twitter
    For Quick Alerts
    ALLOW NOTIFICATIONS  
    For Daily Alerts

    ರಿಯಾಲಿಟಿ ಶೋ: ಖಾಸಗಿ ಬದುಕು ಮನರಂಜನೆಯ ಸರಕು ಆಗಿದ್ದು ಇಲ್ಲಿಂದ...

    |

    ಟೆಲಿವಿಷನ್ ಜನರ ಯೋಚನಾ ಕ್ರಮ, ಮನರಂಜನೆಯ ಜಗತ್ತು, ಆಚಾರ-ವಿಚಾರಗಳನ್ನು ಬದಲಿಸಿದ ಮಾಧ್ಯಮ. ಮನರಂಜನೆಗಿಂತ ಮೊದಲು ಮಾಹಿತಿ ಪ್ರಸಾರಕ್ಕಾಗಿ ಟೆಲಿವಿಷನ್ ಬಳಕೆಯಾಗಿತ್ತು. ನಂತರ ಕ್ರಮೇಣ ಮನರಂಜನೆಯೂ ಅದಕ್ಕೆ ಕಾಲಿಟ್ಟಿತು. ಬಳಿಕ ಟೆಲಿವಿಷನ್ ಜನರ ದಿನಚರಿಯ ಭಾಗವಾಗಿ ಬೆಳೆದಿದ್ದು ಈಗ ಇತಿಹಾಸ. ಟೆಲಿವಿಷನ್ ಹುಟ್ಟು ಮತ್ತು ಬೆಳವಣಿಗೆಯ ಚರಿತ್ರೆಯದ್ದು ಬೇರೆಯದೇ ಅಧ್ಯಾಯ.

    Recommended Video

    ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

    ಈಗ ಟೆಲಿವಿಷನ್ ಲೋಕ ಸಾಕಷ್ಟು ಬದಲಾಗಿದೆ. ಈ ಹಿಂದೆ ಒಂದೇ ವಾಹಿನಿ ಜ್ಞಾನ-ಮಾಹಿತಿ-ಮನರಂಜನೆ ಎಲ್ಲ ಕ್ಷೇತ್ರಗಳನ್ನು ಒಳಗೊಳ್ಳುತ್ತಿದ್ದವು. ಈಗ ಪ್ರತಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಗಮನ ಹರಿಸುವ ಚಾನೆಲ್‌ಗಳಿವೆ. ಅವುಗಳಲ್ಲಿ ಮನರಂಜನಾ ಕ್ಷೇತ್ರವಂತೂ ಸಾಕಷ್ಟು ವಿಸ್ತಾರವಾಗಿ ತೆರೆದುಕೊಂಡಿದೆ. ಮುಂದೆ ಓದಿ....

    ನೂರಾರು ರಿಯಾಲಿಟಿ ಶೋಗಳು

    ನೂರಾರು ರಿಯಾಲಿಟಿ ಶೋಗಳು

    ಮನರಂಜನೆಗೆ ಮೀಸಲಾದ ವಾಹಿನಿಗಳಲ್ಲಿ ಸಿನಿಮಾ, ಧಾರಾವಾಹಿಗಳ ನಡುವೆ ಮುಖ್ಯವಾಗಿ ಕಾಣಿಸಿಕೊಳ್ಳುವುದು ರಿಯಾಲಿಟಿ ಶೋಗಳು. ಹಾಡು, ನೃತ್ಯ, ಸಾಹಸ ಚಟುವಟಿಕೆಗಳು, ವಿವಿಧ ಬಗೆಯ ಆಟಗಳು, ಹಾಸ್ಯ ಕಾರ್ಯಕ್ರಮಗಳು ಈ ರಿಯಾಲಿಟಿ ಶೋಗಳ ಭಾಗ. ಅದರಲ್ಲಿಯೂ ಸೆಲೆಬ್ರಿಟಿಗಳ ಖಾಸಗಿ ಬದುಕನ್ನು ಅನಾವರಣಗೊಳಿಸುವ ಬಿಗ್ ಬಾಸ್ ನಂತಹ ಕಾರ್ಯಕ್ರಮಗಳು ಅಧಿಕ ಟಿಆರ್ ಪಿ ಗಳಿಸುತ್ತಿವೆ. ಅಂದರೆ ಜನರು ಇವುಗಳನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಭಾರತೀಯ ಟೆಲಿವಿಷನ್ ವಾಹಿನಿಗಳು ಇಂತಹ ನೂರಾರು ವಿಭಿನ್ನ ರಿಯಾಲಿಟಿ ಶೋಗಳನ್ನು ನಡೆಸುತ್ತಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ವಿದೇಶಿ ಕಾರ್ಯಕ್ರಮಗಳ ಸ್ಫೂರ್ತಿ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.

