ ಫೋಟೊಗೆ ಇಬ್ಬರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X