twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್‌'ನ 'ದೊಡ್ಡಣ್ಣ' ಎಲ್ಲಿಯವನು ಗೊತ್ತೇ?: ಜನಪ್ರಿಯ ಕಾರ್ಯಕ್ರಮದ ಇತಿಹಾಸ ಇಲ್ಲಿದೆ...

    |

    ಧಾರಾವಾಹಿ, ಸಿನಿಮಾ, ಚರ್ಚೆ, ಸಂಗೀತ, ಹಾಸ್ಯ ಕಾರ್ಯಕ್ರಮಗಳು ಮುಂತಾದವುಗಳಿಂದ ಕೂಡಿದ್ದ ಕಿರುತೆರೆ ಲೋಕವನ್ನು ಬದಲಿಸಿದ್ದು, ರಿಯಾಲಿಟಿ ಶೋಗಳು. ಈ ರಿಯಾಲಿಟಿ ಶೋಗಳ ಸ್ವರೂಪವನ್ನು ಮತ್ತಷ್ಟು ರೋಚಕಗೊಳಿಸುವಂತೆ ಪ್ರೇರಣೆ ನೀಡಿದ್ದು 'ಬಿಗ್ ಬಾಸ್'.

    Recommended Video

    ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

    ವಿವಿಧ ರಂಗಗಳಲ್ಲಿ ಹೆಸರು ಮಾಡಿದ ಸೆಲೆಬ್ರಿಟಿಗಳು, ವಿವಾದಿತ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಸೇರಿಸಿ, ಅವರ ವೈಯಕ್ತಿಕ ಬದುಕನ್ನು ಅನಾವರಣಗೊಳಿಸುವ ಜತೆಯಲ್ಲಿ ಅವರ ನಡುವಿನ ಕಿತ್ತಾಟ, ಗೆಳೆತನ, ಪ್ರೀತಿ ಪ್ರೇಮದ ಪ್ರಸಂಗಗಳು, ಆಟ, ತುಂಟತನ, ತಮಾಷೆ ಮುಂತಾದವುಗಳನ್ನು ಜನರ ಮುಂದಿಡುವ ಈ ಕಾರ್ಯಕ್ರಮ ಬಹಳ ಜನಪ್ರಿಯ. ಮೂರೂವರೆ ತಿಂಗಳು ಪ್ರತಿ ದಿನ 'ಬಿಗ್ ಬಾಸ್' ಮನೆಯ ಚಟುವಟಿಕೆಗಳ ಎಡಿಟೆಡ್ ವಿಡಿಯೋಗಳನ್ನು ನೋಡಲು ವಾರಾಂತ್ಯದಲ್ಲಿ ಸ್ಟಾರ್ ಕಲಾವಿದರ ನಿರೂಪಣೆಯಲ್ಲಿ ವಾರದ ಇಡೀ ದಿನ ನಡೆದ ಚಟುವಟಿಕೆಗಳ ಆತ್ಮಾವಲೋಕನ, ಎಲಿಮಿನೇಷನ್ ಮುಂತಾದವುಗಳ ಮಾತುಕತೆಗಾಗಿ ಲಕ್ಷಾಂತರ ಮಂದಿ ಕಾದು ಕೂರುತ್ತಾರೆ. ಮುಂದೆ ಓದಿ...

    ರಿಯಾಲಿಟಿ ಶೋ: ಖಾಸಗಿ ಬದುಕು ಮನರಂಜನೆಯ ಸರಕು ಆಗಿದ್ದು ಇಲ್ಲಿಂದ...ರಿಯಾಲಿಟಿ ಶೋ: ಖಾಸಗಿ ಬದುಕು ಮನರಂಜನೆಯ ಸರಕು ಆಗಿದ್ದು ಇಲ್ಲಿಂದ...

    ಬಿಗ್ ಬಾಸ್ ಮೂಲ ಯಾವುದು?

    ಬಿಗ್ ಬಾಸ್ ಮೂಲ ಯಾವುದು?

