Bigg Boss 17 Finale: ಕಾಮಿಡಿಯನ್ ಮುನಾವರ್ ಫಾರುಕಿ ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಗುತ್ತಂತೆ ಬಿಗ್ ಬಾಸ್ ಟ್ರೋಫಿ!
ಬಿಗ್ ಬಾಸ್ ಹಿಂದಿ ಸೀಸನ್ 17 ಗ್ರ್ಯಾಂಡ್ ಫಿನಾಲೆ ಭಾನುವಾರ (28 ಜನವರಿ) ರಂದು ನಡೆಯಲಿದೆ ಈ ಮೂಲಕ ಬಿಗ್ ಬಾಸ್ ಕೊನೆಗೊಳ್ಳಲಿದೆ. ಕಾಮಿಡಿಯನ್ ಮುನಾವರ್ ಫಾರುಕಿ, ನಟಿ ಮನ್ನಾರಾ ಚೋಪ್ರಾ, ನಟಿ ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟೆ ಮತ್ತು ನಟ ಅಭಿಷೇಕ್ ಕುಮಾರ್ ಈ ಬಾರಿಯ ಬಿಗ್ ಬಾಸ್ 17 ರ ಟಾಪ್ 5 ಫೈನಲಿಸ್ಟ್‌ಗಳು.
ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಬಿಗ್ ಬಾಸ್ 17 ರ ವಿಜೇತರ ಹೆಸರನ್ನು ನಟ ಸಲ್ಮಾನ್ ಖಾನ್ ಘೋಷಿಸಲಿದ್ದಾರೆ. ಆದರೆ, ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿನ್ನರ್ ಇವರೇ ಎಂದು ಹೇಳಲಾಗುತ್ತಿದೆ. ಇನ್ನು ಯಾರು ಟ್ರೋಫಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಬಗ್ಗೆ ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು, ಇದರಲ್ಲಿ ಮುನಾವರ್ ಫಾರೂಕಿ ಎಲ್ಲರಿಗಿಂತ ಮುಂದಿದ್ದಾರೆ ಎನ್ನಲಾಗಿದೆ.

ಮುನ್ನಾವರ್ ಫಾರುಕಿಯೇ ಬಿಗ್ ಬಾಸ್ ವಿನ್ನರ್!?
ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಹಿಂದಿ ಸೀಸನ್ 17 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ವಿಜೇತರ ಹೆಸರನ್ನು ಕೆಲವೇ ಘಂಟೆಗಳಲ್ಲಿ ಘೋಷಿಸಲಿದ್ದಾರೆ. ಇದಕ್ಕೂ ಮೊದಲು ಹಿಂದುಸ್ತಾನ್ ಟೈಮ್ಸ್ ಟ್ವಿಟರ್ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ಓದುಗರ ಮನದಲ್ಲಿ ಏನಿದೇ ಎಂಬುದನ್ನು ತಿಳಿಯಲು ಪ್ರಯತ್ನಿಸಿದೆ.
ಹಿಂದುಸ್ತಾನ್ ಟೈಮ್ಸ್ ಓದುಗರು ಮುನಾವರ್ ಫಾರುಕಿ ಅವರನ್ನು ಈ ಸೀಸನ್‌ನ ವಿಜೇತ ಎಂದು ವೋಟ್ ಮಾಡಿದ್ದಾರೆ. ಕಾಮಿಡಿಯನ್ ಮುನಾವರ್ ಫಾರುಕಿ, ನಟಿ ಅಂಕಿತಾ ಲೋಖಂಡೆ ಅವರನ್ನು 61% ಮತಗಳಿಂದ ದೂರವಿಟ್ಟಿದ್ದಾರೆ. ಈ ಸಮೀಕ್ಷೆಯಲ್ಲಿ ಅಂಕಿತಾ ಲೋಖಂಡೆ 19.8% ಮತ್ತು ಅಭಿಷೇಕ್ ಕುಮಾರ್ 12.4% ಮತಗಳನ್ನು ಪಡೆದಿದ್ದಾರೆ.
ಕ್ಷಣದಲ್ಲೇ ಬದಲಾದ ಸಮೀಕ್ಷೆ ತೀರ್ಪು!
ಭಾನುವಾರ ಬೆಳಗ್ಗೆಯಿಂದ ನಟಿ ಅಂಕಿತಾ ಲೋಖಂಡೆ 48% ಮತಗಳನ್ನು ಪಡೆದಿದ್ದರು. ಆ ಸಮಯದಲ್ಲಿ ಮುನಾವರ್ ಫಾರುಕಿ ಅವರು 28% ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರು. ಅಭಿಷೇಕ್ ಕುಮಾರ್ 14% ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರು ಮತ್ತು ಮನ್ನಾರಾ ಚೋಪ್ರಾ 9.8% ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಐದನೇ ಫೈನಲಿಸ್ಟ್ ಅರುಣ್ ಮಾಶೆಟ್ಟೆ. ಆದರೆ, ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ಬದಲಾಗಿತ್ತು.
ಹುಟ್ಟುಹಬ್ಬದಂದು ಮುನಾವರ್ ಫಾರುಕಿಗೆಯತ್ತಲ್ಲೇ ಎಲ್ಲರ ಚಿತ್ತ!
ಹಲವು ಬಿಗ್ ಬಾಸ್ ಫ್ಯಾನ್ಸ್ ಪುಟಗಳಿಂದ ಟ್ವಿಟರ್‌ನಲ್ಲಿನ ಇತರ ಸಮೀಕ್ಷೆಗಳು ಮುನಾವರ್ ಫಾರುಕಿಯೇ ವಿನ್ನರ್ ಎನ್ನುತ್ತಿವೆ. ಈಗಾಗಲೇ ಲಾಕ್ ಅಪ್ ಸೀಸನ್‌ನ ವಿನ್ನರ್ ಆಗಿರುವ ಅವರ ಆತ್ಮವಿಶ್ವಾಸವನ್ನು ಕೆಣಕಲು ಬಿಗ್ ಬಾಸ್ ಮನೆಗೆ ಮಾಜಿ ಗರ್ಲ್‌ಫ್ರೆಂಡ್‌ಗಳಾದ ನಾಜಿಲಾ ಮತ್ತು ಆಯೇಷಾ ಖಾನ್ ಅವರನ್ನು ಕಳುಹಿಸಲಾಗಿತ್ತು. ಆದರೂ ಅವರು ರದೆಗುಂದದೇ ದೊಡ್ಮನೆಯಲ್ಲಿ ಆಟವಾಡಿದ್ದರು.
ನಟಿ ಅಂಕಿತಾ ಲೋಖಂಡೆ ಪಯಣ
ನಟಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ದೊಡ್ಮನೆಯಲ್ಲಿ ಮ್ಮ ಗಂಡ- ಹೆಂಡತಿ ಜಗಳದಿಂದ ಸಕತ್ ಸುದ್ದಿಯಲ್ಲಿದ್ದರು. ಆರನೇ ಫೈನಲಿಸ್ಟ್ ಆಗಿದ್ದ ವಿಕ್ಕಿ ಜೈನ್ ಫೈನಲ್ ಎಂಟ್ರಿಯಾಗುವ ಮುನ್ನ ಎಲಿಮಿನೇಟ್ ಆಗಿದ್ದರು. ಈಗ ಅಂಕಿತಾ ಬಿಗ್ ಬಾಸ್ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications










