twitter
    For Quick Alerts
    ALLOW NOTIFICATIONS  
    For Daily Alerts

    ಆಫ್ ದಿ ರೆಕಾರ್ಡ್: 'ಬಿಗ್ ಬಾಸ್' ನೋಡುವ ಮುನ್ನ ನೀವಿದನ್ನು ಓದಲೇ ಬೇಕು

    By ಫಿಲ್ಮಿಬೀಟ್ ಡೆಸ್ಕ್
    |

    ದಕ್ಷಿಣ ಭಾರತದ ಮನೋರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪೈಕಿ ಅತೀ ಹೆಚ್ಚು ಹೂಡಿಕೆ ಕಂಡ 'ಬಿಗ್ ಬಾಸ್- ಕನ್ನಡ' ಕಾರ್ಯಕ್ರಮದ ಏಳನೇ ಅವತರಿಣಿಕೆಗೆ ಭಾನುವಾರ (ಅಕ್ಟೋಬರ್ 13) ರಿಂದ ಶುರು ಆಗುತ್ತಿದೆ. ಎಂದಿನಂತೆ, 'ಬಿಗ್ ಬಾಸ್' ಎಂಬ ಕಾರ್ಯಕ್ರಮ ಅದರ ನಿರೂಪಣೆ ಮತ್ತು ರಚನೆಯ ಕಾರಣಕ್ಕೆ ಕುತೂಹಲವನ್ನು ಕೆರಳಿಸುತ್ತದೆ.

    ಸಮಾಜದಲ್ಲಿ ಒಂದಷ್ಟು ಹೆಸರು ಮಾಡಿದವರನ್ನು ಒಂದು ಮನೆಯೊಳಗೆ 100 ದಿನಗಳ ಕಾಲ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಅವರನ್ನು ಕಾಯಲು ಕ್ಯಾಮೆರಾಗಳನ್ನು ಇಡುವ ಪರಿಕಲ್ಪನೆಯಲ್ಲಿಯೇ ಹೀಗೊಂದು ಸಾಧ್ಯತೆ ಇದೆ. ಇನ್ನೊಬ್ಬರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದಾಗ ಜನ ಕುತೂಹಲಿಗಳಾಗುವುದು ಸಹಜ ಕೂಡ. ಅಂತಹ ಕುತೂಲಹದ ಮನೋ ಭಾವನೆಗಳೇ ಈ ಕಾರ್ಯಕ್ರಮದ ಬಂಡವಾಳ.

    ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ: ಸುದೀಪ್ಹುಚ್ಚ ವೆಂಕಟ್ ಗೆ ಸಹಾಯದ ಅವಶ್ಯಕತೆ ಇದೆ: ಸುದೀಪ್

    'ಬಿಗ್ ಬಾಸ್' ಎಂಬುದು ಸಂಪೂರ್ಣ ರಿಯಾಲಿಟಿ ಅಲ್ಲವಂತೆ ಎಂಬಲ್ಲಿಂದ ಶುರುವಾಗಿ, 'ಬಿಗ್ ಬಾಸ್' ಮನೆಯೊಳಗೆ ಮದ್ಯ, ಸಿಗರೇಟು ಎಲ್ಲವೂ ಸರಬರಾಜಾಗುತ್ತೆ ಎಂಬಲ್ಲಿವರೆಗೆ ಗುಮಾನಿಗಳನ್ನೇ ಆಧರಿಸಿದ ಸುದ್ದಿಗಳು ಪ್ರಸ್ತುತಗೊಂಡಿವೆ.

    ಹೀಗೆ, ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವ ವಾಹಿನಿ ಮತ್ತದರ ಔದ್ಯಮಿಕ ಹಿತಾಸಕ್ತಿಗಳನ್ನು ಪಕ್ಕಕ್ಕಿಟ್ಟು 'ಬಿಗ್ ಬಾಸ್' ಕುರಿತು ಸಾಮಾಜಿಕ ಚರ್ಚೆ ನಡೆದಿದೆ. ಇಂತಹ ಮೇಲ್ಮಟ್ಟದ ಚರ್ಚೆ ಮತ್ತು ಹಿತಾಸಕ್ತಿಗಳ ಆಚೆಗೆ 'ಬಿಗ್ ಬಾಸ್' ಕುರಿತು ಅರ್ಥಮಾಡಿಕೊಳ್ಳಲೇಬೇಕಾದ ಕೆಲವು ಅಂಶಗಳಿವೆ. ಅಂತಹ ಕೆಲವು ಕುತೂಹಲಕಾರಿಯಾದ, ಅಪರೂಪದ ಮಾಹಿತಿಗಳನ್ನು ಈ ವರದಿ ನಿಮ್ಮ ಮುಂದಿಡುತ್ತಿದೆ.

