For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಈ ಬಾರಿ ಮನೆ ಸೇರಲಿರುವ ಸ್ಪರ್ಧಿಗಳ ಖಚಿತ ಪಟ್ಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್‌ಬಾಸ್ ಮತ್ತೆ ಆರಂಭವಾಗಿದೆ. ಮರಾಠಿ, ತೆಲುಗು ಬಿಗ್‌ಬಾಸ್ ಪ್ರಸಾರ ಆರಂಭಿಸಿದ್ದು, ತಮಿಳು ಹಾಗೂ ಹಿಂದಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

  ಹಿಂದಿ ಬಿಗ್‌ಬಾಸ್‌ ಶೋ ಈ ಬಾರಿ ಭಾರಿ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಸಲ್ಮಾನ್ ಖಾನ್ ಸಂಭಾವನೆ. ಕಿರುತೆರೆ ಇತಿಹಾಸದಲ್ಲಿ ಯಾವ ನಟರೂ ಹಿಂದೆಂದೂ ಪಡೆಯದಷ್ಟು ದೊಡ್ಡ ಮೊತ್ತವನ್ನು ಸಲ್ಮಾನ್ ಖಾನ್ ಬಿಗ್‌ಬಾಸ್ 15 ನಿರೂಪಣೆ ಮಾಡಲು ಪಡೆಯುತ್ತಿದ್ದಾರೆ.

  ಅದು ಮಾತ್ರವೇ ಅಲ್ಲದೆ ಬಿಗ್‌ಬಾಸ್ 15 ನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳ ಕಾರಣಕ್ಕೂ ಸಹ ಹಿಂದಿ ಬಿಗ್‌ಬಾಸ್ ಸೀಸನ್ 15 ಬಹಳ ಸದ್ದು ಮಾಡುತ್ತಿದೆ. ಬಿಗ್‌ಬಾಸ್ 15ರ ಕೆಲವು ಪ್ರೋಮೊಗಳು ಈಗಾಗಲೇ ಬಿಡುಗಡೆ ಆಗಿದ್ದು, ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ತುಣುಕುಗಳು ಪ್ರೋಮೊ ನಲ್ಲಿ ಅಡಕಾವಾಗಿವೆ. ಅಲ್ಲದೆ ಕೆಲವು ಸ್ಪರ್ಧಿಗಳು ತಾವು ಶೋನಲ್ಲಿ ಭಾಗವಹಿಸುತ್ತಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

  ಬಿಗ್‌ಬಾಸ್ ಶೋನಲ್ಲಿ ಭಾಗವಹಿಸುತ್ತಿರುವ ಕೆಲವು ನಟ-ನಟಿಯರ ಹೆಸರುಗಳು ಈಗಾಗಲೇ ಬಹಿರಂಗವಾಗಿವೆ. ಪ್ರೋಮೋನಲ್ಲಿ ''ಬಿಗ್‌ಬಾಸ್ ಕಾಡಿಗೆ ಈ ಬಾರಿ ಬಹಳ ವಿಚಿತ್ರ ಪ್ರಾಣಿಗಳು ಬರಲಿವೆ ಎಂದು ಹೇಳಲಾಗಿದೆ'' ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ, ಸಿಂಭಾ ನಾಗ್‌ಪಾಲ್, ಅಫ್ಸಾನಾ ಖಾನ್ ಅವರುಗಳು ಈಗ ಬಿಡುಗಡೆ ಮಾಡಿರುವ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ.

  ಇವರನ್ನು ಹೊರತಾಗಿ ಉಮರ್ ರಿಯಾಜ್, ದೋನಲ್ ಬಿಷ್ಟ್, ಬಿಗ್‌ಬಾಸ್ ಒಟಿಟಿಯಿಂದ ಅವಕಾಶ ಗಿಟ್ಟಿಸಿಕೊಂಡ ಪ್ರತೀಕ್ ಸೆಹೆಜ್‌ಪಾಲ್, ನಿಶಾಂತ್ ಭಟ್, ರಾಖಿ ಸಾವಂತ್ ಪತಿ ರಿತೇಶ್, ವಿಶಾಲ್ ಕೋಟಿಯಾನ್, ಅಕಾಸಾ ಸಿಂಗ್ ಅವರುಗಳು ಸಹ ಭಾಗವಹಿಸಲಿದ್ದಾರೆ. ಇವರುಗಳ ಭಾಗವಹಿಸುವಿಕೆ ಇನ್ನಷ್ಟೆ ಖಾತ್ರಿ ಆಗಬೇಕಿದೆ.

  ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್ ಸ್ಟುಡಿಯೋ ಬಳಿ ರಿಯಾ ಚಕ್ರವರ್ತಿ ಕಾಣಿಸಿಕೊಂಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ರಿಯಾ, ಬಿಗ್‌ಬಾಸ್ ಶೋ ಆರಂಭದಂದು ನೃತ್ಯ ಪ್ರದರ್ಶನ ನೀಡಲು ಸ್ಟುಡಿಯೋಗೆ ಬಂದಿದ್ದರೊ ಅಥವಾ ಅವರೂ ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

  ಬಿಗ್‌ಬಾಸ್ 15 ಕಾಡಿನ ಥೀಮ್‌ನಲ್ಲಿದ್ದು ಅದೇ ಮಾದರಿಯಲ್ಲಿ ಪ್ರೋಮೊಗಳು ಬಿಡುಗಡೆ ಆಗಿವೆ. ಅಕ್ಟೋಬರ್ 2 ಕ್ಕೆ ಕಾರ್ಯಕ್ರಮದ ಮೊದಲ ಎಪಿಸೋಡ್ ಪ್ರಸಾರವಾಗಲಿದೆ.

  English summary
  Hindi Bigg Boss season 15 will start from October 02. Here is the probable list of contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X