ಕಿರುತೆರೆ ನಟಿಯ ಪುತ್ರನ ಶವ ಪತ್ತೆ: ಡ್ರಗ್ ಓವರ್‌ಡೋಸ್ ಶಂಕೆ
ಮೀರತ್: ಇತ್ತೀಚೆಗೆ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚಾಗಿ ಕಾಣ ಸಿಗುತ್ತಿದೆ. ಈಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಕಿರುತೆರೆ ನಟಿಯ 14 ವರ್ಷದ ಪುತ್ರ ಶವ ಪತ್ತೆಯಾಗಿದ್ದು, ಡ್ರಗ್ ಓವರ್ ಡೋಸ್‌ನಿಂದಲೇ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗುತ್ತಿದೆ.
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಪ್ನ ಸಿಂಗ್ ಗ್ಯಾಂಗ್‌ವಾರ್. 'ಕ್ರೈಂ ಪೆಟ್ರೋಲ್', 'ಬಾಬಿಜಿ ಘರ್ ಪರ್ ಹೇ' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಇವರ 14 ವರ್ಷದ ಪುತ್ರ ಸಾಗರ್ ಗ್ಯಾಂಗ್‌ವಾರ್ ಶವ ಸೋಮವಾರ ಬೆಳಗ್ಗೆ ಪತ್ತೆಯಾಗುತ್ತು. ಕ್ರಿಕೆಟ್ ಆಡುವುದಕೆಂದು ಸ್ನೇಹಿತರ ಜೊತೆ ತೆರಳಿದ್ದ ಸಾಗರ್ ಮನೆಗೆ ಹಿಂತಿರುಗಿರಲಿಲ್ಲ.

ಸಾಗರ್ ಗ್ಯಾಂಗ್‌ವಾರ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವುದಕ್ಕೆಂದು ಮನೆಯಿಂದ ತೆರಳಿದ್ದ. ಆದರೆ, ಎರಡು ದಿನಗಳ ಬಳಿಕ ಸಾಗರ್ ಶವ ಬರೇಲಿಯ ಅಡಲಾಖಿಯಾ ಗ್ರಾಮದಲ್ಲಿ ಪತ್ತೆಯಾಗಿದೆ. ಅನುಜ್ ಸಿಂಗ್ ಚೌಧರಿ ಹಾಗೂ ಸನ್ನಿ ಎಂಬ ಇಬ್ಬರು ಸ್ನೇಹಿತರೊಂದಿಗೆ ಸಾಗರ್ ಗ್ಯಾಂಗ್‌ವಾರ್ ಕ್ರಿಕೆಟ್ ಆಡುವುದಕ್ಕೆ ತೆರಳಿದ್ದರು. ಹೀಗಾಗಿ ಇಬ್ಬರು ಸ್ನೇಹಿತರನ್ನು ಕರೆದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಇತ್ತ ನಟಿ ಸಪ್ನ ಸಿಂಗ್ ಚೌಧರಿ ಪುತ್ರನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರ ಸಾಗರ್ ಗ್ಯಾಂಗ್‌ವಾರ್ ದೇಹದ ಮೇಲೆ ಹಲ್ಲೆಯ ಗುರುತುಗಳು ಇವೆ. ಪಕ್ಕೆಲುಬು ಮುರಿದಿದೆ ಎಂದು ಆರೋಪ ಮಾಡಿದ್ದಾರೆ. ಆದರೆ, ಸಪ್ನ ಸಿಂಗ್ ಗ್ಯಾಂಗ್‌ವಾರ್ ಮಾಡಿರುವ ಆರೋಪವನ್ನು ಶವ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ತಳ್ಳಿ ಹಾಕಿದ್ದಾರೆ.
ಕಿರುತೆರೆ ನಟಿಯ ಪುತ್ರನ ಸಾವಿಗೆ ಸರಿಯಾದ ಕಾರಣವೇನು ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳಿಸಿದ್ದು ವರದಿ ಬರಬೇಕಿದೆ. ಮಧ್ಯದಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಸೇವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ದೇಹದ ಮೇಲೆ ಯಾವುದೇ ರೀತಿಯ ಹಲ್ಲೆಯಾಗಿಲ್ಲ ಎಂದು ಮಾಧ್ಯಮಗಳಿಗೆ ವರದಿ ನೀಡಿದ್ದಾರೆ.
ಕಿರುತೆರೆ ನಟಿಯ ಪುತ್ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ನೇಹಿತರ ಕರೆಯ ಮೇಲೆ ಕ್ರಿಕೆಟ್ ಆಡುವುದಕ್ಕೆ ಹೋಗಿದ್ದ. ಆ ರಾತ್ರಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಸ್ನೇಹಿತರಿಗೆ ಕರೆ ಮಾಡಿದಾಗ, ತನ್ನ ಮನೆಯಲ್ಲಿಯೇ ಮಲಗಿರುವುದಾಗಿ ಹೇಳಿದ್ದರು. ಭಾನುವಾರ ಸ್ನೇಹಿತರ ಸಾಗರ್ ಅನ್ನು ಡ್ರಾಪ್ ಮಾಡಿದ್ದಾಗಿ ಹೇಳಿದ್ದರು. ಆದರೆ, ಭಾನುವಾರ ಕೂಡ ಮನೆಗೆ ಬಂದಿರಲಿಲ್ಲ. ಹೀಗಾಗಿ ಭಾನುವಾರ ಹುಡುಕಾಟ ನಡೆಸಿದರೂ ಸಿಗದೇ ಇದ್ದಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಆದರೆ, ಕಿರಿತೆರೆ ನಟಿ ತಮ್ಮ ಮಗನ ಸಾವಿನ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗನನ್ನು ಯಾರೋ ಶೂಟ್ ಮಾಡಿದ್ದಾರೆ. ಅವನ ಕೈ ಹಾಗೂ ಕಾಲು ಮುರಿದಿದ್ದಾರೆ. ಇಷ್ಟೊಂದು ಕ್ರೂರವಾಗಿ ತನ್ನ ಮಗನನ್ನು ಸಾಯಿಸುವಂತಹದ್ದು ಏನು ಮಾಡಿದ್ದ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ. ಆದರೆ, ಪೊಲೀಸರು ಮಾತ್ರ ದೇಹದ ಮೇಲೆ ಹಲ್ಲೆಗಳು ಆಗಿಲ್ಲೆ ಎಂದೇ ಹೇಳುತ್ತಿದ್ದಾರೆ.


Click it and Unblock the Notifications











