ಪುಟ್ಟಕ್ಕನ ಮಕ್ಕಳು ತೆರೆಮರೆಯಲ್ಲಿ ಹೇಗಿದ್ದಾರೆ ಗೊತ್ತಾ?
ಕನ್ನಡ ಕಿರುತೆರೆಯಲ್ಲಿ ಸದ್ಯ ಹೆಚ್ಚಾಗಿ ಸದ್ದು ಮಾಡುತ್ತಿರವ ಧಾರಾವಾಹಿ ಎಂದರೆ ಅದು 'ಪುಟ್ಟಕ್ಕನ ಮಕ್ಕಳು'. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮೊದಲ ವಾರವೇ ಈ ಧಾರಾವಾಹಿ ಅಧಿಕ ಟಿಆರ್‌ಪಿ ಗಳಿಸಿ ಮೊದಲ ಸ್ಥಾನದಲ್ಲಿದೆ. ಆರಂಭದ ವಾರದಲ್ಲಿಯೇ ಈ ಇಷ್ಟೊಂದು ಟಿಆರ್‌ಪಿ ಗಳಿಸಿದ ಮೊದಲ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇನ್ನೂ ಈ ಧಾರಾವಾಹಿಯಲ್ಲಿ ಇರುವ ಪಾತ್ರಗಳ ಬಗ್ಗೆ ಜನ ಮಾತನಾಡುತಿದ್ದಾರೆ. ಪ್ರತಿ ಪಾತ್ರವೂ ಕೂಡ ಧಾರಾವಾಹಿಯಲ್ಲಿ ಪ್ರಮುಖ ಆಗಿವೆ. ಅದರಲ್ಲೂ ಪುಟ್ಟಕ್ಕ, ಅವರ ಮಕ್ಕಳು, ಪತಿ, ಸವತಿ ಪಾತ್ರಗಳು ಧಾರಾವಾಹಿಯ ಅತಿ ಮುಖ್ಯ ಪಾತ್ರಗಳು. ಹಾಗಾಗಿ ಈ ಪಾತ್ರಗಳ ಸುತ್ತಲೂ ಹೆಚ್ಚು ತಿರುವುಗಳು ಬರುತ್ತವೆ. ಅದರಲ್ಲೂ ಪುಟ್ಟಕ್ಕನ ಮಕ್ಕಳು ಮನೆ ಮಾತಾಗಿದ್ದಾರೆ.
ನಿತ್ಯವೂ ಪುಟ್ಟಕ್ಕನ ಮೂವರು ಮಕ್ಕಳು ಏನು ಮಾಡ್ತಾರೆ ಎನ್ನುವ ಕುತೂಹಲಗಳೇ ಇರುತ್ತವೆ. ಹಾಗಾಗಿ ಅವರ ಪಾತ್ರಗಳು ನಿತ್ಯವೂ ಒಂದಲ್ಲ ಸನ್ನಿವೇಷದ ಮೂಲಕ ಸದ್ದು ಮಾಡುತ್ತವೆ. ತೆರೆಯ ಮೇಲೆ ಸೀದಾ ಸಾದ ಹಳ್ಳಿ ಹುಡುಗಿಯರಂತೆ ಕಾಣುವ ಪುಟ್ಟಕ್ಕನ ಮಕ್ಕಳು ತಮ್ಮ ನಿಜ ಬದುಕಲ್ಲಿ ಹೇಗದ್ದಾರೆ, ಅವರ ನಿಜವಾದ ಹೆಸರುಗಳೇನು ಎನ್ನುವ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಪುಟ್ಟಕ್ಕನ ಎರಡನೇ ಮಗಳು ಸ್ನೇಹ ನಿಜವಾದ ಹೆಸರು ಸಂಜನಾ ಬುರ್ಲಿ!
ಪುಟ್ಟಕ್ಕನ ಮಕ್ಕಳಲ್ಲಿ ಹೆಚ್ಚು ಧೈರ್ಯ ಶಾಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹ. ಅಮ್ಮನಿಗೆ ಅಥವಾ ಕುಟುಂಬಕ್ಕೆ ಏನೇ ತೊಂದರೆ ಬಂದರು, ಅದನ್ನು ತಡೆಯುವಲ್ಲಿ ಧೈರ್ಯವಾಗಿ ಮುನ್ನುಗುವಳು ಸ್ನೇಹ. ಬಿಟ್ಟು ಹೋದ ಅಪ್ಪ ಮತ್ತು ಮಲತಾಯಿಯ ಧೋರಣೆಯನ್ನು ಮೂಲಾಜಿಲ್ಲದೆ ಖಂಡಿಸಿ, ಅವರ ಹೆಡೆ ಮುರಿ ಕಟ್ಟುವಳು ಸ್ನೇಹ. ತೆರೆಯ ಮೇಲೆ ಸ್ನೇಹ ಆಗಿ ಅಬ್ಬರಿಸುವ ಈಕೆಯ ನಿವಾದ ಹೆಸರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಅವರು ಸಿಕ್ಕಾಪಟ್ಟೆ ಮಾಡ್ರನ್. ಟ್ರೆಡಿಷನಲ್ ಲುಕ್‌ನಲ್ಲೂ ಕೂಡ ಚೆಂದ ಈ ಬೆಡಗಿ. ಅವರ ಈ ಫೊಟೊಗಳನ್ನು ನೋಡಿದರೆ ನೀವು ಗುರುತಿಸುವುದೇ ಕಷ್ಟ.

