Hitler Kalyana: ಎಜೆ ವಿಶ್ ಮಾಡಿಲ್ಲ ಎಂದು ಉಪವಾಸ ಮಾಡುತ್ತಿರುವ ಲೀಲಾ

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಳನ್ನು ಆಸ್ಪತ್ರೆ ನೆಪದಲ್ಲಿ ಎಜೆ ಆಚೆ ಕರೆದುಕೊಂಡು ಹೋಗಿದ್ದಕ್ಕೆ ಖುಷಿಯಾಗಿರುತ್ತದೆ. ಆದರೆ, ಅಂತರಾ ಮತ್ತು ಸರಸ್ವತಿ ಉರಿದುಕೊಂಡಿರುತ್ತಾರೆ. ಲೀಲಾ ತನ್ನ ಹುಟ್ಟುಹಬ್ಬಕ್ಕೆ ಮೊದಲು ಎಜೆನೇ ವಿಶ್ ಮಾಡಬೇಕು ಎಂದು ರಾತ್ರಿ 12 ಗಂಟೆಯಿಂದ ಕಾಯುತ್ತಿರುತ್ತಾಳೆ. ಆದರೆ, ಎಜೆ ಮರೆತಿದ್ದಾನೋ ಇಲ್ಲ ಬೇಕಂತಲೇ ವಿಶ್ ಮಾಡಿಲ್ವೋ ಗೊತ್ತಿಲ್ಲ.

ಲೀಲಾಳಿಗೆ ತನ್ನ ಪತಿ ಹುಟ್ಟುಹಬ್ಬಕ್ಕೆ ವಿಶ್ ಮಾಡದೇ ಇರುವುದು ಬೇಸರ ತಂದಿದೆ. ಹೀಗಾಗಿ ಅವಳಿಗೆ ಬೇರೆಯವರು ವಿಶ್ ಮಾಡುವುದು ಕೂಡ ಬೇಕಾಗಿಲ್ಲ. ಬೇರೆ ಯಾರೇ ವಿಶ್ ಮಾಡಿದರೂ ವಾಪಸ್ ಮಾತನಾಡದ ಲೀಲಾ, ಮೊದಲು ಲೀಲಾ ವಿಶ್ ಮಾಡಬೇಕು. ನಂತರವೇ ಬೇರೆಯವರ ವಿಶ್‌ಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳುತ್ತಾಳೆ.

Hitler Kalyana Kannada serial 20th october episode written update

ಲಕ್ಷ್ಮೀ, ರೂಪ ಮತ್ತು ಅಜ್ಜಿ ಬೇಸರ ಮಾಡಿಕೊಂಡಿದ್ದಾರೆ. ಲೀಲಾ ಅಂತೂ ಎಜೆ ತನಗೆ ವಿಶ್ ಮಾಡುವವರೆಗೂ ತಾನು ಒಂದು ಹನಿ ನೀರನ್ನು ಕೂಡ ಕುಡಿಯುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಇದು ಮನೆಯವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಶಪಥ ಮಾಡಿರುವ ಲೀಲಾ

ಎಜೆ ರೂಮ್‌ನಿಂದ ಹೊರ ಬರುವುದನ್ನೇ ಎಲ್ಲರೂ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಅಂತರಾ, ಎಜೆ ಗಮನವನ್ನು ಬೇರೆಡೆಗೆ ಸೆಳೆಯಲು ಪ್ಲಾನ್ ಮಾಡಿದ್ದಾಳೆ. ಎಜೆ ತನಗೆ ಬೇಕಾದ ಸ್ನೇಹಿತರೊಬ್ಬರ ಹುಟ್ಟುಹಬ್ಬಕ್ಕಾಗಿ ಹೂ ಗುಚ್ಛವನ್ನು ತರಿಸಿ, ಸ್ವತಃ ತಾನೇ ಗ್ರೀಟಿಂಗ್ ಬರೆಯುತ್ತಿರುತ್ತಾನೆ. ಇದನ್ನು ಗಮನಿಸಿದ ಅಂತರಾಳಿಗೆ ಕೋಪ ಬರುತ್ತದೆ.

ಲೀಲಾ ಹುಟ್ಟುಹಬ್ಬ ಮರೆತ ಎಜೆ

ಲೀಲಾಗೆ ವಿಶ್ ಮಾಡಲು ಎಂದುಕೊಳ್ಳುತ್ತಾಳೆ. ಆದರೆ, ಎಜೆ ಇದು ನನಗೆ ಬಹಳ ಬೇಕಾದ ವ್ಯಕ್ತಿಗೆ. ಆಫಿಸಿಗೆ ಕಳಿಸಬೇಕು. ಇಂದು ಫುಲ್ ಡೇ ನಾನು ನಿನ್ನನ್ನು ಹೊರಗಡೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಇದನ್ನು ಕೇಳಿ ಖುಷಿ ಪಟ್ಟ ಅಂತರಾ, ಇಂದು ಲೀಲಾ ಕತೆ ಮುಗಿಯಿತು ಎನ್ನುತ್ತಾಳೆ.

