'ಸತ್ಯ' ಸೀರಿಯಲ್ ನಟಿಯ ಬಗ್ಗೆ ನಿಮಗೆಷ್ಟು ಗೊತ್ತು: ಸತ್ಯ ಹೊಸ ಅವತಾರ ನೋಡಿದ್ರ?

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಭಿನ್ನ, ವಿಭಿನ್ನ ಕತೆಯ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಪ್ರತಿ ಧಾರಾವಾಹಿಯಲ್ಲೂ ವಿಭಿನ್ನವಾದ ಕಥೆ ಇರುತ್ತದೆ. ಜೊತೆಗೆ ಪ್ರತಿ ಸಂಚಿಯಲ್ಲೂ ರೋಚಕ ಟ್ವಿಸ್ಟ್ ಇದ್ದೇ ಇರುತ್ತೆ. ಸದ್ಯ ಅಂತಹ ಟ್ವಿಸ್ಟ್‌ನೊಂದಿಗೆ ಸಾಗುತ್ತಿರುವ ಧಾರಾವಾಹಿ ಅಂದರೆ ಅದು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಸತ್ಯ' ಸೀರಿಯಲ್.

'ಸತ್ಯ' ಧಾರಾವಾಹಿ ನೋಡುತ್ತಿದ್ದರೆ, ನಿಮಗೂ ಧಾರಾವಾಹಿ ಸಾಗುವ ಪರಿಯ ಬಗ್ಗೆ ಅರಿವಿರುತ್ತೆ. ಸತ್ಯ ಪಾತ್ರ ಹೇಗಿದೆ ಎನ್ನುವ ಬಗ್ಗೆ ತಿಳಿದಿರುತ್ತದೆ, ಸತ್ಯ ಬದುಕಿನಲ್ಲಿ ಪ್ರತಿ ಹೆಜ್ಜೆಗೂ ಅಡ್ಡಿಗಳು ಎದುರಾಗುತ್ತಿವೆ. ಆದರೆ ಎಲ್ಲವನ್ನೂ ಮೆಟ್ಟಿ ನಿಂತು ಹೋರಾಟಕ್ಕೆ ಇಳಿದಿದ್ದಾಳೆ ಸತ್ಯ. ನಿತ್ಯವೂ ಒಂದಲ್ಲಾ ಒಂದು ರೋಚಕ ಟ್ವಿಸ್ಟ್ ಜೊತೆಗೆ ಸತ್ಯ ನಿಮ್ಮ ಮುಂದೆ ಹಾಜರಾಗುತ್ತಾಳೆ.

ಇನ್ನು ಹೀಗೆ ಸತ್ಯ ಪಾತ್ರದ ಮೂಲಕ ಗಮನ ಸೆಳೆದಿರುವ ಸತ್ಯ ನಿಜ ಜೀವನದಲ್ಲಿ ಹೇಗಿದ್ದಾರೆ?. ಏನು ಮಾಡ್ತಾರೆ ಎನ್ನುವ ಬಗ್ಗೆ ನಿಮಗೆಷ್ಟು ಗೊತ್ತು. ಸತ್ಯಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಮುಂದೆ ಓದಿ....

ಸತ್ಯ ಧಾರಾವಾಹಿಯಿಂದ ಮನೆ ಮಾತಾದ ಸತ್ಯ!

ಸತ್ಯ ಧಾರಾವಾಹಿಯಿಂದ ಮನೆ ಮಾತಾದ ಸತ್ಯ!

ಸದ್ಯ ಕಿರುತೆಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ನಾಯಕಿಯರಲ್ಲಿ ಜನ ಮನ ಗೆದ್ದ ನಾಯಕಿಯರಲ್ಲಿ ಸತ್ಯ ಧಾರಾವಾಹಿಯ ಸತ್ಯ ಕೂಡ ಒಬ್ಬರು. ಸತ್ಯ ಅವರ ಗೆಟಪ್ ಧಾರವಾಹಿಯಲ್ಲಿ ಕೊಂಚ ಡಿಫ್ರೆಂಟ್ ಆಗಿದೆ. ಸತ್ಯ ಲುಕ್ ಪ್ರೇಕ್ಷಕರ ಮನ ಗೆದ್ದಿದೆ. ಸತ್ಯ ಮನೆ ಮಗನ ಸ್ಥಾನದಲ್ಲಿ ನಿಂತು ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ. ಹಾಗಾಗಿ ಸತ್ಯಳ ಧೈರ್ಯ ಮತ್ತು ಕಲ್ಮಶ ಇಲ್ಲದ ಮನಸ್ಸು ಜನರಿಗೆ ಇಷ್ಟ ಆಗುತ್ತದೆ. ಅಷ್ಟಕ್ಕೂ ಸತ್ಯ ನಿಜ ಜೀವನದಲ್ಲಿ ಇರುವ ಪರಿಯೇ ಬೇರೆ.

