ಬಿಗ್‌ಬಾಸ್ ಮನೆಯಲ್ಲೇ ಗರ್ಭಿಣಿಯಾದ ಸ್ಪರ್ಧಿ? ನಂಗ್ಯಾಕೆ ಹೇಳಲಿಲ್ಲ ಎಂದು ಗಂಡ ಶಾಕ್
ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಬಿಗ್‌ಬಾಸ್ ಶೋ ನಡೀತಿದೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ನಡೆಯುವ ಹಿಂದೆ ಶೋ ಅಂತೂ ಅತಿರೇಕಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನು ನಿಜಜೀವನದ ಗಂಡ- ಹೆಂಡತಿಯನ್ನು ಕೂಡ ಸ್ಪರ್ಧಿಗಳಾಗಿ ದೊಡ್ಮನೆ ಒಳಗೆ ಕಳುಹಿಸಲಾಗುತ್ತಿದ್ದು ಗಲಾಟೆ ತಾರಕಕ್ಕೇರುತ್ತಿದೆ.
ಇದೀಗ ಹಿಂದಿ ಬಿಗ್‌ಬಾಸ್ ವಿಚಿತ್ರ ಕಾರಣಕ್ಕೆ ಚರ್ಚೆಯಲ್ಲಿದೆ. ಬಿಗ್‌ಬಾಸ್ 16ನೇ ಸೀಸನ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ, ನಟಿ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಸ್ಪರ್ಧಿಗಳಾಗಿದ್ದಾರೆ. ಇಬ್ಬರೂ ಬಿಗ್‌ಬಾಸ್ ಮನೆಯೊಳಗೆ ಕಿತ್ತಾಡಿಕೊಂಡು ಬಹಳ ಚರ್ಚೆ ಆಗುತ್ತಿದ್ದರು. ಇದೀಗ ದಿಢೀರನೆ ಅಂಕಿತಾಗೆ ತಾನು ಗರ್ಭಿಣಿ ಆಗಿರುವ ಅನುಮಾನ ಮೂಡಿದೆ. ಈ ಬಗ್ಗೆ ಗಂಡನ ಜೊತೆ ಚರ್ಚಿಸಿರುವುದು ವೈರಲ್ ಆಗುತ್ತಿದೆ.

ಗಂಡ ವಿಕ್ಕಿ ಜೊತೆ ಅಂಕಿತಾ "ನನಗೆ ಅನಾರೋಗ್ಯ ಆದಂತೆ ಭಾಸವಾಗುತ್ತಿದೆ. ಪೀರಿಯಡ್ಸ್ ಕೂಡ ಮಿಸ್ ಆಗಿದೆ. ಮನೆಗೆ ಹೋಗಬೇಕು ಎನಿಸುತ್ತಿದೆ. ಹುಳಿ ತಿನ್ನಬೇಕು ಎನಿಸುತ್ತಿದೆ" ಎಂದು ಹೇಳಿದ್ದಾರೆ. ಕೂಡಲೇ ವಿಕ್ಕಿ "ನಿನಗೆ ಪೀರಿಯಡ್ಸ್ ಆಯ್ತು ಎಂದುಕೊಂಡೆ" ಎಂದಿದ್ದಾರೆ. ಆಗ ಅಂಕಿತಾ "ಇಲ್ಲ, ನನ್ನನ್ನು ಮೆಡಿಕಲ್ ರೂಮ್‌ಗೆ ಕರೆದು ಪ್ರೆಗ್ನೆನ್ಸಿ ಟೆಸ್ಟ್, ಬ್ಲಡ್ ಟೆಸ್ಟ್, ಯೂರಿನ್ ಟೆಸ್ಟ್ ಮಾಡಿದರು. ಆದರೆ ರಿಸಲ್ಟ್ ಏನು ಎನ್ನುವುದು ಮಾತ್ರ ಹೇಳಲಿಲ್ಲ. ನನಗೆ ಬಹಳ ಟೆನ್ಷನ್ ಆಗುತ್ತಿದೆ. ನನಗೇನು ಅರ್ಥವಾಗುತ್ತಿಲ್ಲ" ಎಂದಿದ್ದಾರೆ.
ಅಂಕಿತಾ ಮಾತು ಕೇಳಿ ಶಾಕ್ ಆದ ವಿಕ್ಕಿ "ನನಗ್ಯಾಕೆ ಹೇಳಲಿಲ್ಲ" ಎಂದು ಕೇಳಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸದ್ಯ ಇದೇ ವಿಚಾರ ಭಾರೀ ಸುದ್ದಿಯಾಗುತ್ತಿದೆ. ಒಂದು ವೇಳೆ ಅಂಕಿತಾ ಗರ್ಭಿಣಿ ಆಗಿದ್ದರೆ ಇದು ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ಎನ್ನುವಂತಾಗುತ್ತದೆ ಅಂತೆಲ್ಲಾ ಭಾರೀ ಚರ್ಚೆ ಆಗುತ್ತಿದೆ.

