Mrinal Navell: ಅವಕಾಶ ಬೇಕು ಅಂದ್ರೆ ರಾತ್ರಿಯಿಡೀ ತನ್ನೊಟ್ಟಿಗೆ ಚಿಲ್ ಮಾಡ್ಬೇಕು ಎಂದ: ಕಹಿ ಅನುಭವ ಬಿಚ್ಚಿಟ್ಟ ಮೃಣಾಲ್
ಪಾತ್ರಕ್ಕಾಗಿ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಕರೆಯುವ ಕಾಮುಕರು ಚಿತ್ರರಂಗದಲ್ಲಿದ್ದಾರೆ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತದೆ. ಸಾಕಷ್ಟು ನಟ-ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಮೀಟು ಅಭಿಮಾನ ಶುರುವಾದ ಬಳಿಕ ಇದು ಕೊಂಚ ಕಮ್ಮಿ ಆಗಿದೆ ಎನ್ನುವವರು ಇದ್ದಾರೆ.
ತಾನು ಸಹ ಕಾಸ್ಟಿಂಗ್ ಕೌಚ್ ಎದುರಿಸಿದ ಎಂದಿ ಬಾಲಿವುಡ್ ಕಿರುತೆರೆ ನಟಿ ಮೃಣಾಲ್ ನಾವೆಲ್ ಹೇಳಿದ್ದಾರೆ. ಜಾಹೀರಾತುವೊಂದರ ಅವಕಾಶ ಕೊಡಲು ಕಾಂಪ್ರಮೈಸ್ ಆಗಲು ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ. "ಕಳೆದ ವರ್ಷ ಈ ಘಟನೆ ನಡೀತು. ಆಗ ನಾನು ಟಿವಿ ಜಾಹೀರಾತಿಗಾಗಿ ಆಡಿಷನ್‌ಗೆ ಹೋಗಿದ್ದೆ. ಈ ವೇಳೆ ಒಬ್ಬ ವ್ಯಕ್ತಿ, ಇಬ್ಬರನ್ನು ಶಾರ್ಟ್ ಲಿಸ್ಟ್ ಮಾಡಿದ್ದೀವಿ. ಅದರಲ್ಲಿ ನೀವು ಇದ್ದೀರಾ ಎಂದ"

"ನೀವು ಒಂದು ವೇಳೆ ಆಯ್ಕೆ ಆದರೆ ಕಾರ್ರಿಕ್ ಆರ್ಯನ್ ಜೊತೆ ಜಾಹೀರಾತಿನಲ್ಲಿ ನಟಿಸುವ ಅವಕಾಶ ಸಿಗಲಿದೆ ಎಂದ. ಮರುದಿನವೇ ಒಂದು ಮೆಸೇಜ್ ಬಂತು. ನನಗೆ ಆ ಅವಕಾಶ ಸಿಗಬೇಕು ಎಂದರೆ ಕಾಂಪ್ರಮೈಸ್ ಆಗಬೇಕು ಎಂದ. ನನಗೆ ಆಗಲೇ ವಿಷಯ ಅರ್ಥವಾಗಿ ಹೋಗಿತ್ತು. ಆದರೂ ಆತನ ನನ್ನಿಂದ ಏನು ಬಯಸುತ್ತಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದುಕೊಂಡೆ"
"ಏನು ಕಾಂಪ್ರಮೈಸ್ ಬೇಕು? ಎಂದು ಕೇಳಿದೆ. ಬೇರೆ ಏನು ಇಲ್ಲ. ಸುಮ್ಮನೆ ಭೇಟಿಯಾಗಿ ರಾತ್ರಿಯಿಡೀ ಚಿಲ್ ಆಗುವುದು ಅಷ್ಟೇ, ಅಲ್ಲೇ ಕಾಂಟ್ರಾಕ್ಟ್ ಮೇಲೆ ಸಹಿ ಹಾಕಬಹುದು. ನನಗೆ ಮೈಯೆಲ್ಲಾ ಉರಿದು ಹೋಯಿತು. ಬಾಯಿಗೆ ಬಂದಂತೆ ಬೈದೆ. ಕೂಡಲೇ ಆತ ಆ ಮೆಸೇಜ್ ಎಲ್ಲಾ ಡಿಲೀಟ್ ಮಾಡಿಕೊಂಡ. ನನಗೆ ಹೀಗೆ ಅಡ್ಡದಾರಿಯಲ್ಲಿ ನಟಿಸೋ ಅವಶ್ಯಕತೆ ಇಲ್ಲ ಎಂದೆ. ಆದರೆ ಆತ, ಇದು ಸುವರ್ಣಾವಕಾಶ, ಕಳೆದುಕೊಳ್ಳಬೇಡ ಎಂದ"