    'ಬಿಗ್ ಬಾಸ್' ಮೊದಲೇ ಸಿದ್ಧಪಡಿಸಿದ ಕಥೆಯಂತೆಯೇ ನಡೆಯುತ್ತದೆ. ಜನರನ್ನು ಸೆಳೆಯುವ ಸಲುವಾಗಿಯೇ ಇಲ್ಲಿ ಜಗಳಗಳು, ರೊಮ್ಯಾನ್ಸ್‌ಗಳು ನಡೆಯುತ್ತವೆ ಎಂಬ ಆರೋಪಗಳಿವೆ. ಹೀಗಿದ್ದರೂ ಅದರ ಜನಪ್ರಿಯತೆಯೇನೂ ಕಡಿಮೆಯಾಗಿಲ್ಲ. ಅದರಲ್ಲೂ ವಾರಾಂತ್ಯದಲ್ಲಿ ತಮ್ಮ ನೆಚ್ಚಿನ ನಟನ ನಿರೂಪಣೆಯ ಗಮ್ಮತ್ತನ್ನು ಸವಿಯದೆ ಅನೇಕರಿಗೆ ತೃಪ್ತಿಯಿಲ್ಲ. ಆದರೆ, ಬಿಗ್ ಬಾಸ್ ಎಂಬ ಕಾರ್ಯಕ್ರಮ ಹುಟ್ಟಿದ್ದು ಹೇಗೆ? ಅದರ ಮೂಲ ಯಾವುದು ಎನ್ನುವುದು ತಿಳಿದಿದೆಯೇ?

    ನೆದರ್‌ಲೆಂಡ್ಸ್‌ನ ಬಿಗ್ ಬ್ರದರ್

    ನೆದರ್‌ಲೆಂಡ್ಸ್‌ನ ಬಿಗ್ ಬ್ರದರ್

    'ಬಿಗ್ ಬಾಸ್' ಎನ್ನುವುದು ನೆದರ್‌ಲೆಂಡ್ಸ್‌ನ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬ್ರದರ್‌'ನ ಭಾರತೀಯ ಅವತರಣಿಕೆಯಷ್ಟೇ. ಡಚ್ ರಿಯಾಲಿಟಿ ಶೋವನ್ನು ರೂಪಿಸಿದ್ದು ಜಾನ್ ಡಿ ಮೋಲ್ ಜೂನಿಯರ್ ಎಂಬಾತ. 1999ರಲ್ಲಿ ನೆದರ್‌ಲೆಂಡ್‌ನ ಮನೆ ಮನೆಯಲ್ಲಿಯೂ ಇದು ಮೊದಲು ಪ್ರಸಾರವಾಗಿತ್ತು. ಬಳಿಕ ಅದರ ಜನಪ್ರಿಯತೆ ಕಂಡು ಬೇರೆ ಬೇರೆ ದೇಶಗಳೂ ಅದನ್ನು ತಮ್ಮದಾಗಿಸಿಕೊಂಡವು. ಬಿಗ್ ಬಾಸ್‌ನಲ್ಲಿ ನೋಡುವ 'ಕಣ್ಣು' ಕೂಡ ಬಿಗ್ ಬ್ರದರ್‌ನ ಮೂಲದ್ದೇ.

    ಹೌಸ್ ಮೇಟ್‌ಗಳು!

    ಹೌಸ್ ಮೇಟ್‌ಗಳು!

    ವಿಶೇಷವಾಗಿ ನಿರ್ಮಿಸಿರುವ ಮನೆಯಲ್ಲಿ ಮಾಮೂಲಿ ಜಗತ್ತಿನಿಂದ ದೂರವಾಗಿ ಸ್ಪರ್ಧಿಗಳು ಸೇರುತ್ತಿದ್ದರು. ಅವರನ್ನು ಸ್ಪರ್ಧಿಗಳು ಎನ್ನುತ್ತಿರಲಿಲ್ಲ. ಹೌಸ್‌ ಮೇಟ್‌ಗಳು ಅಥವಾ ಗೃಹ ಅತಿಥಿಗಳು ಎಂದು ಕರೆಯಲಾಗುತ್ತಿತ್ತು. ನೇರ ಪ್ರಸಾರದ ಟಿವಿ ಕ್ಯಾಮೆರಾಗಳು ಹಾಗೂ ವೈಯಕ್ತಿಕ ಆಡಿಯೋ ಮೈಕ್ರೋಫೋನ್‌ಗಳು ಇರುವ ಮನೆಯಲ್ಲಿ ಹೌಸ್‌ ಮೇಟ್‌ಗಳು ಉಳಿದುಕೊಳ್ಳಬೇಕಿತ್ತು. ಅದರ ವೋಟಿಂಗ್ ಮತ್ತು ಎಲಿಮಿನೇಷನ್ ಪ್ರಕ್ರಿಯೆಗಳೆಲ್ಲವೂ ನೀವು ಈಗ ನೋಡುತ್ತಿರುವಂತೆಯೇ ಇತ್ತು.

