ಪತಿಯ ಜೊತೆ 117 ಮೀಟರ್ ಎತ್ತರದಿಂದ ಜಿಗಿದ ವೈಷ್ಣವಿ ಗೌಡ- ವಿಡಿಯೋ ವೈರಲ್..!
ಅಗ್ನಿ ಸಾಕ್ಷಿ ಮತ್ತು ಸೀತಾರಾಮ ಧಾರಾವಾಹಿಯ ಮೂಲಕವೇ ಮನೆ ಮಾತಾದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ಇವರು ಸದ್ಯ ಗ್ರಹಸ್ತಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅನುಕೂಲ್ ಮಿಶ್ರಾ ಅವರ ಜೊತೆ ಸಪ್ತಪದಿ ತುಳಿದು ಹೊಸ ಬದುಕನ್ನು ಶುರು ಮಾಡಿದ್ದಾರೆ. ಇಂಥಾ ವೈಷ್ಣವಿ ಗೌಡ ಸದ್ಯ ತಮ್ಮ..
ಸಾಂಸಾರಿಕ ಜೀವನದ ಕ್ಷಣಗಳನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ವಿಶೇಷವಾದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಹೌದು, ಅಸಲಿಗೆ ಅನೇಕರಿಗೆ ಗೊತ್ತಿರುವಂತೆ ವೈಷ್ಣವಿ ಗೌಡ ಮದುವೆಯಾದ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್ಫೋರ್ಸ್ ನಲ್ಲಿ ಇವರು ಕೆಲಸ ಮಾಡುತ್ತಾರೆ.

ಇನ್ನು ಅನುಕೂಲ್ ಉತ್ತರ ಭಾರತದ ಛತ್ತಿಸ್ಗಡದ ಮೂಲದವರು. ಹೀಗಾಗಿ ಸದ್ಯ ಉತ್ತರ ಭಾರತದ ಕಡೆ ಪ್ರವಾಸ ಮಾಡುತ್ತಿರುವ ವೈಷ್ಣವಿ ಗೌಡ ಸದ್ಯ ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಹಲವರ ಗಮನ ಸೆಳೆಯುತ್ತಿದೆ. ವೈಷ್ಣವಿ ಅವರ ಈ ಸಾಹಸಕ್ಕೆ ಮೆಚ್ಚುಗೆ ಕೂಡ ಸಿಗುತ್ತಿದೆ. ಹಲವರು ನಿಮಗೆ ಪ್ರೀತಿ ಮತ್ತು ಕಾಳಜಿ ತೋರಿಸುವ ಹುಡುಗ ಸಿಕ್ಕಿದ್ದಾನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ತರಹದ ಸಾಹಸ ಕಾರ್ಯಕ್ರಮಗಳಿಂದ ದೂರ ಇರಿ ಪ್ರಾಣಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಅಂದ್ಹಾಗೇ ಭಾರತದ ಅತೀ ಎತ್ತರದ ಬಂಗೀ ಜಂಪ್‌ನಲ್ಲಿ ಒಂದಾದ ಶಿವಪುರಿ ಬಳಿ ಇರುವ ಈ ಸ್ಥಳದಲ್ಲಿ ಕೇವಲ ಹಿಮಾಲಯನ್ ಬಂಗೀ ಮಾತ್ರವಲ್ಲ ಹಿಮಾಲಯನ್ ಫ್ರೀಸ್ಟೈಲ್ ಬಂಗೀ, ಹಿಮಾಲಯನ್ ಜೋಡಿ ಬಂಗೀ ಎಂಬ ಹೆಸರಿನಲ್ಲಿ ಎಲ್ಲ ಇಲ್ಲಿ ಜಿಗಿಯುವ ಅವಕಾಶ ಇದೆ. 117 ಮೀಟರ್ ಎತ್ತರದಿಂದ ಜಂಪ್ ಮಾಡುವ ಅವಕಾಶ ಇಲ್ಲಿ ಇದ್ದು www.adventuremint.com ನಲ್ಲಿ ಉಲ್ಲೇಖವಾದಂತೆ ಒಬ್ಬರಿಗೆ 4600 ರೂಪಾಯಿಯ ಶುಲ್ಕವನ್ನು ವಿಧಿಸಲಾಗುತ್ತದೆ.

