ಈವರೆಗೂ 'ಬಿಗ್ ಬಾಸ್'ನಲ್ಲಿ ಗೆದ್ದವರು ಯಾರ್ಯಾರು?, ಹೇಗೆ?

ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ 'ಬಿಗ್ ಬಾಸ್' ಕಾರ್ಯಕ್ರಮ ಮತ್ತೆ ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್ ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಎನ್ನುವ ಪ್ರಶ್ನೆ ವೀಕ್ಷಕರದ್ದಾಗಿದೆ.

ಗಾಯಕ ನವೀನ್ ಸಜ್ಜು, ಕಿರುತೆರೆ ನಟಿ ಕವಿತಾ ಹಾಗೂ ರೈತ ಶಶಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಈ ಮೂವರ ಪೈಕಿ 'ಈ ಸಲ ಕಪ್ ನಂದೆ' ಅಂತ ಹೇಳುವವರು ಯಾರು ಎನ್ನುವ ಕುತೂಹಲ ಎಲ್ಲರಿಗೆ ಇದೆ.

ಈ ಬಾರಿ ಯಾರು ಗೆಲ್ತಾರೆ ಎನ್ನುವ ಪ್ರಶ್ನೆ ಜೊತೆ ಜೊತೆಗೆ ಈ ಹಿಂದೆ ಯಾವ ಯಾವ ಸ್ಪರ್ಧಿಗಳು ಬಿಗ್ ಬಾಸ್ ಗೆದ್ದಿದ್ದರು ಎನ್ನುವುದನ್ನು ಒಮ್ಮೆ ನೋಡಿಕೊಂಡು ಬರೋಣ. ಈವರೆಗೆ 'ಬಿಗ್ ಬಾಸ್' ಐದು ಸೀಸನ್ ನಡೆದಿದ್ದು, ಅಲ್ಲಿ ಯಾರು ಯಾರ ವಿರುದ್ಧ ಹೇಗೆ ಗೆದ್ದರು ಎಂಬ ವಿವರ ಮುಂದಿದೆ ಓದಿ...

ಬಿಗ್ ಬಾಸ್ ಸೀಸನ್ 1 ವಿನ್ನರ್: ವಿಜಯ್ ರಾಘವೇಂದ್ರ

ಬಿಗ್ ಬಾಸ್ ಸೀಸನ್ 1 ವಿನ್ನರ್: ವಿಜಯ್ ರಾಘವೇಂದ್ರ

'ಬಿಗ್ ಬಾಸ್' ಕನ್ನಡಕ್ಕೆ ಬಂದಾಗ ವೀಕ್ಷಕರಿಗೆ ತೀರ ಹೊಸದಾಗಿ ಇತ್ತು. ಮೊದಲ ಸೀಸನ್ ನಲ್ಲಿ ಅನೇಕ ಘಟಾನುಘಟಿಗಳ ಸಮಾಗಮ ಆಗಿತ್ತು. ಈ ಟಿವಿ ಕನ್ನಡದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರ ಆಗಿತ್ತು. ಅರುಣ್ ಸಾಗರ್ ಹಾಗೂ ವಿಜಯ ರಾಘವೇಂದ್ರ ಫೈನಲ್ ಹಂತ ತಲುಪಿದ್ದು, ಈ ಪೈಕಿ ವಿಜಯ್ ರಾಘವೇಂದ್ರ ಗೆದ್ದರು.

ಬಿಗ್ ಬಾಸ್ ಸೀಸನ್ 2 ವಿನ್ನರ್: ಅಕುಲ್ ಬಾಲಾಜಿ

ಬಿಗ್ ಬಾಸ್ ಸೀಸನ್ 2 ವಿನ್ನರ್: ಅಕುಲ್ ಬಾಲಾಜಿ

ಎರಡನೇ ಸೀಸನ್ ಬಿಗ್ ಬಾಸ್ ಪ್ರಸಾರ ಆಗಿದ್ದು, ಸುವರ್ಣ ವಾಹಿನಿಯಲ್ಲಿ. ಈ ವೇಳೆಗಾಗಲೇ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಕಾರ್ಯಕ್ರಮದ ಬಗ್ಗೆ ತಿಳಿದಿತ್ತು. ಆ ಬಾರಿ ಸೃಜನ್ ಲೋಕೇಶ್ ಹಾಗೂ ಅಕುಲ್ ಬಾಲಾಜಿ ಫೈನಲ್ ಹಂತ ತಲುಪಿದ್ದರು. ಜನರ ಬೆಂಬಲ ಸೃಜನ್ ಮೇಲೆ ಇತ್ತಾದರೂ, ಕೊನೆಗೆ ಗೆದ್ದಿದ್ದು, ಅಕುಲ್.