    ಬಿಗ್ ಬಾಸ್‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ?ಬಿಗ್ ಬಾಸ್‌ ನಿರೂಪಣೆಗೆ ಸಲ್ಮಾನ್ ಬೇಡಿಕೆ ಇರಿಸಿರುವ ಸಂಭಾವನೆ ಇಷ್ಟೊಂದಾ?

    ಜಾರ್ಜ್ ಆರ್ವೆಲ್ ಕಾದಂಬರಿ ಸ್ಫೂರ್ತಿ

    ಜಾರ್ಜ್ ಆರ್ವೆಲ್ ಕಾದಂಬರಿ ಸ್ಫೂರ್ತಿ

    ಖ್ಯಾತ ಕಾದಂಬರಿಕಾರ ಜಾರ್ಜ್ ಅರ್ವೆಲ್ ಅವರ 'ನೈಂಟೀನ್ ಎಯ್ಟೀ ಫೋರ್' ಎಂಬ ಕಾದಂಬರಿಯಿಂದ ಪ್ರೇರಣೆಗೊಂಡು 'ಬಿಗ್ ಬ್ರದರ್' ಎಂಬ ಹೆಸರನ್ನು ಈ ಕಾರ್ಯಕ್ರಮಕ್ಕೆ ಇರಿಸಲಾಗಿತ್ತು. 2019ರ ಸೆಪ್ಟೆಂಬರ್ ವೇಳೆಗೆ 54 ಫ್ರಾಂಚೈಸಿ ದೇಶಗಳು ಮತ್ತು ಪ್ರದೇಶಗಳಲ್ಲಿ 448 ಸೀಸನ್‌ಗಳು ನಡೆದಿವೆ ಎಂದರೆ ಅದರ ವ್ಯಾಪ್ತಿ ಎಷ್ಟಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

    ಐಷಾರಾಮಿ ಸೌಲಭ್ಯ ಇರಲಿಲ್ಲ

    ಐಷಾರಾಮಿ ಸೌಲಭ್ಯ ಇರಲಿಲ್ಲ

    1999ರಲ್ಲಿ ನೆದರ್‌ಲೆಂಡ್ಸ್‌ನ ವೆರೊನಿಕಾ ಚಾನೆಲ್‌ನಲ್ಲಿ 'ಬಿಗ್ ಬ್ರದರ್‌'ನ ಮೊದಲ ಆವೃತ್ತಿ ಪ್ರಸಾರವಾಗಿತ್ತು. ಇದರಲ್ಲಿ ವಿಶೇಷವಾಗಿಯೇ ಮನೆ ಮೀಸಲಿರಿಸಿದ್ದರೂ ಅದು ತೀರಾ ಸಾಮಾನ್ಯವಾಗಿತ್ತು. ನಿರಂತರ ನೀರು ಪೂರೈಕೆ, ಪೀಠೋಪಕರಣ, ಸೀಮಿತ ಆಹಾರ ಸಾಮಗ್ರಿ ಮುಂತಾದವುಗಳನ್ನು ಒದಗಿಸಲಾಗಿತ್ತು. ಆದರೆ ಐಷಾರಾಮಿ ವಸ್ತುಗಳಿಗೆ ಅವಕಾಶವಿರಲಿಲ್ಲ. ಇತ್ತೀಚಿನ ಕಾರ್ಯಕ್ರಮಗಳಲ್ಲಿ ಅತ್ಯಾಧುನಿಕ ಮನೆ ಮತ್ತು ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