    ಕನ್ನಡದಲ್ಲಿಯೇ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ 'ಬಾಹುಬಲಿ'ಕನ್ನಡದಲ್ಲಿಯೇ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ 'ಬಾಹುಬಲಿ'

    ಅಮೆರಿಕದಲ್ಲಿ ಮೊದಲು ಶುರು

    ಅಮೆರಿಕದಲ್ಲಿ ಮೊದಲು ಶುರು

    ರಿಯಾಲಿಟಿ ಶೋಗಳು ಶುರುವಾಗಿದ್ದು ಎಲ್ಲಿಂದ? ಜಗತ್ತಿನ ಮೊಟ್ಟ ಮೊದಲ ರಿಯಾಲಿಟಿ ಶೋ ಯಾವುದು? ಅದು ಹೇಗಿತ್ತು? ಎಂಬ ಕುತೂಹಲ ಕೆದಕಿದರೆ, ಸಾಕಷ್ಟು ಆಸಕ್ತಿಕರ ಸಂಗತಿಗಳು ಕಣ್ಣೆದುರು ಬರುತ್ತವೆ. ಭಾರತದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ರಿಯಾಲಿಟಿ ಶೋಗಳ ಮೂಲ ಅಮೆರಿಕನ್ ವಾಹಿನಿಗಳು. ಭಾರತದಲ್ಲಿ ದೂರದರ್ಶನ ಮಾತ್ರವೇ ಇದ್ದ ಕಾಲದಲ್ಲಿ ಅಮೆರಿಕದಲ್ಲಿ ಖಾಸಗಿ ವಾಹಿನಿಗಳು ಆರಂಭವಾಗಿದ್ದವು. ಅಷ್ಟೇ ಅಲ್ಲ, ಜನರ ಖಾಸಗಿ ಬದುಕನ್ನು ಬೆತ್ತಲಾಗಿಸುವ ರಿಯಾಲಿಟಿ ಶೋಗಳನ್ನೂ ಆರಂಭಿಸಿದ್ದವು.

    ಆನ್ ಅಮೆರಿಕನ್ ಫ್ಯಾಮಿಲಿ

    ಆನ್ ಅಮೆರಿಕನ್ ಫ್ಯಾಮಿಲಿ

    ಜಗತ್ತಿನ ಮೊಟ್ಟ ಮೊದಲ ರಿಯಾಲಿಟಿ ಶೋ ಎಂದು ಪರಿಗಣಿಸಿರುವುದು 1973ರಲ್ಲಿ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ (ಪಿಬಿಎಸ್) ಪ್ರಸಾರ ಮಾಡಿದ್ದ 'ಆನ್ ಅಮೆರಿಕನ್ ಫ್ಯಾಮಿಲಿ' ಕಾರ್ಯಕ್ರಮವನ್ನು. ಇದನ್ನು ಆ ಕಾಲದಲ್ಲಿ ಟೆಲಿವಿಷನ್ ಡಾಕ್ಯುಮೆಂಟರಿ ಎಂದು ಕರೆಯಲಾಗಿತ್ತು. ಆಗಿನ್ನೂ ರಿಯಾಲಿಟಿ ಶೋ ಎಂಬ ಪದ ಬಳಕೆಯಲ್ಲಿರಲಿಲ್ಲ. 1971ರ ಮೇ 30ರಿಂದ ಡಿಸೆಂಬರ್ 31ರವರೆಗೆ ಇದನ್ನು ಚಿತ್ರೀಕರಿಸಲಾಗಿತ್ತು. ಸುಮಾರು 300 ಗಂಟೆಗಳಲ ಕಚ್ಚಾ ವಿಡಿಯೋವನ್ನು ಎಡಿಟ್ ಮಾಡಿ 1973ರ ಜನವರಿ 11ರಿಂದ ಮಾರ್ಚ್ 29ರವರೆಗೆ ಪ್ರತಿ ಗುರುವಾರ ರಾತ್ರಿ 9 ಗಂಟೆಗೆ ಒಟ್ಟು 12 ಎಪಿಸೋಡ್‌ಗಳನ್ನು ಪ್ರಸಾರ ಮಾಡಲಾಗಿತ್ತು.

