Hitler Kalyana: ಹೆಂಡತಿ ಕಿಡ್ನ್ಯಾಪ್ ಬಗ್ಗೆ ತಿಳಿದ ಕಿಶೋರ್ ನಿಜವಾಗಲೂ ಎಜೆ ಮಗನಾ..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮನೆಗೆ ಕಿಶೋರ್ ಬಂದಿದ್ದಾನೆ. ಕಂಪನಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಕಿಶೋರ್ ಕೆಲಸದ ವಿಷಯದಲ್ಲಿ ಎಜೆಯಂತೆಯೇ.

ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುವ ಕಿಶೋರ್, ಮನೆಯವರ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದಾನೆ. ಆದರೆ ಅಂತರಾಳನ್ನು ಮಾತನಾಡಿಸಲು ಸಿಡುಕುತ್ತಾನೆ.

Hitler Kalyana Kannada serial 16th November episode written update

ಈ ಹಿಂದೆಯೇ ದುರ್ಗಾ, ಕಿಶೋರ್ ಜೊತೆಗೆ ಫೋನ್‌ನಲ್ಲಿ ಮಾತನಾಡುವಾಗ, ಅಂತರಾ ಬಗ್ಗೆ ಸತ್ಯವನ್ನು ಹೇಳಿದ್ದಳು. ಹೀಗಾಗಿ ಕಿಶೋರ್‌ಗೆ ಅಂತರಾಳನ್ನು ಕಂಡರೆ ಆಗುವುದಿಲ್ಲ.

ಕಂಪನಿಯ ಹಣ ತೆಗೆದುಕೊಂಡಿರುವ ಎಜೆ

ಕಿಶೋರ್ ಕಂಪನಿಯ ಹಣಕಾಸಿನ ಬಗ್ಗೆ ವಿವರಗಳನ್ನು ಚೆಕ್ ಮಾಡುತ್ತಿರುತ್ತಾನೆ. ಶಾಕ್ ಆಗುವ ಕಿಶೋರ್ ಕುಳಿತ ಜಾಗದಿಂದಲೇ ಎಜೆಯನ್ನ ಕೂಗಿ ಕರೆಯುತ್ತಾನೆ. ಆಗ ಎಲ್ಲರೂ ಶಾಕ್ ಆಗುತ್ತಾರೆ. ಯಾಕೆಂದರೆ, ಮನೆಯಲ್ಲಿ ಎಲ್ಲರೂ ಎಜೆ ಇರುವ ಜಾಗಕ್ಕೆ ಹೋಗಿ ಮಾತನಾಡುತ್ತಾರೆಯೇ ಹೊರತು ಯಾರೂ ಎಜೆಯನ್ನು ಕರೆಯುವುದಿಲ್ಲ. ಆದರೆ, ಕಿಶೋರ್ ಕಿರುಚುತ್ತಿರುವುದಕ್ಕೆ ಮನೆಯವರೆಲ್ಲಾ ಬೈಯುತ್ತಾರೆ. ಎಜೆ ಮಾತ್ರ ಕೊಂಚವೂ ಕೋಪ ಮಾಡಿಕೊಳ್ಳದೇ, ಕಿಶೋರ್ ಇದ್ದ ಜಾಗಕ್ಕೆ ಬಂದು ಏನಾಯ್ತು ಎಂದು ಕೇಳುತ್ತಾನೆ. ಆಗ ಕಿಶೋರ್, ಆಫೀಸ್‌ನ 40 ಲಕ್ಷ ರೂಪಾಯಿ ಹಣವನ್ನು ಯಾರೋ ಬಳಸಿಕೊಂಡಿದ್ದಾರೆ ಎಂದು ಹೇಳುತ್ತಾನೆ.

Hitler Kalyana Kannada serial 16th November episode written update

ಎಲ್ಲರ ಬಳಿ ಕ್ಷಮೆ ಕೇಳಿದ ಎಜೆ

ಆಗ ಎಜೆ ಸ್ವಲ್ಪವೂ ಶಾಕ್ ಆಗುವುದಿಲ್ಲ. ಬಟ್, ಮನೆಯವರೆಲ್ಲಾ ಎಜೆ ಕಂಪನಿಗೆ ಮೋಸ ಮಾಡಿದ ಆ ವ್ಯಕ್ತಿಗೆ ಶಿಕ್ಷೆಯಾಗಬೇಕು. ಹಾಗೆ ಹೀಗೆ ಎಂದು ಹೇಳುತ್ತಾರೆ. ಆಗ ಎಜೆ ಅದು ಬೇರೆ ಯಾರೂ ಅಲ್ಲ ನಾನೇ ಆ ಹಣವನ್ನು ಬಳಸಿಕೊಂಡಿರುವುದು. ದುರ್ಗಾ ಬ್ಯಾಂಕ್ ಅನ್ನು ಮ್ಯಾನೇಜ್‌ ಮಾಡುತ್ತಿರುವುದರಿಂದ, ನನಗೆ ಅರ್ಜೆಂಟ್ ಆಗಿ ಹಣ ಬೇಕಿತ್ತು. ಹಾಗಾಗಿ ಕಂಪನಿಯ ಹಣ ತೆಗೆದುಕೊಂಡೆ ಎಂದು ಹೇಳುತ್ತಾನೆ. ಜೊತೆಗೆ ಎಲ್ಲರನ್ನೂ ಕ್ಷಮೆ ಕೂಡ ಕೇಳುತ್ತಾನೆ. ಇದರಿಂದ ಮನೆಯವರು ಕೂಡ ಬೇಸರ ಮಾಡಿಕೊಳ್ಳುತ್ತಾರೆ. ಎಜೆ ಹಣ ಬಳಸಿಕೊಂಡಿರುವುದರಲ್ಲಿ ತಪ್ಪಿಲ್ಲ. ತಮ್ಮನ್ನು ಕ್ಷಮೆ ಕೇಳುವ ಅಗತ್ಯವೂ ಇಲ್ಲ ಎಂದು ಮಾತನಾಡುತ್ತಾರೆ.

ದುರ್ಗಾ ಬಗ್ಗೆ ಮಾಹಿತಿ ತಿಳಿದ ಕಿಶೋರ್

ಮಾರನೆಯ ದಿನ ಎಜೆ ಕಿಶೋರ್ ಬಳಿ ಕೇಳುತ್ತಾರೆ. ಯಾಕೆ ನೀನು ಅಂತರಾ ಜೊತೆಗೆ ಸರಿಯಾಗಿ ಮಾತನಾಡುತ್ತಿಲ್ಲ. ನಿಮ್ಮ ನಡುವೆ ಏನಾದರೂ ಜಗಳವಾಯ್ತಾ ಎಂದು ಕೇಳುತ್ತಾನೆ. ಆಗ ಕಿಶೋರ್ ಹಾಗೇನು ಇಲ್ಲ ಎಂದು ಹೇಳಿ ಸುಮ್ಮನಾಗುತ್ತಾನೆ. ಸ್ವಲ್ಪ ಸಮಯದ ಬಳಿಕ ಎಜೆಗೆ ಎಸ್ ಐ ಶಿವಕುಮಾರ್ ಫೋನ್ ಬರುತ್ತದೆ. ಎಜೆ ಇರುವುದಿಲ್ಲ. ಫೋನ್ ಅನ್ನು ಕಿಶೋರ್ ರಿಸೀವ್ ಮಾಡುತ್ತಾನೆ. ಆಗ ಆ ಕಡೆಯಿಂದ ಪೊಲೀಸರು. ದುರ್ಗಾ ಮಿಸ್ಸಿಂಗ್ ವಿಚಾರದ ಬಗ್ಗೆ ಮಾತನಾಡುತ್ತಾರೆ. ಈ ಮಾತನ್ನು ಕೇಳಿ ಕಿಶೋರ್‌ಗೆ ಶಾಕ್ ಆಗುತ್ತದೆ.

ಕಿಶೋರ್ ಎಜೆ ಸ್ವಂತ ಮಗನಲ್ಲ..!

ಎಜೆಯನ್ನು ಮತ್ತೆ ಕೂಗಿ ಕರೆಯುತ್ತಾನೆ. ಆಗ ಅಜ್ಜಿಗೆ ಕೋಪ ಬರುತ್ತದೆ. ಯಾಕೆ ಕಿಶೋರ್ ಪದೇ ಪದೇ ಅಭಿ ಅನ್ನು ಹೀಗೆ ಕರೆಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡುತ್ತಾರೆ. ಎಜೆ ಬಂದ ಬಳಿಕ ದುರ್ಗಾ ಎಲ್ಲಿ. ನನ್ನಿಂದ ಏನನ್ನು ಮುಚ್ಚಿಡುತ್ತಿದ್ದೀರಾ? ದುರ್ಗಾ ಮಿಸ್ ಆಗಿರುವುದು ನಿಜಾನಾ? ಎಂದು ಪ್ರಶ್ನೆ ಮಾಡುತ್ತಾನೆ. ಎಜೆ ಉತ್ತರ ಕೊಡಲಾಗದೇ ಸುಮ್ಮನೇ ನಿಲ್ಲುತ್ತಾನೆ. ಇನ್ನು ಕಿಶೋರ್ ಎಜೆಯ ಸ್ವಂತ ಮಗನಲ್ಲ. ಬದಲಿಗೆ ಸಾಕು ಮಗನಾಗಿದ್ದಾನೆ.

More from Filmibeat

English summary
Hitler Kalyana Kannada serial today Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X