ಈ ಸತ್ಯ ಯಾರು, ನಿಜವಾದ ಹೆಸರು ಏನು ಗೊತ್ತಾ?

ಈ ಸತ್ಯ ಯಾರು, ನಿಜವಾದ ಹೆಸರು ಏನು ಗೊತ್ತಾ?

ಸತ್ಯ ಸೀರಿಯಲ್ ನೀವು ನಿತ್ಯವೂ ನೋಡುವ ಸತ್ಯ ಯಾರು ಅಂತ ಗೊತ್ತಾ?. ಸತ್ಯ ಪಾತ್ರಧಾರಿಯ ಹೆಸರು ಗೌತಮಿ ಜಾಧವ್. ಗೌತಮಿ ಅವರಿಗೂ ಸಿನಿಮಾರಂಗಕ್ಕೂ ಮೊದಲಿನಿಂದಲೂ ನಂಟಿದೆ. ಗೌತಮಿ ಅವರು ಕನ್ನಡ ಚಿತ್ರರಂಗದಲ್ಲಿ ಛಾಯಗ್ರಾಹಕ ಆಗಿ ಗುರುತಿಸಿಕೊಂಡಿರುವ, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪುತ್ರ ಅಭಿಶೇಕ್ ಅವರ ಧರ್ಮಪತ್ನಿ. ಮದುವೆಗೂ ಮೊದಲು ಈ ಜೋಡಿ ಒಂದೇ ಚಿತ್ರದಲ್ಲಿ ಕೆಲಸ ಮಾಡಿದೆ.

ಸಿನಿಮಾ ನಟಿ ಗೌತಮಿ ಜಾದವ್ ಅಲಿಯಾಸ್ ಸತ್ಯ!

ಸಿನಿಮಾ ನಟಿ ಗೌತಮಿ ಜಾದವ್ ಅಲಿಯಾಸ್ ಸತ್ಯ!

ಗೌತಮಿ ಅವರು ಕಿರುತೆಯಲ್ಲಿ ಅಭಿನಯಿಸುವ ಮುನ್ನ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ. 'ಕಿನಾರೆ' ಎನ್ನುವ ಕನ್ನಡದ ಸಿನಿಮಾದಲ್ಲಿ ಗೌತಮಿ ಅಭಿನಯಿಸಿದ್ದಾರೆ. ಈ ಮೂಕಲ ಸ್ಯಾಂಡಲ್‌ವುಡ್‌ನಲ್ಲಿಯೂ ಗೌತಮಿ ಅವರು ಹೆಸರು ಮಾಡಿದ್ದಾರೆ. ಎಲ್ಲಿ ಗೌತಮಿ ಅವರು ಅಭಿನಯದ ಸಿನಿಮಾಗಳು ಬರುತ್ತಿಲ್ಲ, ಎಂದುಕೊಳ್ಳುವಷ್ಟರಲ್ಲೇ ಗೌತಮಿ ಅವರು ಸತ್ಯ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಕಿರು ಚಿತ್ರದ ಮೂಕ ವಿಭಿನ್ನ ಪ್ರಯೋಗ!

ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಗೌತಮಿ ಅವರು ಈಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಕನ್ನಡದ ಕಿರು ಚಿತ್ರ ಒಂದರಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ 'ಪಪೆಟ್ಸ್' ಎಂದು ಹೆಸರಿಡಲಾಗಿದೆ. ಸದ್ಯ ಈ ಕಿರುಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಗೌತಮಿ ಅವರು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸತ್ಯ ಸೀರಿಯಲ್ ಗೆಟಪ್‌ಗೂ, ಈ ಗೆಟಪ್‌ಗೂ ಅಜಗಜಾಂತರ ವ್ಯತ್ಯಾಸ ಇದೆ. ಈ ಕಿರುಚಿತ್ರ ಸತ್ಯ ಹೆಗ್ಡೆ ಸ್ಟೂಡಿಯೋಸ್ ಅಡಿಯಲ್ಲಿ ನಿರ್ಮಾಣ ಆಗಿದೆ.

English summary
Do You Know About Sathya Tv Serial Actress Real Name And Personal Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X