ಕನ್ನಡದ 'ಸೀತಾರಾಮ' ಹಿಂದಿಯಲ್ಲೂ ಹಿಟ್ ಆಯ್ತಾ? ವೀಕ್ಷಕರ ರೆಸ್ಪಾನ್ಸ್ ಹೇಗಿದೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ ಎಲ್ಲರಿಗೂ ಮನರಂಜನೆ ನೀಡುತ್ತಿದೆ. ಟಿ ಆರ್ ಪಿ ಯಲ್ಲೂ ಸಖತ್ ಮುಂದಿರುವ ಈ ಧಾರಾವಾಹಿಗಳು ಬೇರೆ ಧಾರಾವಾಹಿಗಳಿಗೆ ಒಳ್ಳೆ ಪೈಪೋಟಿ ನೀಡಿದೆ.
ಈಗಂತೂ ಧಾರಾವಾಹಿಯಲ್ಲಿ ಕಥೆ ಮತ್ತಷ್ಟು ರೋಚಕವಾಗಿದೆ. ನಾಯಕಿ ಸೀತಾಗೆ ನಾಯಕ ರಾಮ ಪ್ರಪೋಸ್ ಮಾಡಿ ಸೀತಾ ಮನಸಾರೆ ಒಪ್ಪಿಯೂ ಆಗಿದೆ. ಸದ್ಯಕ್ಕೆ ಹೋಳಿಯ ಸಂಭ್ರಮದಲ್ಲಿರುವ ಈ ಜೋಡಿ ಕಿರುತೆರೆ ಪ್ರೇಕ್ಷಕರನ್ನು ಚೆನ್ನಾಗಿಯೇ ಮೋಡಿ ಮಾಡಿದೆ.

ಈಗ ವಿಶೇಷವೆಂದರೆ ಇದೇ 'ಸೀತಾರಾಮ' ಧಾರಾವಾಹಿ ಹಿಂದಿಗೆ ಡಬ್ಬಾಗುತ್ತಿದೆ. ಹೌದು ಕನ್ನಡದ 'ಸೀತಾರಾಮ' ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಅವರು ನಾಯಕ ನಟಿಯಾಗಿ ಹಾಗೂ ನಟ ಗಗನ್ ಚಿನ್ನಪ್ಪ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ನಟ ಅಶೋಕ್, ಪೂಜಾ ಲೋಕೇಶ್ ಇತ್ಯಾದಿ ನಟ ನಟಿಯರು ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಗೆಯಲ್ಲಿದ್ದಾರೆ. ಬಾಲ ನಟಿಯಾಗಿ ರೀತು ಸಿಂಗ್ ಕೂಡ ತನ್ನ ಮುದ್ದಾದ ಮಾತುಗಳಿಂದ ಜನರನ್ನು ಧಾರವಾಹಿ ಕಡೆಗೆ ಆಕರ್ಷಿಸುತ್ತಿದ್ದಾಳೆ.
ಈ ಎಲ್ಲಾ ಕಾರಣಗಳಿಂದ ಟಿ ಆರ್ ಪಿ ಅಲ್ಲೂ ಬಹಳ ಮೇಲಿರುವ ಈ ಧಾರಾವಾಹಿಯನ್ನು ಹಿಂದಿಗೆ ರಿಮೇಕ್ ಮಾಡುವ ನಿರ್ಧಾರ ಮಾಡಿರಬಹುದು. "ಮೇ ಹೂ ಸಾಥ್ ತೇರೆ" ಎಂಬ ಟೈಟಲ್ ಮೂಲಕ ಹಿಂದಿಯಲ್ಲಿ ಬರುತ್ತಿರುವ ಈ ಧಾರಾವಾಹಿ ಪ್ರೋಮೊ ಬಿಡುಗಡೆಯಾಗಿದ್ದು ಕನ್ನಡದಲ್ಲಿ ಮಾಡಿದಂತೆಯೇ ಹಿಂದಿ ಪ್ರೋಮೊ ಕೂಡ ಇದೆ. ಈ ಮೂಲಕ ಹಿಂದಿ ಪ್ರೇಕ್ಷಕರನ್ನು ಮುಟ್ಟುವ ಪ್ರಯತ್ನವಾಗಿದೆ. ಸದ್ಯಕ್ಕೆ ಪ್ರೋಮೊ ಅಷ್ಟೇ ಬಿಟ್ಟಿದ್ದು, ಪ್ರಸಾರ ಯಾವಾಗ ಅಂತ ಹೇಳಿಲ್ಲ.

ಹಿಂದಿಯಲ್ಲಿ ನಟರಾದ ಕರಣ್ ವೊಹ್ರಾ ಹಾಗೂ ಉಲ್ಕ ಗುಪ್ತ ಅವರು ಈ ಮುಖ್ಯ ಪಾತ್ರವನ್ನು ನಿಭಾಯಿಸಲಿದ್ದಾರೆ. ಸಣ್ಣ ಬದಲಾವಣೆ ಎಂದರೆ 'ಸೀತಾರಾಮ' ಧಾರಾವಾಹಿಯಲ್ಲಿರುವ ಸಿಹಿ ಪಾತ್ರದ ಬದಲು ಹಿಂದಿಯಲ್ಲಿ ಒಬ್ಬ ಪುಟ್ಟ ಹುಡುಗನ ಪಾತ್ರ ನೀಡಲಾಗಿದೆ. ವಿಶೇಷ ವಿಚಾರವೆಂದರೆ, ಕನ್ನಡದ 'ಸೀತಾರಾಮ' ಧಾರಾವಾಹಿ ಮೂಲತಃ ಮರಾಠಿಯ ರಿಮೇಕ್.
ಹೌದು! 'ಮಾಶಿ ತುಜಿ ರೇಶಿಮಗತ್' ಅನ್ನೋ ಮರಾಠಿ ಧಾರಾವಾಹಿಯಿಂದ ಈ ಕಥೆಯನ್ನು ಆಯ್ದು ಕನ್ನಡದಲ್ಲಿ 'ಸೀತಾರಾಮ' ಎಂದು ಹೆಸರಿಟ್ಟು ಧಾರಾವಾಹಿಯನ್ನು ರಿಮೇಕ್ ಮಾಡಲಾಗಿತ್ತು. ಒಟ್ಟಿನಲ್ಲಿ ಹೇಳುವುದಾದರೆ 'ಸೀತಾರಾಮ' ಧಾರಾವಾಹಿಯ ಕಥಾ ಹಂದರ ಬಹಳ ಆಸಕ್ತಿದಾಯಕವಾಗಿದ್ದು, ಇದು ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಯಶಸ್ಸು ಕಾಣುವ ಲಕ್ಷಣವಿದೆ. ಸದ್ಯಕ್ಕೆ ಕನ್ನಡದ ವೀಕ್ಷಕರಂತೂ 'ಸೀತಾರಾಮ' ಧಾರಾವಾಹಿಯನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ಮುಂಬರುವ ತಿರುವುಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications











