'ಹಿಟ್ಲರ್ ಕಲ್ಯಾಣ'ದಲ್ಲಿ ಗ್ಲಾಮರಸ್ ಲುಕ್ ಕೊಟ್ಟ ನಟಿ ರಜನಿ: ಮೊದಲ ಪ್ರಯತ್ನದಲ್ಲೇ ಫುಲ್ ಖುಷ್
ನಟ, ನಿರ್ದೇಶಕ ದಿಲೀಪ್ ರಾಜ್ ನಟಿಸುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಇದೀಗ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜನಿ ಅವರ ಎಂಟ್ರಿ ಯಾವತ್ತೂ ಆಗಿದೆ. ಎಂಟ್ರಿ ಆದಲ್ಲಿಂದ ಧಾರಾವಾಹಿಯಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಹೆಚ್ಚಾಗಿದೆ.
ಹೌದು! 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ರಜನಿಯವರು ಈಗಾಗಲೇ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದ್ದಾರೆ. ಇನ್ನು ರಜಿನಿ ಅವರ ಪಾತ್ರವು ಧಾರಾವಾಹಿಯ ಕಥೆಗೆ ಹಲವಷ್ಟು ತಿರುವುಗಳನ್ನು ಕೊಡುತ್ತಿರುವುದು ನಿಜ.

ಅಂತರ ಪಾತ್ರ ಮಾಡಲು ಅಳುಕಿತ್ತು
ಮೊದಲಿಗೆ ರಜಿನಿಗೆ ಅಂತರ ಪಾತ್ರ ದೊರೆತಾಗ ನಟಿಸಲು ಸ್ವಲ್ಪ ಹಿಂಜರಿದರಂತೆ. ಏಕೆಂದರೆ, ಈ ಪಾತ್ರಕ್ಕೆ ಎರಡು ದೊಡ್ಡ ದೊಡ್ಡ ಮಕ್ಕಳಿದ್ದಾರೆ. ಆದರೆ ನಿರ್ದೇಶಕರು ಹಾಗೂ ಧಾರಾವಾಹಿ ತಂಡ ರಜಿನಿ ಅವರಿಗೆ ಮಕ್ಕಳ ಮಲತಾಯಿ ಪಾತ್ರವನ್ನು ಮಾಡುವುದಾಗಿ ಹೇಳಿದ ಮೇಲೆ ಒಪ್ಪಿಕೊಂಡರಂತೆ. ಈಗ ಆ ಪಾತ್ರವೇ ಧಾರಾವಾಹಿಯ ಹೈಲೈಟ್‌ಗಳಲ್ಲೊಂದು.
ಹೊಸ ಪಾತ್ರಕ್ಕಾಗಿ ಸಾಕಷ್ಟು ತಯಾರಿ
'ಅಮೃತವರ್ಷಿಣಿ' ಧಾರಾವಾಹಿಯ ಅಮೃತ ಎಂದೇ ಫೇಮಸ್ ಆಗಿರುವ ಇವರು ಇಂದಿಗೂ ಬಹಳಷ್ಟು ಜನರಿಂದ ಅಮೃತ ಎಂದೇ ಕರೆಯಲ್ಪಡುತ್ತಾರಂತೆ. ಹೀಗಿರುವಾಗ ಈಕೆ ಅಂತರ ಎಂಬ ಹೊಸ ಪಾತ್ರವನ್ನು ಒಗ್ಗೂಡಿಸಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಾರೆ.
ಗ್ಲಾಮರಸ್ ಅವತಾರದಲ್ಲಿ ರಜಿನಿ
ರಜಿನಿ ಅವರು ಅಂತರ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡಾ ಮಾಡಿಕೊಂಡಿದ್ದಾರೆ. ಬಹಳಷ್ಟು ಯೋಚಿಸಿದ ಬಳಿಕವಷ್ಟೇ ಅಂತರ ಪಾತ್ರದಲ್ಲಿ ನಟಿಸಲು ಅಸ್ತು ಎಂದಿದ್ದಾರೆ ರಜಿನಿ. ಅದಕ್ಕಾಗಿ ಕಣ್ಣಿನ ಬಣ್ಣವನ್ನು ಲೆನ್ಸ್ ಮೂಲಕ ಬದಲಾಯಿಸಿಕೊಂಡಿದ್ದಾರೆ. ಹಾಗೂ ರಜಿನಿ ಅವರ ಬೇರೆಯಲ್ಲ ಪಾತ್ರಗಳಿಗಿಂತಲೂ ಈ ಪಾತ್ರ ಹೆಚ್ಚು ಗ್ಲಾಮರಸ್ ಆಗಿದೆ.

ಹೆಸರು ತಂದುಕೊಟ್ಟ ಪಾತ್ರ ಅಂತರ
ಧಾರಾವಾಹಿಯಲ್ಲಿ ಅಂತರ ಫೋಟೊವನ್ನು ಆಗಾಗ ತೋರಿಸುತ್ತಲೇ ಇದ್ದರು. ಈ ವೇಳೆ ವೀಕ್ಷಕರು ಧಾರಾವಾಹಿಗೆ ಯಾವಾಗ ಬರುತ್ತೀರಾ? ಅಂತ ನಟಿ ರಜನಿ ಬಳಿ ಪ್ರಶ್ನೆ ಮಾಡುತ್ತಲೇ ಇದ್ದರು. ವಿಶೇಷ ಅಂದ್ರೆ, ಫೋಟೊದಲ್ಲೂ ಗ್ಲಾಮರಸ್ ರೋಲ್‌ನಲ್ಲೇ ಕಂಡಿದ್ದರು. ಈ ಫೋಟೊ ವೀಕ್ಷಕರನ್ನು ಹೆಚ್ಚು ಕುತೂಹಲವನ್ನು ಹುಟ್ಟು ಹಾಕಿತ್ತು. ಈಗ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಿಯಾಲಿಟಿ ಶೋವಿನಲ್ಲಿಯೂ ಭಾಗಿ
ಅಮೃತ ಪಾತ್ರದಂತೆ ಅಂತರ ಪಾತ್ರವಲ್ಲ. ಅಂತರ ಬಹಳ ದಿಟ್ಟ ಹಾಗೂ ನೇರವಾಗಿ ಮಾತನಾಡುವ ಮಹಿಳೆಯ ಪಾತ್ರ. ಹಾಗಾಗಿ ರಜಿನಿ ಅವರು ಅಂತರ ಪಾತ್ರವನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ. 'ಅಮೃತವರ್ಷಿಣಿ' ಧಾರಾವಾಹಿ ನಂತರ 'ಆತ್ಮಬಂಧನ' ಧಾರಾವಾಹಿಯಲ್ಲಿ ಮೋಡಿ ಮಾಡಿದ ರಜಿನಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಜೊತೆಗೆ ಮಜಾಟಾಕೀಸ್ ನ ಕೆಲವೊಂದು ಸಂಚಿಕೆಯಲ್ಲಿಯೂ ಈಕೆ ಅಭಿನಯಿಸಿದ್ದ ಈಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ.


Click it and Unblock the Notifications