ಮಾಡಲ್ ಲೋಕದಲ್ಲಿ ಮಿಂಚಿದ್ದ ಸಂಜನಾ ಬುರ್ಲಿ!
ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅಭಿನಯಿಸುವ ಮೊದಲು, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅನಂತ್‌ನಾಗ್ ಅವರ 'ವೀಕೆಂಡ್' ಚಿತ್ರದಲ್ಲಿ ಅಭಿನಯಿಸಿರುವ ಸಂಜನಾ, 'ರಾಧಾ ಮಿಸ್ಸಿಂಗ್ ರಮಣ ಸರ್ಚಿಂಗ್' ಚಿತ್ರ ಸೇರಿದಂತೆ ತಮಿಳಿನಲ್ಲೂ ಅಭಿನಯಿಸಿದ್ದಾರೆ. ಬಳಿಕ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಟಿಸಿದರು. ಈಗ ಪುಟ್ಟಕ್ಕನ ಮಗಳಾಗಿ ಕಿರುತೆಯಲ್ಲಿ ಮಿಂಚುತ್ತಿದ್ದಾರೆ. ಮಾಡೆಲಿಂಗ್ ಲೋಕದ ಮೂಲಕ ಬಣ್ಣ ಹಚ್ಚಿರುವ ಈಕೆ ಸದ್ಯ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಹಾಗಾಗಿ ಸದ್ಯ ಓದು ಮತ್ತು ನಟನೆ ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತಾರೆ.

ಪುಟ್ಟಕ್ಕನ ದೊಡ್ಡ ಮಗಳು ಸಹನಾ: ಅಕ್ಷರ ರೂಪದಲ್ಲಿ ಹೇಗಿದ್ದಾರೆ ನೋಡಿ!
ಇನ್ನು ಪುಟ್ಟಕ್ಕನ ದೊಡ್ಡ ಮಗಳು ಸಹನಾ, ಹೆಸರಿಗೆ ತಕ್ಕಹಾಗೆ ಸಹನೆಯ ಗುಣ ಉಳ್ಳ ಹುಡುಗಿ. ಸಿರಿಯಲ್‌ನಲ್ಲಿ ಸೀರಿಯುಟ್ಟು ಮುಗ್ದೆಯಾಗಿ ಕಾಣಿಸಿ ಕೊಳ್ಳುವ ಸಹನಾಳ ನಿಜವಾದ ಹೆಸರು ಅಕ್ಷರ. ಅಕ್ಷರ ಮಾಡಲಿಂಗ್ ಲೋಕದಿಂದ ಅಭಿನಯಕ್ಕೆ ಬಂದಾಕೆ. ಯಾಕೆಯ ಮಾಡೆಲಿಂಗ್ ಫೊಟೋಗಳನ್ನು ನೋಡಿದರೆ ಇದು ಪುಟ್ಟಕ್ಕನ ಮಗಳೇನಾ ಎಂದು ಎಲ್ಲರೂ ಬಾಯಿ ಮೇಲೆ ಬೆರಳು ಇಡುತ್ತಾರೆ. ಅಷ್ಟರ ಮಟ್ಟಿಗೆ ಆಕೆಯ ನಿಜ ಜೀವನದ ಲುಕ್ ಮತ್ತು ಧಾರಾವಾಹಿಯಲ್ಲಿನ ಲುಕ್‌ನಲ್ಲಿ ವ್ಯತ್ಯಾಸವಿದೆ. ಆದರೆ ಪುಟ್ಟಕ್ಕನ ಮಗಳಾಗಿ ಜನರ ಮನ ಗೆದ್ದಿದ್ದಾರೆ.

ರೋಚಕ ತಿರುವುಗಳಿಂದ ಸಾಗುತ್ತಿರುವ ಧಾರಾವಾಹಿ!
ಮಂಡ್ಯ ಜಿಲ್ಲೆ ದೇವಿಪುರ ಅನ್ನೋ ಗ್ರಾಮದಲ್ಲಿ ನಡೆಯುವ ಕತೆ ಈ ಧಾರಾವಾಹಿಯ ಹಿನ್ನೆಲೆ. ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಆಕೆಯನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ ಆಸರೆಯಾಗಿ ನಿಲ್ಲುತ್ತಾರೆ. ಈ ಧಾರಾವಾಹಿ ಪ್ರಸಾರ ಆಗಿ ಜನ ಮನ ಗೆದ್ದಿದೆ. ಸದ್ಯ ದಿನಕ್ಕೊಂದು ರೋಚಕ ತಿರುವುಗಳೊಂದಿಗೆ, ಕುತೂಹಲದೊಂದಿಗೆ ಧಾರಾವಾಹಿ ಸಾಗುತ್ತಿದೆ.


Click it and Unblock the Notifications