ಬಿಗ್ ಬಾಸ್ ಸೀಸನ್ 3 ವಿನ್ನರ್: ಶ್ರುತಿ

ಬಿಗ್ ಬಾಸ್ ಸೀಸನ್ 3 ವಿನ್ನರ್: ಶ್ರುತಿ

ಬಿಗ್ ಬಾಸ್ ಸೀಸನ್ 3 ಮತ್ತೆ ವಾಪಸ್ ಕಲರ್ಸ್ ವಾಹಿನಿಗೆ ಬಂದಿತ್ತು. ಆ ಬಾರಿ ಹುಚ್ಚವೆಂಕಟ್ ರಾದ್ದಾಂತ ಬಲು ಜೋರಾಗಿತ್ತು. ಸೀಸನ್ ಮೂರಲ್ಲಿ ಫೈನಲ್ ಹಂತ ತಲುಪಿದ್ದು ಚಂದನ್ ಹಾಗೂ ಶೃತಿ. ಈ ಪೈಕಿ ನಟಿ ಶ್ರುತಿ ಪ್ರಶಸ್ತಿ ಪಡೆದರು. ಜೊತೆಗೆ ಬಿಗ್ ಬಾಸ್ ಗೆದ್ದ ಮೊದಲ ಮಹಿಳಾ ಸ್ಪರ್ಥಿಯಾಗಿದ್ದಾರೆ.

ಬಿಗ್ ಬಾಸ್ ಸೀಸನ್ 4 ವಿನ್ನರ್: ಪ್ರಥಮ್

ಬಿಗ್ ಬಾಸ್ ಸೀಸನ್ 4 ವಿನ್ನರ್: ಪ್ರಥಮ್

ನಾಲ್ಕನೇ ಸೀಸನ್ ಬಿಗ್ ಬಾಸ್ ಅನ್ನು ವೀಕ್ಷಕರು ಎಂದೂ ಮರೆಯುವುದಿಲ್ಲ. ಅದಕ್ಕೆ ಕಾರಣ ಪ್ರಥಮ್. ಕಾರ್ಯಕ್ರಮ ಶುರು ಆದಾಗ ಯಾರಿಗೂ ತಿಳಿಯದ ಪ್ರಥಮ್ ಅದು ಮುಗಿಯುವ ಒಳಗೆ ಫುಲ್ ಫೇಮಸ್ ಆಗಿದ್ದರು. ತಮ್ಮ ಮಾತಿನ ಶೈಲಿಯ ಮೂಲಕ ಗಮನ ಸೆಳೆದಿದ್ದ ಪ್ರಥಮ್ ಬಿಗ್ ಬಾಸ್ ಕೂಡ ಗೆದ್ದರು. ಪ್ರಥಮ್ ಮತ್ತು ಕಿರಿಕ್ ಕೀರ್ತಿ ಪೈನಲ್ ಗೆ ಬಂದಿದ್ದರು.

ಬಿಗ್ ಬಾಸ್ ಸೀಸನ್ 5 ವಿನ್ನರ್: ಚಂದನ್ ಶೆಟ್ಟಿ

ಬಿಗ್ ಬಾಸ್ ಸೀಸನ್ 5 ವಿನ್ನರ್: ಚಂದನ್ ಶೆಟ್ಟಿ

ಕಳೆದ ಬಾರಿ ಬಿಗ್ ಬಾಸ್ ಗೆದ್ದಿದ್ದು ಚಂದನ್ ಶೆಟ್ಟಿ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಡುಗಳ ಮೂಲಕ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚಂದನ್ ಕಾರ್ಯಕ್ರಮದ ವಿನ್ನರ್ ಆದರು. ಫೈನಲ್ ವೇದಿಕೆ ಮೇಲೆ ಸೇಲ್ಸ್ ಮ್ಯಾನ್ ದಿವಕರ್ ರನ್ನು ಸೋಲಿಸಿ ಚಂದನ್ ಮೊದಲ ಸ್ಥಾನ ಪಡೆದರು.

More from Filmibeat

English summary
Highlights of Bigg Boss kannada seasons.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X