    'ಬಿಗ್ ಬಾಸ್' ನಡೆಯುತ್ತೋ, ಇಲ್ಲವೋ? ಆಯೋಜಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ'ಬಿಗ್ ಬಾಸ್' ನಡೆಯುತ್ತೋ, ಇಲ್ಲವೋ? ಆಯೋಜಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    ಮಧ್ಯಮವರ್ಗದ ಬದುಕು

    ಮಧ್ಯಮವರ್ಗದ ಬದುಕು

    ಬಿಲ್ ಲೌಡ್ ಮತ್ತು ಪ್ಯಾಟ್ ಲೌಡ್ ಹಾಗೂ ಅವರ ಐವರು ಮಕ್ಕಳಿದ್ದ ಸಾಂಟಾ ಬಾರ್ಬರಾ ಮನೆಗೆ ಮೂರು ಕ್ಯಾಮೆರಾಗಳನ್ನು ಹೊತ್ತ ತಂಡ ತೆರಳಿತ್ತು. ನಿರ್ಮಾಪಕ ಕ್ರೆಗ್ ಗಿಲ್ಬರ್ಟ್ ಈ ಡಾಕ್ಯುಮೆಂಟರಿ ಚಿತ್ರಿಸಲು ಯೋಜನೆ ರೂಪಿಸಿದ್ದರು. ಅಮೆರಿಕದ ಮಧ್ಯಮವರ್ಗದ ಕುಟುಂಬವೊಂದರ ಜೀವನಕ್ರಮಗಳು ಮತ್ತು ಮನಸ್ಥಿತಿಯನ್ನು ಚಿತ್ರೀಕರಿಸಲು ಮುಂದಾಗಿದ್ದರು. ಅವರಿಗೆ ಪ್ರತ್ಯೇಕವಾಗುತ್ತಿರುವ ಕುಟುಂಬದ ಡ್ರಾಮಾಗಳು ಬೇಕಿರಲಿಲ್ಲ. ಸೆನ್ಸೇಷನಲ್ ಸಂಗತಿಗಳು ಬೇಕಿದ್ದವು. ಅದು ಈ ಮನೆಯಲ್ಲಿ ಸಿಕ್ಕಿತ್ತು.

    10 ಮಿಲಿಯನ್ ವೀವರ್ಸ್

    10 ಮಿಲಿಯನ್ ವೀವರ್ಸ್

    ಬಿಲ್ ಮತ್ತು ಪ್ಯಾಟ್ ಅವರ 21 ವರ್ಷದ ವೈವಾಹಿಕ ಬದುಕು ಅಂತ್ಯಗೊಂಡಿತು. ವ್ಯವಹಾರದಲ್ಲಿನ ನಷ್ಟದಿಂದ ಬಿಲ್ ಲೌಡ್ ಹೈರಾಣಾಗಿದ್ದರು. ಅವರ 20 ವರ್ಷದ ಹಿರಿ ಮಗ ಲ್ಯಾನ್ಸ್ ಸಲಿಂಗಕಾಮಿಯಾಗಿದ್ದು, ಅದರ ಬಗ್ಗೆ ಹೇಳಿಕೊಳ್ಳಲಾಗದೆ ಪೋಷಕರನ್ನು ತೊರೆದು ಮನೆಬಿಟ್ಟಿದ್ದ. ವಾರದಲ್ಲಿ ಒಂದು ದಿನ ಒಂದು ಗಂಟೆ 12 ಕಂತುಗಳಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಅಮೆರಿಕದ ವೀಕ್ಷಕರನ್ನು ಹುಚ್ಚೆಬ್ಬಿಸಿತ್ತು. 10 ಮಿಲಿಯನ್ ವೀವರ್ಸ್‌ಗಳನ್ನು ಪಡೆದಿತ್ತು. ಇಬ್ಬರೂ ವಿಚ್ಚೇದನಕ್ಕೆ ಮುಂದಾಗುವ ಕಿತ್ತಾಟಗಳನ್ನೆಲ್ಲವನ್ನೂ ಕ್ಯಾಮೆರಾ ಸೆರೆಹಿಡಿದಿತ್ತು. ಬಳಿಕ ಈ ಕುಟುಂಬದ ಕಥೆಯನ್ನು ನ್ಯೂಸ್ ವೀಕ್, ದಿ ಬ್ರೋಕನ್ ಫ್ಯಾಮಿಲಿ ಎಂಬ ಹೆಸರಿನಲ್ಲಿ ಲೇಖನ ರೂಪದಲ್ಲಿ ಪ್ರಕಟಿಸಿತ್ತು.

    ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

    ಸಹಜವೇ, ನಟನೆಯೇ?

    ಸಹಜವೇ, ನಟನೆಯೇ?

    ಕುಟುಂಬದ ದಿನಚರಿ, ಅವರ ನಡುವಿನ ಸರಸ-ವಿರಸ ಎಲ್ಲವನ್ನೂ ಇದರಲ್ಲಿ ಚಿತ್ರೀಕರಿಸಲಾಗಿತ್ತು. 1.2 ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ಕಾರ್ಯಕ್ರಮ ಸಿದ್ಧವಾಗಿತ್ತು. ಕ್ಯಾಮೆರಾಗಳ ಹಾಜರಾತಿಯಲ್ಲಿ ಸಹಜವಾಗಿ ವರ್ತಿಸುವಂತೆ ಹೊಂದಿಕೊಳ್ಳಲು ಈ ಕುಟುಂಬಕ್ಕೆ ಸುಮಾರು ಒಂದು ತಿಂಗಳು ಬೇಕಾಗಿತ್ತಂತೆ. ಈ ಶೋ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಖಾಸಗಿ ಜೀವನವನ್ನು ತೋರಿಸಿ ಹಣ ಮಾಡುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಕ್ಯಾಮೆರಾ ಮುಂದೆ ಅವರು ಹೀಗೆಯೇ ಕಾಣಿಸಿಕೊಂಡಿದ್ದು ಸತ್ಯವೇ? ಅವರು ನಟಿಸಿದ್ದೇ ಅಥವಾ ವಾಸ್ತವವಾಗಿಯೂ ಹಾಗೆಯೇ ಇದ್ದರೇ? ವಾಸ್ತವಕ್ಕಿಂತ ವಿಭಿನ್ನವಾಗಿ ತೋರಿಸಲು ನಾಟಕೀಯವಾಗಿ ಎಡಿಟ್ ಮಾಡಲಾಗಿತ್ತೇ? ಇತ್ಯಾದಿ ಪ್ರಶ್ನೆಗಳು ಮೂಡಿದ್ದವು. ಚಾನೆಲ್‌ಗೂ ಇದೇ ಬೇಕಿತ್ತು. ಸಹಜವಾಗಿಯೇ ವೀಕ್ಷಕರು ಹೆಚ್ಚಿದರು.

    ಪ್ರಸಿದ್ಧಿ ಪಡೆದ ಲ್ಯಾನ್ಸ್ ಲೌಡ್

    ಪ್ರಸಿದ್ಧಿ ಪಡೆದ ಲ್ಯಾನ್ಸ್ ಲೌಡ್

    ತಾನು ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿಕೊಂಡ ಲ್ಯಾನ್ಸ್, ಈ 'ರಿಯಾಲಿಟಿ ಶೋ' ಮುಗಿದ ಬಳಿಕವೂ ಇನ್ನಿತರೆ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ. ಅಷ್ಟೇ ಅಲ್ಲ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐಕಾನ್ ಆಗಿಯೂ ಬೆಳೆದ. ಅಮೆರಿಕದ ರಾಷ್ಟ್ರೀಯ ಎಲ್‌ಜಿಬಿಟಿ ನ್ಯೂಸ್ ಮ್ಯಾಗಜಿನ್ 'ದಿ ಅಡ್ವೊಕೇಟ್' ಅಂಕಣಕಾರ ಕೂಡ ಆಗಿದ್ದ.