    ಈ ಕಾರ್ಯಕ್ರಮದ ಸ್ವರೂಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಯಿತು. ಬೇರೆ ಬೇರೆ ದೇಶಗಳು ತಮ್ಮದೇ ರೀತಿಯಲ್ಲಿ ಇದನ್ನು ಅಳವಡಿಸಿಕೊಂಡವು. ಎಲ್ಲದರಲ್ಲಿಯೂ ಸಾಮಾನ್ಯವಾಗಿರುವ ಅಂಶಗಳೆಂದರೆ ಸ್ಪರ್ಧಿಗಳು ಮನೆಯೊಂದರ ಒಳಗೇ ಇರಬೇಕು. ಅವರನ್ನು ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳು ಹಿಂಬಾಲಿಸುತ್ತಿರುತ್ತವೆ. ಅವರಿಗೆ ಹೊರಜಗತ್ತಿನೊಂದಿಗೆ ಯಾವುದೇ ಸಂಪರ್ಕ ಇರುವುದಿಲ್ಲ ಎನ್ನುವುದು ಮಾತ್ರ.

    ವಿಭಿನ್ನ ಫಾರ್ಮ್ಯಾಟ್‌ಗಳ ಅಳವಡಿಕೆ

    ವಿಭಿನ್ನ ಫಾರ್ಮ್ಯಾಟ್‌ಗಳ ಅಳವಡಿಕೆ

    2001ರಲ್ಲಿ ಅಮೆರಿಕನ್ ಆವೃತ್ತಿಯಲ್ಲಿ ವಿಭಿನ್ನ ಫಾರ್ಮ್ಯಾಟ್ ಅಳವಡಿಸಲಾಯಿತು. ಇದರಲ್ಲಿ ಸ್ಪರ್ಧಿಗಳು ವಿವಿಧ ಬಗೆಯ ಗೇಮ್‌ಗಳಲ್ಲಿ ತೊಡಗಿಸಿಕೊಂಡರು. ಜತೆಗೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ನಾಮಿನೇಟ್ ಮಾಡಲು ಅವಕಾಶವನ್ನೂ ನೀಡಲಾಯಿತು. 2011ರಲ್ಲಿ ಬ್ರಿಟನ್‌ನ ಆವೃತ್ತಿಯಲ್ಲಿ ವಿವಾದಾತ್ಮಕ ಅಂಶವನ್ನು ಸೇರಿಸಲಾಯಿತು. ಇದರಲ್ಲಿ ಚಾನೆಲ್ 5 ನಡೆಸುವ ಮತ ಪ್ರಕ್ರಿಯೆ ಬಳಿಕವೂ ನಾಮಿನೇಷನ್‌ಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಲಾಯಿತು. 2018ರಲ್ಲಿ ಬ್ರಿಟನ್ ಆವೃತ್ತಿಯನ್ನು ರದ್ದುಗೊಳಿಸಲಾಯಿತು.

    ಶಿಕ್ಷಿಸುವ ಬಿಗ್ ಬ್ರದರ್!

    ಶಿಕ್ಷಿಸುವ ಬಿಗ್ ಬ್ರದರ್!

