ಆಸ್ತಿಗಾಗಿ ಆರ್ಯವರ್ಧನ್ ದೊಡ್ಡ ಸ್ಕೆಚ್: ಅನು ಮುಂದಿನ ನಡೆ ಬಗ್ಗೆ ಅಚ್ಚರಿ!
ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ರೋಚಕ ಟ್ವಿಸ್ಟ್‌ಗಳೊಂದಿಗೆ ಸಾಗುತ್ತಿದೆ. ಸೀರಿಯಲ್‌ನಲ್ಲಿ ಹೊಸತನ ಏನೂ ಇಲ್ಲವಲ್ಲ ಎಂದುಕೊಳ್ಳುತ್ತಾ ಇರುವಾಗಲೆ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್‌ಗಳು ಬರ್ತಿವೆ. ಈಗ ಅನು ಮತ್ತು ಆರ್ಯವರ್ಧನ್ ನಡುವೆ ಅಂತರ ಸೃಷ್ಟಿ ಆಗುತ್ತಿದೆ.
ಅನು ಸಿರಿಮನೆ ತಮ್ಮ ಕಂಪನಿಗೆ ಆಗುತ್ತಿರುವ ಮೋಸದ ಜಾಲವನ್ನು ಭೇದಿಸಲು ಮುಂದಾಗಿದ್ದಾಳೆ. ಮೋಸದ ಬಗ್ಗೆ ಅನು ಅರ್ಯವರ್ಧನ್‌ಗೆ ಹೇಳುತ್ತಾಳೆ. ಅದರೆ ಆರ್ಯ ಅನು ಮಾತನ್ನು ತಳ್ಳಿ ಹಾಕಿ ಆಕೆಯನ್ನು ಸುಮ್ಮನ್ನೇ ಇರುವಂತೆ ಹೇಳುತ್ತಾನೆ. ಆದರೆ ಛಲ ಬಿಡದ ಅನು ಮೋಸಗಾರನ ಪತ್ತೆಗೆ ಮುಂದಾಗುತ್ತಾಳೆ.
ಮೋಸ ಆಗುತ್ತಿರುವುದು ಸುಭಾಷ್ ಪಾಟಿಲ್ ಇಂದ ಗೊತ್ತಾದ ಬಳಿಕ, ಅದನ್ನು ಅನು ಆರ್ಯವರ್ಧನ್‌ಗೆ ಹೇಳುತ್ತಾಳೆ. ಆದರೆ ಇದರಿಂದ ಅಚ್ಚರಿಗೊಂಡ ಆರ್ಯವರ್ಧನ್ ಅನುಗೆ ಇದರಿಂದ ದೂರ ಇರುವಂತೆ ತಾಕೀತು ಮಾಡುತ್ತಾನೆ. ಇದೇ ಕಾರಣಕ್ಕೆ ಅವರ ಮಧ್ಯೆ ಮುನಿಸು, ವೈಮನಸ್ಸು ಕೂಡ ಉಂಟಾಗಿದೆ.

ವಿಲನ್ ಆದ್ರೂ ಹೀರೋ ಆರ್ಯವರ್ಧನ್!
ಇಷ್ಟು ದಿನ ಸೀರಿಯಲ್ ನಾಯಕ ಪಾತ್ರದಲ್ಲಿ ನಾಟಕ ಆಡುತ್ತಿದ್ದ ಆರ್ಯವರ್ಧನ್ ಅಸಲಿ ಮುಖ ಬಯಲಾಗಿದೆ. ಆರ್ಯವರ್ಧನ್ ವಿಲನ್ ಮುಖ ರಿವೀಲ್ ಆಗಿದೆ. ಹಾಗಾಗಿ ಈಗ ಕಥೆಯ ಹಾದಿ ಬದಲಾಗುತ್ತಿದೆ. ಆರ್ಯವರ್ಧನ್ ತನ್ನ ಪತ್ನಿ ಅನುಳನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿಕೊಳ್ಳುತ್ತಾ ಇದ್ದನು. ಆದರೆ ಕ್ರಮೇಣ ಅನು ಮಾಡುವ ಕೆಲಸಗಳನ್ನ ವಿರೋಧಿಸುತ್ತ ಸತ್ಯ ಮರೆಮಾಚುವ ಕೆಲಸ ಮಾಡುತ್ತಿದ್ದಾನೆ. ಹಾಗಾಗಿ ಇವನೇ ವಿಲನ್ ಎನ್ನುವ ಶಂಕೆಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ.