    'ಬಿಗ್ ಬ್ರದರ್ ಇಸ್ ವಾಚಿಂಗ್ ಯೂ'

    'ಬಿಗ್ ಬ್ರದರ್ ಇಸ್ ವಾಚಿಂಗ್ ಯೂ'

    'ಬಿಗ್ ಬಾಸ್' ಕಾರ್ಯಕ್ರಮದ ಪರಿಕಲ್ಪನೆಯ ಮೂಲವನ್ನು ಹುಡುಕಿಕೊಂಡು ಹೋದರೆ, ಹೋಗಿ ನಿಲ್ಲುವುದು ಜಾರ್ಜ್ ಆರ್ವೆಲ್ ಎಂಬ ಖ್ಯಾತ ಇಂಗ್ಲಿಷ್ ಬರಹಗಾರನ 1984ರ ಕಾದಂಬರಿಗೆ. ಆತ ತನ್ನ ಕಾದಂಬರಿಯಲ್ಲಿ 'ಬಿಗ್ ಬ್ರದರ್ ಇಸ್ ವಾಚಿಂಗ್ ಯೂ' ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದ. ಕಾದಂಬರಿಯ ಪಾತ್ರಗಳನ್ನು ಸದಾ ಒಬ್ಬರು ಗಮನಿಸುತ್ತಿದ್ದಾರೆ ಎಂಬ ಕಥಾಹಂದರವನ್ನು ಆತ ಕಟ್ಟಿಕೊಟ್ಟಿದ್ದ. ಇದರಿಂದ ಪ್ರೇರಣೆ ಪಡೆದ ಡಚ್ ಟಿವಿಯೊಂದು 1997ರಲ್ಲಿ ಮೊದಲ ಬಾರಿಗೆ 'ಬಿಗ್ ಬ್ರದರ್' ಎಂಬ ಕಾರ್ಯಕ್ರಮವನ್ನು ಕಿರುತೆರೆಗೆ ಅಳವಡಿಸಿತು.

    50 ದೇಶಗಳಲ್ಲಿ ಇದೇ ಮಾದರಿಯ ಕಾರ್ಯಕ್ರಮ

    50 ದೇಶಗಳಲ್ಲಿ ಇದೇ ಮಾದರಿಯ ಕಾರ್ಯಕ್ರಮ

    ಒಂದು ಮನೆ, ಅದರ ಕೋಣೆ ಕೋಣೆಗಳನ್ನೂ ಗಮನಿಸುವ ಕ್ಯಾಮೆರಾಗಳು ಹಾಗೂ ಅದರಲ್ಲಿ 100 ದಿನಗಳ ಕಾಲ ಉಳಿದುಕೊಳ್ಳುವ ಸ್ಪರ್ಧಿಗಳು ಮತ್ತು ಒಟ್ಟಾರೆ ಅದೊಂದು 'ಗೇಮ್ ಶೋ' ಎಂಬರ್ಥದಲ್ಲಿ ಕಾರ್ಯಕ್ರಮ ಪ್ರಸಾರವಾಯಿತು. ಮುಂದೆ, ಅದು ಯುರೋಪಿನಿಂದ ಅಮೆರಿಕಾ ಕಾಲಿಟ್ಟ ಮೇಲೆ ಜಗತ್ತಿನ ಮನೋರಂಜನಾ ವಾಹಿನಿಗಳ ಪಾಲಿಗೆ ಪ್ರತಿಷ್ಠೆಯ ಕಾರ್ಯಕ್ರಮವಾಗಿ ಬದಲಾಯಿತು. ಇವತ್ತಿಗೆ ಜಗತ್ತಿನ ಸುಮಾರು 50 ನಾನಾ ಭಾಷೆ ಮತ್ತು ದೇಶಗಳಲ್ಲಿ ಇದೇ ಮಾದರಿಯ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಮತ್ತು ಈ 'ಸೋ ಕಾಲ್ಡ್' ಆಟದ ನೀತಿ ನಿರೂಪಣೆಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬದಲಾಗುತ್ತಿವೆ ಎಂಬುದು ಗಮನಾರ್ಹ.

    Bigg Boss Kannada: 'ಬಿಗ್ ಬಾಸ್ ಸೀಸನ್ 1' ಸುದೀಪ್ ಗೆ ಬಹಳ ಇಷ್ಟ, ಏಕೆ?Bigg Boss Kannada: 'ಬಿಗ್ ಬಾಸ್ ಸೀಸನ್ 1' ಸುದೀಪ್ ಗೆ ಬಹಳ ಇಷ್ಟ, ಏಕೆ?

    ಎಂಡೋಮಲ್ ಬಳಿ ಇದೆ ಕಾಪಿ ರೈಟ್ಸ್

    ಎಂಡೋಮಲ್ ಬಳಿ ಇದೆ ಕಾಪಿ ರೈಟ್ಸ್

    ಆರು ವರ್ಷಗಳ ಹಿಂದೆ ಅವತ್ತಿಗಿನ್ನೂ ಈ- ಟಿವಿಯಾಗಿದ್ದ ಕಲರ್ಸ್ ಕನ್ನಡ ವಾಹಿನಿ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನು ಆರಂಭಿಸಿತ್ತು. ಅದನ್ನು ಮುನ್ನಡೆಸಿದವರು, ಇವತ್ತು ಕಲರ್ಸ್ ಕನ್ನಡ ಬಿಜಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್. ಅವರೀಗ ಕಾರ್ಯಕ್ರಮದ ನಿರ್ದೇಶಕರು ಕೂಡ. ನಂತರದ ಒಂದು ಸೀಸನ್ ಸುವರ್ಣ ವಾಹಿನಿ ನಡೆಸಿಕೊಟ್ಟಿತು. ಮೂರನೇ ಸೀಸನ್ ನಿಂದ ಮತ್ತೆ ಕಲರ್ಸ್ ಕನ್ನಡದ ತೆಕ್ಕೆಗೆ ಬಂತು. ಈ ಕಾರ್ಯಕ್ರಮದ ಕಾಪಿ ರೈಟ್ಸ್ ಇರುವುದು ಎಂಡೋಮಲ್ ಎಂಬ ಅಂತರಾಷ್ಟ್ರೀಯ ಕಂಪನಿಯೊಂದರ ಬಳಿ.

    ವಾಹಿನಿಯ ಹೆಸರು (ಬ್ರಾಂಡ್) ಸುದ್ದಿಯಲ್ಲಿರುತ್ತದೆ

    ವಾಹಿನಿಯ ಹೆಸರು (ಬ್ರಾಂಡ್) ಸುದ್ದಿಯಲ್ಲಿರುತ್ತದೆ

    ಮೊದಲ ಮೂರು ಸೀಸನ್ ಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರ್ಥಿಕ ದೃಷ್ಟಿಯಿಂದ ಯಾವುದೇ ಲಾಭವನ್ನು ತಂದುಕೊಟ್ಟಿರಲಿಲ್ಲ ಎಂಬುದು ಇನ್ ಸೈಡ್ ಸ್ಟೋರಿ. ಇದಕ್ಕೆ ಕಾರಣ ಈ ಕಾರ್ಯಕ್ರಮ ಬೇಡುವ ಭಾರಿ ಮೊತ್ತದ (ಸುಮಾರು 30 ಕೋಟಿ/ ಸೀಸನ್ ಗೆ) ಹೂಡಿಕೆ. "ಈ ಕಾರ್ಯಕ್ರಮವನ್ನು ಕೇವಲ ಆರ್ಥಿಕ ದೃಷ್ಟಿಯಲ್ಲಿ ಮಾತ್ರವೇ ನೋಡಲು ಸಾಧ್ಯವಿಲ್ಲ. 'ಬಿಗ್ ಬಾಸ್' ಪ್ರಸಾರವಾಗುವಷ್ಟು ದಿನವೂ ವಾಹಿನಿಯ ಹೆಸರು (ಬ್ರಾಂಡ್) ಸುದ್ದಿಯಲ್ಲಿರುತ್ತದೆ. ಹೀಗಾಗಿ ವಾಹಿನಿಯ ಇತರೆ ಕಾರ್ಯಕ್ರಮಗಳಿಗೂ ಅನುಕೂಲವಾಗುತ್ತದೆ,'' ಎನ್ನುತ್ತಾರೆ ಪರಮೇಶ್ವರ ಗುಂಡ್ಕಲ್.

    ಮಲ್ಟಿಫ್ಲೆಕ್ಸ್ ನಲ್ಲಿ ಬಿಗ್ ಬಾಸ್ ಕನ್ನಡ ನೇರ ಪ್ರಸಾರಮಲ್ಟಿಫ್ಲೆಕ್ಸ್ ನಲ್ಲಿ ಬಿಗ್ ಬಾಸ್ ಕನ್ನಡ ನೇರ ಪ್ರಸಾರ

    ತಂತ್ರಜ್ಞಾನದ ಬಳಕೆ ಮೆಚ್ಚುವಂತದ್ದು

    ತಂತ್ರಜ್ಞಾನದ ಬಳಕೆ ಮೆಚ್ಚುವಂತದ್ದು

    'ಬಿಗ್ ಬಾಸ್' ಕಾರ್ಯಕ್ರಮದ ಹಿನ್ನೆಲೆ, ಜನಪ್ರಿಯತೆಗಳ ಆಚೆಗೂ ಗಮನ ಸೆಳೆಯುವುದು ಇದರ ಹಿಂದಿರುವ ತಂತ್ರಜ್ಞಾನದ ಬಳಕೆ. ಒಂದು ಮನೆಯನ್ನು ಆವರಿಸಿಕೊಂಡಿರುವ ಸುಮಾರು 60ಕ್ಕೂ ಹೆಚ್ಚು ಕ್ಯಾಮೆರಾಗಳು, ಅವುಗಳನ್ನು 24/7 ಕಾಯಲು ಅಳವಡಿಸಿಕೊಂಡಿರುವ ಶೈಲಿ, ಕೊನೆಗೆ, ದಿನಕ್ಕೊಂದು ಸ್ಟೋರಿಯ ರೂಪದಲ್ಲಿ ಒಂದು ಗಂಟೆಗೆ ನಡೆಯುವ ಎಡಿಟಿಂಗ್, ದೃಶ್ಯ ಮತ್ತು ಧ್ವನಿಯಲ್ಲಿ ಕಾಪಾಡಿಕೊಳ್ಳುವ ಗುಣಮಟ್ಟ ಹೀಗೆ ಹಲವು ಕಾರಣಗಳಿಗಾಗಿ 'ಬಿಗ್ ಬಾಸ್' ಗಮನ ಸೆಳೆಯುತ್ತದೆ.

    ಡೈಲಿ ಪ್ರೊಡ್ಯೂಸರ್ಸ್ ಮತ್ತು ಸ್ಟೋರಿ ಪ್ರೊಡ್ಯೂಸರ್ಸ್

    ಡೈಲಿ ಪ್ರೊಡ್ಯೂಸರ್ಸ್ ಮತ್ತು ಸ್ಟೋರಿ ಪ್ರೊಡ್ಯೂಸರ್ಸ್

    ಪ್ರತಿ ದಿನದ ಕಾರ್ಯಕ್ರಮವನ್ನು ನಿರ್ವಹಣೆ ಮಾಡುವವರನ್ನು ಡೈಲಿ ಪ್ರೊಡ್ಯೂಸರ್ಸ್ ಎಂದು ಕರೆಯುತ್ತೇವೆ. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಮನೆಯೊಳಗೆ ನಡೆಯುವ ವಿದ್ಯಮಾನಗಳಲ್ಲಿ ಆಯ್ದ ಕೆಲವೊಂದು ಸನ್ನಿವೇಶಗಳನ್ನು ಎಪಿಸೋಡ್'ಗಳನ್ನಾಗಿ ರೂಪಿಸುತ್ತಾರೆ. ಇದರ ಜತೆಗೆ 'ಸ್ಟೋರಿ ಪ್ರೊಡ್ಯೂಸರ್ಸ್' ಕೂಡ ಇರುತ್ತಾರೆ. ಇವರು ಒಂದೊಂದು ಎಪಿಸೋಡಿನಲ್ಲೂ ಏನೇನು ಇರಬೇಕು ಎಂದು ತೀರ್ಮಾನಿಸುತ್ತಾರೆ.

    Bigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆBigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ

    ಟಾಸ್ಕ್ ಗಳನ್ನು ನೀಡುವುದು ಒಂದು ರೀತಿಯ ಸ್ಕ್ರಿಪ್ಟ್

    ಟಾಸ್ಕ್ ಗಳನ್ನು ನೀಡುವುದು ಒಂದು ರೀತಿಯ ಸ್ಕ್ರಿಪ್ಟ್

    ಹಿಂದಿನ ಸೀಸನ್ ಒಂದರಲ್ಲಿ ಕೆಲಸ ಮಾಡಿದ ಪತ್ರಕರ್ತರೊಬ್ಬರು, 'ಬಿಗ್ ಬಾಸ್'ನಲ್ಲಿರುವ ರಿಯಾಲಿಟಿ ಹಾಗೂ ಸ್ಕ್ರಿಪ್ಟ್ ನಡುವಿನ ಅಂತರದ ಕುರಿತು ಬೆಳಕು ಚೆಲ್ಲುತ್ತಾರೆ. "ರಿಯಾಲಿಟಿ ಎಂದರೆ ಮನೆಯೊಳಗಿನ ಸ್ಪರ್ಧಿಗಳನ್ನು ಅವರ ಪಾಡಿಗೆ ಬಿಟ್ಟುಬಿಡುವುದು. ಆದರೆ, ಅಷ್ಟೆ ಆದರೆ ಅದರಲ್ಲಿ ಮನೋರಂಜನೆ ಇರುವುದಿಲ್ಲ. ಬರೀ ಮಾತುಗಳನ್ನು ಇಟ್ಟುಕೊಂಡು ಎಪಿಸೋಡ್'ಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಅದು ಕೂಡ ಒಂದು ರೀತಿಯ ಸ್ಕ್ರಿಪ್ಟ್ ಆಗಿರುತ್ತದೆ,'' ಎನ್ನುತ್ತಾರೆ ಅವರು.

    ಜನಪ್ರಿಯತೆ ಮೇಲೆ ಸಂಭಾವನೆ ನಿರ್ಧಾರ

    ಜನಪ್ರಿಯತೆ ಮೇಲೆ ಸಂಭಾವನೆ ನಿರ್ಧಾರ

    ಹೀಗೆ, ಒಂದಷ್ಟು ರಿಯಾಲಿಟಿ, ಇನ್ನೊಂದಿಷ್ಟು ಮನೋರಂಜನಾ ದೃಷ್ಟಿಯಿಂದ ನೀಡಲಾಗುವ ಟಾಸ್ಕ್ ಗಳ ಮೂಲಕ ಸ್ಪರ್ಧಿಗಳ ವರ್ತನೆಯನ್ನು ಸೆರೆ ಹಿಡಿದು ಜನರಿಗೆ ತೋರಿಸಲಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ವಾರದ ಲೆಕ್ಕದಲ್ಲಿ ಸಂಭಾವನೆಯನ್ನೂ ನೀಡಲಾಗುತ್ತದೆ. ಹೊರಗಿನ ಪ್ರಪಂಚದಲ್ಲಿ ಜಾಸ್ತಿ ಹೆಸರು ಮಾಡಿದವರಿಗೆ ಹೆಚ್ಚು ಸಂಭಾವನೆ, ಕಡಿಮೆ ಹೆಸರು ಇದ್ದವರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ.