    2001ರಲ್ಲಿ ಬಿಗ್ ಬ್ರದರ್ 'ಬಡವ ಮತ್ತು ಶ್ರೀಮಂತ' ಪರಿಕಲ್ಪನೆ ಆರಂಭಿಸಿತು. ಮನೆಯಲ್ಲಿ ಎರಡು ಭಾಗ ಮಾಡಿ ಒಂದು ಭಾಗ ಬಡತನ ಮತ್ತೊಂದು ಭಾಗ ಐಷಾರಾಮಿಯನ್ನಾಗಿಸಿತು. ಇದನ್ನೂ ವಿವಿಧ ದೇಶಗಳನ್ನು ಅನುಸರಿಸಿದ್ದವು. 2004ರಲ್ಲಿ ಬ್ರಿಟನ್‌ನ ಐದನೇ ಸೀಸನ್‌ನಲ್ಲಿ ತಪ್ಪುಗಳನ್ನು ಮಾಡಿದರೆ ಬಹುಮಾನದ ಹಣವನ್ನು ವಾಪಸ್ ಪಡೆಯುವ, ಬಹಳ ಕಠಿಣ ಟಾಸ್ಕ್ ಮತ್ತು ರಹಸ್ಯ ತಂತ್ರಗಳುಳ್ಳ ತೀವ್ರ ಶಿಕ್ಷೆಯ ಸೀಸನ್ ಪರಿಚಯಿಸಿತು. ಅವಳಿಗಳು-ತ್ರಿವಳಿಗಳು ಸ್ಪರ್ಧಿಸುವ, ಜೋಡಿಗಳು ಒಟ್ಟಿಗೆ ಬಿಗ್ ಬಾಸ್ ಮನೆ ಪ್ರವೇಶಿಸುವ ಪರಿಕಲ್ಪನೆಗಳೂ ನಡೆದಿವೆ.

    ಪರಿಕಲ್ಪನೆ ಕದ್ದ ಅರೋಪ

    ಪರಿಕಲ್ಪನೆ ಕದ್ದ ಅರೋಪ

    ಫಿಲಿಪ್ಪೀನ್ಸ್‌ನಲ್ಲಿ ತರುಣ ವಯಸ್ಸಿನವರು ಪೋಷಕರ ಜತೆ ಬಿಗ್ ಬಾಸ್ ಮನೆಯಲ್ಲಿರುವ ಸೀಸನ್ ನಡೆದಿದ್ದರೆ, ಗ್ರೀಕ್‌ನಲ್ಲಿ ಅಮ್ಮನೊಂದಿಗೆ ಹೋಗುವ 'ಬಿಗ್ ಮದರ್' ಕೂಡ ನಡೆದಿತ್ತು. 'ಸೆಲೆಬ್ರಿಟಿ ಬಿಗ್ ಬ್ರದರ್' ಅಥವಾ ಬಿಗ್ ಬ್ರದರ್ ವಿಐಪಿ ಶೋಗಳು ಸಹ ನಡೆದಿವೆ. ವಿವಿಧ ದೇಶಗಳ 2 ದಶಕಗಳ ಟೆಲಿವಿಷನ್ ಇತಿಹಾಸದಲ್ಲಿ ಹತ್ತಾರು ಬಗೆಯ ಪ್ರಯೋಗಗಳು ನಡೆದಿವೆ. ಸ್ಪರ್ಧಿಗಳನ್ನು ದ್ವೀಪವೊಂದರಲ್ಲಿ ಇರಿಸಿ ಅವರ ಬದುಕನ್ನು ಅವರೇ ನೋಡಿಕೊಳ್ಳುವಂತಹ 'ಸರ್ವೈವ್ 'ಎಂಬ ಕಾರ್ಯಕ್ರಮದ ಪರಿಕಲ್ಪನೆಗಳನ್ನು ಕದಿಯಲಾಗಿದೆ ಎಂದು ಜಾನ್ ಡಿ ಮೋಲ್ ವಿರುದ್ಧ ಕಾಸ್ಟ್‌ ಅವೇ ಎಂಬ ಸ್ವತಂತ್ರ ನಿರ್ಮಾಣ ಸಂಸ್ಥೆ ಕಾನೂನು ಸಮರ ನಡೆಸಿತ್ತು. ಈ ಪ್ರಕರಣ ಬಿದ್ದು ಹೋಯಿತು. ಜಾರ್ಜ್ ಆರ್ವೆಲ್ ಅವರ ಎಸ್ಟೇಟ್ ಟೆಲಿವಿಷನ್ ಚಾನೆಲ್ ಮತ್ತು ನಿರ್ಮಾಣ ಸಂಸ್ಥೆ ವಿರುದ್ಧ ಹಕ್ಕುಸ್ವಾಮ್ಯದ ಪ್ರಕರಣ ದಾಖಲಿಸಿತ್ತು.