ಕಿರುತೆರೆ ನಟಿಯಾಗಿ ಅಂಕಿತಾ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ದಿವಂಗತ ನಟ ಸುಶಾಂತ್ ರಜಪೂತ್ ಜೊತೆ 'ಪವಿತ್ರ ರಿಸ್' ಧಾರಾವಾಹಿಯಲ್ಲಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಶೀಘ್ರದಲ್ಲೇ ಅವರು ಮದುವೆಯಾಗುತ್ತಾರೆ ಎನ್ನಲಾಗಿತ್ತು. ಬಳಿಕ ಇಬ್ಬರ ಲವ್ ಬ್ರೇಕಪ್ ಆಗಿತ್ತು.
3 ವರ್ಷಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗ, ಅಂಕಿತಾ ಹೆಸರು ಚರ್ಚೆಗೆ ಬಂದಿತ್ತು. ಇನ್ನು ಅಂಕಿತಾ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಬಳಿಕ ಅಂಕಿತಾ 2021ರಲ್ಲಿ ಉದ್ಯಮಿ ವಿಕ್ಕಿ ಜೈನ್ ಕೈ ಹಿಡಿದರು. 'ಮಣಿಕರ್ಣಿಕಾ', 'ಭಾಗಿ -3' ಹಾಗೂ 'ದಿ ಕಾಫಿ ಶಾಪ್' ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.
ಅಕ್ಟೋಬರ್ 15ರಿಂದ ಬಿಗ್‌ಬಾಸ್ ಹೊಸ ಸೀಸನ್ ಶುರುವಾಗಿದೆ. ಅಭಿಷೇಕ್, ಐಶ್ವರ್ಯಾ, ಅಂಕಿತಾ, ಇಶಾ, ಅರುಣ್, ಅನುರಾಗ್, ಜಿಂಗಾ, ಖಾಂನ್ಜಾದಿ, ಮನ್ನಾರ, ಮುನಾವರ್, ರಿಂಕು, ನವಿದ್, ನೈಲ್, ಸಮರ್ಥ್, ಸನಾ, ಸನ್ನಿ, ವಿಕ್ಕಿ, ಮನಸ್ವಿ, ಸೋನಿಯಾ ಸೇರಿ 19 ಜನ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಈಗಾಗಲೇ ಸೋನಿಯಾ, ಮನಸ್ವಿ ಈಗಾಗಲೇ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಸದ್ಯ ವೀಕೆಂಡ್ ಬಂದಿದ್ದು ಅಂಕಿತಾ ಪ್ರೆಗ್ನೆನ್ಸಿ ಟೆಸ್ಟ್ ಬಗ್ಗೆ ಸಲ್ಮಾನ್ ಖಾನ್ ಖಾನ್ ವೇದಿಕೆಯಲ್ಲಿ ಚರ್ಚಿಸುತ್ತಾರೆ. ವೀಕೆಂಡ್ ಶೋನಲ್ಲಿ ಈ ಟಾಪಿಕ್ ಚರ್ಚೆ ಬರುತ್ತಾ? ಇಲ್ವಾ? ಎನ್ನುವ ಚರ್ಚೆ ನಡೀತಿದೆ. 14ನೇ ಬಾರಿಗೆ ಸಲ್ಮಾನ್ ಖಾನ್ ಬಿಗ್‌ಬಾಸ್ ಶೋ ನಡೆಸಿಕೊಡುತ್ತಿದ್ದಾರೆ.


Click it and Unblock the Notifications