Hitler Kalyana Kannada serial 20th october episode written update

ಹಳೆ ಅಂಗಡಿಗೆ ಕರೆ ತಂದ ಎಜೆ

ಎಜೆ ಬೊಕ್ಕೆಯನ್ನು ಲೀಲಾಳಿಗೆ ತಂದು ಕೊಟ್ಟಾಗ ಫುಲ್ ಹ್ಯಾಪಿ ಆಗುತ್ತಾಳೆ. ಆದರೆ, ಇದನ್ನು ಬೇರೊಬ್ಬರಿಗೆ ತಲುಪಿಸಬೇಕು ಎಂದಾಗ ಬೇಸರವಾಗುತ್ತದೆ. ನಾನು ಅಂತರಾ ಇಬ್ಬರೇ ಇವತ್ತು ಹೊರಗೆ ಹೋಗುತ್ತಿದ್ದೇವೆ ಎಂದು ಹೇಳಿ ಹೋಗುತ್ತಾರೆ. ಅಂತರಾಳನ್ನು ಎಜೆ ಸ್ಪೆಷಲ್ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ.

ಟೀ ಅಂಗಡಿಗೆ ಅಂತರಾ, ಎಜೆ

ಅಂತರಾ ತಮ್ಮ ಕಾರನ್ನು ಬೈದು, ಹೊಸ ಕಾರು ಖರೀದಿಸೋಣ. ಇದು ಡಬ್ಬ ಕಾರು ಎಂದಿದ್ದಕ್ಕೆ ಎಜೆಗೆ ಬೇಸರವಾಗುತ್ತದೆ. ಅಂತರಾಳ ಫೇವರಿಟ್ ಕಾರು ಎಂದು ಅದನ್ನು ಎಜೆ ಜೋಪಾನ ಮಾಡಿರುತ್ತಾನೆ. ಇನ್ನು ಅಂತರಾ ಇಷ್ಟಪಡುತ್ತಿದ್ದ ಗುಲ್ಕನ್, ಟೀ ಅಂಗಡಿಗೆ ಎಜೆ ಕರೆದುಕೊಂಡು ಹೋದಾಗ ಅಂತರಾ ನಾನೇನೋ 5ಸ್ಟಾರ್ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತೀರಾ? ಎಂದುಕೊಂಡಿದ್ದೆ ಎನ್ನುತ್ತಾಳೆ. ಆ ಅಂಗಡಿಯಲ್ಲಿ ಏನು ಸಿಗುತ್ತದೆ ಎಂಬುದೂ ಅಂತರಾಳಿಗೆ ಗೊತ್ತಿರುವುದಿಲ್ಲ.

ಲೀಲಾಳನ್ನು ಉಪವಾಸ ಕೆಡವುತ್ತಾಳಾ ಅಂತರಾ

ಅಂತರಾ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಾಳೆ. ಎಜೆ ಗುಲ್ಕನ್ ಮತ್ತು ಬನ್ ಆರ್ಡರ್ ಮಾಡುತ್ತಾನೆ. ತನಗೆ ಆಫೀಸ್‌ನಿಂದ ಕರೆ ಬಂದಾಗ ಡಿಸ್ಟರ್ಬ್ ಮಾಡದಂತೆ ಹೇಳುತ್ತಾನೆ. ಅದೇ ಅಂತರಾಳಿಗೆ ಫೋನ್ ಬಂದಾಗ ಆಕೆ, ಮುಖ್ಯವಾದ ಕರೆ ಬಂದಿದೆ ಎಂದು ಎದ್ದು ಹೋಗುತ್ತಾಳೆ. ಇದು ಎಜೆಗೆ ಬೇಸರ ತರುತ್ತದೆ.

ಅಂತರಾ ಸರೂ ಹೊಸ ಐಡಿಯಾ

ಅಂತರಾಳಿಗೆ ಸರು ಫೋನ್ ಮಾಡಿ ಲೀಲಾ ಉಪವಾಸ ಇರುವುದನ್ನು ಹೇಳುತ್ತಾಳೆ. ಯಾವುದೇ ಕಾರಣಕ್ಕೂ ಬೇಗ ಬರಬೇಡಿ, ನಿಮ್ಮ ಕೈಯಲ್ಲಿ ಸಾಧ್ಯವಾದರೆ, ಒಂದೆರಡು ದಿನ ಸುತ್ತಾಡಿಕೊಂಡು ಬನ್ನಿ, ಆಗ, ಲೀಲಾ ಒಂದು ಹನಿ ನೀರು ಕುಡಿಯದೇ ಸುಸ್ತಾಗಿ ಬಿದ್ದೋಗುತ್ತಾಳೆ ಎನ್ನುತ್ತಾಳೆ. ಅಂತರಾ ಕೂಡ ಇದೇ ಸರಿ ಎಂದು ಆಲೋಚಿಸುತ್ತಾಳೆ. ಆದರೆ ಎಜೆ, ಲೀಲಾಳಿಗೆ ವಿಶ್ ಮಾಡುತ್ತಾನಾ ಎಂಬ ಕುತೂಹಲವನ್ನು ಸೋಮವಾರದವರೆಗೂ ಕಾದಿಟ್ಟುಕೊಳ್ಳಬೇಕಿದೆ.

More from Filmibeat

English summary
Hitler Kalyana Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X