Hitler Kalyana: ಅಂತರಾ ಜಸ್ಟ್ ಎಸ್ಕೇಪ್: ಲೀಲಾ ಹೊಸ ಪ್ಲಾನ್ ಏನು..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾಳನ್ನು ಎಜೆ ತಮ್ಮ ಕನಸಿನ ಮನೆ ನಿರ್ಮಾಣದ ಜಾಗಕ್ಕೆ ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ಎಜೆ ಕೇಳುವ ಪ್ರಶ್ನೆಗಳಿಗೆ ಅಂತರಾ ತತ್ತರಿಸಿ ಹೋಗಿದ್ದಾಳೆ.

ಎಜೆ ಪ್ರಶ್ನೆಗಳಿಗೆ ಉತ್ತರ ಕೊಡುವ ಆತುರದಲ್ಲಿ ಸಿಕ್ಕಿ ಬೀಳುತ್ತಿದ್ದಾಳೆ. ತಪ್ಪು ತಪ್ಪು ಮಾಹಿತಿ ನೀಡಿ ಎಜೆ ಕೈಯಲ್ಲಿ ಬೈಯಿಸಿಕೊಳ್ಳುವುದೊಂದು ಬಾಕಿ ಇದೆ.

ಹೇಗಾದರೂ ಮಾಡಿ ಪರಿಸ್ಥಿತಿಯಿಂದ ಎಸ್ಕೇಪ್ ಆಗಲು ಫೋನ್ ಒಂದನ್ನು ಮಾಡುತ್ತಾಳೆ. ಅದೂ ಕೂಡ ಯಾರಿಗೆ ಎಂಬುದು ಈಗಲೂ ಯಾರಿಗೂ ಗೊತ್ತಿಲ್ಲ.

hitler-kalyana-kannada-serial

ಅಂತರಾಳನ್ನು ಬೈದ ಆ ವ್ಯಕ್ತಿ

ಆ ವ್ಯಕ್ತಿ ಅಂತರಾಳಿಗೆ ಸಹಾಯ ಮಾಡುತ್ತಿದ್ದಾನೆ. ಎಜೆಯಿಂದ ಎಲ್ಲಾ ಆಸ್ತಿ ಅನ್ನು ತನ್ನ ಹೆಸರಿಗೆ ಮಾಡಿಕೊಳ್ಳುವಂತೆ ಹೇಳಿದ್ದಾನೆ. ಹೀಗಾಗಿ ಅಂತರಾಳಂತೆಯೇ ಇರುವ ಪ್ರಾರ್ಥನಾ, ಎಜೆ ಮನೆಗೆ ಬಂದು ಸೇರಿಕೊಂಡಿದ್ದಾಳೆ. ಆವ್ಯಕ್ತಿಗೆ ಫೋನ್ ಮಾಡಿ ಎಜೆ ಏನೇನೋ ಕೇಳುತ್ತಿದ್ದಾನೆ. ಅಂತರಾಳನ್ನು ಹೂತು ಹಾಕಿರುವ ಪಾಳು ಬಂಗಲೆಗೆ ಕರೆದುಕೊಂಡು ಬಂದಿದ್ದಾನೆ. ಇಲ್ಲಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ನಾನು ಸಿಕ್ಕಿ ಬಿದ್ದರೆ ಕಷ್ಟವಾಗುತ್ತದೆ ಏನು ಮಾಡಲಿ ಎಂದು ಕೇಳುತ್ತಾನೆ. ಆಗ ಆ ವ್ಯಕ್ತಿ ಪದೇ ಪದೇ ನನಗೆ ಫೋನ್ ಮಾಡ್ಬೇಡಿ. ಇದರಿಂದ ನಿನಗೆ ತೊಂದರೆ ಆಗುತ್ತೆ. ಎಜೆಗೆ ಸತ್ಯ ಗೊತ್ತಾದರೆ, ನಿನ್ನನ್ನು ಹೂತು ಹಾಕಿ ಬಿಡುತ್ತಾನೆ. ಸಂದರ್ಭವನ್ನು ನೀನೇ ಮ್ಯಾನೇಜ್ ಮಾಡಬೇಕು ಎಂದು ಹೇಳಿ ಕಟ್ ಮಾಡುತ್ತಾನೆ.

