ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ನಡೆದ ಮೂರು ದುರಂತಗಳು
'ಬಿಗ್ ಬಾಸ್' ಬರಿ ವಿವಾದ, ಗಿಮಿಕ್, ಪ್ರಚಾರ ಅಷ್ಟೇ ಎಂಬ ಆರೋಪ ಇದೆ. ಈ ಆರೋಪಕ್ಕೆ ವಿರುದ್ಧವಾಗಿ ಬಿಗ್ ಬಾಸ್ ಕನ್ನಡ ಗುರುತಿಸಿಕೊಳ್ಳುವತ್ತ ಸಾಗುತ್ತಿತ್ತು. ಆದ್ರೆ, ಅದ್ಯಾಕೋ ಕನ್ನಡದ ಬಿಗ್ ಬಾಸ್ ಗೂ ಈ ವಿವಾದ, ಗಿಮಿಕ್ ಎಲ್ಲವೂ ಅಂಟಿಕೊಳ್ಳುತ್ತಿದೆ.
ಹೊಡೆಯುವುದು, ಅಶ್ಲೀಲ ಪದಗಳಿಂದ ನಿಂದಿಸುವುದು, ಅಸಭ್ಯವಾಗಿ ನಡೆದುಕೊಳ್ಳುವುದು ಹಿಂದಿ ಹಾಗೂ ಬೇರೆ ದೇಶದ ಬಿಗ್ ಬಾಸ್ ನಲ್ಲಿ ನೋಡುತ್ತಿದ್ದೀರಿ. ಆದ್ರೀಗ, ಕನ್ನಡದ ಬಿಗ್ ಬಾಸ್ ನಲ್ಲಿ ಹೊಡೆದಾಟ ಸಾಮಾನ್ಯವಾಗಿಬಿಟ್ಟಿದೆ.
ಪ್ರತಿ ವರ್ಷವೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳವಾಗುತ್ತಿದ್ದು, ಆ ಜಗಳ ದೈಹಿಕ ಹಲ್ಲೆ ಮೂಲಕ ಅಂತ್ಯವಾಗುತ್ತಿದೆ. ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಈಗ ಮೂರನೇ ದುರಂತ ನಡೆದು ಹೋಗಿದೆ. ಇದಕ್ಕು ಮುಂಚೆ ಎರಡು ಸಲ ದೈಹಿಕ ಹಲ್ಲೆಯ ಘಟನೆ ನಡೆದಿತ್ತು. ಆ ಘಟನೆಗಳ ಬಗ್ಗೆ ಒಂದು ಸಣ್ಣ ಮೆಲುಕು ಹಾಕೋಣ. ಮುಂದೆ ಓದಿ.....

ಬಿಗ್ ಬಾಸ್ ಕನ್ನಡ 3ನೇ ಆವೃತ್ತಿಯಲ್ಲಿ ಘಟನೆ
ಮೊದಲೆರೆಡು ಆವೃತ್ತಿಯಲ್ಲಿ ಬರಿ ವಾಗ್ವಾದಗಳೊಂದಿಗೆ ಯಶಸ್ವಿಯಾಗಿ ಮುಗಿದಿದ್ದ ಬಿಗ್ ಬಾಸ್ ಕನ್ನಡ, ಮೂರನೇ ಆವೃತ್ತಿಯಲ್ಲಿ ಒಂದು ಕಹಿ ಘಟನೆಗೆ ಸಾಕ್ಷಿಯಾಯಿತು. ಹುಚ್ಚ ವೆಂಕಟ್ ತಮ್ಮ ಸಹ ಸ್ಪರ್ಧಿ ರವಿ ಮುರೂರು ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದರು. ವಾರದ ಕಥೆ ಕಿಚ್ಚನ ಜೊತೆಯ ಎಪಿಸೋಡ್ ನಲ್ಲಿ ಸುದೀಪ್ ಅವರ ಎದುರಲ್ಲೇ ರವಿ ಅವರ ಮುಖಕ್ಕೆ ಹುಚ್ಚ ವೆಂಕಟ್ ಹೊಡೆದಿದ್ದರು.

ಪಂಚ್ ಕೊಟ್ಟಿದ್ದ ವೆಂಕಟ್ ಕಿಕ್ ಔಟ್
'ಬಿಗ್ ಬಾಸ್' ನಿಯಮ ಉಲ್ಲಂಘನೆ ಮಾಡಿದ್ದಕ್ಕೆ, ಹುಚ್ಚ ವೆಂಕಟ್ ಅವರನ್ನ ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಯಿತು. ಬಿಗ್ ಬಾಸ್ ಭದ್ರತೆ ಸಿಬ್ಬಂದಿಗಳು ಮನೆಯೊಳಗೆ ಹೋಗಿ ವೆಂಕಟ್ ಅವರನ್ನ ಹೊರಗೆ ಕರೆದುಕೊಂಡು ಬಂದರು.

ಮತ್ತೆ 4ನೇ ಆವೃತ್ತಿಯಲ್ಲಿ ಗಲಾಟೆ
ಇನ್ನು ಬಿಗ್ ಬಾಸ್ ಕನ್ನಡ 4ನೇ ಆವೃತ್ತಿಯಲ್ಲಿ ಪ್ರಥಮ್ ಗೆ, ಅತಿಥಿಯಾಗಿ ಬಂದಿದ್ದ ಹುಚ್ಚ ವೆಂಕಟ್ ಹೊಡೆದು ಮತ್ತೆ ಎರಡನೇ ಬಾರಿ ಬಿಗ್ ಬಾಸ್ ಶೋಗೆ ಕಪ್ಪು ಚುಕ್ಕೆಯಾದರು. ಮೊದಲನೇ ಬಾರಿ ರವಿ ಮುರುರೂ ಅವರಿಗೆ ಹೊಡೆದಿದ್ದರು, ಎರಡನೇ ಅವಕಾಶ ಕೊಟ್ಟ ಬಿಗ್ ಬಾಸ್, ಹುಚ್ಚ ವೆಂಕಟ್ ಅವರನ್ನ ಅತಿಥಿಯಾಗಿ ಮನೆಗೆ ಕಳುಹಿಸಿದರು. ಆದ್ರೆ, ಎರಡನೇ ಬಾರಿಯೂ ವೆಂಕಟ್ ಗಲಾಟೆ ಮಾಡಿದರು.

ಮೂರನೇ ದುರಂತ
ಈ ಎರಡು ಘಟನೆಗಳು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ದುರಂತಗಳಾಗಿ ಉಳಿದುಕೊಂಡಿತ್ತು. ಆದ್ರೀಗ, ಮೂರನೇ ದುರಂತವೂ ನಡೆದುಹೋಗಿದೆ. ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿ ಸಮೀರಾಚಾರ್ಯ ಅವರ ಮೇಲೆ ಅತಿಥಿಯಾಗಿ ಆಗಮನಿಸಿದ್ದ ನಟಿ ಸಂಯುಕ್ತಾ ಹೆಗಡೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಇದರ ಪರಿಣಾಮ ಸಂಯುಕ್ತಾ ಅವರನ್ನ ಬಿಗ್ ಮನೆಯಿಂದ ಹೊರಗೆ ಕಳುಹಿಸಲಾಯಿತು.


Click it and Unblock the Notifications