    ಹತ್ತಾರು ಶೋಗಳಿಗೆ ಸ್ಫೂರ್ತಿ

    ಹತ್ತಾರು ಶೋಗಳಿಗೆ ಸ್ಫೂರ್ತಿ

    ಈ ಕಾರ್ಯಕ್ರಮದಿಂದ ಸ್ಫೂರ್ತಿಗೊಂಡ ಬಿಬಿಸಿ, 1974ರಲ್ಲಿ ಇಂಗ್ಲೆಂಡ್‌ನ ಬರ್ಕ್‌ಶೈರ್‌ನಲ್ಲಿನ ಕಾರ್ಮಿಕ ವರ್ಗದ ವಿಲ್ಕಿನ್ಸ್ ಕುಟುಂಬದ ದೈನಂದಿನ ಜೀವನ ಮತ್ತು ಸಂಕಷ್ಟಗಳನ್ನು ತೋರಿಸುವ 12 ಗಂಟೆಗಳ ಕಂತುಗಳುಳ್ಳ 'ದಿ ಫ್ಯಾಮಿಲಿ' ಎಂಬ ರಿಯಾಲಿಟಿ ಕಾರ್ಯಕ್ರಮ ಪ್ರಸಾರ ಮಾಡಿತು. ಇದರ ನಂತರ 1977ರಲ್ಲಿ 'ಮೇರಿ ಹಾರ್ಟ್‌ಮನ್, ಮೇರಿ ಹಾರ್ಟ್‌ಮನ್' ಧಾರಾವಾಹಿ ಪ್ರಸಾರವಾಯಿತು. ಇದು ಅಮೆರಿಕದ ಟಿಪಿಕಲ್ ಗೃಹಿಣಿಯ ಪಾತ್ರವನ್ನು ತೋರಿಸಿತ್ತು. 1979ರಲ್ಲಿ 'ರಿಯಲ್ ಲೈಫ್' ಪ್ರಸಾರರವಾಯಿತು. ಹೀಗೆ ಹತ್ತಾರು ಕಾರ್ಯಕ್ರಮಗಳಿಗೆ ಅದು ಸ್ಫೂರ್ತಿಯಾಯಿತು. 1983ರಲ್ಲಿ 'ಆನ್ ಅಮೆರಿಕನ್ ಫ್ಯಾಮಿಲಿ ರಿ ವಿಸಿಟೆಡ್: ದಿ ಲೌಡ್ಸ್ 10 ಇಯರ್ಸ್ ಲೇಟರ್' ಎಂದು ಮತ್ತೆ ಆ ಕುಟುಂಬದ ಬಗ್ಗೆ ಕಾರ್ಯಕ್ರಮ ಪ್ರಸಾರವಾದರೆ, 2003ರಲ್ಲಿ 'ಲ್ಯಾನ್ಸ್ ಲೌಡ್! ಎ ಡೆತ್ ಇನ್ ಆನ್ ಅಮೆರಿಕನ್ ಫ್ಯಾಮಿಲಿ' ಎಂಬ ಕಾರ್ಯಕ್ರಮ ಲ್ಯಾನ್ಸ್ ಲೌಡ್ ಬಗ್ಗೆ ಪ್ರಸಾರವಾಯಿತು.

    ಖಾಸಗಿ ಬದುಕು ಮನರಂಜನೆಯ ಸರಕು

    ಖಾಸಗಿ ಬದುಕು ಮನರಂಜನೆಯ ಸರಕು

    ಹೀಗೆ ಮೊದಲ ರಿಯಾಲಿಟಿ ಶೋ ಎಷ್ಟರಮಟ್ಟಿಗೆ ಯಶಸ್ಸು ಗಳಿಸಿತ್ತು ಎಂದರೆ ಅದರ ಮೇಲೆಯೇ ಮೂರು ದಶಕಗಳಲ್ಲಿ ಮತ್ತೆ ಎರಡು ಕಾರ್ಯಕ್ರಮಗಳು ಪ್ರಸಾರವಾದರೆ, ಅದೇ ರೀತಿ ಕಷ್ಟದಲ್ಲಿರುವ ಕುಟುಂಬವೊಂದರ ಬದುಕನ್ನು ಮನರಂಜನೆಯ ಸರಕನ್ನಾಗಿಸಿ ಜನರನ್ನು ಸೆಳೆಯುವ ನೂರಾರು ಕಾರ್ಯಕ್ರಮಗಳಿಗೆ ಸ್ಫೂರ್ತಿಯಾಯಿತು. ಅದರ ಮತ್ತೊಂದು ಮಗ್ಗುಲಿನ ಮೊಗ್ಗುಗಳೇ ಬಿಗ್ ಬ್ರದರ್, ಬಿಗ್ ಬಾಸ್‌ನಂತಹ ಕಾರ್ಯಕ್ರಮಗಳು. ಅವುಗಳ ಬಗ್ಗೆ ಇನ್ನಷ್ಟು ಆಸಕ್ತಿಕರ ಮಾಹಿತಿ ಮುಂದೆ ನೀಡಲಿದ್ದೇವೆ.

    English summary
    An American Family telecasted in PBS in 1973 was the world's first reality show.
    Wednesday, July 8, 2020, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X