ಒಂದೇ ಒಂದು 'ಲೈಫ್ ಲೈನ್' ಬಳಸದೇ ಹಿಮಾನಿ ಗಳಿಸಿದ್ದೆಷ್ಟು.?

By Bharath Kumar

Recommended Video

ಜನ ಹೇಳಿದ್ದ ಮಾತು ಕೇಳದೇ ಸೋತ ಹಿಮಾನಿ...!! | Filmibeat Kannada

ಹೊಸ ವಾರ, ಹೊಸ ಹೊಸ ಸ್ಪರ್ಧಿಗಳು ಈ ವಾರ ಆಗಮಿಸಿದ್ದರು. ಸಂಪ್ರದಾಯದಂತೆ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಪ್ರಶ್ನೆ ಕೇಳಲಾಯ್ತು. ಈ ಪ್ರಶ್ನೆಗೆ ಅತಿ ವೇಗವಾಗಿ ಮತ್ತು ಸರಿಯಾಗಿ ಉತ್ತರ ಕೊಟ್ಟ 21 ವರ್ಷದ ಹಿಮಾನಿ ಹಾಟ್ ಸೀಟ್ ನಲ್ಲಿ ಕೂತರು.

ಮೊದಲ ಪ್ರಶ್ನೆಯಿಂದ ಹತ್ತನೇ ಪ್ರಶ್ನೆವರೆಗೂ ಯಾವುದೇ ಲೈಫ್ ಲೈನ್ ಬಳಸಿಕೊಳ್ಳದೆ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದರು.

ಆದ್ರೆ, 6 ಲಕ್ಷದ 40 ಸಾವಿರ ರೂಪಾಯಿ ಹನ್ನೊಂದನೇ ಪ್ರಶ್ನೆಗೆ ಹಿಮಾನಿ ತಪ್ಪು ಉತ್ತರ ಕೊಟ್ಟರು. ದುರಾದೃಷ್ಟವಶಾತ್ ಅಂದ್ರೆ ಮೊದಲ ಸರಿಯಾದ ಉತ್ತರವನ್ನೇ ಊಹೆ ಮಾಡಿದ್ದರು, ಆದ್ರೆ ಕನ್ ಫ್ಯೂಸ್ ಮಾಡಿಕೊಂಡ ಹಿಮಾನಿ ತಪ್ಪು ಉತ್ತರ ಕೊಟ್ಟರು. ಅಷ್ಟಕ್ಕೂ, ಹಿಮಾನಿ ಸೋಲಿಗೆ ಕಾರಣವಾದ ಆ ಪ್ರಶ್ನೆ ಯಾವುದು.? ಮುಂದೆ ಓದಿ....

6.40 ಲಕ್ಷದ ಪ್ರಶ್ನೆ

6.40 ಲಕ್ಷದ ಪ್ರಶ್ನೆ

ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯ ಸ್ಪರ್ಧಿ ಹಿಮಾನಿ ಸತತ ಹತ್ತು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರು. ಹನ್ನೊಂದನೇ ಪ್ರಶ್ನೆ ಇದಾಗಿತ್ತು. ''1936 ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಯಾರು ಧ್ಯಾನ್ ಚಂದ್ ಗೆ ತನ್ನ ಸೇನೆ ಸೇರಲು ಆಮಂತ್ರಣ ನೀಡಿದರು.?''
A ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
B ಅಡಾಲ್ಫ್ ಹಿಟ್ಲರ್
C ವಿನ್ ಸ್ಟನ್ ಚರ್ಚಿಲ್
D ಕ್ಲೆಮೆಂಟ್ ಅಟ್ಲೀ

ಲೈಫ್ ಲೈನ್ ಬಳಸಿಕೊಂಡ ಹಿಮಾನಿ

ಲೈಫ್ ಲೈನ್ ಬಳಸಿಕೊಂಡ ಹಿಮಾನಿ

3.20 ಸಾವಿರ ರೂಪಾಯಿವರೆಗೂ ಯಾವುದೇ ಲೈಫ್ ಲೈನ್ ಬಳಸದೆ ಉತ್ತರ ಕೊಟ್ಟಿದ್ದ ಹಿಮಾನಿ, 6.40 ಲಕ್ಷದ ಪ್ರಶ್ನೆಗೆ ಎರಡು ಲೈಫ್ ಲೈನ್ ಬಳಸಿಕೊಂಡರು. ಆದ್ರೆ, ಗೊಂದಲ್ಲಕ್ಕಿಡಾದ ಹಿಮಾನಿ ತಪ್ಪು ಉತ್ತರ ಕೊಟ್ಟರು.

ಹಿಮಾನಿ ಕೊಟ್ಟ ಉತ್ತರ: A ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ಸರಿಯಾದ ಉತ್ತರ: B ಅಡಾಲ್ಫ್ ಹಿಟ್ಲರ್

ಹತ್ತು ಜನರಲ್ಲಿ ಆಯ್ಕೆಯಾದ ಹುಡುಗಿ

ಹತ್ತು ಜನರಲ್ಲಿ ಆಯ್ಕೆಯಾದ ಹುಡುಗಿ

ವಾರದ ಮೊದಲ ದಿನ 'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಪ್ರಶ್ನೆಯಲ್ಲಿ ಕೇಳಿದ ಪ್ರಶ್ನೆಗೆ ಸರಿಯಾಗಿ ಮತ್ತು ವೇಗವಾಗಿ ಉತ್ತರ ಕೊಟ್ಟಿದ್ದು ಹಿಮಾನಿ. ಆ ಪ್ರಶ್ನೆ ಮುಂದಿದೆ.
ಈ ಕೆಳಗಿನ ಸಿನಿಮಾ ಹೆಸರನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ.?
A ಸ್ವಾಮಿ
B ಹೀಗೆ
C ನೋಡಿ
D ನಾವಿರೋದು
ಸರಿಯಾದ ಉತ್ತರ : C ನೋಡಿ, A ಸ್ವಾಮಿ, D ನಾವಿರೋದು, B ಹೀಗೆ

ಹಿಮಾನಿ ಯಾರು.?

ಹಿಮಾನಿ ಯಾರು.?

ಮೂರನೇ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ 21 ವರ್ಷದ ಹಿಮಾನಿಗೆ ಮದುವೆಯಾಗಿದೆ. ಐಎಎಸ್ ಮಾಡಬೇಕೆಂಬ ಆಸೆ ಇದ್ದು, ಇದಕ್ಕಾಗಿ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದರು. ಕೊನೆಗೆ 3 ಲಕ್ಷದ 20 ಸಾವಿರ ಗೆದ್ದುಕೊಂಡು ಹೋದರು.

More from Filmibeat

English summary
'Kannadada Kotyadhipathi season 3' contestant Himani has won 3 lakh 20 thousand rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X