'ಬಿಗ್ ಬಾಸ್'ನಲ್ಲಿ ಮಿತಿಮೀರಿದ ಸ್ಪರ್ಧಿಗಳ ರೋಮ್ಯಾನ್ಸ್: ವಿಡಿಯೋ ವೈರಲ್
Recommended Video
ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಶೋ 'ಬಿಗ್ ಬಾಸ್'. ಹಿಂದಿ ಬಿಗ್ ಬಾಸ್ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ಬಿಗ್ ಬಾಸ್ ಪ್ರಸಾರವಾಗುತ್ತಿದ್ದು ಎಲ್ಲಾ ಭಾಷೆಯಲ್ಲೂ ಖ್ಯಾತಿಗಳಿಸಿದೆ. ಹಿಂದಿಯಲ್ಲಿ ಬಿಗ್ ಬಾಸ್ ಸದ್ಯ 13ನೇ ಆವೃತ್ತಿ ನಡೆಯುತ್ತಿದೆ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ.
ಹಿಂದಿ ಬಿಗ್ ಬಾಸ್ ಸದ್ಯ ಸಖತ್ ಸದ್ದು ಮಾಡುತ್ತಿದ್ದು, ಬಿಗ್ ಮನೆಯಲ್ಲಿ ಸ್ಪರ್ಧಿಗಳ ರೋಮ್ಯಾನ್ಸ್ ಮಿತಿಮೀರಿದೆ. ಇಬ್ಬರು ಸ್ಪರ್ಧಿಗಳ ರೋಮ್ಯಾಂಟಿಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಗ್ ಮನೆಯ ಸ್ಪರ್ಧಿಗಳಾದ ಸಿದ್ಧಾರ್ಥ್ ಮತ್ತು ರಶ್ಮಿ ದೇಸಾಯಿ ವರ್ತನೆ ನೋಡಿ ಪ್ರೇಕ್ಷಕರು ಬೆರಗಾಗಿದ್ದಾರೆ.
ಅಂದ್ಹಾಗೆ ಇದು ಬಿಗ್ ಬಾಸ್ ನೀಡುವ ಟಾಸ್ಕ್. ಇಬ್ಬರು ದಿಲ್ ಸೇ ದಿಲ್ ಟಾಕ್ ಧಾರಾವಾಹಿಯ ಮೂಲಕ ಖ್ಯಾತಿಗಳಿಸಿದವರು. ಯಾವಾಗಲು ಕಿತ್ತಾಡುತ್ತಿದ್ದ ಇವರ ರೋಮ್ಯಾಂಟಿಗ್ ದೃಶ್ಯವನ್ನು ನೋಡಿ ಬಿಗ್ ಮನೆಯ ಸ್ಪರ್ಧಿಗಳು ಅಚ್ಚರಿ ಪಟ್ಟಿದ್ದಾರೆ. ಇನ್ನು ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು, ಬಿಗ್ ಬಾಸ್ ಇಂತಹ ಟಾಸ್ಕ್ ಎಲ್ಲಾ ನೀಡುತ್ತಾರಾ ಎಂದು ಬಿಗ್ ಬಾಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾದರು ಬಿಗ್ ಬಾಸ್ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ. ಈ ಬಾರಿಯ ಬಿಗ್ ಬಾಸ್ ಅನ್ನು ಇನ್ನು 5 ವಾರಗಳನ್ನು ಹೆಚ್ಚಿಸುವ ಪ್ಲಾನ್ ಮಾಡಿದ್ದಾರೆ ಆಯೋಜಕರು.


Click it and Unblock the Notifications