ಜಸ್ಟ್ ಎಸ್ಕೇಪ್ ಆದ ಅಂತರಾ

ಫೋನ್ ಕಟ್ ಆಗುವ ಮುನ್ನವೇ ಬರುವ ಎಜೆ ಯಾವ ಮಾತನ್ನೂ ಕೇಳಿಸಿಕೊಂಡಿರುವುದಿಲ್ಲ. ಇದರಿಂದ ಅಂತರಾ ಜಸ್ಟ್ ಎಸ್ಕೇಪ್ ಆಗುತ್ತಾಳೆ. ಯಾರು ಫೋನ್ ಮಾಡಿದ್ದು ಎಂದಿದ್ದಕ್ಕೆ ಲೀಲಾ ಎಂದು ಸುಳ್ಳು ಹೇಳುತ್ತಾಳೆ. ಆದರೆ, ಅಂತರಾ, ಎಜೆಗೆ ಅದೇ ಸಮಯಕ್ಕೆ ಫೋನ್ ಮಾಡಿ ಊಟ ಮಾಡಿ ಎಂದು ನೆನಪು ಮಾಡುತ್ತಾಳೆ. ಇದರಿಂದ ಹೆದರಿಕೊಂಡು ಇಲ್ಲೇ ಇದ್ದರೆ, ಎಜೆ ಇನ್ನು ಏನೇನು ಪ್ರಶ್ನೆಗಳನ್ನು ಕೇಳುತ್ತಾನೋ ಎಂದು ಹೆದರಿದ ಅಂತರಾ ತಲೆ ಸುತ್ತುತಿರುವಂತೆ ನಟಿಸುತ್ತಾಳೆ. ಎಜೆ ಅಂತರಾಳನ್ನು ಕರೆದುಕೊಂಡು ಹೊರಡುತ್ತಾನೆ.

hitler-kalyana-kannada-serial

ಸರಸ್ವತಿಗೆ ಕಪಾಳಮೋಕ್ಷ

ಇನ್ನು ಲೀಲಾಳಿಗೆ ಒಂದು ಸಲ ಅಂತರಾ ಮೇಲೆ ಅನುಮಾನ ಬಂದರೆ, ಮತ್ತೊಂದು ಬಾರಿ ದುರ್ಗಾ ಮೇಲೆ ಅನುಮಾನ ಬರುತ್ತದೆ. ಆದರೆ, ದುರ್ಗಾ ಬೇರೆ ಕೆಲಸದ ಮೇಲೆ ಹೊರಗೆ ಹೋಗಿದ್ದಾಳೆ. ಸರಸ್ವತಿ ಸತ್ಯ ತಿಳಿಯದ ಕಾರಣ ಅವಳು ಅಂತರಾಳನ್ನು ಸಪೋರ್ಟ್ ಮಾಡುತ್ತಿರುತ್ತಾಳೆ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲಾ ಲೀಲಾಳನ್ನು ಬೈಯುತ್ತಿರುತ್ತಾಳೆ. ಈಗಲೂ ಅದೇ ಕೆಲಸವನ್ನು ಮಾಡುತ್ತಿರುತ್ತಾಳೆ. ಅಜ್ಜಿ ಬಂದು ಸರಸ್ವತಿ ಕೆನ್ನೆಗೆ ಬಾರಿಸಿ, ಲೀಲಾ ಈ ಮನೆ ಸೊಸೆ. ಅವಳನ್ನು ಅತ್ತೆ ಎಂದು ಒಪ್ಪಿಕೋ ಸುಮ್ಮನೆ ಉದ್ಧಟತನ ತೋರಿಸಬೇಡ ಎಂದು ವಾರ್ನಿಂಗ್ ಕೊಟ್ಟು ಕಳಿಸುತ್ತಾರೆ.

ಅಂತರಾಳನ್ನು ಪರೀಕ್ಷಿಸುತ್ತಾಳಾ ಲೀಲಾ

ಇನ್ನು ಲೀಲಾಳಿಗೆ ಅಂತರಾ ಹಾಗೂ ದುರ್ಗಾ ಇಬ್ಬರ ಮೇಲೂ ಅನುಮಾನ ಕಾಡುತ್ತಿರುತ್ತದೆ. ದುರ್ಗಾ ಬೇರೆ ಆಫೀಸ್ ಕೆಲಸದ ಮೇಲೆ ಹೊರಗಡೆ ಹೋಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ವಿಶ್ವರೂಪ್ ಮತ್ತು ರೂಪ ಇಬ್ಬರು ಆಟಗಳನ್ನು ನೋಡಿದ ಲೀಲಾಳಿಗೆ ಅಂತರಾಳನ್ನು ಪರೀಕ್ಷೆ ಮಾಡಬೇಕು ಎನಿಸುತ್ತದೆ. ಅಂತರಾ ಅವರ ಯಾವುದಾದರೂ ಒಂದು ವಿಚಾರವನ್ನು ಇಟ್ಟುಕೊಂಡು ಪ್ರಶ್ನೆ ಮಾಡಬೇಕು ಎಂದು ಲೀಲಾ ಅಂದುಕೊಳ್ಳುತ್ತಾಳೆ. ಲೀಲಾ ಹೂಡುವ ಬಾಣಕ್ಕೆ ಡುಪ್ಲಿಕೇಟ್ ಅಂತರಾ ಸಿಕ್ಕಿ ಬೀಳುತ್ತಾಳಾ ಕಾದು ನೋಡಬೇಕಿದೆ.

More from Filmibeat

English summary
hitler kalyana Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X