    'ಬಿಗ್ ಬಾಸ್' ಬಗ್ಗೆ ನಡೆದ ಅಧ್ಯಯನಗಳು

    'ಬಿಗ್ ಬಾಸ್' ಬಗ್ಗೆ ನಡೆದ ಅಧ್ಯಯನಗಳು

    'ಬಿಗ್ ಬಾಸ್' ಪರಿಕಲ್ಪನೆಯ ಕುರಿತು ಸಾಕಷ್ಟು ಅಧ್ಯಯನಗಳು ಅಮೆರಿಕಾದ ನಾನಾ ವಿಶ್ವವಿದ್ಯಾನಿಯಲಗಳಲ್ಲಿ ನಡೆದಿವೆ. ಮನುಷ್ಯನ ವರ್ತನೆಗಳು ಹಾಗೂ ಆತನ/ ಆಕೆಯ ಮನಸ್ಸುಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಅರಿಯಲು ಇಂತಹ ಕಾರ್ಯಕ್ರಮ ನೆರವು ನೀಡಿದೆ. "ಒಂದು ಮನೆಯಲ್ಲಿ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡು ನೂರು ದಿನ ಕಳೆಯುವುದು ಸುಲಭವಲ್ಲ. ಕೆಲವೊಮ್ಮೆ ಅದು ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ,'' ಎನ್ನುತ್ತಾರೆ ಬೆಂಗಳೂರು ಮೂಲದ ಮನಶಾಸ್ತ್ರಜ್ಞ ಡಾ. ಮಹೇಶ್. ಅವರು ತಮ್ಮ ಬಳಿಯಲ್ಲಿ ಬಂದು ಸಲಹೆ ಪಡೆದುಕೊಂಡು ಹೋದ ಬಿಗ್ ಬಾಸ್ ಸ್ಪರ್ಧಿಯೊಬ್ಬರ ವಿವರಗಳನ್ನು ನೀಡಿದರು.

    ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಕೆಟ್ಟ ಕುತೂಹಲ

    ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಕೆಟ್ಟ ಕುತೂಹಲ

    ಹಿಂದೊಮ್ಮೆ ಯುರೋಪಿನಲ್ಲಿ ಹುಟ್ಟಿಕೊಂಡು, ಅಮೆರಿಕಾದ ಮಾರುಕಟ್ಟೆಯಲ್ಲಿ ಕೌಶಲ್ಯಗಳನ್ನು ತುಂಬಿಕೊಂಡು ಭಾರತಕ್ಕೆ ಕಾಲಿಟ್ಟ ಈ ಪರಿಕಲ್ಪನೆ ದಕ್ಷಿಣ ಭಾರತದಲ್ಲಿಯೂ ಸದ್ದು ಮಾಡುತ್ತಿದೆ.

    "ಇನ್ನೊಬ್ಬರ ಅದರಲ್ಲೂ ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಜನರಿಗಿರುವ ಕೆಟ್ಟ ಕುತೂಹಲವೇ ಈ ಕಾರ್ಯಕ್ರಮದ ಬಂಡವಾಳ. ಒಂದು ವೇಳೆ, ಈ ಕುತೂಹಲ ಕಳೆದು ಹೋದರೆ, 'ಬಿಗ್ ಬಾಸ್' ಖಂಡಿತಾ 'ಬಿಗ್ ಬಾಸ್' ಆಗಿ ಉಳಿಯುವುದಿಲ್ಲ,'' ಎನ್ನುತ್ತಾರೆ ಅದರ ಭಾಗವಾಗಿದ್ದ ಪತ್ರಕರ್ತರೊಬ್ಬರು.

    "ಯಾರು ಈ ಬಿಗ್ ಬಾಸ್?", ನಮಗನ್ನಿಸುವ ಪ್ರಕಾರ, 'ಬಿಗ್ ಬಾಸ್' ಎಂದರೆ ಕಾರ್ಯಕ್ರಮದ ನಿರ್ದೇಶಕರು ಮತ್ತು ಆ ಪರಿಕಲ್ಪನೆಯನ್ನು ಮಾರಾಟ ಮಾಡುತ್ತಿರುವ ಎಂಡೊಮೊಲ್ ಎಂಬ ಅಂತರಾಷ್ಟ್ರೀಯ ಸಂಸ್ಥೆ, ಅಷ್ಟೆ.

    English summary
    Bigg Boss Kannada Season 7 : History of Bigg Boss and its secrets.
    Friday, October 11, 2019, 14:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X