"ನಾನು ಸಹನೆ ಕಳೆದುಕೊಂಡು ಬಾಯಿಗೆ ಬಂದಂತೆ ಬೈದುಬಿಟ್ಟೆ. ನಿಮ್ಮ ಟಿವಿ ಕಲಾವಿದರಿಗೆ ಸಿನಿಮಾಗಳಿಗೆ ಹೇಗೆ ಆಯ್ಕೆ ನಡೆಯುವುದು ಗೊತ್ತಿಲ್ಲ. ಇಲ್ಲಿ ಪ್ರಕ್ರಿಯೆ ಇದೇ ರೀತಿ ನಡೆಯುತ್ತದೆ. ಎಲ್ಲರೂ ಇದೇ ರೀತಿ ಮಾಡಬೇಕು. ನೀವು ಒಪ್ಪಿಕೊಂಡರೆ ನಾವು ನಿಮಗೆ ಸಿನಿಮಾ ಅವಕಾಶ ಕೂಡ ನೀಡುತ್ತೇವೆ. ನಾನು ಆತನ ನಂಬರ್ ಬ್ಲಾಕ್ ಮಾಡಿದೆ. ಆತನ ಮಾತು ಕೇಳಲಿಲ್ಲ"
ಪ್ರತಿಯೊಬ್ಬರು ಹೀಗೆ ನೇರವಾಗಿ ಕೇಳುವುದಿಲ್ಲ. ಕೆಲವರು ಪರೋಕ್ಷವಾಗಿ ಹಿಂಟ್ ಕೊಡುತ್ತಾರೆ. ಇನ್ನು ಕೆಲವರು ಹೀಗೆ ಕೇಳುತ್ತಾರೆ. ಅದಕ್ಕೆ ನನಗೆ ಆ ಘಟನೆ ನೆನಪಿನಲ್ಲಿ ಉಳಿದುಬಿಟ್ಟಿದೆ ಎಂದು ನಟಿ ಮೃಣಾಲ್ ನಾವೆಲ್ ಹೇಳಿದ್ದಾರೆ.
ಇತ್ತೀಚಿನ ಮಲಯಾಳಂನ ಹಿರಿಯ ನಟಿ ರೇವತಿ ಇಂತಹ ಸನ್ನಿವೇಶಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದಕ್ಕೆ ಮೊಬೈಲ್ ಫೋನ್ ಹಾಗೂ ಮೆಸೇಜ್‌ಗಳೇ ಕಾರಣ ಎಂದಿದ್ದರು. "80, 90ರ ದಶಕಗಳಲ್ಲಿ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ. ಮೊಬೈಲ್ ಫೋನ್ ಹಾಗೂ ಮೆಸೇಜ್‌ಗಳಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಯಾಕಂದರೆ ಒಬ್ಬ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೀನು ನನಗೆ ಬೇಕು, ನನ್ನೊಟ್ಟಿಗೆ ಇರು ಎಂದು ಕೆಟ್ಟ ಉದ್ದೇಶದಿಂದ ಕೇಳುವುದು ಕಷ್ಟ"
"ಇವತ್ತಿನ ಕಾಲದಲ್ಲಿ ಒಂದು ಮಸೇಜ್ ಮಾಡಿ ಬಂದು ಭೇಟಿ ಮಾಡು, ಕಾಫಿಗೆ ಹೋಗೋಣ ಅಂತಹ ಕೇಳಬಹುದು. ಈ ಕಾಲದಲ್ಲಿ ಮೊಬೈಲ್ ಫೋನ್‌ಗಳಿಂದಲೇ ಹೆಚ್ಚು ಸಮಸ್ಯೆಗಳು ಬರುತ್ತದೆ. ಮೊಬೈಲ್ ಫೋನ್‌ಗಳಿಂದ ಎಮೋಜಿ ಬಳಸುವುದು ಹೆಚ್ಚಾಗಿದೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಎಮೋಜಿಗಳ ಅರ್ಥ ಸರಿಯಾಗಿ ಅರ್ಥವಾಗುವುದಿಲ್ಲ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಳಸಬೇಕು" ಎಂದು ರೇವತಿ ಸಲಹೆ ನೀಡಿದ್ದರು.


Click it and Unblock the Notifications