ಆಸ್ತಿಗಾಗಿ ಸ್ಕೆಚ್ ಹಾಕಿದ ಆರ್ಯವರ್ಧನ್!
ಅನು ಸಿರಿಮನೆಯನ್ನು ರಾಜನಂದಿನಿ ಅಂತ ನಂಬಿಸಿ, ಆಸ್ತಿ ಕಬಳಿಸಿಕೊಳ್ಳುವುದಕ್ಕೆ ಆರ್ಯವರ್ಧನ್ ಸ್ಕೆಚ್ ಹಾಕಿದ್ದಾನೆ. ಹಾಗಾಗಿ ಎಲ್ಲಾ ರೀತಿಯ ನಾಟಕ ಆಡುತ್ತಿದ್ದಾರೆ. ಇತ್ತ ಅನು ಸಿರಿಮನೆ ಕಂಪನಿಗೆ ಮೋಸ ಮಾಡಿ, ಹಣ ಕದಿಯುತ್ತಿರೋದು ಯಾರೆಂದು ತಿಳಿದುಕೊಳ್ತಿದ್ದಾಳೆ. ಈ ನಡುವೆ ಸುಭಾಷ್ ಪಾಟೀಲ್ ಹೆಸರು ಕೇಳಿ ಬಂತು, ಜೇಂಡೆ ಯಾರನ್ನೋ ಕರೆದುಕೊಂಡು ಬಂದು ಸುಭಾಷ್ ಪಾಟೀಲ್ ಇವನೇ ಎಂದು ಅನುಗೆ ಪರಿಚಯಿಸಿ, ಅನು ಹುಡುಕಾಟದ ದಾರಿ ತಪ್ಪಿಸಿದ್ದಾನೆ.

ಆರ್ಯವರ್ಧನ್ ಅಸಲಿ ಮುಖ ಬಯಲು ಮಾಡ್ತಾಳ ಅನು?
ರಾಜ ನಂದಿನಿ ಆಗಾಗ ಅನು ಸಿರಿಮನೆ ಮೈಮೇಲೆ ಬರುತ್ತಿದ್ದಾಳೆ. ಅನು ರಾಜನಂದಿನಿಯ ಪುನರ್ ಜನ್ಮ ಅಂತ ನಂಬಿಸಲು ಆರ್ಯವರ್ಧನ್ ಇನ್ನಿಲ್ಲದ ಕಸರತ್ತು ಮಾಡ್ತಿದ್ದಾನೆ. ಆಸ್ತಿಗಾಗಿ ಆರ್ಯವರ್ಧನ್ ಅನುವನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅನುನೇ ರಾಜನಂದಿನಿ ಎಂದು ನಂಬಿಸಿ ಅವಳ ಆಸ್ತಿಯನ್ನು ಅನು ಹೆಸರಿಗೆ ಬರೆಸಲು ದೊಡ್ಡ ಪ್ಲ್ಯಾನ್ ಮಾಡಿದ್ದಾನೆ. ಆದರೆ ಅನು ರಾಜನಂದಿನಿ ಬಗ್ಗೆ ಸತ್ಯ ತಿಳಿದುಕೊಳ್ಳಲು ಜಲಂದರ್ ಭೇಟಿಗೆ ಮುಂದಾಗಿದ್ದಾನೆ. ಹಾಗಾಗಿ ಅನು, ಆರ್ಯನ್ ಹಾಕಿರುವ ಯೋಜನೆಗಳನ್ನು ತಲೆಕೆಳಗೆ ಮಾಡುತ್ತಾಳಾ ಅನ್ನೋದನ್ನು ಕಾದು ನೋಡಬೇಕಿದೆ.

ಅನು ನಂಬಿಕೆಗೆ ಕೊಳ್ಳಿ ಇಟ್ಟ ಆರ್ಯವರ್ಧನ್!
ಅನುಗೆ ಸುಭಾಷ್ ಪಾಟೀಲ್ ಯಾರು ಎನ್ನುವುದು ಗೊತ್ತಾಗಿದೆ. ಆರ್ಯವರ್ಧನ್ ಹಳೇ ಹೆಸರೇ ಸುಭಾಷ್ ಪಾಟೀಲ್ ಅನ್ನೋ ಸತ್ಯ ಅನು ಸಿರಿಮನೆಗೆ ಗೊತ್ತಾಗಿ ಹೋಗಿದೆ. ಅನು ಆರ್ಯನನ್ನು ಸಂಪೂರ್ಣವಾಗಿ ನಂಬಿದ್ದಳು. ಅಂತೆಯೇ ಆರ್ಯ ಅನು ಮೇಲೆ ಪ್ರೀತಿ, ನಂಬಿಕೆ ತೋರಿದ್ದ ಅದರೆ ಅದು ನಾಟಕ ಎನ್ನುವುದು ಈಗ ಬಯಲಾಗಿದೆ. ಇದೀಗ ಆರ್ಯನ್ ಅಸಲಿ ಬಣ್ಣ ಅನುಗೆ ಗೊತ್ತಾಗಿದೆ. ಆರ್ಯ ಸುಳ್ಳು ಹೇಳಿದ್ಯಾಕೆ, ಕಂಪನಿಗೆ ಯಾಕೆ ಮೋಸ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಅನುಗೇ ಕಾಡ್ತಿದೆ.


Click it and Unblock the Notifications