ಇನ್ನು ಇದೇ ವೆಬ್ ಸೈಟ್‌ನಲ್ಲಿ ತಿಳಿಸಿರುವಂತೆ 14 ರಿಂದ 99 ವರ್ಷದ ಒಳಗಿನ ಆರೋಗ್ಯವಂತ ವ್ಯಕ್ತಿಗಳು ಇಲ್ಲಿ ಬಂಗೀ ಜಂಪ್ ಮಾಡಬಹುದು. ಪ್ರತಿ ವ್ಯಕ್ತಿಯ ತೂಕ 45 ರಿಂದ 120 ಕೆಜಿಯ ಒಳಗಡೆ ಇರಬೇಕೆಂದು ಇಲ್ಲಿ ಹೇಳಲಾಗಿದ್ದು ಜೊತೆಯಾಗಿ ಇಬ್ಬರು ಜಂಪ್ ಮಾಡುವಾಗ ಒಟ್ಟು ತೂಕ 205 ಕೆಜಿಯನ್ನು ಮೀರಿರಬಾರದು ಎಂದು ಹೇಳಲಾಗಿದೆ.
ಗರ್ಭಿಣಿಯರಿಗೆ, ಹೃದಯದ ಸಮಸ್ಯೆ ಹೊಂದಿರುವವರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ, ಅನಾರೋಗ್ಯಕ್ಕೊಳಗಾದವರಿಗೆ, ಮದ್ಯ ಸೇವನೆಯನ್ನು ಮಾಡಿದವರಿಗೆ ಇಲ್ಲಿ ಜಿಗಿಯಲು ಅವಕಾಶ ಇಲ್ಲ.
ಇನ್ನುಳಿದಂತೆ ಉತ್ತರ ಭಾರತದ ಛತ್ತಿಸ್ಗಡದವರಾದ ಅನುಕೂಲ್ ಮತ್ತು ಬೆಂಗಳೂರಿನ ವೈಷ್ಣವಿ ಗೌಡ ನಡುವೆ ಸಂಬಂಧ ಬೆಸೆದಿದ್ದು ಮ್ಯಾಟ್ರಿಮೋನಿ.ಇಬ್ಬರದ್ದು ಪಕ್ಕಾ ಅರೆಂಜ್ ಮ್ಯಾರೇಜ್.
ಈ ಕುರಿತು ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ವೈಷ್ಣವಿ ಗೌಡ ನಮ್ಮದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್, ಮ್ಯಾಟ್ರಿಮೋನಿಯಲ್ಲಿ ನಮ್ಮ ಜಾತಕ ಅದಲು ಬದಲಾದ ನಂತರ ಅಪ್ಪ- ಅಮ್ಮ ನೋಡಿದರು ಆ ನಂತರ ಅವರಿಗೂ ಇಷ್ಟವಾಗಿ ಮದುವೆಯನ್ನು ನಿಶ್ಚಯಿಸಿದರು ಎಂದು ಹೇಳಿದ್ದರು. ನಾವು ಇಬ್ಬರು ಪರಿಚಯವಾಗಿ ಸುಮಾರು ಒಂದು ವರ್ಷವಾಯ್ತು, ಅಲ್ಲಿಂದ ಇಲ್ಲಿಯವರೆಗೆ ಟೈಮ್ ತಗೆದುಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದ ವೈಷ್ಣವಿ ಗೌಡ ಸದ್ಯ ತಮ್ಮ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಜೋಡಿಗೆ ಯಾರ ಕೆಟ್ಟ ದೃಷ್ಟಿಯೂ ಕೂಡ ತಾಕದಿರಲಿ.


Click it and Unblock the Notifications