    ಲೈಂಗಿಕ ದೌರ್ಜನ್ಯದ ಪ್ರಕರಣ

    ಲೈಂಗಿಕ ದೌರ್ಜನ್ಯದ ಪ್ರಕರಣ

    ಬಿಗ್ ಬಾಸ್ ಅಥವಾ ಬಿಗ್ ಬ್ರದರ್ ಮನೆ ಅನೇಕ ವಿವಾದಗಳ ಉಗಮ ಸ್ಥಾನ. ಇಲ್ಲಿ ಸ್ಪರ್ಧಿಗಳ ನಡುವೆ ಹೊಡೆದಾಟ, ಲೈಂಗಿಕ ದೌರ್ಜನ್ಯದ ಪ್ರಕರಣಗಳೂ ನಡೆದಿವೆ. ದಕ್ಷಿಣ ಆಫ್ರಿಕಾದ ಬಗ್ ಬ್ರದರ್‌ನಲ್ಲಿ ಒಪ್ಪಿಗೆ ಇಲ್ಲದ ಪುರುಷ ಸ್ಪರ್ಧಿ ತನ್ನೊಂದಿಗೆ ಲೈಂಕಿಕ ಕ್ರಿಯೆ ನಡೆಸಿದ್ದಾನೆ ಎಂದು ಮಹಿಳಾ ಸ್ಪರ್ಧಿ ಆರೋಪಿಸಿದ್ದರು. ಕ್ಯಾಮೆರಾಗಳಲ್ಲಿ ಕೆಲವು ದೃಶ್ಯಗಳ ಸೆರೆಯಾಗಿದ್ದವು. ಇದು ಸಹಮತದ ಸೆಕ್ಸ್ ಎಂದು ಆತ ಹೇಳಿಕೊಂಡಿದ್ದ. ಆದರೆ ಮರುದಿನವೇ ಆತನನ್ನು ಹೊರಹಾಕಿ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿತ್ತು. ಈ ರೀತಿಯ ಹಲವು ಪ್ರಕರಣಗಳು 'ಬಿಗ್ ಬ್ರದರ್'ನಲ್ಲಿ ದಾಖಲಾಗಿವೆ. 'ಬಿಗ್ ಬ್ರದರ್: ಅಡಲ್ಸ್ಟ್ ಓನ್ಲಿ' ಕಾರ್ಯಕ್ರಮ ಕೂಡ ಮಧ್ಯರಾತ್ರಿ ಪ್ರಸಾರವಾಗುತ್ತಿತ್ತು. ಮನೆಯಲ್ಲಿ ನಡೆದ ರೊಮ್ಯಾನ್ಸ್‌ಗಳನ್ನು ಇದರಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಲೈಂಗಿಕ ದೌರ್ಜನ್ಯವೊಂದರ ಘಟನೆಯ ಕಾರಣದಿಂದ ಆಸ್ಟ್ರೇಲಿಯನ್ ಬಿಗ್ ಬ್ರದರ್ 2006ರ ಶೋಅನ್ನೇ ರದ್ದುಗೊಳಿಸಲಾಗಿತ್ತು.

    ಬಿಗ್ ಬ್ರದರ್ ಅಥವಾ ಬಿಗ್ ಬಾಸ್‌ನಲ್ಲಿ ರೊಮ್ಯಾನ್ಸ್, ಜಗಳ, ವಿವಾದಗಳು ಸಹಜ. ಇವುಗಳಿಲ್ಲದೆ ಈಗ ಈ ಕಾರ್ಯಕ್ರಮ ನಡೆಯುವುದೂ ಇಲ್ಲ. ಮುಂದಿನ ದಿನಗಳಲ್ಲಿ ಇದರ ಸ್ವರೂಪ ಮತ್ತಷ್ಟು ಬದಲಾಗಬಹುದು.

     'ಬಿಗ್ ಬಾಸ್' ನಡೆಯುತ್ತೋ, ಇಲ್ಲವೋ? ಆಯೋಜಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ 'ಬಿಗ್ ಬಾಸ್' ನಡೆಯುತ್ತೋ, ಇಲ್ಲವೋ? ಆಯೋಜಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    English summary
    Popular television reality show was originally inspired by Netherlands Big Brother show. Here is the history of the show.
    Saturday, July 11, 2020, 16:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X